ನವದೆಹಲಿ: Amazon MiniTV - ವಿಶ್ವದ ಅತಿದೊಡ್ಡ ಇ-ಕಾಮರ್ಸ್ ವೆಬ್‌ಸೈಟ್‌ಗಳಲ್ಲಿ ಒಂದಾದ ಅಮೆಜಾನ್ (Amazon) ಭಾರತೀಯ ಬಳಕೆದಾರರಿಗಾಗಿ ಮಿನಿಟಿವಿ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ (MiniTV Streaming Platform) ಅನ್ನು ಪ್ರಾರಂಭಿಸಿದೆ. ಈ ಹೊಸ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಅನ್ನು ಪ್ರಾರಂಭಿಸುವುದರೊಂದಿಗೆ, ಅಮೆಜಾನ್ ಈಗ ಪ್ರೈಮ್ ವಿಡಿಯೋ (Prime Video) ಸೇರಿದಂತೆ ಎರಡು ವಿಡಿಯೋ ಮನರಂಜನಾ ವೇದಿಕೆಗಳನ್ನು ಹೊಂದಿದೆ. ಮಿನಿಟಿವಿ ಸಂಪೂರ್ಣವಾಗಿ ಉಚಿತವಾಗಿದೆ ಮತ್ತು ಇದಕ್ಕಾಗಿ ಪ್ರತ್ಯೇಕ ಅಪ್ಲಿಕೇಶನ್ ಅಗತ್ಯವಿಲ್ಲ, ಆದರೆ ಪ್ರೈಮ್ ವೀಡಿಯೊಗೆ ಪ್ರೈಮ್ ಚಂದಾದಾರಿಕೆ ಅಗತ್ಯವಿದೆ. ಪ್ರೈಮ್ ವಿಡಿಯೋ ಅಮೆಜಾನ್ (Amazon) ಮೂಲಕ ಇತ್ತೀಚಿನ ಚಲನಚಿತ್ರಗಳು ಮತ್ತು ಟಿವಿ ಕಾರ್ಯಕ್ರಮಗಳ ಇಂಗ್ಲಿಷ್ ಮತ್ತು 9 ಭಾರತೀಯ ಭಾಷೆಗಳ ಸಂಗ್ರಹವನ್ನು ನೀಡುತ್ತದೆ. ಪ್ರೈಮ್ ವಿಡಿಯೋ ಅಪ್ಲಿಕೇಶನ್‌ನಲ್ಲಿನ ಕಂಟೆಂಟ್ ಅನ್ನು ನೀವು ಆಪ್ ಅಥವಾ ಮನೆಯಲ್ಲಿ ದೊಡ್ಡ ಪರದೆಯಲ್ಲಿ ಸ್ಟ್ರೀಮ್ ಮಾಡಬಹುದು.
ಆಂಡ್ರಾಯ್ಡ್ ಫೋನ್‌ಗಳಿಗಾಗಿ ಅಮೆಜಾನ್‌ನ ಶಾಪಿಂಗ್ ಅಪ್ಲಿಕೇಶನ್‌ನಲ್ಲಿ ಮಿನಿಟಿವಿ ಲಭ್ಯವಿದೆ. ಮುಂಬರುವ ತಿಂಗಳುಗಳಲ್ಲಿ ಮಿನಿ ಟಿವಿಯನ್ನು ಐಒಎಸ್ ಆಪ್ ಮತ್ತು ಮೊಬೈಲ್ ವೆಬ್‌ನಲ್ಲಿಯೂ ಬಿಡುಗಡೆ ಮಾಡಲಾಗುವುದು ಎಂದು ಕಂಪನಿ ಹೇಳಿದೆ. ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅಮೆಜಾನ್, "ಮಿನಿಟಿವಿ ಬಿಡುಗಡೆಯೊಂದಿಗೆ, ಅಮೆಜಾನ್.ಇನ್ ನಲ್ಲಿ ಶಾಪಿಂಗ್ ಮಾಡುವ ಗ್ರಾಹಕರಿಗೆ ಶಾಪಿಂಗ್ ಅಪ್ಲಿಕೇಶನ್‌ನಲ್ಲಿ ಲಕ್ಷಾಂತರ ಉತ್ಪನ್ನಗಳಿಂದ ಉಚಿತ ಮನರಂಜನಾ ವೀಡಿಯೊಗಳನ್ನು ವಿಕ್ಷೀಸುವ ಅವಕಾಶ ಸಿಗಲಿದೆ" ಎಂದು ಹೇಳಿದೆ.
ಇದನ್ನೂ ಓದಿ- WhatsApp: ಈ ಕೆಲಸ ಮಾಡಲು ಇಂದೇ ಕೊನೆಯ ದಿನ
Amazon MiniTV ಆಪ್ ನಲ್ಲಿ ಎನಿರಲಿದೆ?
