Recharge Tricks: ಈ ಟ್ರಿಕ್ ಬಳಸಿ ಪ್ರತಿ ತಿಂಗಳ ಮೊಬೈಲ್ ರಿಚಾರ್ಜ್ ಮೇಲೆ ಡಿಸ್ಕೌಂಟ್ ಪಡೆಯಿರಿ
Vi Offer - ಖಾಸಗಿ ಟೆಲಿಕಾಂ ಕಂಪನಿಯಾಗಿರುವ ವೊಡಾಫೋನ್ ಐಡಿಯಾ (Vodafone-Idea) ಅಥವಾ Vi ತನ್ನ ಕೆಲ ವಿಶೇಷ ಬಳಕೆದಾರರಿಗೆ ಉತ್ತಮ ಕೊಡುಗೆಯನ್ನು ನೀಡುತ್ತಿದೆ, ಇದರಿಂದ ಬಳಕೆದಾರರು ಅವರ ಪ್ರತಿ ತಿಂಗಳು ರೀಚಾರ್ಜ್ ಮೇಲೆ ಕ್ಯಾಶ್ ಬ್ಯಾಕ್ ಪಡೆಯಬಹುದು. ಈ ಕೊಡುಗೆ ಏನು ಮತ್ತು ಯಾವ ಬಳಕೆದಾರರು ಇದರಿಂದ ಪ್ರಯೋಜನ ಪಡೆಯಬಹುದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
ನವದೆಹಲಿ: Vi Deals - ದೇಶದ ಖಾಸಗಿ ವಲಯದ ಟೆಲಿಕಾಂ ಕಂಪನಿಯಾಗಿರುವ ವೊಡಾಫೋನ್-ಐಡಿಯಾ ತನ್ನ ಬಳಕೆದಾರರಿಗೆ ಕಾಲಕಾಲಕ್ಕೆ ಆಕರ್ಷಕ ಯೋಜನೆಗಳು ಮತ್ತು ಕೊಡುಗೆಗಳನ್ನು ನೀಡುತ್ತಲೇ ಇರುತ್ತದೆ. ಇದೇ ಸರಣಿಯಲ್ಲಿ ಇಂದು ನಾವು ನಿಮಗೆ Vi ಕಂಪನಿಯ ಒಂದು ಉತ್ತಮ ಕೊಡುಗೆಯ ಕುರಿತು ಮಾಹಿತಿಯನ್ನು ನೀಡಲಿದ್ದೇವೆ. ಇದರಿಂದ ನೀವು ಪ್ರತಿ ತಿಂಗಳು ಕ್ಯಾಶ್‌ಬ್ಯಾಕ್ ಪಡೆಯಬಹುದು. ಸೀಮಿತ ಅವಧಿಗೆ ಲಭ್ಯವಿರುವ ಈ ಕೊಡುಗೆಯ ಕುರಿತು ತಿಳಿದುಕೊಳ್ಳೋಣ ಬನ್ನಿ,
Vodafone Idea ಕಂಪನಿಯ ಬಂಪರ್ ಕೊಡುಗೆ (Latest Vi News)
ನೀವು ಕೂಡ ಒಂದು ವೇಳೆ Vi ಗ್ರಾಹಕರಾಗಿದ್ದು, ಇತ್ತೀಚೆಗಷ್ಟೇ 2G ಮೊಬೈಲ್ ನಿಂದ 4G ಸ್ಮಾರ್ಟ್‌ಫೋನ್‌ಗೆ ನಿಮ್ಮ ಫೋನ್ ಅನ್ನು ಬದಲಾಯಿಸಿದ್ದರೆ, ನೀವು ಈ ಕೊಡುಗೆಯ ಲಾಭವನ್ನು ಪಡೆಯಬಹುದು. ವಾಸ್ತವದಲ್ಲಿ, Vi ಕಂಪನಿಯು ತನ್ನ 2G ಬಳಕೆದಾರರನ್ನು (Vodafone Idea 2G Users) 4G ಗೆ (Vi 4G Customer) ಪರಿವರ್ತಿಸುವ ಗುರಿಯನ್ನು ಹೊಂದಿದ್ದು, ಏರ್‌ಟೆಲ್‌ನಂತಹ ಹೊಸ ಕೊಡುಗೆಯನ್ನು ನೀಡುತ್ತಿದೆ. ನೀವು ಕೂಡ Vi ಬಳಕೆದಾರರಾಗಿದ್ದರೆ ಮತ್ತು 4G ಸ್ಮಾರ್ಟ್‌ಫೋನ್ ಖರೀದಿಸಿದ್ದರೆ, ಈ ಕೊಡುಗೆಯ ಲಾಭವನ್ನು ನೀವು ಪಡೆದುಕೊಳ್ಳಬಹುದು.
