ಸ್ಲೋ ಇರುವ ಇಂಟರ್ನೆಟ್ Super speed ಆಗಬೇಕಾದರೆ ಈ ಟಿಪ್ಸ್ ಅನ್ನು ಅನುಸರಿಸಿ

How To Boost Internet Speed: ನೀವು ಸಹ ಈ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಚಿಂತಿಸಬೇಡಿ.ಇಂದು ನಾವು ನಿಮಗೆ ಇಂಟರ್ನೆಟ್ ಫಾಸ್ಟ್ ಹೆಚ್ಚಿಸುವ ಕೆಲವು ಸರಳ ಟಿಪ್ಸ್ ಗಳನ್ನು ನೀಡುತ್ತೇವೆ.   

Written by - Ranjitha R K | Last Updated : Jun 5, 2024, 08:59 AM IST
  • ಇಂದಿನ ಯುಗದಲ್ಲಿ,ಇಂಟರ್ನೆಟ್ ನಮ್ಮ ಜೀವನದ ಪ್ರಮುಖ ಭಾಗವಾಗಿದೆ.
  • ಕೆಲಸದಿಂದ ಮನರಂಜನೆಯವರೆಗೆ,ಎಲ್ಲದಕ್ಕೂ ನಮಗೆ ಇಂಟರ್ನೆಟ್ ಅಗತ್ಯವಿದೆ
  • ಇಂಟರ್ನೆಟ್ ಸ್ಪೀಡ್ ಕಡಿಮೆಯಾದರೆ ಬಹಳಷ್ಟು ತೊಂದರೆಗೆ ಕಾರಣವಾಗುತ್ತದೆ
ಸ್ಲೋ ಇರುವ ಇಂಟರ್ನೆಟ್ Super speed ಆಗಬೇಕಾದರೆ ಈ ಟಿಪ್ಸ್ ಅನ್ನು ಅನುಸರಿಸಿ title=

Smartphone Tips : ಇಂದಿನ ಯುಗದಲ್ಲಿ,ಇಂಟರ್ನೆಟ್ ನಮ್ಮ ಜೀವನದ ಪ್ರಮುಖ ಭಾಗವಾಗಿದೆ.ಕೆಲಸದಿಂದ ಮನರಂಜನೆಯವರೆಗೆ,ಎಲ್ಲದಕ್ಕೂ ನಮಗೆ ಇಂಟರ್ನೆಟ್ ಅಗತ್ಯವಿದೆ.ಇಂಟರ್ನೆಟ್ ಸಹಾಯದಿಂದ, ನಾವು ನಮ್ಮ ಅನೇಕ ಪ್ರಮುಖ ಕಾರ್ಯಗಳನ್ನು ಮನೆಯಲ್ಲಿ ಕುಳಿತೇ ಮಾಡಿ ಬಿಡಬಹುದು.ಆದರೆ,ಇಂಟರ್ನೆಟ್ ಸ್ಪೀಡ್  ಕಡಿಮೆಯಾದರೆ ಬಹಳಷ್ಟು ತೊಂದರೆಗೆ ಕಾರಣವಾಗುತ್ತದೆ.ನೀವು ಸಹ ಈ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಚಿಂತಿಸಬೇಡಿ.ಇಂದು ನಾವು ನಿಮಗೆ ಇಂಟರ್ನೆಟ್ ಫಾಸ್ಟ್ ಹೆಚ್ಚಿಸುವ ಕೆಲವು ಸರಳ ಟಿಪ್ಸ್ ಗಳನ್ನು ನೀಡುತ್ತೇವೆ. 

1. ನಿಮ್ಮ ಡಿವೈಸ್ ಅನ್ನು ರೀ ಸ್ಟಾರ್ಟ್ ಮಾಡಿ : 
ಕೆಲವೊಮ್ಮೆ ಸಮಸ್ಯೆ ನಿಮ್ಮ  ಡಿವೈಸ್ ನಲ್ಲಿಯೂ ಇರಬಹುದು.ಆದ್ದರಿಂದ,ನೀವು ಸ್ಮಾರ್ಟ್‌ಫೋನ್,ಲ್ಯಾಪ್‌ಟಾಪ್ ಅಥವಾ ಕಂಪ್ಯೂಟರ್‌ನಲ್ಲಿ ಇಂಟರ್ನೆಟ್ ಬಳಸುತ್ತಿದ್ದರೆ  ನಿಮ್ಮ ಯಾವುದೇ ಸಾಧನವನ್ನು ರೀ ಸ್ಟಾರ್ಟ್ ಮಾಡಿ.ಹೀಗೆ ಮಾಡುವುದರಿಂದ ಇಂಟರ್ನೆಟ್ ಸ್ಪೀಡ್ ಹೆಚ್ಚಿಸಬಹುದು.

ಇದನ್ನೂ ಓದಿ : Wifi Inverter: ಈಗ ಕರೆಂಟ್ ಇಲ್ಲದಿದ್ರೂ ಇಂಟರ್‌ನೆಟ್ ಬಳಸಬಹುದು, ಹೇಗ್ ಗೊತ್ತಾ?

