WhatsApp New Feature: WhatsAppನಲ್ಲಿ ಬಂತು ಮತ್ತೊಂದು ಹೊಸ ವೈಶಿಷ್ಟ್ಯ, ಇಲ್ಲಿದೆ ಡೀಟೇಲ್ಸ್
WhatsApp New Feature - ಖ್ಯಾತ ಇನ್ಸ್ಟಂಟ್ ಮೆಸೇಜಿಂಗ್ ಆಪ್ WhatsApp ತನ್ನ ಬಳಕೆದಾರರ ಚಾಟ್ ಎಕ್ಸ್ಪೀರಿಯೆನ್ಸ್ ಅನ್ನು ಹೆಚ್ಚಿಸಲು ಹೊಸ-ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುತ್ತಲೇ ಇರುತ್ತದೆ. ಇದೆ ಸರಣಿಯಲ್ಲಿ ಇದೀಗ ಕಂಪನಿ ಮತ್ತೊಂದು ಹೊಸ ವೈಶಿಷ್ಟ್ಯ ಪರಿಚಯಿಸಿದೆ.
WhatsApp New Feature - ಖ್ಯಾತ ಇನ್ಸ್ಟಂಟ್ ಮೆಸೇಜಿಂಗ್ ಆಪ್ WhatsApp ತನ್ನ ಬಳಕೆದಾರರ ಚಾಟ್ ಎಕ್ಸ್ಪೀರಿಯೆನ್ಸ್ ಅನ್ನು ಹೆಚ್ಚಿಸಲು ಹೊಸ-ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುತ್ತಲೇ ಇರುತ್ತದೆ. ಇದೆ ಸರಣಿಯಲ್ಲಿ ಇದೀಗ ಕಂಪನಿ ಮತ್ತೊಂದು ಹೊಸ ವೈಶಿಷ್ಟ್ಯ ಪರಿಚಯಿಸಿದೆ. ಈ ಹೊಸ ಅಪ್ಡೇಟ್ ನಿಂದ ನೀವು ನಿಮಗೆ ತೊಂದರೆ ಉಂಟು ಮಾಡುವ ಚಾಟ್ ಗಳನ್ನು ಮರೆಮಾಚಬಹುದು. ಪ್ರಸ್ತುತ ಕಂಪನಿ ತನ್ನ ಬಳಕೆದಾರರಿಗೆ ಆರ್ಕೈವ್ ಚಾಟ್ ಆಪ್ಶನ್ ಒದಗಿಸುತ್ತದೆ. ಆದರೆ ಚಾಟ್ ಗಳನ್ನು ನೀವು ಖಾಯಂ ಆಗಿ ಹೈಡ್ ಮಾಡಲು ಸಾಧ್ಯವಿಲ್ಲ.
ಅಂದರೆ ನಿನ್ಮುಂದೆ ನೀವು ಚಾಟ್ ಬ್ಲಾಕ್ ಮಾಡುವ ಅವಶ್ಯಕತೆ ಇಲ್ಲ
ಆರ್ಕೈವ್ ಮಾಡಲಾಗುವ ಚಾಟ್ ಗಳು ಬಳಕೆದಾರರ ಚಾಟ್ ಲಿಸ್ಟ್ ನಲ್ಲಿ ಅತ್ಯಂತ ಕೆಳಭಾಗಕ್ಕೆ ಜಾರುತ್ತವೆ. ಆದರೆ, ಹೊಸ ಸಂದೇಶ ಬರುತ್ತಿದ್ದಂತೆ ಮತ್ತೆ ಆರ್ಕೈವ್ ಮಾಡಲಾಗಿರುವ ಚಾಟ್ ಗಳು ಮತ್ತೆ ಮೇಲ್ಭಾಗಕ್ಕೆ ಬರುತ್ತವೆ. ಆದರೆ ವಾಟ್ಸ್ ಆಪ್ (WhatsApp) ಸದ್ಯ ಪರಿಚಯಿಸಿರುವ ವೈಶಿಷ್ಟ್ಯದ ಸಹಾಯದಿಂದ ನೀವು ನಿಮಗೆ ಬೇಡಾದ ಚಾಟ್ ಗಳನ್ನು ಮರೆಮಾಚುವ ಅವಕಾಶ ಸಿಗಲಿದೆ. ಇದರಲ್ಲಿ ವಿಶೇಷ ಎಂದರೆ ನಿಮಗೆ ಬೇಡಾದ ಚಾಟ್ ಅನ್ನು ನೀವು ಬ್ಲಾಕ್ ಮಾಡುವ ಅವಶ್ಯಕತೆ ಕೂಡ ಬೀಳುವುದಿಲ್ಲ.
