ಶೀಘ್ರವೇ ಬರಲಿದೆ 1TB Internal Storage Smartphone, ವೈಶಿಷ್ಟ್ಯಗಳು ಇಲ್ಲಿವೆ

Smartphone With 1TB Storage - iphone 13 ಒಟ್ಟು ನಾಲ್ಕು ಆವೃತ್ತಿಯಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಈ ಸ್ಮಾರ್ಟ್ ಫೋನ್ ಅನ್ನು iPhone 13, iPhone 13 Pro, iPhone 13 Pro Max ಹಾಗೂ  iPhone 13 Mini ಆವೃತ್ತಿಗಳಲ್ಲಿ ಬಿಡುಗಡೆಗೊಳಿಸಲಾಗುವ ಸಾಧ್ಯತೆ ಇದೆ. iPhone 13 ನಲ್ಲಿ iPhone 12 ಕ್ಕಿಂತ ಡಿಸ್ಪ್ಲೇ ಭಿನ್ನವಾಗಿರಲಿದೆ. ಮಾಧ್ಯಮ ವರದಿಗಳ ಪ್ರಕಾರ iPhone 13, 60Hz ರಿಫ್ರೆಶ್ ರೇಟ್ ಹಾಗೂ iPhone 12 ರಲ್ಲೀ 120Hz ರಿಫ್ರೆಶ್ ರೇಟ್ ಇರುವ ಸಾಧ್ಯತೆ ಇದೆ.

Written by - Nitin Tabib | Last Updated : Jan 29, 2021, 05:42 PM IST
  • 1TB ಆಂತರಿಕ ಶೇಖರಣಾ ಸಾಮರ್ಥ್ಯದ ಫೋನ್ ಇದುವರೆಗೆ ಒಂದು ಕನಸಾಗಿದೆ.
  • ಈ ವರ್ಷ ಬಿಡುಗಡೆಯಾಗಲಿದೆ ಜಬರ್ದಸ್ತ್ ಫೋನ್
  • ಈ ಫೋನ್ ವೈಶಿಷ್ಟ್ಯಗಳು ಇಲ್ಲಿವೆ.
ಶೀಘ್ರವೇ ಬರಲಿದೆ 1TB Internal Storage Smartphone, ವೈಶಿಷ್ಟ್ಯಗಳು ಇಲ್ಲಿವೆ title=
Smartphone with 1 TB Internal Storage (File Photo)

Smartphone With 1TB Storage - ನವದೆಹಲಿ: ಒಂದು ವೇಳೆ ನಿಮಗೆ 1 TB (1000 GB) ಸ್ಮಾರ್ಟ್ ಫೋನ್ ಇದ್ದರೆ ಹೇಗಿರುತ್ತದೆ. ಕೇಳಲು ಸ್ವಲ್ಪ ವಿಶ್ವಾಸವಾಗುವುದಿಲ್ಲ. ಆದರೆ, ಮುಂಬರುವ ದಿನಗಳಲ್ಲಿ 1 TB ಸ್ಮಾರ್ಟ್ ಫೋನ್ ಗಳು ಬಿಡುಗಡೆಯಾಗಲಿವೆ. ತಂತ್ರಜ್ಞಾನದ ದೈತ್ಯ ಕಂಪನಿ Apple ಈ ಟ್ರೆಂಡ್ ಆರಂಭಿಸುವ ಸಾಧ್ಯತೆ ಇದೆ.

iPhone 13 ನಲ್ಲಿ 1 TB ಸ್ಟೋರೇಜ್ ಇರುವ ಸಾಧ್ಯತೆ ಇದೆ
ಟೆಕ್ ಸೈಟ್ GIZMOCHINA ನಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ Apple ತನ್ನ iPhone ನಲ್ಲಿ ಮೊದಲ ಬಾರಿಗೆ 1 TB ಆಂತರಿಕ ಶೇಖರಣಾ ಸಾಮರ್ಥ್ಯ ಸಿಗುವ ಸಾಧ್ಯತೆ ಇದೆ. ವರದಿಯಲ್ಲಿ ಮುಂಬರುವ iPhone ಶ್ರೇಣಿಯಲ್ಲಿ ಬಳಕೆದಾರರಿಗೆ ಭಾರಿ ಶೇಖರಣಾ ಸಾಮರ್ಥ್ಯದ ಅಪ್ಗ್ರೇಡ್ ಸಿಗುವ ಸಾಧ್ಯತೆ ಇದೆ. ಪ್ರಸ್ತುತ ಇರುವ iPhone 12 ಶೇಖರಣಾ ಸಾಮರ್ಥ್ಯದ ದುಪ್ಪಟ್ಟು ಶೇಖರಣಾ ಸಾಮರ್ಥ್ಯ ಸಿಗುವ ಸಾಧ್ಯತೆ ಇದೆ.

