Best Recharge Plan - ಇದುವರೆಗೆ ನೀವೆಲ್ಲರೂ 1GB, 1.5GB, 2GB, 2.5GB ಅಥವಾ ಗರಿಷ್ಠ ದೈನಂದಿನ ಡೇಟಾ ಹೊಂದಿರುವ ಯೋಜನೆಗಳನ್ನು ಬಳಸಿರಬಹುದು. ಆದರೆ Vi (ವೋಡಾಫೋನ್ ಐಡಿಯಾ) ತನ್ನ ಗ್ರಾಹಕರಿಗೆ ಹೊಸ ದೈನಂದಿನ ಮಿತಿ ಹೊಂದಿರುವ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯೊಂದನ್ನು ಜಾರಿಗೆ ತಂದಿದೆ. ಈ ಯೋಜನೆಯಡಿಯಲ್ಲಿ, ಬಳಕೆದಾರರಿಗೆ 1GB, 1.5GB, 2GB, 2.5GB ಡೇಟಾ ಬಿಡಿ, ದಿನಕ್ಕೆ ಬರೋಬ್ಬರಿ 3.5GB ಡೇಟಾ ನೀಡಲಾಗುತ್ತಿದೆ.


COMMERCIAL BREAK
SCROLL TO CONTINUE READING

ಒಂದು ವೇಳೆ ನೀವೂ ಕೂಡ ವೊಡಾಫೋನ್-ಐಡಿಯಾ ಗ್ರಾಹಕರಾಗಿದ್ದು, ನಿತ್ಯ 2.5ಜಿಬಿ ಡೇಟಾಗಿಂತ ಹೆಚ್ಚಿನ ಡೇಟಾ ಸಿಗುವಂತಹ ಪ್ಲಾನ್ ಗಾಗಿ ಹುಡುಕಾಟ ನಡೆಸುತ್ತಿದ್ದರೆ, ಈ ಯೋಜನೆಯ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು. ನಿತ್ಯ 3.5GB ಡೇಟಾ ನೀಡುವ ಈ ಯೋಜನೆಯು ತುಂಬಾ ದುಬಾರಿಯಗಿರಬಹುದು ಮತ್ತು ನಿಮ್ಮ ಬಜೆಟ್ ಗೆ ಅದು ಹೊಡೆತ ನೀಡಬಹುದು ಎಂದು ನೀವು ಯೋಚಿಸುತ್ತಿದ್ದರೆ, ನಿಮ್ಮ ಯೋಚನೆ ತಪ್ಪು. ಏಕೆಂದರೆ. Vi ನ ಈ ಯೋಜನೆಯು ಅದರ ಪ್ರಯೋಜನಗಳಿಗೆ ಹೋಲಿಸಿದರೆ ಸಾಕಷ್ಟು ಮಿತವ್ಯಯಕಾರಿಯಾಗಿದೆ.


Vi (ವೋಡಾಫೋನ್ ಐಡಿಯಾ) ರೂ 409 ರೀಚಾರ್ಜ್ ಯೋಜನೆ ಪ್ರಯೋಜನಗಳು
Vi (Vodafone Idea) ನ ಈ ರೀಚಾರ್ಜ್ ಯೋಜನೆಯ ಬೆಲೆ ಕೇವಲ 409 ರೂ. ಈ ಪ್ಲಾನ್ ಅನ್ನು ನೀವು ಒಂದೊಮ್ಮೆ ಸಕ್ರಿಯಗೊಳಿಸಿದ ನಂತರ, ನೀವು ದೈನಂದಿನ ರೂಪದಲ್ಲಿ 3.5GB ಡೇಟಾವನ್ನು ಬಳಸುತ್ತೀರಿ. ದೈನಂದಿನ ಡೇಟಾ ಕೋಟಾ ಮುಗಿದ ನಂತರವೂ ಕೂಡ ಇಂಟರ್ನೆಟ್ ವೇಗವು 64Kbps ವರೆಗೆ ಇರಲಿದೆ. ಈ ಯೋಜನೆ ಒಟ್ಟು 28 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಈ ಯೋಜನೆಯನ್ನು ಹೊಂದಿರುವ ಬಳಕೆದಾರರಿಗೆ ಕಂಪನಿಯು 2GB ವರೆಗೆ ಉಚಿತ ಬ್ಯಾಕಪ್ ಡೇಟಾವನ್ನು ಕೂಡ ಒದಗಿಸುತ್ತದೆ.


