Vodafone Idea Prepaid Plan: Vodafone Idea ಅನೇಕ ಜನಪ್ರಿಯ ಯೋಜನೆಗಳನ್ನು ಹೊಂದಿದೆ. ಇದರಲ್ಲಿ ಕೆಲವು ಯೋಜನೆಗಳು ಇತರ ಟೆಲಿಕಾಂ ಕಂಪನಿಗಳ ಯೋಜನೆಗಳಿಗೆ ಸ್ಪರ್ಧೆ ಒಡ್ಡುತ್ತಿದೆ. Vi 299 ರೂ.ಗಳ ಯೋಜನೆಯನ್ನು ಹೊಂದಿದೆ, ಇದು Jio ಯೋಜನೆಯನ್ನು ಮೀರಿಸುತ್ತದೆ. Vodafone Idea (Vi) ತನ್ನ 299 ರೂ. ಪ್ರಿಪೇಯ್ಡ್ ಯೋಜನೆಯನ್ನು ವಿ ಹೀರೋ ಪ್ರಯೋಜನಗಳನ್ನು ಹೊಂದಿರುವ ಬಳಕೆದಾರರಿಗೆ  ನೀಡುತ್ತದೆ. ಇದು ಒಂದು ಸಣ್ಣ-ವ್ಯಾಲಿಡಿಟಿ  ಪ್ಲಾನ್ ಆಗಿದ್ದು, ಪ್ರಿಪೇಯ್ಡ್ ಸುಂಕದ ಹೆಚ್ಚಳದ ನಂತರ, ಇದು ಬಳಕೆದಾರರಿಗೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಉತ್ತಮ ಪ್ರಿಪೇಯ್ಡ್ ಪ್ಲಾನ್ ಆಯ್ಕೆಗಳಲ್ಲಿ ಒಂದಾಗಿದೆ.


COMMERCIAL BREAK
SCROLL TO CONTINUE READING

ಜಿಯೋ ಸಹ 299 ರೂ.ಗಳ ಪ್ರಿಪೇಯ್ಡ್ ಯೋಜನೆಯನ್ನು (Prepaid Plans) ಹೊಂದಿದೆ. ಈ ಕಂಪನಿಯು ಸದಾ ತನ್ನ ಪ್ರತಿಸ್ಪರ್ಧಿಗಳಿಗಿಂತ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ. ಆದಾಗ್ಯೂ,  ವೊಡಾಫೋನ್ ಐಡಿಯಾ (Vodafone Idea) 299 ರೂ. ಪ್ರಿಪೇಯ್ಡ್ ಯೋಜನೆಯು ಜಿಯೋ ಯೋಜನೆಗಿಂದ ಹೆಚ್ಚು ಪ್ರಯೋಜನಗಳನ್ನು ನೀಡುತ್ತದೆ. 


ಇದನ್ನೂ ಓದಿ- Amazing Theft Video: ಚಲಿಸುತ್ತಿರುವ ವಾಹನದಲ್ಲಿ ಕೈಚಳಕ ತೋರಿಸಿದ ಕಳ್ಳ, Video ನೋಡಿ


ವೊಡಾಫೋನ್ ಐಡಿಯಾ 299 ರೂ.ಗಳ ಯೋಜನೆ:
ವೊಡಾಫೋನ್ ಐಡಿಯಾ (Vodafone Idea) ತನ್ನ ರೂ. 299 ಪ್ರಿಪೇಯ್ಡ್ ಯೋಜನೆಯನ್ನು 28 ದಿನಗಳ ಕಡಿಮೆ ಮಾನ್ಯತೆಯೊಂದಿಗೆ ನೀಡುತ್ತದೆ. ಈ 28 ದಿನಗಳವರೆಗೆ, ಬಳಕೆದಾರರು 1.5GB ದೈನಂದಿನ ಡೇಟಾ, ಅನಿಯಮಿತ ಧ್ವನಿ ಕರೆ ಮತ್ತು 100 SMS/ದಿನವನ್ನು ಪಡೆಯುತ್ತಾರೆ. ಇದಲ್ಲದೆ, ಬಳಕೆದಾರರು Binge All Night, ವೀಕೆಂಡ್ ಡೇಟಾ ರೋಲ್‌ಓವರ್ (Weekend Data Rollover) ಮತ್ತು ಡೇಟಾ ಡಿಲೈಟ್ಸ್ ಕೊಡುಗೆಗಳನ್ನು ಪಡೆಯುತ್ತಾರೆ. ಇದು Vi Movies ಮತ್ತು TV ​​ಕ್ಲಾಸಿಕ್ ಪ್ರವೇಶಕ್ಕೆ ಹೆಚ್ಚುವರಿ ಓವರ್-ದಿ-ಟಾಪ್ (OTT) ಚಂದಾದಾರಿಕೆಯನ್ನು ಸಹ ಒಳಗೊಂಡಿದೆ.


ಜಿಯೋ  299 ರೂ. ಯೋಜನೆ:
ಇದಕ್ಕೆ ವ್ಯತಿರಿಕ್ತವಾಗಿ, Jio ತನ್ನ ಪ್ರಿಪೇಯ್ಡ್ ಯೋಜನೆಯನ್ನು ನಿಖರವಾದ ಮಾನ್ಯತೆ, ಧ್ವನಿ ಕರೆ ಮತ್ತು SMS ಪ್ರಯೋಜನಗಳೊಂದಿಗೆ ನೀಡುತ್ತದೆ. ಆದಾಗ್ಯೂ, ಜಿಯೋದ ಯೋಜನೆಯಲ್ಲಿ ದಿನಕ್ಕೆ 2GB ಡಾಟಾ ಲಭ್ಯವಿದೆ. ಇದು Vi ಯ ಯೋಜನೆಯಲ್ಲಿ ಬಳಕೆದಾರರು ಪಡೆಯುವ ಡೇಟಾಕ್ಕಿಂತ 500MB ಹೆಚ್ಚು. 


ಇದನ್ನೂ ಓದಿ- BSNL ಭರ್ಜರಿ ಪ್ಲಾನ್: 50 ಪೈಸೆಗೆ ದಿನಕ್ಕೆ 2GB ಡೇಟಾ


ಏರ್‌ಟೆಲ್ ರೂ. 299 ಪ್ಲಾನ್:
ಏರ್‌ಟೆಲ್ ಗ್ರಾಹಕರಿಗೆ 299 ರೂ.ಗಳ ಪ್ರಿಪೇಯ್ಡ್ ಯೋಜನೆಯನ್ನು ಸಹ ನೀಡುತ್ತದೆ. ಈ ಯೋಜನೆಯೊಂದಿಗೆ, ಬಳಕೆದಾರರು 28 ದಿನಗಳ ಮಾನ್ಯತೆ, ಅನಿಯಮಿತ ಧ್ವನಿ ಕರೆ, 100 SMS/ದಿನ ಮತ್ತು ಏರ್‌ಟೆಲ್ ಥ್ಯಾಂಕ್ಸ್ ಪ್ರಯೋಜನಗಳನ್ನು ಪಡೆಯುತ್ತಾರೆ. ಇದು Vi ನ ಯೋಜನೆಗಿಂತ ಹೆಚ್ಚು ಭಿನ್ನವಾಗಿಲ್ಲ, ಆದರೆ ಬಳಕೆದಾರರಿಗೆ Vi Hero ಅನ್‌ಲಿಮಿಟೆಡ್ ಬಂಡಲ್‌ಗಳ ರೀತಿಯ ಪ್ರಯೋಜನಗಳೊಂದಿಗೆ ಇದು ಬರುವುದಿಲ್ಲ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.