Vivo ತರುತ್ತಿದೆ ನಿಮಿಷಗಳಲ್ಲಿ ಫುಲ್ ಚಾರ್ಜ್ ಆಗುವ Smartphone, ಬೆಲೆ ಮತ್ತು ವೈಶಿಷ್ಯ ತಿಳಿಯಿರಿ

Vivo X70 ಮತ್ತು Vivo AQ70 Pro ಚೀನಾ ಮತ್ತು ಜಾಗತಿಕ ಮಾರುಕಟ್ಟೆಗಳಲ್ಲಿ ವಿಭಿನ್ನ ಚಿಪ್‌ಸೆಟ್‌ಗಳೊಂದಿಗೆ ಬರುತ್ತದೆ. ಟಿಪ್‌ಸ್ಟರ್‌ನಿಂದ ಪಡೆದ ಮಾಹಿತಿಯ ಪ್ರಕಾರ, Vivo X70 ಮತ್ತು ಎಕ್ಸ್ 70 ಪ್ರೊ ಸ್ಮಾರ್ಟ್‌ಫೋನ್‌ಗಳು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಡೈಮೆನ್ಶನ್ 1200 ಚಿಪ್‌ಸೆಟ್ ಅನ್ನು ಹೊಂದಿವೆ.

Written by - Ranjitha R K | Last Updated : Aug 16, 2021, 04:57 PM IST
  • ವಿವೋ ಮುಂದಿನ ತಿಂಗಳು ವಿವೋ ಎಕ್ಸ್ 70 ಸರಣಿ ಲಾಂಚ್ ಮಾಡಬಹುದು
  • ವಿವೋ ಎಕ್ಸ್ 70 ಮತ್ತು ವಿವೋ ಎಕ್ಸ್ 70 ಪ್ರೊ ಬಿಡುಗಡೆ ಸಾಧ್ಯತೆ
  • ಫೋನ್ 4500 mAh ಬ್ಯಾಟರಿ ಹೊಂದಿದೆ
Vivo ತರುತ್ತಿದೆ ನಿಮಿಷಗಳಲ್ಲಿ ಫುಲ್ ಚಾರ್ಜ್ ಆಗುವ Smartphone, ಬೆಲೆ ಮತ್ತು ವೈಶಿಷ್ಯ ತಿಳಿಯಿರಿ  title=
ವಿವೋ ಎಕ್ಸ್ 70 ಮತ್ತು ವಿವೋ ಎಕ್ಸ್ 70 ಪ್ರೊ ಬಿಡುಗಡೆ ಸಾಧ್ಯತೆ (file photo)

ನವದೆಹಲಿ : Vivo X70 Series: ಸ್ಮಾರ್ಟ್ಫೋನ್ ತಯಾರಕ ವಿವೋ ತನ್ನ ವಿವೋ ಎಕ್ಸ್ 70 ಸರಣಿಯ ಸ್ಮಾರ್ಟ್ ಫೋನ್ ಅನ್ನು ಮುಂಬರುವ ತಿಂಗಳಲ್ಲಿ ಬಿಡುಗಡೆ ಮಾಡಬಹುದು. ಈ ಫೋನಿನಲ್ಲಿ  66 W ಫಾಸ್ಟ್ ಚಾರ್ಜಿಂಗ್‌ ಸಪೋರ್ಟ್ ಮಾಡುವ  4500 mAh ಬ್ಯಾಟರಿಯನ್ನು ನೀಡಬಹುದು. ಕಳೆದ ವರ್ಷ, ವಿವೋ ಎಕ್ಸ್ 60 ಮತ್ತು ಎಕ್ಸ್ 60 ಪ್ರೊ ಅನ್ನು ಚೀನಾದಲ್ಲಿ ಎಕ್ಸಿನೋಸ್ 1080 ಚಿಪ್ ಮೂಲಕ ಬಿಡುಗಡೆ ಮಾಡಲಾಯಿತು. 

