Whatsapp: ಈ ಫೋನ್‌ಗಳಲ್ಲಿ ಸ್ಥಗಿತಗೊಳ್ಳಲಿದೆ ವಾಟ್ಸಾಪ್! Motorla, Samsungನಂತಹ ಸ್ಮಾರ್ಟ್‌ಫೋನ್‌ಗಳು ಪಟ್ಟಿಯಲ್ಲಿವೆ

WhatsApp: ಪ್ರಸಿದ್ದ ಮೆಸೇಜಿಂಗ್ ಪ್ಲಾಟ್ಫಾರ್ಮ್ ವಾಟ್ಸಾಪ್ ಶೀಘ್ರದಲ್ಲೇ ಕೆಲವು ಐಫೋನ್‌ಗಳು ಹಾಗೂ ಸ್ಮಾರ್ಟ್‌ಫೋನ್‌ಗಳಲ್ಲಿ ಕಾರ್ಯನಿರ್ವಹಿಸುವುದನ್ನು ಸ್ಥಗಿತಗೊಳಿಸಲಿದೆ. ಲಭ್ಯವಿರುವ ಮಾಹಿತಿಯ ಪ್ರಕಾರ, ಈ ಪಟ್ಟಿಯಲ್ಲಿ Samsung, Apple, Sony, Huawei ಮತ್ತು Motorolaದಂತಹ ದೊಡ್ಡ ದೊಡ್ಡ ಬ್ರಾಂಡ್‌ಗಳ ಪಟ್ಟಿಯೇ ಇದೆ ಎಂದು ಹೇಳಲಾಗುತ್ತಿದೆ. 

Written by - Yashaswini V | Last Updated : Jun 28, 2024, 04:13 PM IST
  • ವಾಟ್ಸಾಪ್ ಅಪ್ಲಿಕೇಶನ್‌ನ ಈ ಕ್ರಮವು ವಾಟ್ಸಾಪ್ ಅಪ್ಲಿಕೇಶನ್‌ನ ಕಾರ್ಯಕ್ಷಮತೆ ಮತ್ತು ಸುರಕ್ಷತೆಯನ್ನು ಸುಧಾರಿಸುತ್ತದೆ.
  • ಅದೇ ಸಮಯದಲ್ಲಿ ಬಳಕೆದಾರರು ವಾಟ್ಸಾಪ್ ಸೇವೆಗಳನ್ನು ಬಳಸಲು ಸಾಧ್ಯವಾಗುವಂತೆ ತಮ್ಮ ಹ್ಯಾಂಡ್‌ಸೆಟ್‌ಗಳನ್ನು ಅಪ್‌ಗ್ರೇಡ್ ಮಾಡಬೇಕಾಗುತ್ತದೆ.
Whatsapp: ಈ ಫೋನ್‌ಗಳಲ್ಲಿ ಸ್ಥಗಿತಗೊಳ್ಳಲಿದೆ ವಾಟ್ಸಾಪ್! Motorla, Samsungನಂತಹ ಸ್ಮಾರ್ಟ್‌ಫೋನ್‌ಗಳು ಪಟ್ಟಿಯಲ್ಲಿವೆ  title=

WhatsApp Stop Working: ಜಗತ್ತಿನ ತ್ವರಿತ ಮೆಸೇಜಿಂಗ್ ವೇದಿಕೆ ಎಂತಲೇ ಖ್ಯಾತಿ ಪಡೆದಿರುವ ವಾಟ್ಸಾಪ್ ತನ್ನ ಕನಿಷ್ಟ ಸಿಸ್ಟಮ್ ಅವಶ್ಯಕತೆಗಳನ್ನು ನವೀಕರಿಸಿದೆ. ಇದರಿಂದಾಗಿ, ಇದು 35 ಹಳೆಯ ಸ್ಮಾರ್ಟ್‌ಫೋನ್ ಮಾದರಿಗಳಲ್ಲಿ ಹಾಗೂ ಕೆಲವು ಐಫೋನ್‌ಗಳಲ್ಲಿ ವಾಟ್ಸಾಪ್ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಬಹುದು ಎಂದು ಹೇಳಲಾಗುತ್ತಿದೆ. 

ಹೊಸ ಕನಿಷ್ಠ ಸಿಸ್ಟಂ ಅಗತ್ಯತೆಗಳನ್ನು ಪರಿಗಣಿಸಿ, 5.0 ಕ್ಕಿಂತ ಹಳೆಯ Android ಆವೃತ್ತಿಗಳಲ್ಲಿ ಮತ್ತು 12 ಕ್ಕಿಂತ ಹಳೆಯ iOS ಆವೃತ್ತಿಗಳಲ್ಲಿ ಕಾರ್ಯನಿರ್ವಹಿಸುವ ಫೋನ್‌ಗಳು ಭದ್ರತೆ ಮತ್ತು ಇತರ ನವೀಕರಣಗಳನ್ನು ಸ್ವೀಕರಿಸಲು ಸಾಧ್ಯವಾಗುವುದಿಲ್ಲ ಎಂದು ತಿಳಿದುಬಂದಿದೆ. 

