ಯಾವುದಾದರೂ ಫ್ರಾಡ್ ಗ್ರೂಪ್`ನಲ್ಲಿ ನಿಮ್ಮನ್ನು ಸೇರಿಸಲಾಗಿದ್ಯಾ? ಈ ಬಗ್ಗೆ ಎಚ್ಚರಿಕೆ ನೀಡುತ್ತೆ ವಾಟ್ಸಾಪ್ Context Cards
WhatsApp Context Cards: ವಾಟ್ಸಾಪ್ ತನ್ನ ಬಳಕೆದಾರರಿಗಾಗಿ ಹೊಸ ವೈಶಿಷ್ಟ್ಯವನ್ನು ಬಿಡುಗಡೆ ಮಾಡಿದ್ದು, ಇದರ ಸಹಾಯದಿಂದ ಗ್ರಾಹಕರು ವಂಚಕರಿಂದ ದೂರ ಉಳಿಯಬಹುದು ಎನ್ನಲಾಗಿದೆ. ಯಾವುದೀ ವೈಶಿಷ್ಟ್ಯ? ಇದರ ಪ್ರಯೋಜನವೇನು ಎಂದು ತಿಳಿಯೋಣ...
WhatsApp Context Cards: ಇನ್‌ಸ್ಟಂಟ್ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸಾಪ್ ತನ್ನ ಬಳಕೆದಾರರಿಗಾಗಿ ಹೊಸ ಕಾಂಟೆಕ್ಸ್ಟ್ ಕಾರ್ಡ್ ಎಂಬ ವೈಶಿಷ್ಟ್ಯವನ್ನು ಪರಿಚಯಿಸಿದೆ. ಬಳಕೆದಾರರಿಗೆ ಅಜ್ಞಾತ ವಾಟ್ಸಾಪ್ ಗುಂಪುಗಳಿಗೆ ಸಂಬಂಧಿಸಿದ ಮಾಹಿತಿ ಒದಗಿಸುವ ಈ ವೈಶಿಷ್ಟ್ಯವು ವಾಟ್ಸಾಪ್ ಬಳಕೆದಾರರಿಗೆ ಅಪರಿಚಿತ ವಾಟ್ಸಾಪ್ ಗ್ರೂಪ್‌ಗಳಿಗೆ ಸಂಬಂಧಿಸಿದಂತೆ ಎಚ್ಚರಿಕೆಯನ್ನು ಸಹ ನೀಡುತ್ತದೆ. ಹಾಗಿದ್ದರೆ ವಾಟ್ಸಾಪ್ ಕಾಂಟೆಕ್ಸ್ಟ್ ಕಾರ್ಡ್ (WhatsApp Context Cards) ಹೇಗೆ ಕಾರ್ಯನಿರ್ವಹಿಸುತ್ತದೆ. ಇದರಿಂದ ಏನು ಪ್ರಯೋಜನ ಎಂದು ತಿಳಿಯಿರಿ.
ಏನಿದು ವಾಟ್ಸಾಪ್ ಕಾಂಟೆಕ್ಸ್ಟ್ ಕಾರ್ಡ್:
ವಾಟ್ಸಾಪ್ ಬಳಕೆದಾರರಿಗೆ ಆಗಾಗ್ಗೆ, ಅಪರಿಚಿತ ವಾಟ್ಸಾಪ್ ಗ್ರೂಪ್‌ಗಳಿಂದ (WhatsApp Group) ಚಾಟ್ ಆಮಂತ್ರಣ ಬರುವುದನ್ನು ಗಮನಿಸಿರಬಹುದು. ಈ ವಾಟ್ಸಾಪ್ ಗ್ರೂಪ್‌ಗಳನ್ನು ಯಾರು ರಚಿಸಿರಬಹುದು? ಈ ಗ್ರೂಪ್ ವಂಚನೆಗೆ ಸಂಬಂಧಿಸಿದ್ದೇ? ಇಲ್ಲವೇ? ಎಂಬ ಬಗ್ಗೆ ಈವರೆಗೆ ಯಾವುದೇ ನಿಖರ ಮಾಹಿತಿಗಳು ಲಭ್ಯವಿಟುತ್ತಿರಲಿಲ್ಲ. ಇದೀಗ ವಾಟ್ಸಾಪ್ ಕಾಂಟೆಕ್ಸ್ಟ್ ಕಾರ್ಡ್ ನಿಮಗೆ ಈ ಬಗ್ಗೆ ಎಚ್ಚರಿಕೆ ನೀಡುತ್ತದೆ.
