ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ನ ಹೆಚ್ಚಿನ ರೀಚಾರ್ಜ್ ಯೋಜನೆಗಳಲ್ಲಿ, ನೀವು ಕಡಿಮೆ ವೆಚ್ಚದಲ್ಲಿ ಗರಿಷ್ಠ ಪ್ರಯೋಜನಗಳನ್ನು ಪಡೆಯುತ್ತೀರಿ. ಆದರೆ, ಕಡಿಮೆ ಹಣವನ್ನು ಖರ್ಚು ಮಾಡುವ ಮೂಲಕ ಸಾಕಷ್ಟು ಡೇಟಾ ಇರುವ ಯೋಜನೆಯನ್ನು ನೀವು ಹುಡುಕುತ್ತಿದ್ದರೆ, ನಿಮ್ಮ ಹುಡುಕಾಟಕ್ಕೆ ಇಂದೇ ತೆರೆ ಎಳೆಯಿರಿ. ಏಕೆಂದರೆ ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿ BSNL ಖಂಡಿತವಾಗಿಯೂ ನಿಮ್ಮ ಈ ಅಗತ್ಯತೆಯನ್ನು ಪೂರ್ಣಗೊಳಿಸಿದೆ. ಅಂತಹ ಒಂದು ಅಂತಹ ಒಂದು ಬಲಿಷ್ಠ ರೀಚಾರ್ಜ್ ಯೋಜನೆಯನ್ನು BSNL ನ ಪ್ರಿಪೇಯ್ಡ್ ರೀಚಾರ್ಜ್ ಪ್ರೊಫೈಲ್‌ನಲ್ಲಿ ಸೇರಿಸಲಾಗಿದೆ.
BSNL ಕಂಪನಿಯ ನಿತ್ಯ 5ಜಿಬಿ ಡೇಟಾ ನೀಡುವ ಯೋಜನೆ
ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ ನ ಈ ರೀಚಾರ್ಜ್ ಯೋಜನೆಯಲ್ಲಿ, ಬಳಕೆದಾರರಿಗೆ 2GB, 2.5GB ಅಥವಾ 3GB ದೈನಂದಿನ ಡೇಟಾ ಬಿಡಿ, ಬರೋಬ್ಬರಿ 5GB ಡೇಟಾ ಲಾಭ ಸಿಗುತ್ತದೆ. ಖಾಸಗಿ ಟೆಲಿಕಾಂ ಕಂಪನಿಗಳು ಈ ಬೆಲೆಯಲ್ಲಿ ನಿತ್ಯ 2GB ಡೇಟಾ ನೀಡಲು ಹೆಣಗಾಡುತ್ತವೆ ಎಂದು ತಿಳಿದರೆ ನಿಮಗೂ ಕೂಡ ಆಶ್ಚರ್ಯವಾಗಬಹುದು. ಬಿಎಸ್ಎನ್ಎಲ್ ಕಂಪನಿಯ ಈ ಯೋಜನೆಯ ಲಾಭ ಇಲ್ಲಿಗೆ ಸೀಮಿತವಾಗುವುದಿಲ್ಲ. ಏಕೆಂದರೆ, ಈ ಪ್ಲಾನ್ ಅಡಿ ಕಂಪನಿ ರಾತ್ರಿಯಿಡೀ ನಿಮಗೆ ಸಂಪೂರ್ಣ ಉಚಿತವಾಗಿ ಅನಿಯಮಿತ ಡೇಟಾ ನೀಡುತ್ತದೆ. ಇದಕ್ಕಾಗಿ ಕಂಪನಿ ನಿಮ್ಮಿಂದ ನೈಯಾ ಪೈಸೆ ಶುಲ್ಕವನ್ನು ಕೂಡ ಪಡೆಯುವುದಿಲ್ಲ.
ಹೀಗಿರುವಾಗ ಬಿಂಜ್ ಬಳಕೆದಾರರಿಗೆ ಇದೊಂದು ಚಿನ್ನದಂತಹ ಪ್ಲಾನ್ ಅಂದರೆ ತಪ್ಪಾಗಲಾರದು. ದಿನವಿಡೀ 5ಜಿಬಿ ಡೇಟಾ ಹಾಗೂ ರಾತ್ರಿ ಇಡೀ ಪ್ರತ್ಯೇಕ ಅನಿಯಮಿತ ಉಚಿತ ಡಾಟಾ ಇದರಲ್ಲಿ ಸಿಗುತ್ತದೆ.
