Cheapest Fiber Broadband Plan: ಅತ್ಯಂತ ಅಗ್ಗದ ದರದಲ್ಲಿ ಹಲವು OTTಗಳ ಉಚಿತ ಚಂದಾದರಿಕೆ, 100 ಎಂಬಿಪಿಎಸ್ ವೇಗದ ಇಂಟರ್ನೆಟ್ ಸೇವೆ ಒದಗಿಸುವ ಯೋಜನೆ ಇದು

Cheapest Fiber Broadband Plan - ಬಿಎಸ್ಎನ್ಎಲ್ ತನ್ನ ಹೊಸ ರೂ.749ರ ಬ್ರಾಡ್ ಬ್ಯಾಂಡ್  ಯೋಜನೆಗೆ ಸೂಪರ್ ಸ್ಟಾರ್ ಪ್ರೀಮಿಯಂ-1 ಎಂದು ಹೆಸರಿಸಿದೆ. ಈ ಪ್ಯಾಕ್ ನಲ್ಲಿ ಬಳಕೆದಾರರಿಗೆ 100ಎಂಬಿಪಿಎಸ್ ಇಂಟರ್ನೆಟ್ ವೇಗ ಲಭಿಸುತ್ತದೆ. 

Written by - Nitin Tabib | Last Updated : Jun 6, 2022, 05:36 PM IST
  • BSNL Bharat Fiber ಇದೀಗ ಹೊಸ ಬ್ರಾಡ್‌ಬ್ಯಾಂಡ್ ಯೋಜನೆಯನ್ನು ಪರಿಚಯಿಸಿದೆ
  • ಈ ಹೊಸ ಪ್ಯಾಕ್ ನಲ್ಲಿ ಕಂಪನಿ ಅತ್ಯಂತ ಅಗ್ಗದ ದರದಲ್ಲಿ ವೇಗದ ಇಂಟರ್ನೆಟ್ ಜೊತೆಗೆ OTT ಸೇವೆಗಳು ಶಾಮೀಲಾಗಿವೆ.
  • BSNL ಬ್ರಾಡ್‌ಬ್ಯಾಂಡ್ ಪ್ಲಾನ್ ಕುರಿತು ವಿವರವಾಗಿ ತಿಳಿದುಕೊಳ್ಳೋಣ ಬನ್ನಿ,
Cheapest Fiber Broadband Plan: ಅತ್ಯಂತ ಅಗ್ಗದ ದರದಲ್ಲಿ ಹಲವು OTTಗಳ ಉಚಿತ ಚಂದಾದರಿಕೆ, 100 ಎಂಬಿಪಿಎಸ್ ವೇಗದ ಇಂಟರ್ನೆಟ್ ಸೇವೆ ಒದಗಿಸುವ ಯೋಜನೆ ಇದು title=
Cheapest Fiber Broadband Plan

Cheapest Fiber Broadband Plan - ಭಾರತ ಸಂಚಾರ್ ನಿಗಮ್ ಲಿಮಿಟೆಡ್ ಮೊಬೈಲ್ ಡೇಟಾ ಬಿಸ್ನೆಸ್ ಸ್ಪರ್ಧೆಯಲ್ಲಿ ಹಿಂದಿದ್ದರೂ ಕೂಡ ಫೈಬರ್ ಬ್ರಾಡ್ ಬ್ಯಾಂಡ್ ಬಿಸ್ನೆಸ್ ನಲ್ಲಿ ಇತರ ಖಾಸಗಿ ಟೆಲಿಕಾಂ ಕಂಪನಿಗಳಿಗೆ ಭಾರಿ ಪೈಪೋಟಿ ನೀಡುತ್ತದೆ. 

