WhatsApp New Stickers: ಒಂದೆಡೆ ಟಿ20 ವಿಶ್ವಕಪ್ ಕ್ರಿಕೆಟ್ ಪ್ರೇಮಿಗಳಿಗೆ ಹಬ್ಬದ ವಾತಾವರಣವನ್ನು ನಿರ್ಮಿಸಿದೆ. ಮತ್ತೊಂದೆಡೆ ತ್ವರಿತ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸಾಪ್ ಕ್ರಿಕೆಟ್ ಹಬ್ಬವನ್ನು ಸ್ಮರಣೀಯವಾಗಿಸಲು  'ವರ್ಲ್ಡ್ ಆಫ್ ಕ್ರಿಕೆಟ್' ಎಂಬ ಹೊಸ ಸ್ಟಿಕ್ಕರ್ ಪ್ಯಾಕ್ ಬಿಡುಗಡೆ ಮಾಡಿದೆ. 


COMMERCIAL BREAK
SCROLL TO CONTINUE READING

ಹೌದು, ಕ್ರಿಕೆಟ್ ಪ್ರಿಯರಿಗಾಗಿ ಈ ಟಿ20 ವಿಶ್ವಕಪ್ (T20 Worldcup) ಪಂದ್ಯವನ್ನು ಮತ್ತಷ್ಟು ಆನಂದಿಸಲು 'ವರ್ಲ್ಡ್ ಆಫ್ ಕ್ರಿಕೆಟ್' (World Of Cricket) ಎಂಬ ಹೊಸ ಸ್ಟಿಕ್ಕರ್‌ಗಳನ್ನು ಪರಿಚಯಿಸಿರುವುದಾಗಿ ವಾಟ್ಸಾಪ್ ತನ್ನ ಅಧಿಕೃತ ಚಾನೆಲ್‌ನಲ್ಲಿ ತಿಳಿಸಿದೆ. 


ಇದನ್ನೂ ಓದಿ- ಸ್ಲೋ ಇರುವ ಇಂಟರ್ನೆಟ್ Super speed ಆಗಬೇಕಾದರೆ ಈ ಟಿಪ್ಸ್ ಅನ್ನು ಅನುಸರಿಸಿ


ಸ್ಟಿಕ್ಕರ್ ಡ್ರಾಪ್: ವರ್ಲ್ಡ್ ಆಫ್ ಕ್ರಿಕೆಟ್: 
ವಾಟ್ಸಾಪ್ ಇದಕ್ಕೆ 'ಸ್ಟಿಕ್ಕರ್ ಡ್ರಾಪ್: ವರ್ಲ್ಡ್ ಆಫ್ ಕ್ರಿಕೆಟ್' ಎಂದು ಹೆಸರಿಸಿದೆ. ಈ ಬಗ್ಗೆ ಮಾಹಿತಿ ನೀಡಿರುವ ವಾಟ್ಸಾಪ್, ಟಿ20 ವಿಶ್ವಕಪ್ 2024 (T20 WorldCup 2024) ಪ್ರಾರಂಭವಾಗಿದೆ. ಈ ಸಮಯದಲ್ಲಿ ನೀವು ನಿಮ್ಮ ಗ್ರೂಪ್ ಚಾಟ್‌ಗಳನ್ನು ಹೆಚ್ಚು ಮೋಜು ಮಾಡಲು ಅನುಕೂಲವಾಗುವಂತೆ ಸ್ಟಿಕ್ಕರ್ ಪ್ಯಾಕ್ ಅನ್ನು ತಂದಿದ್ದೇವೆ ಎಂದು ಮಾಹಿತಿ ಹಂಚಿಕೊಂಡಿದೆ. 


ವರ್ಲ್ಡ್ ಆಫ್ ಕ್ರಿಕೆಟ್ ಸ್ಟಿಕ್ಕರ್ ಪ್ಯಾಕ್ (World of Cricket Sticker Pack) ಅನ್ನು ಬಕ್ ಎಂಬ ಕಂಪನಿ ತಯಾರಿಸಿದ್ದು, ಇದು ಒಟ್ಟು 16 ಅನಿಮೇಟೆಡ್ ಸ್ಟಿಕ್ಕರ್‌ಗಳನ್ನು ಒಳಗೊಂಡಿದೆ. ಇದರಲ್ಲಿ ಬಳಕೆದಾರರು ಕ್ರಿಕೆಟ್ ಪಂದ್ಯದ ವಿಭಿನ್ನ ಕ್ಷಾಂಗಳು, ಆಚರಣೆಗಳ ಅನಿಮೇಟೆಡ್ ಸ್ಟಿಕ್ಕರ್‌ಗಳನ್ನು ನಿಮ್ಮ ತಮ್ಮ ಚಾಟ್‌ಗಳಲ್ಲಿ ಶೇರ್ ಮಾಡಬಹುದು. 


ಇದನ್ನೂ ಓದಿ- Wifi Inverter: ಈಗ ಕರೆಂಟ್ ಇಲ್ಲದಿದ್ರೂ ಇಂಟರ್‌ನೆಟ್ ಬಳಸಬಹುದು, ಹೇಗ್ ಗೊತ್ತಾ?


ವರ್ಲ್ಡ್ ಆಫ್ ಕ್ರಿಕೆಟ್ ಸ್ಟಿಕ್ಕರ್ ಪ್ಯಾಕ್ ಡೌನ್‌ಲೋಡ್ ಮಾಡುವುದು ಹೇಗೆ? 
>> ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ವಾಟ್ಸಾಪ್ ಅಪ್ಲಿಕೇಶನ್ ತೆರೆಯಿರಿ. 
>> ವಾಟ್ಸಾಪ್ ನಲ್ಲಿ ಯಾವುದೇ ಚಾಟ್ ಅಥವಾ ಗ್ರೂಪ್ ಚಾಟ್‌ಗೆ ಹೋಗಿ. 
>> ಪಠ್ಯ ಪೆಟ್ಟಿಗೆಯನ್ನು ಟ್ಯಾಪ್ ಮಾಡಿ ಮತ್ತು ಎಮೋಜಿ ಐಕಾನ್ ಆಯ್ಕೆಮಾಡಿ.
>> ಇದರಲ್ಲಿ ಸ್ಟಿಕ್ಕರ್‌ಗಳ ಆಯ್ಕೆಗೆ ಹೋಗಿ '+' ಐಕಾನ್ ಅನ್ನು ತ್ಯಾಪ್ ಮಾಡಿ. 
>> ಇದರಲ್ಲಿ  'ವರ್ಲ್ಡ್ ಆಫ್ ಕ್ರಿಕೆಟ್' ಎಂದು ಸರ್ಚ್ ಮಾಡಿ, ಡೌನ್‌ಲೋಡ್ ಮಾಡಿ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.