WhatsApp, Google ಡ್ರೈವ್‌ನಂತಹ ಅಪ್ಲಿಕೇಶನ್‌ಗಳ ಬಳಕೆ ಅಪಾಯಕಾರಿಯೇ? ಪ್ರಸಿದ್ಧ ಆ್ಯಪ್ಗಳು ಬ್ಯಾನ್
Popular Apps Banned: ಜಗತ್ತಿನ ಪ್ರಸಿದ್ದ ಮೆಸೇಜಿಂಗ್ ಪ್ಲಾಟ್ಫಾರ್ಮ್ ವಾಟ್ಸಾಪ್ ಹಾಗೂ ಗೂಗಲ್ ಡ್ರೈವ್‌ನಂತಹ ಅಪ್ಲಿಕೇಶನ್ಗಳಿಗೆ ಸಂಬಂಧಿಸಿದಂತೆ ಈ ದೇಶದಲ್ಲಿ ಸರ್ಕಾರ ಹೊಸ ಮಾರ್ಗಸೂಚಿಯನ್ನು ಹೊರಡಿಸಿದೆ.
WhatsApp, Google Drive, WeChat Banned: ವಿಶ್ವದ ಪ್ರಸಿದ್ದ ತ್ವರಿತ ಮೆಸೇಜಿಂಗ್ ಆ್ಯಪ್ ಆಗಿರುವ ವಾಟ್ಸಾಪ್ ಸೇರಿದಂತೆ ಗೂಗಲ್ ಡ್ರೈವ್ ಮತ್ತು WeChat ಅನ್ನು ನಿಷೇಧಿಸಿ ಹಾಂಗ್ ಕಾಂಗ್ ಸರ್ಕಾರ ಆದೇಶ ಹೊರಡಿಸಿದೆ. WhatsApp, Google Drive ಮತ್ತು WeChat ಅನ್ನು ಅಪಾಯಕಾರಿ ಎಂದು ಬಣ್ಣಿಸಿರುವ ಹಾಂಗ್ ಕಾಂಗ್ ಈ ಅಪ್ಲಿಕೇಶನ್‌ಗಳ ಜೊತೆಗೆ, ಗೂಗಲ್‌ನ ಕ್ಲೌಡ್ ಸ್ಟೋರೇಜ್ ಪ್ಲಾಟ್‌ಫಾರ್ಮ್‌ನ್ನು ಕೂಡ ಬ್ಯಾನ್ ಮಾಡಿದೆ.
ಈ ಎಲ್ಲಾ ಅಪ್ಲಿಕೇಶನ್‌ಗಳನ್ನು ಅಪಾಯಕಾರಿ ಆ್ಯಪ್ ಗಳೆಂದು ಬಣ್ಣಿಸಿರುವ ಹಾಂಗ್ ಕಾಂಗ್ ಸರ್ಕಾರ ವಿಶೇಷವಾಗಿ ಸರ್ಕಾರಿ ಉದ್ಯೋಗಿಗಳು ಮತ್ತು ಕಚೇರಿಗಳಲ್ಲಿ ಇವುಗಳನ್ನು ಬಳಸದಂತೆ ಹೊಸ ಐಟಿ ಮಾರ್ಗಸೂಚಿಯನ್ನು ಬಿಡುಗಡೆಗೊಳಿಸಿದೆ. ಆದಾಗ್ಯೂ, ಈ ನಿಷೇಧ ಸಾಮಾನ್ಯ ಬಳಕೆದಾರರಿಗೆ ಅನ್ವಯಿಸುವುದಿಲ್ಲ. ಸರ್ಕಾರಿ ಕಛೇರಿಗಳು, ಉದ್ಯೋಗಸ್ಥರನ್ನು ಹೊರತುಪಡಿಸಿ ಉಳಿದವರು ಈ ಅಪ್ಲಿಕೇಶನ್‌ಗಳ ಬಳಕೆಯನ್ನು ಮುಂದುವರೆಸಬಹುದು ಎಂದು ತಿಳಿಸಲಾಗಿದೆ.
