WhatsApp ತನ್ನ ಹೊಸ ವೈಶಿಷ್ಟ್ಯಗಳ ಮೇಲೆ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ. ಪ್ರಸ್ತುತ ವಾಟ್ಸ್ ಆಪ್ ಒಂದು ನೂತನ ವೈಶಿಷ್ಟ್ಯದ ಮೇಲೆ ಕಾರ್ಯನಿರ್ವಹಿಸುತ್ತಿದ್ದು, ಇದು ಬಳಕೆದಾರರಿಗೆ ಡೆಸ್ಕ್‌ಟಾಪ್ ಬೀಟಾದಲ್ಲಿ ಸ್ಟೇಟಸ್ ನವೀಕರಿಸುವ ಸಾಮರ್ಥ್ಯವನ್ನು ನೀಡಲಿದೆ. ಶೀಘ್ರದಲ್ಲೇ WhatsApp ಸ್ಟೇಟಸ್ ವಿಭಾಗದಲ್ಲಿ ಹೊಸ ಮೆನುವನ್ನು ಕ್ರೇಟ್ ಮಾಡಲಿದೆ, ಇದು ವರದಿ ಮಾಡುವ ಪ್ರಕ್ರಿಯೆಯನ್ನು ಸುಲಭಗೊಳಿಸಲಿದೆ. ಇದರಿಂದ ರಿಪೋರ್ಟ್ ಸೆಕ್ಷನ್ ಮೂಲಕ ಜನರು ತಮ್ಮ ಸ್ಥಿತಿಯನ್ನು ರಿಪೋರ್ಟ್ ಮಾಡಲು ಇದರಿಂದ ಸಾಧ್ಯವಾಗಲಿದೆ. ಅಂದರೆ, ನಿಯಮಗಳನ್ನು ಉಲ್ಲಂಘಿಸುವ ಸ್ಟೇಟಸ್ ಮೇಲೆ ಒಂದೊಮ್ಮೆ ವರದಿ ಬಂದ ಬಳಿಕ ವಾಟ್ಸಾಪ್ ಕಠಿಣ ಕ್ರಮ ಜರುಗಿಸಲಿದೆ.


COMMERCIAL BREAK
SCROLL TO CONTINUE READING

ರಿಪೋರ್ಟ್ ಮಾಡಿದ ಬಳಿಕ ವಾಟ್ಸಾಪ್ ಕ್ರಮ ಕೈಗೊಳ್ಳಲಿದೆ
ಸೇವಾ ನಿಯಮಗಳನ್ನು ಉಲ್ಲಂಘಿಸಬಹುದಾದ ಯಾವುದೇ ಅನುಮಾನಾಸ್ಪದ ಸ್ಟೇಟಸ್ ನವೀಕರಣವನ್ನು ಬಳಕೆದಾರರು ಗುರುತಿಸಿದರೆ, ಹೊಸ ಆಯ್ಕೆಯೊಂದಿಗೆ ಅದನ್ನು ಮಾಡರೇಶನ್ ತಂಡಕ್ಕೆ ವರದಿ ಮಾಡಲು ಇದರಿಂದ ಬಳಕೆದಾರರಿಗೆ ಸಾಧ್ಯವಾಗಲಿದೆ. ಸಂದೇಶಗಳನ್ನು ವರದಿ ಮಾಡುವಂತೆಯೇ, ಸ್ಥಿತಿ ನವೀಕರಣಗಳನ್ನು ಮಾಡರೇಶನ್ ಕಾರಣಗಳಿಗಾಗಿ ಕಂಪನಿಗೆ ಫಾರ್ವರ್ಡ್ ಮಾಡಲಾಗುತ್ತದೆ, ಇದರಿಂದ ಅದು ನಿಯಮ ಉಲ್ಲಂಘನೆಗೆ ಸಂಭವಿಸಿದೆಯೇ ಎಂಬುದನ್ನು ನೋಡಬಹುದು. ಆದರೂ, ಈ ವೈಶಿಷ್ಟ್ಯವು ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ನಿಯಮಗಳನ್ನು ಉಲ್ಲಂಘಿಸುವುದಿಲ್ಲ.


ಇದನ್ನೂ ಓದಿ-Cheapest Broadband Plan: 14 OTT ಆಪ್ ಗಳ ಚಂದಾದಾರಿಕೆ, ಹೈಸ್ಪೀಡ್ ಇಂಟರ್ನೆಟ್, 330ಜಿಬಿ ಡೇಟಾ, ಬೆಲೆ ಕೇವಲ...?


ಶೀಘ್ರದಲ್ಲಿಯೇ ಬಿಡುಗಡೆಯಾಗಲಿದೆ
ಯಾರೇ ಆಗಲಿ ಅಥವಾ ವಾಟ್ಸ್ ಆಪ್ ಅಥವಾ ಮೆಟಾ ಆಗಲಿ ಬಳಕೆದಾರರ ಸಂದೇಶಗಳ ವಿಷಯವಾಗಲಿ ಅಥವಾ ಕರೆಗಳಾಗಲಿ ಕೇಳುವುದು ಅಸಾಧ್ಯ, ಆದರೆ ಪ್ಲಾಟ್‌ಫಾರ್ಮ್ ಮತ್ತು ಬಳಕೆದಾರರನ್ನು ಸುರಕ್ಷಿತವಾಗಿರಿಸಲು ಕಂಪನಿಯು ರಿಪೋರ್ಟ್ ಆಯ್ಕೆಯನ್ನು ಪರಿಚಯಿಸುವುದು ಅಷ್ಟೇ ಮುಖ್ಯವಾಗಿದೆ. ಸ್ಟೇಟಸ್ ಅಪ್‌ಡೇಟ್‌ಗಳನ್ನು ವರದಿ ಮಾಡುವ ಸಾಮರ್ಥ್ಯವು ಅಭಿವೃದ್ಧಿ ಹಂತದಲ್ಲಿದೆ ಮತ್ತು WhatsApp ಡೆಸ್ಕ್‌ಟಾಪ್ ಬೀಟಾದ ಭವಿಷ್ಯದ ಅಪ್‌ಡೇಟ್‌ನಲ್ಲಿ ಇದು ಬಿಡುಗಡೆಯಾಗುವ ಸಾಧ್ಯತೆಯನ್ನು ವರ್ತಿಸಲಾಗುತ್ತಿದೆ. 


ಇದನ್ನೂ ಓದಿ-Corona New Variant Update: ಭಯ ಬೇಡ...! ಕೊರೊನಾ ವೈರಸ್ XBB ರೂಪಾಂತರಿ ಅಪಾಯಕಾರಿ ಅಲ್ಲ, ತಜ್ಞರ ಅಭಿಪ್ರಾಯ


ಏತನ್ಮಧ್ಯೆ, ಕಳೆದ ತಿಂಗಳು, ಮೆಸೇಜಿಂಗ್ ಪ್ಲಾಟ್‌ಫಾರ್ಮ್ ಕೆಲವು ಬೀಟಾ ಪರೀಕ್ಷಕರಿಗೆ ಹೊಸ ವೈಶಿಷ್ಟ್ಯವನ್ನು ಹೊರತಂದಿದೆ, ಈ ವೈಶಿಷ್ಟ್ಯವನ್ನು ಬಳಸಿ ಬಳಕೆದಾರರು ಡೆಸ್ಕ್‌ಟಾಪ್‌ನ  ಗುಂಪು ಚಾಟ್‌ಗಳಲ್ಲಿ ಪ್ರೊಫೈಲ್ ಫೋಟೋಗಳನ್ನು ವೀಕ್ಷೀಸಬಹುದಾಗಿದೆ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.