WhatsApp: ಈ ಕೆಲಸ ಮಾಡಲು ಇಂದೇ ಕೊನೆಯ ದಿನ

WhatsAppನ ಬಳಕೆಯನ್ನು ಮುಂದುವರೆಸಲು ಬಳಕೆದಾರರ ಬಳಿ ಕಂಪನಿಯ ನೂತನ ಗೌಪ್ಯತಾ ನೀತಿ ಮತ್ತು ಷರತ್ತುಗಳನ್ನು ಒಪ್ಪಿಕೊಳ್ಳಲು ಇಂದೇ ಕೊನೆಯ ದಿನವಾಗಿದೆ. ಒಂದು ವೇಳೆ ಈ ಗೌಪ್ಯತಾ ನೀತಿಯನ್ನು ಒಪ್ಪಿಕೊಳ್ಳದೆ ಹೋದಲ್ಲಿ ಏನಾಗಲಿದೆ ತಿಳಿದುಕೊಳ್ಳೋಣ ಬನ್ನಿ.  

Written by - Nitin Tabib | Last Updated : May 15, 2021, 12:31 PM IST
  • WhatsApp ನ ನೂತನ ಗೌಪ್ಯತಾ ನೀತಿಯನ್ನು ಒಪ್ಪಿಕೊಳ್ಳಲು ಇಂದೇ ಕೊನೆಯ ದಿನ.
  • ಒಂದು ವೇಳೆ ಹೊಸ ನೀತಿಯನ್ನು ಒಪ್ಪಿಕೊಳ್ಳದಿದ್ದರೆ. ಹಲವು ವೈಶಿಷ್ಟ್ಯಗಳಿಂದ ವಂಚಿತರಾಗಬೇಕಾಗಲಿದೆ.
  • ಏಕೆಂದರೆ ಹೊಸ ನೀತಿ ಒಪ್ಪಿಕೊಳ್ಳದ ಗ್ರಾಹಕರ ಖಾತೆಗಳನ್ನು ವಾಟ್ಸ್ ಆಪ್ WhatsApp Limited Functionality Modeಗೆ ಸೇರಿಸಲಿದೆ.
WhatsApp: ಈ ಕೆಲಸ ಮಾಡಲು ಇಂದೇ ಕೊನೆಯ ದಿನ  title=
WhatsApp New Privacy Policy(File Photo)

ನವದೆಹಲಿ: WhatApp ನ ಹೊಸ ಗೌಪ್ಯತಾ ನೀತಿಯನ್ನು ಒಪ್ಪಿಕೊಳ್ಳಲು ಇಂದೇ ಕೊನೆಯ ದಿನವಾಗಿದೆ. ಒಂದು ವೇಳೆ ನೀವೂ ಕೂಡ ವಾಟ್ಸ್ ಆಪ್ ನ ಹೊಸ ಗೌಪ್ಯತಾ ನೀತಿಯನ್ನು ಒಪ್ಪಿಕೊಂಡಿಲ್ಲ ಎಂದಾದಲ್ಲಿ ಈ ಸುದ್ದಿ ನೀವು ಖಂಡಿತ ಓದಿ. ಏಕೆಂದರೆ ಒಂದು ವೇಳೆ ನೀವು ವಾಟ್ಸ್ ಆಪ್ ನ ನೂತನ ಷರತ್ತುಗಳನ್ನು ಒಪ್ಪಿಕೊಳ್ಳದೆ ಹೋದಲ್ಲಿ ಆಪ್ ನ ಹಲವು ಪ್ರಮುಖ ವೈಶಿಷ್ಟ್ಯಗಳ ಮೇಲೆ ನಿರ್ಬಂಧನೆ ಬೀಳಲಿದೆ .

ಇತ್ತೀಚೆಗಷೆ ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ವಾಟ್ಸ್ ಆಪ್, ತನ್ನ ನೂತನ ಗೌಪ್ಯತಾ ನೀತಿಯನ್ನು (WhatsApp New Privacy Policy) ಸ್ವೀಕರಿಸದೆ ಇರುವ ಗ್ರಾಹಕರ ಖಾತೆಗಳನ್ನು ಡಿಲಿಟ್ ಮಾಡಲಾಗುವುದಿಲ್ಲ ಎಂದಿದೆ. ಆದರೆ, ನೀತಿ ಒಪ್ಪಿಕೊಳ್ಳುವವರೆಗೆ ಅವರ ಖಾತೆಯನ್ನು Limited Functionality Modeಗೆ ಸೇರಿಸಲಾಗುವುದು ಎಂದು ಹೇಳಿದೆ.

