WhatsApp ನಲ್ಲಿ ಇನ್ಮುಂದೆ ವಿಡಿಯೋ ಕಾಲ್ ಅವಧಿಯಲ್ಲಿ ಈ ಕೆಲಸವನ್ನು ಕೂಡ ನೀವು ಮಾಡಬಹುದು!
WhatsApp New Update: ವರದಿಗಳ ಪ್ರಕಾರ, ಮೆಟಾ-ಮಾಲೀಕತ್ವದ ಪ್ಲಾಟ್‌ಫಾರ್ಮ್ ವಾಟ್ಸ್ ಆಪ್ ಬಳಕೆದಾರರಿಗೆ ಹೆಚ್ಚು ತೊಡಗಿಸಿಕೊಳ್ಳುವ ರೀತಿಯಲ್ಲಿ ವೀಡಿಯೊ ಕರೆಗಳ ಕನೆಕ್ಷನ್ ಅನುಮತಿಸಲಿದೆ. WABetaInfo ವರದಿಯ ಪ್ರಕಾರ, ಈಗ ನೀವು ಸಂಗೀತವನ್ನು ನೇರವಾಗಿ ವಾಟ್ಸ್ ಆಪ್ ವೀಡಿಯೊ ಕರೆಗಳಲ್ಲಿ ಹಂಚಿಕೊಳ್ಳಲು ಸಾಧ್ಯವಾಗಲಿದೆ. (Technology News In Kannada)
ಬೆಂಗಳೂರು: ವಾಟ್ಸ್ ಅಪ್ ವಿಶ್ವಾದ್ಯಂತ ಅತಿ ಹೆಚ್ಚು ಬಳಸಲಾಗುವ ಸಂದೇಶ ಕಳುಹಿಸುವಿಕೆ ಅಪ್ಲಿಕೇಶನ್ ಆಗಿದೆ ಮತ್ತು ಇದು ತನ್ನ ಬಳಕೆದಾರರ ಅನುಭವವನ್ನು ಸುಧಾರಿಸಲು ನಿರಂತರವಾಗಿ ಹೊಸ ನವೀಕರಣಗಳನ್ನು ಜಾರಿಗೆ ತರುತ್ತದೆ ಇರುತ್ತದೆ. ಕೆಲ ದಿನಗಳ ಹಿಂದೆಯಷ್ಟೆ ವಾಟ್ಸ್ ಆಪ್ ಫೋನ್ ಸಂಖ್ಯೆಗಳನ್ನು ಹಂಚಿಕೊಳ್ಳದೆ ಜನರನ್ನು ಸಂಪರ್ಕಿಸಲು ಮತ್ತು ಕಣ್ಣಿನ ಆಯಾಸವನ್ನು ಕಡಿಮೆ ಮಾಡಲು ಹೊಸ ಡಾರ್ಕ್ ಮೋಡ್ ಮೇಲೆ ಕಾರ್ಯನಿರ್ವಹಿಸುತ್ತಿದೆ ಎಂದು ವರದಿಗಳು ಪ್ರ್ಕತಗೊಂಡಿದ್ದವು ಮತ್ತು ಇದೀಗ, ವರದಿಗಳ ಪ್ರಕಾರ, ಮೆಟಾ-ಮಾಲೀಕತ್ವದ ಪ್ಲಾಟ್‌ಫಾರ್ಮ್ ಬಳಕೆದಾರರಿಗೆ ವೀಡಿಯೊಗಳನ್ನು ಹಂಚಿಕೊಳ್ಳಲು ಅನುವು ಮಾಡಿಕೊಡುತ್ತದೆ. ವಿಡಿಯೋ ಕರೆ ಸೌಕರ್ಯವನ್ನು ಮತ್ತಷ್ಟು ಆಕರ್ಷಕಗೊಳಿಸಲು ಈ ವೈಶಿಷ್ಟ್ಯ ಬಿಡುಗಡೆಯಾಗಲಿದೆ ಎನ್ನಲಾಗಿದೆ. (Technology News In Kannada)
WABetaInfo ವಿವರಗಳನ್ನು ಹಂಚಿಕೊಂಡಿದೆ
WABetaInfo ವರದಿಯ ಪ್ರಕಾರ, ಇನ್ಮುಂದೆ ನೀವು ವಿಡಿಯೋ ಕರೆಗಳ ಸಂದರ್ಭಗಳಲ್ಲಿ ಸಂಗೀತವನ್ನು ನೇರವಾಗಿ WhatsApp ವಿಡಿಯೋ ಕರೆಗಳಲ್ಲಿ ಹಂಚಿಕೊಳ್ಳಲು ಸಾಧ್ಯವಾಗಲಿದೆ. ಇದರೊಂದಿಗೆ, ನೀವು ವೀಡಿಯೊ ಕರೆಗಳ ಸಮಯದಲ್ಲಿ ನಿಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಮಾತನಾಡುವಾಗ ಸಂಗೀತವನ್ನು ಕೂಡ ಆಳಿಸಬಹುದು. ಈ ವೈಶಿಷ್ಟ್ಯವು ವೈಯಕ್ತಿಕ ಮತ್ತು ಗುಂಪು ಕರೆ ಎರಡರಲ್ಲೂ ಕಾರ್ಯನಿರ್ವಹಿಸಲಿದೆ. ವರದಿಯ ಪ್ರಕಾರ, ವಾಟ್ಸ್ ಆಪ್ ನ ಈ ಹೊಸ ವೈಶಿಷ್ಟ್ಯ ಪರೀಕ್ಷೆಯ ಹಂತದಲ್ಲಿದೆ. ಇದರೊಂದಿಗೆ, ಯಾರಾದರೂ ವೀಡಿಯೊ ಕರೆಯಲ್ಲಿ ತನ್ನ ಪರದೆಯನ್ನು ಹಂಚಿಕೊಂಡಾಗ, ಅದರಲ್ಲಿ ಪ್ಲೇ ಆಗುವ ಹಾಡುಗಳು ಅಥವಾ ಧ್ವನಿಗಳು ಇತರ ಜನರಿಗೂ ಕೇಳಿಸಲಿವೆ.