ಫೋನಿನ ವಿಶೇಷತೆಗಳು : 
Vivo X70 ಮತ್ತು Vivo AQ70 Pro ಚೀನಾ ಮತ್ತು ಜಾಗತಿಕ ಮಾರುಕಟ್ಟೆಗಳಲ್ಲಿ ವಿಭಿನ್ನ ಚಿಪ್‌ಸೆಟ್‌ಗಳೊಂದಿಗೆ ಬರುತ್ತದೆ. ಟಿಪ್‌ಸ್ಟರ್‌ನಿಂದ ಪಡೆದ ಮಾಹಿತಿಯ ಪ್ರಕಾರ, Vivo X70 ಮತ್ತು ಎಕ್ಸ್ 70 ಪ್ರೊ ಸ್ಮಾರ್ಟ್‌ಫೋನ್‌ಗಳು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಡೈಮೆನ್ಶನ್ 1200 ಚಿಪ್‌ಸೆಟ್ ಅನ್ನು ಹೊಂದಿವೆ. ಇತ್ತೀಚಿನ ವರದಿಗಳ ಆಧಾರದ ಮೇಲೆ, ವಿವೋ 2104 ಮತ್ತು ವಿವೋ 2015 ಮಾದರಿಗಳನ್ನು ಹೊಂದಿರುವ ವಿವೋ ಫೋನ್‌ಗಳು ಜಾಗತಿಕ ಮಾರುಕಟ್ಟೆಯಲ್ಲಿ ವಿವೋ X70 ಮತ್ತು X70 Pro ಮಾದರಿಯಾಗಬಹುದು ಎನ್ನಲಾಗಿದೆ.

ಇದನ್ನೂ ಓದಿ :  ಈ ಒಂಭತ್ತು ಆಪ್ ಗಳು ನಿಮ್ಮ ಸ್ಮಾರ್ಟ್ ಫೋನ್ ನಲ್ಲಿಯೂ ಇದ್ದರೆ ತಕ್ಷಣ ಡಿಲೀಟ್ ಮಾಡಿ

12GB RAM :
ವಿವೋ X70 ಮತ್ತು X70 Pro ಗೀಕ್‌ಬೆಂಚ್ ಲಿಸ್ಟಿಂಗ್ ಪ್ರಕಾರ, ಇದು   12 GB RAM ಮತ್ತು ಆಂಡ್ರಾಯ್ಡ್ 11 OS ನೊಂದಿಗೆ ಬರುತ್ತದೆ ಎನ್ನಲಾಗಿದೆ. ಎರಡೂ ಸ್ಮಾರ್ಟ್‌ಫೋನ್‌ಗಳು 44W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ ಮತ್ತು ಸೋನಿ IMX766 ಪ್ರೈಮರಿ ಕ್ಯಾಮೆರಾವನ್ನು ಒಳಗೊಂಡಿರುತ್ತದೆ. 

6.56 ಇಂಚಿನ ಡಿಸ್‌ಪ್ಲೇ : 
 ಟಿಪ್ಸ್ಟರ್ ಪ್ರಕಾರ, ವಿವೋ X70 6.56-ಇಂಚಿನ AMOLED ಪಂಚ್-ಹೋಲ್ ಪ್ಯಾನಲ್ ಅನ್ನು ಹೊಂದಿದ್ದು ಅದು 1080x2376 ಪಿಕ್ಸೆಲ್ ರೆಸಲ್ಯೂಶನ್ ಮತ್ತು 120Hz ರಿಫ್ರೆಶ್ ರೇಟ್ ನೀಡುತ್ತದೆ ಎನ್ನಲಾಗಿದೆ. X70 ಮತ್ತು X70 Pro ಗಳು ಒಂದೇ ರೀತಿಯ ವಿಶೇಷಣಗಳನ್ನು ಹೊಂದುವ ಸಾಧ್ಯತೆಯಿದೆ. ಇದರಲ್ಲಿ ಕೇವಲ  ಕ್ಯಾಮೆರಾ ವೈಶಿಷ್ಟ್ಯದಲ್ಲಿ ಮಾತ್ರ ಭಿನ್ನವಾಗಿರಬಹುದು.

ಇದನ್ನೂ ಓದಿ :  WhatsAppನಲ್ಲಿನ ಹೊಸ ಹಗರಣವು ನಿಮ್ಮ ಬ್ಯಾಂಕ್ ಖಾತೆಯನ್ನೇ ಖಾಲಿ ಮಾಡುತ್ತೆ ಹುಷಾರ್!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News