ಟೆಕ್ ಸೈಟ್ pocket-lint ಪ್ರಕಾರ iPhone 13ನ ಒಟ್ಟು 4 ವೇರಿಯಂಟ್ ಗಳು ಇರುವ ಸಾಧ್ಯತೆ ಇದೆ. iPhone 13, iPhone 13 Pro, iPhone 13 Pro Max ಹಾಗೂ iPhone 13 Mini ಆವೃತ್ತಿಗಳಲ್ಲಿ iPhone 13 ಬಿಡುಗಡೆಯಾಗುವ ಸಾಧ್ಯತೆ ಇದೆ.  iPhone 13 ನಲ್ಲಿ iPhone 12 ಕ್ಕಿಂತ ಡಿಸ್ಪ್ಲೇ ಭಿನ್ನವಾಗಿರಲಿದೆ. ಮಾಧ್ಯಮ ವರದಿಗಳ ಪ್ರಕಾರ iPhone 13, 60Hz ರಿಫ್ರೆಶ್ ರೇಟ್ ಹಾಗೂ iPhone 12 ರಲ್ಲೀ 120Hz ರಿಫ್ರೆಶ್ ರೇಟ್ ಇರುವ ಸಾಧ್ಯತೆ ಇದೆ.

ಇದನ್ನು ಓದಿ- ರಾಜಕೀಯ ಗ್ರೂಪ್ ಗಳಿಗೆ ಏಕಾಏಕಿ ಶಾಕ್ ನೀಡಿದ Facebook..!

ಇದಲ್ಲದೆ iPhone ನಲ್ಲಿ ನೀಡಲಾಗುವ ಕ್ಯಾಮರಾ ವೈಶಿಷ್ಟ್ಯ (iPhone Feature) ಇದನ್ನು ಇತರೆ ಕ್ಯಾಮರಾಗಳಿಂದ ಭಿನ್ನವಾಗಿಸುತ್ತದೆ. iPhone ಕ್ಯಾಮೆರಾ ಹಾಗೂ ಅದರ ಕ್ವಾಲಿಟಿ ಯಾವಾಗಲು ಅಭಿಮಾನಿಗಳನ್ನು ಸೆಳೆಯಲು ಯಶಸ್ವಿಯಾಗುತ್ತದೆ. iPhone 13 ನಲ್ಲಿ ಬಳಕೆದಾರರಿಗೆ Sensor-Shift Image Stabilisation ವೈಶಿಷ್ಟ್ಯ ಕೂಡ ಸಿಗುವ ಸಾಧ್ಯತೆ ಇದೆ.

ಇದನ್ನು ಓದಿ- Samsung Galaxy M02 : ಸ್ಯಾಮ್ ಸಂಗ್ ತರುತ್ತಿದೆ ಅತ್ಯಂತ ಅಗ್ಗದ ಸ್ಮಾರ್ಟ್ ಫೋನ್..! ಅದರ ಫೀಚರ್ ಮತ್ತು ಬೆಲೆ ಎಷ್ಟಿರಬಹುದು ಗೊತ್ತಾ..?

iPhone 13 ಬಿಡುಗಡೆ ದಿನಾಂಕ
ಸಾಮಾನ್ಯವಾಗಿ Apple ಪ್ರತಿವರ್ಷ ಸೆಪ್ಟೆಂಬರ್ ನ ಎರಡನೇ ವಾರದಲ್ಲಿ ತನ್ನ ನೂತನ iPhone ಅನ್ನು ಬಿಡುಗಡೆಗೊಳಿಸುತ್ತದೆ. ವರದಿಗಳ ಪ್ರಕಾರ ಸೆಪ್ಟೆಂಬರ್ 7 ರಂದು ನೂತನ iPhone ಬಿಡುಗಡೆಯಾಗುವ ಸಾಧ್ಯತೆ ಇದೆ.

ಇದನ್ನು ಓದಿ-Good News..! ಮಾರುಕಟ್ಟೆಗೆ ಬರಲಿದೆ ಅಗ್ಗದ iPhone, ಬೆಲೆ ಎಷ್ಟಿರಲಿದೆ ಗೊತ್ತಾ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News