ವಿದ್ಯುತ್ ಇಲ್ಲದೆ ಮನೆಯನ್ನು ಕೂಲ್ ಮಾಡಲು ಇಲ್ಲಿದೆ ಅಗ್ಗದ ಎಸಿ

6000mAh ಪವರ್ ಬ್ಯಾಂಕ್‌ನೊಂದಿಗೆ ಮಿನಿ ಏರ್ ಕಂಡಿಷನರ್:  ಬಿಸಿಲಿನ ಬೇಗೆಯಿಂದ ಮುಕ್ತಿ ಪಡೆಯಲು ಪೋರ್ಟಬಲ್ ಎಸಿ ನಿಮಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು. ಸಾಕಷ್ಟು ಚಿಕ್ಕದಾಗಿರುವ ಈ ಪೋರ್ಟಬಲ್ ಎಸಿ ಬೆಲೆ ಕೂಡ ಕಡಿಮೆ.   

Written by - Yashaswini V | Last Updated : Aug 9, 2022, 01:33 PM IST
  • ಪೋರ್ಟಬಲ್ ಎಸಿಯ ಕೂಲಿಂಗ್ ಬಗ್ಗೆ ಹೇಳುವುದಾದರೆ, ಇದು ಕೆಲವೇ ನಿಮಿಷಗಳಲ್ಲಿ ಕೋಣೆಯನ್ನು ತಂಪಾಗಿಸುತ್ತದೆ ಎಂದು ಹೇಳಲಾಗುತ್ತಿದೆ.
  • ಇದರ ಬಹಳ ಮುಖ್ಯ ವೈಶಿಷ್ಟ್ಯವೆಂದರೆ ಇದು ವಿದ್ಯುತ್ ಇಲ್ಲದೆ ಗಂಟೆಗಟ್ಟಲೆ ಓಡಬಲ್ಲದು.
  • ಮಿನಿ ಏರ್ ಕಂಡೀಷನರ್ ಜೊತೆಗೆ 6000mAh ಪವರ್ ಬ್ಯಾಂಕ್ ಕೂಡ ಇದರಲ್ಲಿ ಲಭ್ಯವಿದೆ
ವಿದ್ಯುತ್ ಇಲ್ಲದೆ ಮನೆಯನ್ನು ಕೂಲ್ ಮಾಡಲು ಇಲ್ಲಿದೆ ಅಗ್ಗದ ಎಸಿ  title=
Portable AC

6000mAh ಪವರ್ ಬ್ಯಾಂಕ್‌ನೊಂದಿಗೆ ಮಿನಿ ಏರ್ ಕಂಡಿಷನರ್: ಬೇಸಿಗೆ ಕಾಲದಲ್ಲಿ ಎಸಿ ಬೆಲೆಗಳು ಹೆಚ್ಚಾಗುತ್ತವೆ.ಮಾತ್ರವಲ್ಲ, ಇದರಿಂದ ತಿಂಗಳ ಬಜೆಟ್ ಕೂಡ ಹೆಚ್ಚಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಕೂಲರ್ ಒಳ್ಳೆಯ ಆಯ್ಕೆ ಆಗಿದೆ. ಮಾರುಕಟ್ಟೆಯಲ್ಲಿ ಹಲವು ಕೂಲರ್ ಗಳು ಲಭ್ಯವಿದೆ. ಕೆಲವು ಕೂಲರ್ಗಳು ಎಸಿಯಂತೆಯೇ ತಂಪಾದ ಹವಾ ನೀಡುತ್ತವೆ. ಸಾಕಷ್ಟು ಚಿಕ್ಕದಾಗಿರುವ ಈ ಪೋರ್ಟಬಲ್ ಎಸಿ ಬೆಲೆ ಕೂಡ ಕಡಿಮೆ. 

ಪೋರ್ಟಬಲ್ ಎಸಿಯ ಕೂಲಿಂಗ್ ಬಗ್ಗೆ ಹೇಳುವುದಾದರೆ, ಇದು ಕೆಲವೇ ನಿಮಿಷಗಳಲ್ಲಿ ಕೋಣೆಯನ್ನು ತಂಪಾಗಿಸುತ್ತದೆ ಎಂದು ಹೇಳಲಾಗುತ್ತಿದೆ. ಇದರ ಬಹಳ ಮುಖ್ಯ ವೈಶಿಷ್ಟ್ಯವೆಂದರೆ ಇದು ವಿದ್ಯುತ್ ಇಲ್ಲದೆ ಗಂಟೆಗಟ್ಟಲೆ ಓಡಬಲ್ಲದು. ಮಿನಿ ಏರ್ ಕಂಡೀಷನರ್ ಜೊತೆಗೆ 6000mAh ಪವರ್ ಬ್ಯಾಂಕ್ ಕೂಡ ಇದರಲ್ಲಿ ಲಭ್ಯವಿದೆ. ಈ ಪೋರ್ಟಬಲ್ ಎಸಿ ಬಗ್ಗೆ ತಿಳಿಯೋಣ...