ಪ್ರತಿ ತಿಂಗಳು ಸಿಗಲಿದೆ ಕ್ಯಾಶ್ ಬ್ಯಾಕ್ (Vi Cashback Offer)
ನೀವು 2G ಸ್ಮಾರ್ಟ್‌ಫೋನ್ ಅನ್ನು ಹೊಂದಿದ್ದು ಮತ್ತು ಈ ಆಫರ್ ಅವಧಿಯಲ್ಲಿ ನೀವು ನಿಮ್ಮ ಮೊದಲ 4G ಸ್ಮಾರ್ಟ್‌ಫೋನ್ ಅನ್ನು ಖರೀದಿಸಿದ್ದರೆ, ನೀವು ರೂ 299 ಅಥವಾ ಅದಕ್ಕಿಂತ ಹೆಚ್ಚಿನ ಪ್ರಿಪೇಯ್ಡ್ ಯೋಜನೆಯನ್ನು ಖರೀದಿಸಿಕೊಂಡು ತಿಂಗಳಿಗೆ ರೂ. 100 ಕ್ಯಾಶ್‌ಬ್ಯಾಕ್ ಪಡೆಯಬಹುದು. ಈ ಕ್ಯಾಶ್‌ಬ್ಯಾಕ್ ನಿಮಗೆ ಸತತ ಎರಡು ವರ್ಷಗಳವರೆಗೆ ಸಿಗಲಿದೆ, ಅಂದರೆ ಒಟ್ಟಾರೆಯಾಗಿ ನೀವು ರೂ 2,400 ಕ್ಯಾಶ್‌ಬ್ಯಾಕ್ ಪಡೆಯುವಿರಿ ಎಂಬುದು ನಿಮಗೆ ತಿಳಿದಿರಲಿ. ಪ್ರತಿ ತಿಂಗಳಿಗೆ ಈ ಕ್ಯಾಶ್‌ಬ್ಯಾಕ್ ಪಡೆಯುವುದನ್ನು ನೀವು ಮುಂದುವರಿಸಲು, ನೀವು ಎರಡು ವರ್ಷಗಳವರೆಗೆ ಅಂದರೆ 24 ತಿಂಗಳುಗಳವರೆಗೆ ರೂ 299 ಅಥವಾ ಅದಕ್ಕಿಂತ ಹೆಚ್ಚಿನ ರೀಚಾರ್ಜ್ ಮಾಡುತ್ತಲೇ ಇರಬೇಕು.
ಇದನ್ನೂ ಓದಿ-ಭೀಕರ ರಸ್ತೆ ಅಪಘಾತ : ನಾಲ್ವರ ದುರ್ಮರಣ, ಮೂವರಿಗೆ ಗಂಭೀರ ಗಾಯ
ಈ ವಿಷಯಗಳನ್ನು ಗಮನದಲ್ಲಿಡಿ
ಈ ಕೊಡುಗೆಯ ಲಾಭವನ್ನು ಪಡೆಯಲು ನೀವು ರೂ.299 ಅಥವಾ ಅದಕ್ಕಿಂತ ಹೆಚ್ಚಿನ ಬೆಲೆಯ ರಿಚಾರ್ಜ್ ಯೋಜನೆಯನ್ನು Vi App ಮೂಲಕ ಖರೀದಿಸಬೇಕು. ನಿಮಗೆ ನಿಮ್ಮ ಕ್ಯಾಶ್ ಬ್ಯಾಕ್ ಕೂಡ ಇದೇ ಆಪ್ ನಲ್ಲಿ ಸಿಗಲಿದೆ.ಒಂದು ಫೋನ್ ನಂಬರ್ ಮೇಲೆ ಕೇವಲ ಒಂದು ಬಾರಿಗೆ ಈ ಕೊಡುಗೆಯನ್ನು ನೀವು ಪಡೆಯಬಹುದು. ಅಷ್ಟೇ ಅಲ್ಲ, ಒಂದೊಮ್ಮೆ ನೀವು ಒಂದು ಸ್ಮಾರ್ಟ್ ಫೋನ್ ಅನ್ನು ಈ ಕೊಡುಗೆಯ ಲಾಭ ಪಡೆಯಲು ಬಳಸಿದರೆ, ಆ ಸ್ಮಾರ್ಟ್ ಫೋನ್ ಅನ್ನು ನೀವು ಪುನಃ ಬಳಸುವಂತಿಲ್ಲ. ಪ್ರತಿ ತಿಂಗಳು ಸಿಗುವ ಕ್ಯಾಶ್ ಬ್ಯಾಕ್, 30 ದಿನಗಳ ವ್ಯಾಲಿಡಿಟಿ ಹೊಂದಿರಲಿದೆ.
ಇದನ್ನೂ ಓದಿ-ಅಶೋಕ ಮರದ ಈ ಅದ್ಭುತ ಉಪಾಯ ಮಾಡಿ ಆರ್ಥಿಕವಾಗಿ ಬಲಿಷ್ಠರಾಗಿ!
Vi ಘೋಷಿಸಿರುವ ಈ ಕೊಡುಗೆಯ ಲಾಭವನ್ನು ನೀವು ಮಾರ್ಚ್ 31, 2022ರವರೆಗೆ ಪಡೆದುಕೊಳ್ಳಬಹುದು. Vi ಕಂಪನಿಯ ಈ ಕೊಡುಗೆ ಡಿಸೆಂಬರ್ 2021 ರಿಂದ ಚಾಲ್ತಿಯಲ್ಲಿದೆ ಎಂಬುದು ಇಲ್ಲಿ ಉಲ್ಲೇಖನೀಯ.
ಇದನ್ನೂ ಓದಿ-"ಭಾರತದ ಕ್ಷಿಪಣಿ ನಮ್ಮ ಭೂ ಪ್ರದೇಶದೊಳಗೆ ಬಿದ್ದಿದೆ": ಪಾಕಿಸ್ತಾನ ಆರೋಪ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.