ನವದೆಹಲಿ :  ಆಪಲ್ ಮ್ಯಾಕ್ ಬುಕ್ (Apple MacBook) ಬಳಸುವವರು ಇದನ್ನು ಓದಲೇ ಬೇಕು.  ಆಪಲ್ ಮ್ಯಾಕ್ ಬುಕ್ ಲ್ಯಾಪ್ ಟಾಪ್ ವಿಶ್ವದ ಅತ್ಯಂತ ಸುರಕ್ಷಿತ ಲ್ಯಾಪ್ ಟಾಪ್ ಎಂದೇ ಹೇಳಲಾಗುತ್ತದೆ. ಇದರಲ್ಲಿ ವೈರಸ್ (Virus attack)  ಅಟಾಕ್ ಆಗಲು ಸಾಧ್ಯವೇ ಇಲ್ಲ ಎನ್ನಲಾಗುತ್ತದೆ. ವಿಶ್ವದ ಸುಮಾರು 30 ಸಾವಿರ  ಮ್ಯಾಕ್ ಬುಕ್ ಮೇಲೆ ವೈರಸ್ ದಾಳಿ ನಡೆದಿದೆ.  ವಿಚಿತ್ರ ಅಂದರೆ, ದಾಳಿ ನಡೆದಿದ್ದು ಯಾಕೆ ಎಂಬ ಅಂಶ ಖುದ್ದು ಆಪಲ್ ಕಂಪನಿಗೂ ಗೊತ್ತೇ ಆಗ್ತಾಇಲ್ಲ. 


COMMERCIAL BREAK
SCROLL TO CONTINUE READING

ಈ ವೈರಸ್ ಹೆಸರು `ಸಿಲ್ವರ್ ಸ್ಪಾರೋ' :
ಬುಸಿನೆಸ್ ಇನ್ಸೈ ಡರ್ ಎಂಬ ಪೊರ್ಟಲ್ ಪ್ರಕಾರ,  ಇತ್ತೀಚೆಗೆ ಲಾಂಚ್ ಆಗಿರುವ ಆಪಲ್ (Apple) ಮ್ಯಾಕ್ ಬುಕ್ ಲ್ಯಾಪ್ ಟಾಪ್ ಮೇಲೆ `ಸಿಲ್ವರ್ ಸ್ಪಾರೋ (Silver Sparrow)' ಎಂಬ ವೈರಸ್ ಅಟಾಕ್ ಮಾಡಿದೆ. 30 ಸಾವಿರಕ್ಕೂ ಹೆಚ್ಚು ಲ್ಯಾಪ್ ಟಾಪ್  (Laptop) ಗಳಲ್ಲಿ ಈ ವೈರಸ್ ಇರಬಹುದು ಎಂದು ಹೇಳಲಾಗಿದೆ.  Ars Technica ಎಂಬ ಕಂಪನಿ ಈ ವೈರಸ್ ಇರುವಿಕೆಯನ್ನು ಪತ್ತೆ ಹಚ್ಚಿದೆ. ಅಚ್ಚರಿಯೆಂದರೆ, ಈ ವೈರಸ್ ಇದುವರೆಗೆ ಮ್ಯಾಕ್ ಬುಕ್ ಗೆ  ಯಾವುದೇ ಹಾನಿ ಉಂಟು ಮಾಡಿಲ್ಲ. ಆದರೆ, ಯಾವುದೇ ಕ್ಷಣದಲ್ಲಿ ಅದು ಸಿಸ್ಟಮ್  ಧ್ವಸ್ತಗೊಳಿಸಬಲ್ಲದು. 


ಇದನ್ನೂ ಓದಿ : ಭಾರತದಲ್ಲಿ ಬಿಡುಗಡೆಯಾದ Microsoft Surface Pro 7+, ಬೆಲೆ ಎಷ್ಟು?


153 ದೇಶಗಳಲ್ಲಿ ವೈರಸ್ ದಾಳಿ :
ಬುಸಿನೆಸ್  ಇನ್ಸೈ ಡರ್ ವರದಿ ಪ್ರಕಾರ, 153 ದೇಶಗಳಲ್ಲಿರುವ ಆಪಲ್ ಮ್ಯಾಕ್ ಬುಕ್ ಗಳಿಗೆ ಈ ವೈರಸ್ (Virus) ಆವರಿಸಿದೆ. ಆದರೆ, ಅಮೆರಿಕ, ಇಂಗ್ಲೆಂಡ್, ಕೆನಡಾ, ಫ್ರಾನ್ಸ್ ಮತ್ತು ಜರ್ಮನಿ ಇದರಿಂದ ಹೆಚ್ಚು ಬಾಧಿತವಾಗಿದೆ. ಲಭ್ಯ ಮಾಹಿತಿ ಪ್ರಕಾರ ಸಿಲ್ವರ್ ಸ್ಪಾರೋ ಎನ್ನುವ ಈ ವೈರಸ್ ಅಪಲ್ನ ಹೊಸ ಚಿಪ್ ಎಂ1ನಲ್ಲಿ (M1) ಇತ್ತು ಎನ್ನಲಾಗಿದೆ. ಈ ಚಿಪ್ ಮೂಲಕ ಅದು ಎಲ್ಲಾ ಮ್ಯಾಕ್ ಬುಕ್ ಗಳನ್ನೂ ಆವರಿಸಬಹುದಾಗಿದೆ.


ನೀವೇನು ಮಾಡಬೇಕು..?
ಅಪಲ್  ಲ್ಯಾಪ್ ಟಾಪ್ ಮೇಲೆ ವೈರಸ್ ದಾಳಿ ಸಾಮಾನ್ಯವೇನಲ್ಲ. ಇದರಿಂದ ರಕ್ಷಣೆ ಪಡೆಯಲು ಅತ್ಯುತ್ತಮ malwarebytes ಖರೀದಿಸಬಹುದಾಗಿದೆ. ಇದು ನಿಮ್ಮ ಲ್ಯಾಪ್ ಟಾಪ್ ಗೆ ಸುರಕ್ಷೆ ಒದಗಿಸುತ್ತದೆ.


ಇದನ್ನೂ ಓದಿ : AMAZON FAB PHONE FEST:Samsungನ ಫೋನ್‌ಗೆ ಸಿಗುತ್ತಿದೆ 13000 ರೂಪಾಯಿ ರಿಯಾಯಿತಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.