ಇದನ್ನೂ ಓದಿ- ಮಳೆಗೆ ಸೊಳ್ಳೆ, ನೊಣಗಳ ಕಾಟ ಹೆಚ್ಚಾಗಿದೆಯೇ! ಸ್ಮಾರ್ಟ್‌ಫೋನ್‌ನಲ್ಲಿ ಈ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿ

Vogek 2-in-1 6000mAh ಪವರ್ ಬ್ಯಾಂಕ್ ಜೊತೆಗೆ ಮಿನಿ ಏರ್ ಕಂಡಿಷನರ್:
Vogek 2-in-1 6000mAh ಪವರ್ ಬ್ಯಾಂಕ್ ಜೊತೆಗೆ ಮಿನಿ ಏರ್ ಕಂಡೀಷನರ್ ಅನ್ನು ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಖರೀದಿಸಬಹುದು. ನೀವು ಆನ್‌ಲೈನ್‌ನಲ್ಲಿ ಖರೀದಿಸಲು ಬಯಸಿದರೆ ಶಿಪ್ಪಿಂಗ್ ಸ್ವಲ್ಪ ಸಮಯ ತೆಗೆದುಕೊಳ್ಳುವುದರಿಂದ ನೀವು ಸ್ವಲ್ಪ ಮುಂಚಿತವಾಗಿ ಆರ್ಡರ್ ಮಾಡಬೇಕಾಗುತ್ತದೆ. ಮಿನಿ ಎಸಿಯ ವಿಶೇಷತೆಯೆಂದರೆ ಇದರಲ್ಲಿ ಪವರ್ ಬ್ಯಾಂಕ್ ಕೂಡ ಇದ್ದು, ಇದರಿಂದ ಮೊಬೈಲ್ ಅಥವಾ ಡಿವೈಸ್ ಚಾರ್ಜ್ ಮಾಡಬಹುದು ಎನ್ನಲಾಗಿದೆ.

Vogek 2-in-1 6000mAh ಪವರ್ ಬ್ಯಾಂಕ್ ಜೊತೆಗೆ ಮಿನಿ ಏರ್ ಕಂಡಿಷನರ್ ವೈಶಿಷ್ಟ್ಯಗಳು:
Vogek 2-in-1 6000mAh ಪವರ್ ಬ್ಯಾಂಕ್ ಮಿನಿ ಏರ್ ಕಂಡಿಷನರ್ ಜೊತೆಗೆ ಮೂರು ಫ್ಯಾನ್ ವೇಗವನ್ನು ನೀಡುವ ಉದ್ಯಮ ದರ್ಜೆಯ ಮೋಟಾರ್ ನಿಂದ ಚಾಲಿತವಾಗಿದೆ. ಅದು ತುಂಬಾ ತಣ್ಣಗಾದಾಗ ನೀವು ಅದನ್ನು ಆಫ್ ಮಾಡಬಹುದು. ಇದನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸುಲಭವಾಗಿ ಸಾಗಿಸಬಹುದು. ಮಿನಿ ಎಸಿಯಲ್ಲಿ 600mAh ಬ್ಯಾಟರಿ ಲಭ್ಯವಿದೆ. ಪೂರ್ಣ ಚಾರ್ಜ್‌ನಲ್ಲಿ 4 ರಿಂದ 6 ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. 

ಇದನ್ನೂ ಓದಿ- ಮಾರುಕಟ್ಟೆಗೆ ಬಂದಿದೆ ಏಳು ಸಾವಿರ ಬೆಲೆಯ ಸೂಪರ್ ಸ್ಮಾರ್ಟ್‌ಫೋನ್

Vogek 2-in-1 6000mAh ಪವರ್ ಬ್ಯಾಂಕ್ ಜೊತೆಗೆ ಮಿನಿ ಏರ್ ಕಂಡೀಷನರ್ ಬೆಲೆ:
Vogek 2-in-1 6000mAh ಪವರ್ ಬ್ಯಾಂಕ್‌ನ ಮಿನಿ ಏರ್ ಕಂಡೀಷನರ್‌ನ ಬೆಲೆ ಕೂಡ ತುಂಬಾ ಆಕರ್ಷಕವಾಗಿದೆ. ನೀವು ದಿದನ್ನು ಕೇವಲ 949 ರೂ. (ಶಿಪ್ಪಿಂಗ್ ಉಚಿತ) ಗಳಿಗೆ ಖರೀದಿಸಬಹುದು.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News