Amazing Theft Video: ಸಾಮಾಜಿಕ ಮಾಧ್ಯಮದಲ್ಲಿ ಕಳ್ಳತನ ಮತ್ತು ದರೋಡೆಯ ಹಲವು ವಿಡಿಯೋಗಳನ್ನು ನೀವು ನೋಡಿರಬಹುದು. ನಿಮ್ಮ ಕಣ್ಣುಗಳನ್ನು ನೀವೇ ನಂಬಲಾಗದ ಹಲವಾರು ವೀಡಿಯೊಗಳನ್ನು ನೀವು ವೀಕ್ಷಿಸಿರಬಹುದು. ಕೆಲ ಕಳ್ಳರು ಎಷ್ಟು ಬುದ್ಧಿವಂತರಾಗಿರುತ್ತಾರೆ ಎಂದರೆ, ಅವರ ಕಳ್ಳತನ ಕ್ಯಾಮರಾ ಕಣ್ಣಿಗೆ ಬಿದ್ದರೆ, ಅದನ್ನು ನೋಡಿದ ಜಗತ್ತೇ ಬೆಚ್ಚಿಬೀಳುತ್ತದೆ. ಕೆಲವು ಕಳ್ಳರು ಕದಿಯಲು ವಿಚಿತ್ರವಾದ ವಿಧಾನಗಳನ್ನು ಅನುಸರಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಅಂತಹುದೇ ಒಂದು ವಿಚಿತ್ರ ಕಳ್ಳತನದ ವಿಡಿಯೋವೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
ಇದನ್ನೂ ಓದಿ-Viral Video : ಎಷ್ಟು ದೂರ ಸರಿದರೂ ಮತ್ತೆ ಮತ್ತೆ ಸಿಂಹಕ್ಕೆ ಮುತ್ತಿಕ್ಕುತ್ತಿರುವ ಆಮೆ
ಕಳ್ಳತನದ ಆಘಾತಕಾರಿ ವಿಡಿಯೋ
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗುತ್ತಿರುವ ಕಳ್ಳತನದ ಈ ವೀಡಿಯೋ ಅಚ್ಚರಿ ಮೂಡಿಸುವುದಲ್ಲದೆ, ತುಂಬಾ ತಮಾಷೆಯಾಗಿ (Funny Theft Video) ಕೂಡ ಇದೆ. ಕಳ್ಳತನ ಮಾಡಲು ಕಳ್ಳನು ಅನುಸರಿಸಿದ ವಿಧಾನವನ್ನು ನೋಡಿ ನೀವೂ ಕೂಡ ಒಂದು ಕ್ಷಣ ಬೆಚ್ಚಿಬೀಳುವಿರಿ. ವಿಡಿಯೋದಲ್ಲಿ (Trending Video) ಸರಕುಗಳಿಂದ ತುಂಬಿರುವ ವಾಹನವೊಂದು ರಸ್ತೆಯ ಮೇಲೆ ಚಲಿಸುತ್ತಿದೆ. ಇನ್ನೂ ಚಲಿಸುತ್ತಿರುವ ವಾಹನದಿಂದ ಯಾರು ಕಳ್ಳತನ ಮಾಡುತ್ತಾರೆ ಅಂತಾ ಚಾಲಕನಿನಿಗೂ ಅನಿಸಿರಬಹುದು. ಆದರೆ, ಈ ವಿಡಿಯೋದಲ್ಲಿ ಅದು ಸಂಭವಿಸಿದೆ.