BSNL Bharat Fiber ಇದೀಗ ಹೊಸ ಬ್ರಾಡ್‌ಬ್ಯಾಂಡ್ ಯೋಜನೆಯನ್ನು ಪರಿಚಯಿಸಿದ್ದು, ಸ್ಪರ್ಧೆಯನ್ನು ಮತ್ತಷ್ಟು ಕಠಿಣಗೊಳಿಸಿದೆ. ಈ ಹೊಸ ಪ್ಯಾಕ್ ನಲ್ಲಿ ಕಂಪನಿ ಅತ್ಯಂತ ಅಗ್ಗದ ದರದಲ್ಲಿ ವೇಗದ ಇಂಟರ್ನೆಟ್ ನೀಡುವುದರ ಜೊತೆಗೆ OTT (ಓವರ್-ದಿ-ಟಾಪ್) ಸೇವೆಗಳನ್ನು ಸಹ ಒದಗಿಸಲಿದೆ. ಈ BSNL ಬ್ರಾಡ್‌ಬ್ಯಾಂಡ್ ಪ್ಲಾನ್ ಕುರಿತು ವಿವರವಾಗಿ ತಿಳಿದುಕೊಳ್ಳೋಣ ಬನ್ನಿ,

BSNLನ ರೂ. 749ರ ಬ್ರಾಡ್‌ಬ್ಯಾಂಡ್ ಯೋಜನೆ
ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಹೊಸ ಭಾರತ್ ಫೈಬರ್ ಬ್ರಾಡ್‌ಬ್ಯಾಂಡ್ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯ ಬೆಲೆ ರೂ 749 ಮತ್ತು ಇದು 100 Mbps ವೇಗದ ಇಂಟರ್ನೆಟ್  ಜೊತೆಗೆ OTT ಪ್ರಯೋಜನಗಳನ್ನು ಸಹ ನೀಡುತ್ತದೆ. 

BSNL ತನ್ನ ಹೊಸ  ರೂ.749 ರ ಬ್ರಾಡ್‌ಬ್ಯಾಂಡ್ ಯೋಜನೆಗೆ ಸೂಪರ್‌ಸ್ಟಾರ್ ಪ್ರೀಮಿಯಂ - 1 ಎಂದು ಹೆಸರಿಸಿದೆ. ಈ ಪ್ಯಾಕ್‌ ನಲ್ಲಿ, ಬಳಕೆದಾರರು 100 Mbps ಇಂಟರ್ನೆಟ್ ವೇಗವನ್ನು ಪಡೆಯುತ್ತಾರೆ. ಈ ಪ್ಯಾಕ್ 1000GB ಅಥವಾ 1TB FUP ಡೇಟಾ ಮಿತಿಯನ್ನು ಹೊಂದಿದೆ. ಈ FUP ಡೇಟಾ ಮಿತಿ ಖಾಲಿಯಾದ ಬಳಿಕ ಬಳಕೆದಾರರಿಗೆ 5 Mbps ವೇಗದಲ್ಲಿ ಅನಿಯಮಿತ ಇಂಟರ್ನೆಟ್ ಸಿಗಲಿದೆ.

ಈ ಪ್ಯಾಕ್‌ನೊಂದಿಗೆ, BSNL ಭಾರತ್ ಫೈಬರ್ ಬಳಕೆದಾರರಿಗೆ ಧ್ವನಿ ಕರೆಗಳಿಗಾಗಿ ಉಚಿತ ಫಿಕ್ಸೆಡ್ ಲೈನ್ ಸಂಪರ್ಕವನ್ನು ಸಹ ಒದಗಿಸುತ್ತದೆ. ಆದರೆ ಕಂಪನಿಯು ಯೋಜನೆಯೊಂದಿಗೆ ಟೆಲಿಫೋನ್ ಗೇರ್ ಅನ್ನು ಒದಗಿಸುವುದಿಲ್ಲ. ಗ್ರಾಹಕರೇ ಅದನ್ನು ಖರೀದಿಸಬೇಕು.

ನಾವು ಈ ಮೊದಲೇ ಹೇಳಿದಂತೆ, ರೂ 749 ರ ಹೊಸ BSNL ಬ್ರಾಡ್‌ಬ್ಯಾಂಡ್ ಯೋಜನೆಯು ತನ್ನೊಂದಿಗೆ OTT ಪ್ರಯೋಜನಗಳನ್ನು ಸಹ ನೀಡುತ್ತದೆ. ಪ್ಯಾಕ್‌ನೊಂದಿಗೆ, ಬಳಕೆದಾರರು SonyLIV ಪ್ರೀಮಿಯಂ, ZEE5 ಪ್ರೀಮಿಯಂ, Voot ಮತ್ತು YuppTV-Live ಗೆ ಉಚಿತ ಚಂದಾದಾರಿಕೆಯನ್ನು ಪಡೆಯುತ್ತಾರೆ.