ಇದನ್ನೂ ಓದಿ-Best Recharge Plan: ಈ 'ಬಾಹುಬಲಿ' ರೀಚಾರ್ಜ್ ಪ್ಲಾನ್ ಅಡಿ ದಿನದಲ್ಲಿ 5ಜಿಬಿ ಡೇಟಾ ಮತ್ತು ರಾತ್ರಿ ಇಡೀ ಅನಿಯಮಿತ ಉಚಿತ ಡೇಟಾ, ಬೆಲೆ ಎಷ್ಟು?


ಡೇಟಾ ಪ್ರಯೋಜನಗಳ ಹೊರತಾಗಿ, Vodafone Idea ನ ರೂ 409 ರೀಚಾರ್ಜ್ ಯೋಜನೆಯು ಬಳಕೆದಾರರಿಗೆ ಅನಿಯಮಿತ ಧ್ವನಿ ಕರೆ ಮತ್ತು ದಿನಕ್ಕೆ 100 SMS ಅನ್ನು ನೀಡುತ್ತದೆ.


ಇದನ್ನೂ ಓದಿ-Airtel Big Shock: ತನ್ನ ಹಲವು ಯೋಜನೆಗಳಿಂದ ಈ ಮಹತ್ವದ ಸೇವೆಯನ್ನು ತೆಗೆದುಹಾಕಿ ಗ್ರಾಹಕರಿಗೆ ಬಿಗ್ ಶಾಕ್ ನೀಡಿದ ಏರ್ಟೆಲ್


ಈ ಯೋಜನೆಯ ಇತರ ಪ್ರಯೋಜನಗಳ ಬಗ್ಗೆ ಹೇಳುವುದಾದರೆ, ಗ್ರಾಹಕರಿಗೆ Vi ಈ ಯೋಜನೆಯಡಿ ರಾತ್ರಿ ಡೇಟಾ ಮತ್ತು ವಾರಾಂತ್ಯದ ಡೇಟಾ ರೋಲ್‌ಓವರ್ ಸೌಲಭ್ಯವನ್ನು ಕೂಡ ಒದಗಿಸುತ್ತದೆ. ರಾತ್ರಿ ಡೇಟಾ ಪ್ರಯೋಜನದ ಅಡಿಯಲ್ಲಿ, ಗ್ರಾಹಕರಿಗೆ ಮಧ್ಯರಾತ್ರಿ 12 ರಿಂದ ಬೆಳಗ್ಗೆ 6 ಗಂಟೆಯರವರೆಗೆ ಅನಿಯಮಿತ ಉಚಿತ ಡೇಟಾ ನೀಡಲಾಗುತ್ತಿದೆ, ಇದರರ್ಥ ರಾತ್ರಿಯ ಡೇಟಾ ಬಳಕೆಯನ್ನು ಅವರ ದೈನಂದಿನ ಡೇಟಾ ಕೋಟಾದಿಂದ ಕಡಿತಗೊಳಿಸಲಾಗುವುದಿಲ್ಲ. ಇದಲ್ಲದೇ, ವೀಕೆಂಡ್ ಡೇಟಾ ರೋಲ್‌ಓವರ್ ಬೆನಿಫಿಟ್‌ನಲ್ಲಿ, ಬಳಕೆದಾರರು ಸೋಮವಾರದಿಂದ ಶುಕ್ರವಾರದವರೆಗೆ ಶನಿವಾರ ಮತ್ತು ಭಾನುವಾರದಂದು ಉಳಿದ ಡೇಟಾವನ್ನು ಬಳಸಬಹುದಾಗಿದೆ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.