ಇದನ್ನೂ ಓದಿ-Amazon Launches MiniTV: ಭಾರತದಲ್ಲಿ miniTV ಪ್ಲಾಟ್ ಫಾರ್ಮ್ ಬಿಡುಗಡೆ ಮಾಡಿದ Amazon
[[{"fid":"208312","view_mode":"default","fields":{"format":"default","field_file_image_alt_text[und][0][value]":false,"field_file_image_title_text[und][0][value]":false},"type":"media","field_deltas":{"1":{"format":"default","field_file_image_alt_text[und][0][value]":false,"field_file_image_title_text[und][0][value]":false}},"link_text":false,"attributes":{"class":"media-element file-default","data-delta":"1"}}]]
ಬೀಟಾ ವರ್ಶನ್ ನಲ್ಲಿ ರೋಲ್ ಔಟ್ ಮಾಡಲಾಗುತ್ತಿದೆ
WABetaInfo ವರದಿಯ ಪ್ರಕಾರ ವಾಟ್ಸ್ ಆಪ್, ಇರಿಟೇಟ್ ಮಾಡುವ ಚಾಟ್ ಗಳನ್ನು ಚಾಟ್ ಲಿಸ್ಟ್ ನಲ್ಲಿ ಮರೆಮಾಚುವ ವೈಶಿಷ್ಟ್ಯ ರೋಲ್ ಔಟ್ ಮಾಡಲು ಆರಂಭಿಸಿದೆ. ಕಂಪನಿಯ ಈ ವೈಶಿಷ್ಟ್ಯದ ವಿಶೇಷತೆ ಎಂದರೆ, ಇದೀಗ ಆರ್ಕೈವ್ ಮಾಡಲಾಗಿರುವ ಚಾಟ್ ನಲ್ಲಿ ಹೊಸ ಸಂದೇಶ ಬಂದರೂ ಕೂಡ ಅವು ಚಾಟ್ ಲಿಸ್ಟ್ ನಲ್ಲಿ ಹಿಡನ್ ಸ್ಥಿತಿಯಲ್ಲಿಯೇ ಇರಲಿವೆ. ಈ ಹೊಸ ವೈಶಿಷ್ಟ್ಯಕ್ಕೆ 'New Archive' ಎಂದು ಹೆಸರಿಡಲಾಗಿದ್ದು, ಇದು ಅಂಡ್ರಾಯಿಡ್ ಗಾಗಿ ವಾಟ್ಸ್ ಆಪ್ ಬೀಟಾ ಆವೃತ್ತಿ ಸಂಖ್ಯೆ 2.21.11.1 ಮೂಲಕ ರೋಲ್ ಔಟ್ ಮಾಡಲಾಗುತ್ತಿದೆ.
ಇದನ್ನೂ ಓದಿ- Airtel: 5.5 ಕೋಟಿ ಗ್ರಾಹಕರಿಗೆ ಉಚಿತ ರಿಚಾರ್ಜ್ ಪ್ಯಾಕ್ ಘೋಷಿಸಿದ ಭಾರ್ತಿ ಏರ್ಟೆಲ್
Alert! ನಕಲಿ CoWin Appಗಳ ಬಗ್ಗೆ ಎಚ್ಚರ ಎಂದ ಸರ್ಕಾರ, ಈ 5 ಫೈಲ್ಸ್ ಡೌನ್ ಲೋಡ್ ಮಾಡಬೇಡಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.