"ಭಾರತದ ಕ್ಷಿಪಣಿ ನಮ್ಮ ಭೂ ಪ್ರದೇಶದೊಳಗೆ ಬಿದ್ದಿದೆ": ಪಾಕಿಸ್ತಾನ ಆರೋಪ

ಹರಿಯಾಣದಿಂದ ಹಾರಿಸಿದೆ ಎನ್ನಲಾದ ಕ್ಷಿಪಣಿಯೊಂದು ಪಾಕಿಸ್ತಾನ ಭೂಪ್ರದೇಶದೊಳಗೆ ಬಿದ್ದಿದೆ ಎಂದು ಪಾಕ್​ ಸಶಸ್ತ್ರಪಡೆಗಳು ಗಂಭೀರ ಆರೋಪ ಮಾಡಿವೆ.

Written by - Zee Kannada News Desk | Last Updated : Mar 11, 2022, 05:00 PM IST
  • "ಭಾರತದ ಕ್ಷಿಪಣಿ ನಮ್ಮ ಭೂ ಪ್ರದೇಶದೊಳಗೆ ಬಿದ್ದಿದೆ"
  • ಪಾಕ್​ ಸಶಸ್ತ್ರಪಡೆಗಳು ಗಂಭೀರ ಆರೋಪ
"ಭಾರತದ ಕ್ಷಿಪಣಿ ನಮ್ಮ ಭೂ ಪ್ರದೇಶದೊಳಗೆ ಬಿದ್ದಿದೆ": ಪಾಕಿಸ್ತಾನ ಆರೋಪ   title=
ಪಾಕಿಸ್ತಾನ

ಇಸ್ಲಾಮಾಬಾದ್ (ಪಾಕಿಸ್ತಾನ): ಭಾರತದ ಕ್ಷಿಪಣಿಯೊಂದು ಪಾಕಿಸ್ತಾನಕ್ಕೆ (Pakistan) ಸೇರಿದ ಪ್ರದೇಶವೊಂದರಲ್ಲಿ ಬಿದ್ದಿದೆ ಎಂದು ಪಾಕ್ ಸಶಸ್ತ್ರ ಪಡೆಗಳು ಆರೋಪಿಸಿವೆ.

ಇದನ್ನೂ ಓದಿ: ಪಂಜಾಬ್ ಚುನಾವಣಾ ಫಲಿತಾಂಶ ಪಕ್ಷದ ಮಟ್ಟಿಗೆ ದೊಡ್ಡ ಆಘಾತ : ದಿನೇಶ್ ಗುಂಡು ರಾವ್

ಹರಿಯಾಣದ (Hariyana) ಸಿರ್ಸಾ ನಗರಕ್ಕೆ ಸಮೀಪವಿರುವ ಪ್ರದೇಶದಿಂದ ಉಡಾಯಿಸಲಾದ ಕ್ಷಿಪಣಿಯನ್ನು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮಿಯಾನ್ ಚನ್ನು ನಗರದ ಬಳಿ ಬಿದ್ದಿದೆ ಎಂದು ಒಅಕಿಸ್ತಾನ ಹೇಳಿಕೊಂಡಿದೆ. 

ಗುರುವಾರ ಸಂಜೆ 6:43ಕ್ಕೆ ಪಾಕ್ ವಾಯುಪಡೆ (Airforce) ತನ್ನ ಭೂಪ್ರದೇಶದೊಳಗೆ ಬಿದ್ದಿದ್ದ ಕ್ಷಿಪಣಿಯೊಂದನ್ನು ಗುರುತಿಸಿದೆ ಎಂದಿದೆ.

ಈ ಕ್ಷಿಪಣಿ ಇದ್ದಕ್ಕಿದ್ದಂತೆ ಪಾಕಿಸ್ತಾನದ ಪ್ರದೇಶದ ಕಡೆಗೆ ವೇಗವಾಗಿ ನುಗ್ಗಿದೆ ಎಂದು ಪಾಕಿಸ್ತಾನಿ ಸಶಸ್ತ್ರ ಪಡೆಗಳ ವಕ್ತಾರರನ್ನು ಉಲ್ಲೇಖಿಸಿ ರಷ್ಯಾದ (Russia) ಸುದ್ದಿ ಸಂಸ್ಥೆ ವರದಿ ಮಾಡಿದೆ.

ಇದನ್ನೂ ಓದಿ: Lucknow Super Giants: ಲಾಂಚ್ ಆಗುವ ಮೊದಲೇ ಲಕ್ನೋ ಸೂಪರ್ ಜೈಂಟ್ಸ್ ಜೆರ್ಸಿ ಲೀಕ್

ಈ ಕ್ಷಿಪಣಿಯಿಂದಾಗಿ ಸ್ವಲ್ಪ ಮಟ್ಟದ ಹಾನಿಯಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಪಾಕಿಸ್ತಾನ ಮಿಲಿಟರಿ ಅಧಿಕಾರಿಯೊಬ್ಬರು ಹೇಳಿದ್ದಾರೆ. ಆದರೆ ಈ ಕುರಿತು ಭಾರತ ಸರ್ಕಾರ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News