Corona New Variant Update: ಭಯ ಬೇಡ...! ಕೊರೊನಾ ವೈರಸ್ XBB ರೂಪಾಂತರಿ ಅಪಾಯಕಾರಿ ಅಲ್ಲ, ತಜ್ಞರ ಅಭಿಪ್ರಾಯ

Corona New Variant Latest Update: ಈ ವೈರಸ್ ಸೋಂಕಿನಿಂದ ಪೀಡಿತ ರೋಗಿಯು ಗಂಭೀರ ಸೋಂಕಿನಿಂದ ಬಳಲುತ್ತಿಲ್ಲ ಅಥವಾ ಆಸ್ಪತ್ರೆಗೆ ದಾಖಲಾಗಿಲ್ಲ ಎಂದು ತಜ್ಞರು ಹೇಳಿದ್ದಾರೆ. ಜೊತೆಗೆ ಈ ವೈರಸ್ ನಿಂದ ಸಾವಿನ ಸಾಧ್ಯತೆಯೂ ಕೂಡ ತುಂಬಾ ಕಡಿಮೆಯಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.  

Written by - Nitin Tabib | Last Updated : Dec 23, 2022, 01:51 PM IST
  • ಚೀನಾದಲ್ಲಿ ಕೊರೊನಾ ಭಾರಿ ಕೋಲಾಹಲವನ್ನೇ ಸೃಷ್ಟಿಸಿದೆ,
  • ವಿಶ್ವದ ಇತರ ದೇಶಗಳು ಕೂಡ ಇದೀಗ ಭಯಪಡಲಾರಂಭಿಸಿವೆ.
  • ಕೊರೊನಾ ವೈರಸ್ ನ ಉಪ ರೂಪಾಂತರಿ ಎಕ್ಸ್‌ಬಿಬಿ ಹೆಸರು ಕೇಳಿದೊಡನೆ ಜನರು ಭಯಭೀತರಾಗಿದ್ದಾರೆ.
Corona New Variant Update: ಭಯ ಬೇಡ...! ಕೊರೊನಾ ವೈರಸ್ XBB ರೂಪಾಂತರಿ ಅಪಾಯಕಾರಿ ಅಲ್ಲ, ತಜ್ಞರ ಅಭಿಪ್ರಾಯ title=
Covid New XBB Variant

Corona XBB Variant Update: ಕೊರೊನಾ ವೈರಸ್ ಕುರಿತು ಇಡೀ ವಿಶ್ವದಲ್ಲಿ ಮತ್ತೊಮ್ಮೆ ಚರ್ಚೆ ನಡೆಯುತ್ತಿದೆ. ಚೀನಾದಲ್ಲಿ ಕೊರೊನಾ ಭಾರಿ ಕೋಲಾಹಲವನ್ನೇ ಸೃಷ್ಟಿಸಿದೆ, ವಿಶ್ವದ ಇತರ ದೇಶಗಳು ಕೂಡ ಇದೀಗ ಭಯಪಡಲಾರಂಭಿಸಿವೆ. ಕೊರೊನಾ ವೈರಸ್ ನ ಉಪ ರೂಪಾಂತರಿ ಎಕ್ಸ್‌ಬಿಬಿ ಹೆಸರು ಕೇಳಿದೊಡನೆ ಜನರು ಭಯಭೀತರಾಗಿದ್ದಾರೆ. ಮತ್ತೆ ತಮ್ಮ ತಮ್ಮ ಮನೆಗಳಲ್ಲಿ ಬಂಧಿಯಾಗಬೇಕಾ ಎಂಬ ಆತಂಕ ಎಲ್ಲರ ಮನದಲ್ಲಿ ಮೂಡಿದೆ. ಆದರೆ, ಕರೋನಾದ ಈ ರೂಪಾಂತರಿ ಭಯಪಡುವಷ್ಟು ಅಪಾಯಕಾರಿಯೇ ಎಂಬುದು ಎಲ್ಲರ ಮುಂದೆ ಇರುವ ಪ್ರಶ್ನೆಯಾಗಿದೆ. ಕರೋನಾದ ಎರಡನೇ ಅಲೆಯಲ್ಲಿ, ಡೆಲ್ಟಾ ರೂಪಾಂತರವು ಸಾಕಷ್ಟು ಹಾನಿಯುಂಟು ಮಾಡಿತ್ತು ಎಂಬುದೇ ಇದರ ಹಿಂದಿನ ಪ್ರಮುಖ ಕಾರಣ. ಕರೋನಾ ವೈರಸ್‌ನ ಉಪ-ರೂಪಾಂತರಿ ಎಕ್ಸ್‌ಬಿಬಿ ಡೆಲ್ಟಾ ರೂಪಾಂತರಕ್ಕಿಂತ 5 ಪಟ್ಟು ಹೆಚ್ಚು ಮಾರಕವಾಗಿದೆ ಎಂದು ಹೇಳಲಾಗುತ್ತಿದೆ.