ಇದನ್ನೂ ಓದಿ-Saving Electricity Bill: ಬಿರುಬಿಸಿಲಲ್ಲಿ ಬಿಂದಾಸ್ ಎಸಿ ಹಾಕಿ ಮಲ್ಕೊಳ್ಳಿ! ವಿದ್ಯುತ್ ಬಿಲ್ ಶೇ.95 ರಷ್ಟು ಕಮ್ಮಿಯಾಗಿಸುವ ಟ್ರಿಕ್ ಇಲ್ಲಿದೆ

TelecomTalk ನಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ, BSNL ಭಾರತ್ ಫೈಬರ್‌ನ ಈ ಬ್ರಾಡ್‌ಬ್ಯಾಂಡ್ ಯೋಜನೆ ಎಲ್ಲಾ ವಲಯಗಳಲ್ಲಿ ಲಭ್ಯವಿಲ್ಲ. ಪ್ರಸ್ತುತ ಈ ಯೋಜನೆಯು ಛತ್ತೀಸ್‌ಗಢದಲ್ಲಿ ಲೈವ್ ಆಗಿದೆ, ಆದರೆ ಇದು ಚಂಡೀಗಢದ ಬಳಕೆದಾರರಿಗೆ ಇನ್ನೂ ಲಭ್ಯವಿಲ್ಲ ಎಂದು ವರದಿ ಹೇಳಿದೆ. ರೀಚಾರ್ಜ್ ಮಾಡುವ ಮೊದಲು ಬಳಕೆದಾರರು ತಮ್ಮ ವಲಯದಲ್ಲಿ ಯೋಜನೆಯ ಉಪಸ್ಥಿತಿಯನ್ನು ಪರಿಶೀಲಿಸಬೇಕಾಗಲಿದೆ.

ಇದನ್ನೂ ಓದಿ-Reliance Jio Update: ತನ್ನ ಗ್ರಾಹಕರಿಗೆ ಬಿಗ್ ಶಾಕ್ ನೀಡಿದ ರಿಲಯನ್ಸ್ ಜಿಯೋ! ಈ ಪ್ಲಾನ್ ಬೆಲೆಯಲ್ಲಿ ರೂ.150 ಹೆಚ್ಚಳ

ರೀಚಾರ್ಜ್ ಮಾಡುವ ಮೊದಲು, 749 ರೂಗಳಲ್ಲಿ ಜಿಎಸ್‌ಟಿ ಒಳಗೊಂಡಿಲ್ಲ ಎಂಬುದನ್ನು ಗ್ರಾಹಕರು ನೆನಪಿನಲ್ಲಿಟ್ಟುಕೊಳ್ಳಬೇಕು. ಆದ್ದರಿಂದ, ಜಿಎಸ್ಟಿ ಸೇರಿ ಯೋಜನೆಯ ಮೊತ್ತ ಸ್ವಲ್ಪ ಹೆಚ್ಚಾಗಬಹುದು. ಅಲ್ಲದೆ, ಮನೆಯಲ್ಲಿ ಹೆಚ್ಚಿನ ಬಳಕೆದಾರರಿದ್ದರೆ, ತಿಂಗಳ ಅಂತ್ಯದ ಮೊದಲು 1000GB FUP ಮಿತಿಯನ್ನು ತಲುಪಬಹುದು, ಅದರ ನಂತರ ನಿಮ್ಮ ಇಂಟರ್ನೆಟ್ ನಿಧಾನ ವೇಗದಲ್ಲಿ ಚಲಿಸುತ್ತದೆ ಎಂಬುದನ್ನು ನೆನಪಿನಲ್ಲಿಡಿ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News