WhatsApp Delete for Everyone after 2 Days : ಚಾಟಿಂಗ್ ಪ್ಲಾಟ್‌ಫಾರ್ಮ್ WhatsApp ವಿಶ್ವದ ಅತ್ಯಂತ ಜನಪ್ರಿಯ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದಾಗಿದೆ. WhatsApp ತನ್ನ ಬಳಕೆದಾರರಿಗೆ ಅನೇಕ ಆಕರ್ಷಕ ವೈಶಿಷ್ಟ್ಯಗಳನ್ನು ಒದಗಿಸುತ್ತದೆ. ಅದರ ಸಹಾಯದಿಂದ ಚಾಟ್ ಮಾಡಲು ಮತ್ತು  ವಾಯ್ಸ್ ಮತ್ತು ವೀಡಿಯೊ ಕರೆಗಳನ್ನು ಮಾಡಲು ತುಂಬಾ ಸುಲಭವಾಗುತ್ತದೆ. ಬಹು ಕಾಲದಿಂದ ಬಳಕೆದಾರರು ನಿರೀಕ್ಷಿಸುತ್ತಿದ್ದ ವೈಶಿಷ್ಟ್ಯವನ್ನು ಇದೀಗ WhatsApp ಹೊರತಂದಿದೆ. 


COMMERCIAL BREAK
SCROLL TO CONTINUE READING

ಬಂದಿದೆ WhatsApp ನ ಹೊಸ ವೈಶಿಷ್ಟ್ಯ :  
ವಾಟ್ಸಾಪ್ ತನ್ನ ಡಿಲೀಟ್ ಫಾರ್ ಎವೆರಿವನ್ ಫೀಚರ್‌ನ ಸಮಯದ ಮಿತಿಯನ್ನು ಹೆಚ್ಚಿಸಿದೆ.  ಈ  ಅಪ್ಡೇಟ್ ಬಗ್ಗೆ ಬಳಕೆದಾರರು ಸಂತಸ ವ್ಯಕ್ತಪಡಿಸಿದ್ದಾರೆ. 


ಇದನ್ನೂ ಓದಿ : ವಿದ್ಯುತ್ ಇಲ್ಲದೆ ಮನೆಯನ್ನು ಕೂಲ್ ಮಾಡಲು ಇಲ್ಲಿದೆ ಅಗ್ಗದ ಎಸಿ


ಕುಳುಹಿಸಿದ ಎರಡು ದಿನಗಳ ನಂತರವೂ ಸಂದೇಶಗಳನ್ನು ಅಳಿಸಬಹುದು  :
ಹೊಸ ವೈಶಿಷ್ಟ್ಯದ ಅಡಿಯಲ್ಲಿ, ಸಂದೇಶವನ್ನು ಕಳುಹಿಸಿದ ಎರಡು ದಿನಗಳ ನಂತರವೂ 'ಅದನ್ನು ಡಿಲೀಟ್ ಮಾಡುವ ಅವಕಾಶ ನೀಡಿದೆ. ವಾಟ್ಸಾಪ್‌ನ ಡಿಲೀಟ್ ಫಾರ್ ಎವರಿವನ್ ಆಯ್ಕೆಯ ಸಮಯ ಮಿತಿಯನ್ನು ಅಧಿಕೃತವಾಗಿ ಎರಡು ದಿನ 12 ಗಂಟೆಗಳವರೆಗೆ ಹೆಚ್ಚಿಸಲಾಗಿದೆ. ಅಂದರೆ ಸಂದೇಶವನ್ನು ಕಳುಹಿಸಿದ ಎರಡು ದಿನಗಳ ನಂತರವೂ ಅದನ್ನು  ಡಿಲೀಟ್ ಮಾಡಬಹುದಾಗಿದೆ. 


ಈ ಹೊಸ ವೈಶಿಷ್ಟ್ಯವನ್ನು Android ಮತ್ತು iOS ಎರಡಕ್ಕೂ ಬಿಡುಗಡೆ ಮಾಡಲಾಗಿದೆ. ಆದ್ದರಿಂದ ನಿಮ್ಮ ಫೋನ್‌ನಲ್ಲಿ WhatsApp ಅಪ್ಲಿಕೇಶನ್ ಅನ್ನು  ಅಪ್ಡೇಟ್ ಮಾಡುವ ಮೂಲಕ ಈ ವೈಶಿಷ್ಟ್ಯದ ಲಾಭವನ್ನು ಪಡೆಯಬಹುದು. 


ಇದನ್ನೂ ಓದಿ : ಮಾರುಕಟ್ಟೆಗೆ ಬಂದಿದೆ ಏಳು ಸಾವಿರ ಬೆಲೆಯ ಸೂಪರ್ ಸ್ಮಾರ್ಟ್‌ಫೋನ್


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.