ತಜ್ಞರ ಅಭಿಪ್ರಾಯವು ವಿಭಿನ್ನವಾಗಿದ್ದರೂ ಸಹ. ಅವರು ಕರೋನಾ ವೈರಸ್‌ನ ಉಪ-ವೇರಿಯಂಟ್ XBB ಅನ್ನು ಅಪಾಯಕಾರಿ ಎಂದು ಪರಿಗಣಿಸುತ್ತಿಲ್ಲ. ಆಂಗ್ಲ ಮಾಧ್ಯಮದ ದಿನಪತ್ರಿಕೆಯೊಂದಕ್ಕೆ ಮಾಹಿತಿ ನೀಡಿರುವ INSACOG ಮುಖ್ಯಸ್ಥ ಡಾ. ಎನ್‌ಕೆ ಅರೋರಾ, ಈ ವೈರಸ್ ಚರ್ಚಿಸಲಾಗುವಷ್ಟು ಅಪಾಯಕಾರಿ ಅಲ್ಲ, ಇದು ದೇಶಾದ್ಯಂತ ಇರುವ ಒಂದು ಸ್ಟ್ರೈನ್ ಆಗಿದೆ ಮತ್ತು ಹೊಸ ಕೊವಿಡ್ ರೋಗಿಗಳಲ್ಲಿ ಶೇ.40 ರಿಂದ 50  ರೋಗಿಗಳು ಎಕ್ಸ್‌ಬಿಬಿ ಸೋಂಕಿಗೆ ಗುರಿಯಾಗಿರುವುದು ಕಂಡುಬರುತ್ತದೆ ಎಂದಿದ್ದಾರೆ.
ಈ ವೈರಸ್ ಪೀಡಿತ ರೋಗಿಯು ಗಂಭೀರ ಸೋಂಕಿನಿಂದ ಬಳಲುತ್ತಿಲ್ಲ ಅಥವಾ ಆಸ್ಪತ್ರೆಗೆ ದಾಖಲಾಗಿಲ್ಲ ಎಂದು ಅವರು ಹೇಳಿದ್ದಾರೆ. ಈ ವೈರಸ್‌ನಿಂದ ಸಾವಿನ ಸಂಖ್ಯೆಯೂ ತುಂಬಾ ಕಡಿಮೆಯಾಗಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ. ಹೊಸ ರೂಪಾಂತರಿ XBB ಕುರಿತು ಮಾತನಾಡಿರುವ ಮತ್ತೋರ್ವ ತಜ್ಞರೂ ಕೂಡ  ಎಕ್ಸ್‌ಎಕ್ಸ್‌ಬಿ ರೂಪಾಂತರದ ಪರಿಣಾಮವು ಇಲ್ಲಿ ಹೆಚ್ಚು ಗೋಚರಿಸುವುದಿಲ್ಲ  ಚಿಂತೆ ಮಾಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ-Corona Variant: ಚೀನಾದಲ್ಲಿ ಸಾವಿನ ಸುನಾಮಿ ತಂದ BF.7 ಎಷ್ಟು ಮಾರಕ? ಅದರ ಲಕ್ಷಣಗಳೇನು?

ಹೊರ ರೂಪಾಂತರಿಯ ಮೇಲೆ ಗಮನ ಕೇಂದ್ರೀಕರಿಸಿದ ವಿಜ್ಞಾನಿಗಳು
ಕರೋನಾದ ಹೊಸ ರೂಪಾಂತರಗಳ ಬಗ್ಗೆ ವಿಜ್ಞಾನಿಗಳು ನಿರಂತರವಾಗಿ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ವಿಶೇಷವಾಗಿ ಅಮೇರಿಕಾದಲ್ಲಿ ಕಂಡುಬಂದಿರುವ BQ.1, BQ.1.1, ಮತ್ತು BF.7 ರೂಪಾಂತರಿಗಳು.  ಏಕೆಂದರೆ ಅಲ್ಲಿ ಆ ರೂಪಾಂತರಿಯ ಪ್ರಕರಣಗಳು ವೇಗವಾಗಿ ಹೆಚ್ಚಾಗುತ್ತಿವೆ. ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್-USA ನೀಡಿರುವ ಮಾಹಿತಿಯ ಪ್ರಕಾರ, BQ.1 ಮತ್ತು BQ.1.1 ಒಟ್ಟು ಪ್ರಕರಣಗಳಲ್ಲಿ ಶೇ.5.7 ರಷ್ಟಿದ್ದರೆ, BF.7 ಶೇ. 5.3 ರಷ್ಟಿವೆ.

ಇದನ್ನೂ ಓದಿ-Corona ಹೊಸ ಅಪಾಯದ ನಡುವೆಯೇ ಬೂಸ್ಟರ್ ಡೋಸ್ ಪಡೆಯಲು ಸಿಕ್ತು ಮತ್ತೊಂದು ಆಯ್ಕೆ

ಯುನೈಟೆಡ್ ಕಿಂಗ್‌ಡಮ್‌ನಲ್ಲಿ BQ.X ​​ಮತ್ತು BF.7 ರೂಪಾಂತರಿಗಳು ಪರಿಶೀಲನೆಯಲ್ಲಿವೆ. ಏಕೆಂದರೆ, ಇವು ಅವುಗಳ ಮೂಲ ರೂಪಾಂತರಿ BA.5 ನಲ್ಲಿ ನೆಲೆ ಕಂಡುಕೊಂಡಿವೆ. UK ಯ ಆರೋಗ್ಯ ಸಂರಕ್ಷಣಾ ಏಜೆನ್ಸಿಯ ಪ್ರಕಾರ, BF.7 ಕೋವಿಡ್-19 ಪ್ರಕರಣಗಳಲ್ಲಿ ಶೇ. 7.26ರಷ್ಟು  ಕೊಡುಗೆ ನೀಡಿದೆ ಮತ್ತು BA.5 ಗೆ ಹೋಲಿಸಿದರೆ ಶೇ.17.95 ಹೆಚ್ಚಳವನ್ನು ದಾಖಲಿಸಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News