ಬಿಎಸ್ಎನ್ಎಲ್ ಕಂಪನಿಯ ರೂ.599 ರ ಪ್ಲಾನ್ ಲಾಭಗಳು
ಬಿಎಸ್ಎನ್ಎಲ್ ನ ಈ ಬಾಹುಬಲಿ ಪ್ಲಾನ್ ಬೆಲೆ ಕೇವಲ ರೂ 599 ಆಗಿದೆ. ಈ ಪ್ಲಾನ್ 84 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಈ ಯೋಜನೆಯ ಲಾಭಗಳ ಕುರಿತು ಹೇಳುವುದಾದರೆ, ಇದರಲ್ಲಿ ದಿನವಿಡೀ ನಿಮಗೆ 5ಜಿಬಿ ಡೇಟಾ ಸಿಗುತ್ತದೆ. ಈ ಮಿತಿ ಮುಕ್ತಾಯದ ಬಳಿಕ ಇಂಟರ್ನೆಟ್ ವೇಗ 80 Kbpsಗೆ ಇಳಿಕೆಯಾಗುತ್ತದೆ.
ಇದಲ್ಲದೆ, ಇದರಲ್ಲಿ ಅನಿಯಮಿತ ರಾತ್ರಿ ಉಚ್ತ ಡೇಟಾ ಲಾಭ ಕೂಡ ಈ ಯೋಜನೆಯಲ್ಲಿದೆ. ಈ ಲಾಭದ ಅಡಿ ಬಳಕೆದಾರರಿಗೆ ರಾತ್ರಿ 12 ಗಂಟೆಯಿಂದ ಬೆಳಗಿನ ಜಾವ 5 ಗಂಟೆಯವರೆಗೆ ಅನಿಯಮಿತ ಇಂಟರ್ನೆಟ್ ಅನ್ನು ಸಂಪೂರ್ಣ ಉಚಿತವಾಗಿ ಸಿಗುತ್ತದೆ. ಇದರರ್ಥ ಈ ಯೋಜನೆಯಲ್ಲಿ ರಾತ್ರಿ ಸಿಗುವ ಡೇಟಾ ನಿಮ್ಮ ನಿತ್ಯ ಡೇಟಾ ಮಿತಿಯ ಹೊರತಾಗಿ ಇರಲಿದೆ. ಬಿಂಜ್ ವೀಕ್ಷಕರಿಗೆ ಈ ಪ್ಲಾನ್ ತುಂಬಾ ಉಪಯುಕ್ತ ಸಾಬೀತಾಗಲಿದೆ. ಅವರು ರಾತ್ರಿ ಇಡೀ ಈ ಉಚಿತ ಡೇಟಾವನ್ನು ಬಳಸಿ ಸಂಪೂರ್ಣ ವೆಬ್ ಸೀರೀಸ್ ಹಾಗೂ ಹೊಸ ಹೊಸ ಚಲನಚಿತ್ರಗಳನ್ನು ವೀಕ್ಷಿಸಬಹುದು.
ಈ ಯೋಜನೆಯಲ್ಲಿ ಡೇಟಾ ಹೊರತುಪಡಿಸಿ ಈ ಯೋಜನೆ ಇತರೆ ಲಾಭಗಳನ್ನು ಕೂಡ ನಿಮಗೆ ನೀಡುತ್ತದೆ. ಹೌದು, ಅನಿಯಮಿತ ಧ್ವನಿ ಕರೆ ಕೂಡ ಈ ಯೋಜನೆಯಲ್ಲಿ ಶಾಮೀಲಾಗಿದೆ. ಅಂದರೆ, 84ದಿನಗಳ ವರೆಗೆ ನೀವು ಈ ಯೋಜನೆಯಲ್ಲಿ ಉಚಿತ ಲೋಕಲ್ ಹಾಗೂ ಎಸ್ಟಿಡಿ ಕರೆಗಳನ್ನು ಕೂಡ ಮಾಡಬಹುದು. ನಿತ್ಯ 100 ಉಚಿತ ಎಸ್ಎಂಎಸ್ ಗಳನ್ನು ಕೂಡ ಈ ಯೋಜನೆಯಲ್ಲಿ ಶಾಮೀಲುಗೊಳಿಸಲಾಗಿದೆ. ಇದಲ್ಲದೆ, ಈ ಯೋಜನೆಯಲ್ಲಿ ನಿಮಗೆ ಜಿಂಗ್ ಚಂದಾದಾರಿಕೆ ಕೂಡ ಉಚಿತವಾಗಿ ಸಿಗುತ್ತದೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.