ಇದನ್ನೂ ಓದಿ-Viral Video: ಒಂದಲ್ಲ, 3 ಕೋಬ್ರಾ ಹಾವುಗಳ ಜೊತೆಗೆ ಯುವಕನ ಸ್ಟಂಟ್, ಮುಂದೇನಾಯ್ತು ನೀವೇ ನೋಡಿ
ವಿಡಿಯೋದಲ್ಲಿ ಸರಕು ತುಂಬಿದ ವಾಹನ ರಸ್ತೆಯ ಮೇಲೆ ಚಲಿಸುತ್ತಿದ್ದು, ಬೈಕ್ ವೊಂದರ ಮೇಲೆ ವಾಹನವನ್ನು ಇಬ್ಬರು ಅದನ್ನು ಹಿಂಬಾಲಿಸುತ್ತಿರುವುದನ್ನು ನೀವು ನೋಡಬಹುದು. ಅಷ್ಟೊತ್ತಿಗೆ ಚಲಿಸುತ್ತಿರುವ ಬೈಕ್ ನಿಂದ ವ್ಯಕ್ತಿಯೊಬ್ಬ ಆ ಚಲಿಸುತ್ತಿರುವ ವಾಹನವನ್ನು ಹತ್ತುತ್ತಾನೆ ಮತ್ತು ವಾಹನದಿಂದ ಸರಕುಗಳನ್ನು ತೆಗೆದು, ವಾಹನವನ್ನು ಹಿಂಬಾಲಿಸುತ್ತಿರುವ ಬೈಕ್ ಮೇಲಿರುವ ವ್ಯಕ್ತಿ ಕೈಗೆ ಕೊಡುತ್ತಾನೆ. ಇನ್ನೂ ಬೈಕ್ ಹಿಂದಿನಿಂದ ಚಲಿಸುತ್ತಿರುವ ಕಾರು ಚಾಲಕನೊಬ್ಬ ಈ ಕಳ್ಳತನದ ವಿಡಿಯೋ ಶೂಟ್ ಮಾಡಿದ್ದಾನೆ. ಯಾವುದೇ ರೀತಿಯ ಭೀತಿ ಇಲ್ಲದ ಕಳ್ಳರನ್ನು ಆತ ಹಿಂದೆಂದೂ ನೋಡಿರಲಿಕ್ಕಿಲ್ಲ. ವಿಡಿಯೋ ನೋಡಿ.
ಚಲಿಸುತ್ತಿರುವ ವಾಹನದಿಂದ ಹಾಡುಹಗಲೇ ದರೋಡೆ
ರಸ್ತೆಯ ಮೇಲೆ ಚಲಿಸುತ್ತಿರುವ ವಾಹನದಿಂದ ಸರಕನ್ನು ಹಾರಿಸುವುದು ನಿಜಕ್ಕೂ ಬೆಚ್ಚಿಬೀಳಿಸುವಂತಿದೆ. ಪ್ರಸ್ತುತ ಈ ವಿಡಿಯೋ ಎಲ್ಲಿಂದ ಹೊರಹೊಮ್ಮಿದೆ ಎಂಬುದು ಮಾತ್ರ ಗೊತ್ತಾಗಿಲ್ಲ. ಈ ವಿಡಿಯೋ ಅನ್ನು swami_7773 ಹೆಸರಿನ ಇನ್ಸ್ಟಾಗ್ರಾಮ್ ಖಾತೆಯ ಮೂಲಕ ಹಂಚಿಕೊಳ್ಳಲಾಗಿದೆ. ಇದುವರೆಗೆ 20 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಣೆಗೆ ಒಳಗಾಗಿರುವ ಈ ವಿಡಿಯೋಗೆ 50 ಸಾವಿರಕ್ಕೂ ಹೆಚ್ಚು ಲೈಕ್ ಗಳು ಬನ್ನ್ದಿವೆ. ವಿಡಿಯೋಗೆ ಪ್ರತಿಕ್ರಿಯಿಸಿರುವ ಓರ್ವ ಇನ್ಸ್ಟಾ ಬಳಕೆದಾರ. ಇದೊಂದು 'ಹಾಡುಹಗಲೇ ದರೋಡೆ' ಎಂದು ಬರೆದುಕೊಂಡಿದ್ದಾನೆ.
ಇದನ್ನೂ ಓದಿ-Watch Video: ರೈಲು ಪ್ರಯಾಣಿಕನ ಪಾಲಿಗೆ ಆಪತ್ಬಾಂಧವನಾಗಿ ಬಂದ ಪೊಲೀಸಪ್ಪ..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.