ಕಂಪನಿ ಜಾರಿಗೊಳಿಸಿರುವ ವಿಜ್ಞಪ್ತಿಯ ಪ್ರಕಾರ, ಮಿನಿಟಿವಿಯಲ್ಲಿ ವೆಬ್ ಸಿರೀಸ್, ಫುಡ್, ಟೆಕ್ ನ್ಯೂಸ್, ಕಾಮಿಡಿ ಷೋ, ಬ್ಯೂಟಿ, ಫ್ಯಾಷನ್ ಇತ್ಯಾದಿ ವಿಷಯಗಳಲ್ಲಿ ವೃತ್ತಿಪರ ಕಂಟೆಂಟ್ ತಯಾರಿಸಿ ಅವುಗಳನ್ನು ಕ್ಯೂರೆಟ್ ಮಾಡಲಾಗಿದೆ. ಈ ಪಟ್ಟಿಯಲ್ಲಿ ಪ್ರಮುಖ ಸ್ಟುಡಿಯೋಗಳಾಗಿರುವ ಟಿವಿಎಫ್, ಪಾಕೆಟ್ ಎಕ್ಸ್ ಹಾಗೂ ಪ್ರಮುಖ ಕಾಮೆಡಿಯನ್ ಆಶಿಶ್ ಚಂಚಲಾನಿ, ಅಮಿತ್ ಭಾಡಾನಾ, ರೌಂಡ್ 2 ಹೋಲ್, ಹಾರ್ಸ್ ಬೆನಿವಾಲ್, ಶ್ರುತಿ ಅರ್ಜುನ್ ಆನಂದ್, ಎಲ್ವಿಶ್ ಯಾದವ್, ಪ್ರಾಜಕ್ತಾ ಕೋಲಿ, ಸ್ವೈಗರ್ ಶರ್ಮಾ, ಆಕಾಶ್ ಗುಪ್ತಾ ಹಾಗೂ ನಿಶಾಂತ್ ತಂವರ್ ಶಾಮೀಲಾಗಿದ್ದಾರೆ.
ಇದನ್ನೂ ಓದಿ- Jio ಗ್ರಾಹಕರಿಗೆ ಗುಡ್ ನ್ಯೂಸ್, ಈ ಬಳಕೆದಾರರಿಗೆ ಸಿಗಲಿದೆ Free ಟಾಕ್ ಟೈಮ್
ಪ್ರತಿಯೊಂದು ವರ್ಗಕ್ಕೋ ಕಂಟೆಂಟ್ ಇರಲಿದೆ
"ವಿಕ್ಷಕರಿಗೆ ಹೊಸ ಉತ್ಪನ್ನಗಳು ಹಾಗೂ ಫಲಿತಾಂಶಗಳ ಕುರಿತು ತಾಂತ್ರಿಕ ಟ್ರ್ಯಾಕಿನ್ ಟೆಕ್ , ಫ್ಯಾಶನ್ ಹಾಗೂ ಬ್ಯೂಟಿ ತಜ್ಞ ಪ್ರೇರಣಾ ಛಾಬ್ರಾ, ಸೇಜಲ್ ಕುಮಾರ್, ಜೋವಿಕ್ ಜಾರ್ಜ್, ಮಾಳವಿಕಾ ಸೀತಲಾನಿ ಹಾಗೂ ಶಿವಶಕ್ತಿ ಅವರುಗಳಿಂದ ನೋಟಿಫೈಗೊಳಿಸಲಾಗುವುದು. ಆಹಾರ ಪ್ರಿಯರು ಕುಕ್ ವಿದ್ ನಿಶಾ, ಗ್ಲೋಬಲ್ ಕಂಟೆಂಟ್ ಸೇರಿದಂತೆ ಕವಿತಾ ಕಿಚನ್ ಅನ್ನು ಆನಂದಿಸಬಹುದು" ಎಂದು ಅಮೆಜಾನ್ ಹೇಳಿದೆ. ಮುಂಬರುವ ದಿನಗಳಲ್ಲಿ ಮಿನಿಟಿವಿಯಲ್ಲಿ ಇನ್ನಷ್ಟು ಹೊಸ ಹಾಗೂ ಎಕ್ಸ್ಕ್ಲೂಸಿವ್ ವಿಡಿಯೋಗಳನ್ನು ಸೇರಿಸಲಾಗುವುದು ಎಂದು ಕಂಪನಿ ಹೇಳಿದೆ.
ಇದನ್ನೂ ಓದಿ-Alert! ನಕಲಿ CoWin Appಗಳ ಬಗ್ಗೆ ಎಚ್ಚರ ಎಂದ ಸರ್ಕಾರ, ಈ 5 ಫೈಲ್ಸ್ ಡೌನ್ ಲೋಡ್ ಮಾಡಬೇಡಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.