ಇದನ್ನೂ ಓದಿ- ಹುಷಾರ್! ಈ ಸಂಖ್ಯೆಗಳಿಂದ ಬರುವ ಕಾಲ್ ರಿಸೀವ್ ಮಾಡಿದ್ರೆ ಎರಡೇ ನಿಮಿಷದಲ್ಲಿ ಖಾಲಿಯಾಗುತ್ತೆ ಬ್ಯಾಂಕ್ ಅಕೌಂಟ್!
ಸರ್ಕಾರದಿಂದ ಹೊಸ ಐಟಿ ಮಾರ್ಗಸೂಚಿ:
ವಾಟ್ಸಾಪ್, ಗೂಗಲ್ ಡ್ರೈವ್‌ನಂತಹ ಅಪ್ಲಿಕೇಶನ್‌ಗಳ ನಿಷೇಧಕ್ಕೆ ಸಂಬಂಧಿಸಿದಂತೆ ಹಾಂಗ್ ಕಾಂಗ್ ಸರ್ಕಾರವು ಸರ್ಕಾರಿ ಉದ್ಯೋಗಿಗಳಿಗೆ ಐಟಿ ಭದ್ರತಾ ಮಾರ್ಗಸೂಚಿಯನ್ನು ಹೊರಡಿಸಿದೆ. ಇದರಲ್ಲಿ, WhatsApp, Google Drive ಮತ್ತು WeChat ಈ ಮೂರು ಅಪ್ಲಿಕೇಶನ್‌ಗಳ ಬಳಕೆಯನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದೆ.
ಹಾಂಗ್ ಕಾಂಗ್‌ನ ಸರ್ಕಾರಿ ಇಲಾಖೆಯ ಸಾವಿರಾರು ಜನರ ವೈಯಕ್ತಿಕ ಡೇಟಾ ಸೋರಿಕೆಯಾಗಿದೆ. 2024ರ ಆರಂಭದಲ್ಲಿ ಡೇಟಾ ಉಲ್ಲಂಘನೆಯ ಪ್ರಕರಣಗಳು ಬೆಳಕಿಗೆ ಬಂದ ಹಿನ್ನಲೆಯಲ್ಲಿ ಹಾಂಗ್ ಕಾಂಗ್ ಸರ್ಕಾರ ಈ ಅಪ್ಲಿಕೇಶನ್‌ಗಳನ್ನು ನಿಷೇಧಿಸುವ ದಿಟ್ಟ ನಿರ್ಧಾರ ಕೈಗೊಂಡಿದೆ.
ಇದನ್ನೂ ಓದಿ- ಜಿಯೋ ರಿಚಾರ್ಜ್ ಪ್ಲಾನ್ಸ್: ಎರಡು ಪ್ಲಾನ್ಸ್ ನಡುವೆ ₹1 ಅಷ್ಟೇ ವ್ಯತ್ಯಾಸ, ಆದರೆ ಪ್ರಯೋಜನ ಮಾತ್ರ ಅಗಾಧ..!
ಹಾಂಗ್ ಕಾಂಗ್‌ನ ಡಿಜಿಟಲ್ ನೀತಿ ಕಚೇರಿ ಹೊರಡಿಸಿದ ಮಾರ್ಗಸೂಚಿಗಳ ಪ್ರಕಾರ, ಸರ್ಕಾರಿ ಉದ್ಯೋಗಿಗಳು ತಮ್ಮ ಅಧಿಕೃತ ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು PC ಗಳಲ್ಲಿ WhatsApp, WeChat ಮತ್ತು Google ಡ್ರೈವ್‌ನಂತಹ ಅಪ್ಲಿಕೇಶನ್‌ಗಳನ್ನು ಬಳಸುವಂತಿಲ್ಲ. ಅಷ್ಟೇ ಅಲ್ಲ, ತಮ್ಮ ವೈಯಕ್ತಿಕ ಫೋನ್, ಪಿಸಿಗಳಲ್ಲಿ ಈ ಅಪ್ಲಿಕೇಶನ್‌ಗಳನ್ನು ಬಳಸಲು ಕೂಡ ಸರ್ಕಾರಿ ನೌಕರರು ತಮ್ಮ ವ್ಯವಸ್ಥಾಪಕರಿಂದ ಅನುಮೋದನೆ ಪಡೆಯುವುದು ಕಡ್ಡಾಯವಾಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.