2. ವೈ-ಫೈ ಸಿಗ್ನಲ್ ಪರಿಶೀಲಿಸಿ :
ನೀವು Wi-Fi ಬಳಸುತ್ತಿದ್ದರೆ,ರೂಟರ್‌ನಿಂದ ನಿಮ್ಮ  ಡಿವೈಸ್ ಅಂತರವನ್ನು ಕಡಿಮೆ ಮಾಡಿ.ಗೋಡೆಗಳು ಮತ್ತು ಇತರ ವಸ್ತುಗಳು ವೈ-ಫೈ ಸಿಗ್ನಲ್ ಮೇಲೆ ಪರಿಣಾಮ ಬೀರಬಹುದು. 

3. ಇತರ  ಡಿವೈಸ್ ಗಳನ್ನು ಆಫ್ ಮಾಡಿ : 
ನಿಮ್ಮ ಮನೆಯಲ್ಲಿ ವೈ-ಫೈ ಮೂಲಕ ಬಹು ಸಾಧನಗಳಲ್ಲಿ ಇಂಟರ್ನೆಟ್ ಬಳಸುತ್ತಿದ್ದರೆ, ಅವುಗಳಲ್ಲಿ ಕೆಲವನ್ನು ಸ್ವಿಚ್ ಆಫ್ ಮಾಡುವುದರಿಂದ ಇಂಟರ್ನೆಟ್ ಸ್ಪೀಡ್  ಹೆಚ್ಚಿಸಬಹುದು.

4. ಸಾಫ್ಟ್‌ವೇರ್ ಅನ್ನು ಅಪ್ಡೇಟ್ ಮಾಡಿ :
ಕೆಲವೊಮ್ಮೆ ಹಳೆಯ ಸಾಫ್ಟ್‌ವೇರ್ ಇಂಟರ್ನೆಟ್ ಸ್ಪೀಡ್ ಅನ್ನು ಕಡಿಮೆಯಾಗಲು ಕಾರಣವಾಗಬಹುದು.ಆದ್ದರಿಂದ,ನಿಮ್ಮ ಆಪರೇಟಿಂಗ್ ಸಿಸ್ಟಮ್, ಬ್ರೌಸರ್ ಮತ್ತು ಇತರ ಸಾಫ್ಟ್‌ವೇರ್ ಅನ್ನು ಅಪ್ಡೇಟ್ ಮಾಡಿ. ಇದರಿಂದ ಇಂಟರ್ನೆಟ್ ಸ್ಪೀಡ್  ಉತ್ತಮವಾಗಿರುತ್ತದೆ.

ಇದನ್ನೂ ಓದಿ : Whatsapp: ಒಂದೇ ತಿಂಗಳಲ್ಲಿ 71 ಲಕ್ಷ ಭಾರತೀಯ ಖಾತೆಗಳನ್ನು ನಿಷೇಧಿಸಿದ ವಾಟ್ಸಾಪ್

5. ವೈರಸ್‌ಗಳು ಮತ್ತು ಮಾಲ್‌ವೇರ್‌ಗಳನ್ನು ಪರಿಶೀಲಿಸಿ : 
ಕೆಲವೊಮ್ಮೆ ವೈರಸ್‌ಗಳು ಮತ್ತು ಮಾಲ್‌ವೇರ್‌ಗಳು ಇಂಟರ್ನೆಟ್ ಸ್ಪೀಡ್ ಅನ್ನು ಕಡಿಮೆ ಮಾಡಬಹುದು.ಆದ್ದರಿಂದ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಉತ್ತಮ ಆಂಟಿ-ವೈರಸ್ ಅನ್ನು ಡೌನ್‌ಲೋಡ್ ಮಾಡಿ ಮತ್ತು ಫೋನ್ ಅನ್ನು ಸ್ಕ್ಯಾನ್ ಮಾಡಿ. ಇದು ಇಂಟರ್ನೆಟ್ ಸ್ಪೀಡ್ ಹೆಚ್ಚಿಸಲು ಸಹಾಯ ಮಾಡುತ್ತದೆ. 

6. ಇಂಟರ್ನೆಟ್ ಸೇವಾ ಪೂರೈಕೆದಾರರನ್ನು ಸಂಪರ್ಕಿಸಿ : 
ನೀವು ಮೇಲೆ ತಿಳಿಸಲಾದ ಎಲ್ಲಾ ವಿಧಾನಗಳನ್ನು ಪ್ರಯತ್ನಿಸಿದ ನಂತರವೂ ಇಂಟರ್ನೆಟ್  ಸ್ಪೀಡ್ ಸರಿಯಾಗದಿದ್ದರೆ ನಿಮ್ಮ ಇಂಟರ್ನೆಟ್ ಸೇವಾ ಪೂರೈಕೆದಾರರನ್ನು ಸಂಪರ್ಕಿಸಿ. ಕೆಲವು ತಾಂತ್ರಿಕ ದೋಷದಿಂದ ಇಂಟರ್ನೆಟ್ ವೇಗ ಕಡಿಮೆಯಾಗಿರುವ ಸಾಧ್ಯತೆಯೂ ಇರುತ್ತದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News