ಇದನ್ನೂ ಓದಿ-Republic Day Sale 2024: ಈ ದಿನದಿಂದ ಆರಂಭಗೊಳ್ಳಲಿದೆ ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್, ದಿನಾಂಕ ಘೋಷಣೆ!
ಗುಂಪು ಕರೆಗಳ ಸಮಯದಲ್ಲಿಯೂ ಈ ವೈಶಿಷ್ಟ್ಯವು ಕಾರ್ಯನಿರ್ವಹಿಸುತ್ತದೆ
ಈ ಹೊಸ ವೈಶಿಷ್ಟ್ಯವು ಕೇವಲ ಇಬ್ಬರ ಕರೆಗಳಿಗೆ ಮಾತ್ರ ಸೀಮಿತವಾಗಿಲ್ಲ, ಆದರೆ ಗುಂಪು ವೀಡಿಯೊ ಕರೆಗಳಲ್ಲಿಯೂ ಕಾರ್ಯನಿರ್ವಹಿಸುತ್ತದೆ. ಇದರರ್ಥ ನೀವು ಸ್ನೇಹಿತರೊಂದಿಗೆ ಮೋಜು ಮಾಡುವಾಗ ಹಾಡುಗಳನ್ನು ಆನಂದಿಸಬಹುದು ಅಥವಾ ಕಚೇರಿ ಸಭೆಯ ಸಮಯದಲ್ಲಿ ಪ್ರೆಸೆಂಟೇಷನ್ ವೇಳೆ ಹಿನ್ನೆಲೆ ಸಂಗೀತವನ್ನು ಪ್ಲೇ ಮಾಡಬಹುದು.
ಇದನ್ನೂ ಓದಿ-Bajaj Chetak Premium ಭಾರತೀಯ ಮಾರುಕಟ್ಟೆಗೆ ಬಿಡುಗಡೆ, ರೆಂಜ್ ಸೇರಿದಂತೆ ಬೆಲೆ ಕೂಡ ಪರಿಷ್ಕರಣೆ, ಇಲ್ಲಿದೆ ವಿವರ
ಅಷ್ಟೇ ಅಲ್ಲ ಈ ಹೊಸ ವೈಶಿಷ್ಟ್ಯದಿಂದ ನೀವು ವಾಟ್ಸ್ ಆಪ್ ವೀಡಿಯೊ ಕರೆಯಲ್ಲಿ ಸ್ನೇಹಿತರೊಂದಿಗೆ ಕುಳಿತು ಒಟ್ಟಿಗೆ ಚಲನಚಿತ್ರವನ್ನು ವೀಕ್ಷಿಸಬಹುದು. ಹೊಸ ವೈಶಿಷ್ಟ್ಯವು ಈಗ ಕರೆಗಳಲ್ಲಿ ಸಂಗೀತವನ್ನು ಹಂಚಿಕೊಳ್ಳುವುದರ ಜೊತೆಗೆ ವೀಡಿಯೊ ಪ್ಲೇಬ್ಯಾಕ್ ಅನ್ನು ಸಿಂಕ್ರೊನೈಸ್ ಮಾಡಲಿದೆ. ಅಂದರೆ, ಎಲ್ಲರೂ ಒಂದೇ ಬಾರಿಗೆ ಒಂದೇ ವಿಷಯವನ್ನು ನೋಡಬಹುದು ಮತ್ತು ಕೇಳಬಹುದು. ಮುಂದಿನ ಕೆಲವು ವಾರಗಳಲ್ಲಿ ಈ ವೈಶಿಷ್ಟ್ಯವನ್ನು ಕ್ರಮೇಣವಾಗಿ ಬಿಡುಗಡೆ ಮಾಡಲಾಗುವುದು ಮತ್ತು ಅಂಡ್ರಾಯಿಡ್ ಸಾಧನಗಳಲ್ಲಿ ಹೆಚ್ಚು ವಾಟ್ಸ್ ಆಪ್ ಬಳಕೆದಾರರನ್ನು ಇದು ತಲುಪಲಿದೆ.
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