ಇದನ್ನೂ ಓದಿ- ನಿಮ್ಮ ಬಳಿ ಇರುವ ಸಿಮ್ Jio, Airtel, Vi ಕಂಪನಿಯದ್ದೇ? ಹಾಗಿದ್ದರೆ ಗಮನಿಸಿ ಜುಲೈ ತಿಂಗಳಿನಿಂದ ಬದಲಾಗುವುದು ಸಿಮ್ ಕಾರ್ಡ್ ನಿಯಮ

ಅರ್ಥಾತ್, ಮೇಲೆ ಉಲ್ಲೇಖಿಸಲಾದ ಆವೃತ್ತಿಗಳಿಗಿಂತ ಹಳೆಯ ಆಪರೇಟಿಂಗ್ ಸಿಸ್ಟಮ್‌ಗಳಲ್ಲಿ ಚಾಲನೆಯಲ್ಲಿರುವ ಯಾವುದೇ ಸ್ಮಾರ್ಟ್‌ಫೋನ್ (Smartphone) ನವೀಕರಣಗಳನ್ನು ಪಡೆಯುವುದಿಲ್ಲ. ಹಳೆಯ ಸ್ಮಾರ್ಟ್‌ಫೋನ್ ಮಾದರಿಗಳನ್ನು ಹೊಂದಿರುವ ಬಳಕೆದಾರರು ವಾಟ್ಸಾಪ್ ನ ಹೊಸ ವೈಶಿಷ್ಟ್ಯಗಳು ಮತ್ತು ಭದ್ರತಾ ನವೀಕರಣಗಳನ್ನು ಪ್ರವೇಶಿಸಲು ತಮ್ಮ ಫೋನ್‌ಗಳನ್ನು ಅಪ್‌ಗ್ರೇಡ್ ಮಾಡಬೇಕಾಗುತ್ತದೆ. 

ಲಭ್ಯವಿರುವ ಮಾಹಿತಿಯ ಪ್ರಕಾರ, ಈ ಪಟ್ಟಿಯಲ್ಲಿ Samsung, Apple, Sony, Huawei ಮತ್ತು Motorolaದಂತಹ ದೊಡ್ಡ ದೊಡ್ಡ ಬ್ರಾಂಡ್‌ಗಳ ಪಟ್ಟಿಯೇ ಇದೆ ಎಂದು ಹೇಳಲಾಗುತ್ತಿದೆ. ವಾಟ್ಸಾಪ್ (WhatsApp) ಅಪ್ಲಿಕೇಶನ್‌ನ ಈ ಕ್ರಮವು ವಾಟ್ಸಾಪ್ ಅಪ್ಲಿಕೇಶನ್‌ನ ಕಾರ್ಯಕ್ಷಮತೆ ಮತ್ತು ಸುರಕ್ಷತೆಯನ್ನು ಸುಧಾರಿಸುತ್ತದೆ ಎಂದು ಹೇಳಲಾಗುತ್ತಿದೆ. 

ಇದನ್ನೂ ಓದಿ- ನಿಮ್ಮ ಸ್ಮಾರ್ಟ್‌ಫೋನ್‌ನ ಬ್ಯಾಟರಿ ಊದಿಕೊಂಡಿದೆಯೇ? ಎಚ್ಚರ! ಎಚ್ಚರ!

ವಾಟ್ಸಾಪ್ ಸೇವೆ ಸ್ಥಗಿತಗೊಳ್ಳಲಿರುವ ಹ್ಯಾಂಡ್‌ಸೆಟ್‌ಗಳ ಪಟ್ಟಿ  ಈ ಕೆಳಕಂಡಂತಿದೆ: 
Apple: iPhone SE, iPhone 5, iPhone 6, iPhone 6S, iPhone 6S Plus, iPhone 5C

Samsung: Galaxy Core, Galaxy Ace Plus, Galaxy Express 2, Galaxy Note 3, Galaxy Grand, Galaxy S3 Mini, Galaxy S4 Mini, Galaxy S4 Active, Galaxy S4 ಜೂಮ್, Galaxy Note 3 Neo, Galaxy S3, 

Huawei: Ascend G525, Ascend P6 S, Huawei C199, Huawei Y625, Huawei GX1s,

Motorola: Moto G, Moto X

Lenovo: Lenovo 46600, Lenovo A858T, Lenovo P70, Lenovo S890

ಸೋನಿ: Xperia Z1, Xperia E3

LG: Optimus 4X HD, Optimus G, Optimus G Pro, Optimus L7

ನೀವು ಬಳಸುತಿರುವ ಸಾಧನವು ಈ  ಹ್ಯಾಂಡ್‌ಸೆಟ್‌ಗಳ ಪಟ್ಟಿಯಲ್ಲಿದ್ದರೆ ವಾಟ್ಸಾಪ್ ಸೇವೆಯನ್ನು ಮುಂದುವರೆಸಲು ಬಯಸಿದರೆ ನಿಮ್ಮ ಫೋನ್‌ನ್ನು ಅಪ್‌ಗ್ರೇಡ್ ಮಾಡಬೇಕಾಗುತ್ತದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News