ಇದನ್ನೂ ಓದಿ- Online Fraud ಆದರೆ ಸಿಗುವುದು 10 ಸಾವಿರ ರೂಪಾಯಿ ! ಏನು ಹೇಳುತ್ತದೆ ಈ ಯೋಜನೆ ?
ಮೆಟಾದ ವಾಟ್ಸಾಪ್ ಮುಖ್ಯಸ್ಥ ವಿಲ್ ಕ್ಯಾತ್‌ಕಾರ್ಟ್ ತನ್ನ ಅಧಿಕೃತ ವಾಟ್ಸಾಪ್ ಚಾನೆಲ್ ಮೂಲಕ ಈ ವಾಟ್ಸಾಪ್ ಕಾಂಟೆಕ್ಸ್ಟ್ ಕಾರ್ಡ್ (WhatsApp Context Card) ವೈಶಿಷ್ಟ್ಯದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಇದರಲ್ಲಿ ವಾಟ್ಸಾಪ್ ಬಳಕೆದಾರರ್ಗಾಗಿ ಹೊಸ ಗ್ರೂಪ್ ಸೇಫ್ಟಿ ಫೀಚರ್ ಅನ್ನು ಪರಿಚಯಿಸಲಾಗಿದೆ. ಈ ವೈಶಿಷ್ಟ್ಯವು ಬಳಕೆದಾರರಿಗೆ ಇದ್ದಕ್ಕಿದ್ದಂತೆ ಆಹ್ವಾನವನ್ನು ಸ್ವೀಕರಿಸಿದ ಗುಂಪಿಗೆ ಸಂಬಂಧಿಸಿದ ವಿವರವಾದ ಮಾಹಿತಿಯನ್ನು ಒದಗಿಸುತ್ತದೆ. ಕಾಂಟೆಕ್ಸ್ಟ್ ಕಾರ್ಡ್ ವೈಶಿಷ್ಟ್ಯದ ಮೂಲಕ ಬಳಕೆದಾರರು ತಾವು ಗುಂಪಿಗೆ ಸೇರಲು ಬಯಸುವಿರೋ ಅಥವಾ ನಿರ್ಗಮಿಸಲು ಬಯಸುತ್ತಾರೆಯೇ ಎಂಬುದನ್ನೂ ನಿರ್ಧರಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ- WhatsApp: ಗ್ರೂಪ್ ಚಾಟ್‌ಗಳಿಗಾಗಿ ಹೊಸ ಈವೆಂಟ್ ವೈಶಿಷ್ಟ್ಯವನ್ನು ಪರಿಚಯಿಸಿದ ವಾಟ್ಸಾಪ್
ಇದರ ಸ್ಕ್ರೀನ್‌ಶಾಟ್ ಅನ್ನು ಸಹ ಹಂಚಿಕೊಳ್ಳಲಾಗಿದೆ. ಇದರಲ್ಲಿ ಈ ವೈಶಿಷ್ಟ್ಯವು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನೂ ತೋರಿಸಲಾಗಿದೆ. ಇದರಲ್ಲಿ ವಾಟ್ಸಾಪ್ ಕಾಂಟೆಕ್ಸ್ಟ್ ಕಾರ್ಡ್ ವೈಶಿಷ್ಟ್ಯವು ನಿಮಗೆ ಗ್ರೂಪ್ ಆಹ್ವಾನವನ್ನು ನೀಡಿದ ವ್ಯಕ್ತಿ ನಿಮ್ಮ ಸಂಪರ್ಕದ ಪಟ್ಟಿಯಲ್ಲಿರುವ ವ್ಯಕ್ತಿಯೇ ಅಥವಾ ಬೇರೆ ವ್ಯಕ್ತಿಯೇ ಎಂಬುದನ್ನೂ ಸಹ ಬಳಕೆದಾರರಿಗೆ ತಿಳಿಸುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.