ಹೊಸ ಗೌಪ್ಯತಾ ನೀತಿಯನ್ನು (WhatsApp New Privacy Policy) ಒಪ್ಪಿಕೊಳ್ಳುವ ಬಳಕೆದಾರರಿಗೆ ವಾಟ್ಸ್ ಆಪ್ (WhatsApp) ನ ಸೇವೆ ಅಥವಾ ವೈಶಿಷ್ಟ್ಯಗಳಲ್ಲಿ ಯಾವುದೇ ರೀತಿಯ ಕೊರತೆ ಎದುರಾಗದು. ಆದರೆ, ಒಪ್ಪಿಕೊಳ್ಳದವರು ಸಾಕಷ್ಟು ಸಂಗತಿಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ.  ವಾಟ್ಸ್ ಆಪ್ ಹೇಳಿಕೆಯ ಪ್ರಕಾರ, ಕಂಪನಿ ಮುಂದೆಯೂ ಕೂಡ ಈ ಮೊದಲಿನ ರೀತಿಯಲ್ಲಿಯೇ  ತನ್ನ ಹೊಸ ನೀತಿ ನಿಯಮಗಳನ್ನು ಒಪ್ಪಿಕೊಳ್ಳಲು ಬಳಕೆದಾರರಿಗೆ ಸಂದೇಶಗಳನ್ನು ಕಳುಹಿಸುತ್ತಲೇ ಇರಲಿದೆ ಎಂದು ಸ್ಪಷ್ಟಪಡಿಸಿದೆ. ನಂತರ ಕೆಲ ವಾರಗಳ ಬಳಿಕ, ನೀತಿ ನಿಯಮಗಳನ್ನು ಒಪ್ಪಿಕೊಳ್ಳದ ಬಳಕೆದಾರರಿಗೆ ನಿರಂತರ ನೋಟಿಫಿಕೆಶನ್ ಗಳು ಬರಲಿವೆ.

ಒಂದೊಮ್ಮೆ ಈ ನಿರಂತರ ಸಂದೇಶಗಳು ಬರಲಾರಂಭಿಸಿದ ಬಳಿಕ ಆ ಬಳಕೆದಾರರ ವಾಟ್ಸ್ ಆಪ್ ಖಾತೆ ಸೀಮಿತ ಕ್ರಿಯಾತ್ಮಕತೆಯ ಮೋಡ್ ಗೆ ಬದಲಾಗಲಿದೆ ಎಂದು ಕಂಪನಿ ಸ್ಪಷ್ಟಪಡಿಸಿದೆ. ಈ ಸೀಮಿತ ಸೌಕರ್ಯಗಳನ್ನು ಹೊಂದಿರುವ ಬಳಕೆದಾರರು ತಮ್ಮ ಚಾಟ್ ಲಿಸ್ಟ್ ಅಕ್ಸಸ್ ಮಾಡಲು ಸಾಧ್ಯವಿಲ್ಲ. ಅಂದರೆ, ಇಂತಹ ಬಳಕೆದಾರರಿಗೆ ಯಾವುದಾದರೊಂದು ಸಂದೇಶ ಬಂದರೆ, ಅವರು ಕೇವಲ ನೋಟಿಫಿಕೇಶನ್ ಮೂಲಕ ಅದನ್ನು ಓಪನ್ ಮಾಡಿ ಅದಕ್ಕೆ ಉತ್ತರಿಸಬಹುದು. ಈ ಮೋಡ್ ನಲ್ಲಿ ಬಳಕೆದಾರರು ಆಡಿಯೋ, ವಿಡಿಯೋ ಕಾಲ್ ರಿಸಿವ್ ಸೌಕರ್ಯವನ್ನು ಸಹ ತೆಗೆದುಹಾಕಲಾಗುವುದು. ಆದರೆ, ಈ ಬಳಕೆದಾರರಿಗೆ ಕರೆ ಮಾಡುವ ಹಾಗೂ ಸಂದೇಶ ಮಾಡುವ ಸ್ವಾತಂತ್ರ್ಯ ಇರಲಿದೆಯೋ ಅಥವಾ ಇಲ್ಲವೋ ಇಂಬುದು ಇದುವರೆಗೆ ಸ್ಪಷ್ಟವಾಗಿಲ್ಲ.

ಇದನ್ನೂ ಓದಿ- Jio ಗ್ರಾಹಕರಿಗೆ ಗುಡ್ ನ್ಯೂಸ್, ಈ ಬಳಕೆದಾರರಿಗೆ ಸಿಗಲಿದೆ Free ಟಾಕ್ ಟೈಮ್

ತನ್ನ ಹೇಳಿಕೆಯಲ್ಲಿ ಮುಂದೆ ಹೇಳಿರುವ ಕಂಪನಿ ಕೆಲ ವಾರಗಳ ನಂತರ ಹೊಸ ನೀತಿಯನ್ನು ಒಪ್ಪಿಕೊಳ್ಳದ ಬಳಕೆದಾರಿಗೆ ವೇದಿಕೆಯಲ್ಲಿ ಕರೆ ಹಾಗೂ ಸಂದೇಶ ಸ್ವೀಕೃತಿ ಸೇವೆ ನಿಂತುಹೋಗಲಿದೆ. ಇದರರ್ಥ ವಾಟ್ಸ್ ಆಪ್ ನ ನೂತನ ನೀತಿ ನಿಯಮಗಳನ್ನು ಒಪ್ಪಿಕೊಳ್ಳದ ಬಳಕೆದಾರರು ಮುಂದೆ ಬಹುತೇಕ ಪ್ರಮುಖ ವೈಶಿಷ್ಟ್ಯಗಳನ್ನು ಕಳೆದುಕೊಳ್ಳಲಿದ್ದಾರೆ. ಅಂದರೆ ವಾಟ್ಸ್ ಆಪ್ ತನ್ನ ನೀತಿಯಂತೆಯೇ ಯುಸ್ಲೆಸ್ ಆಗಲಿದೆ.

ಇದನ್ನೂ ಓದಿ- Alert! ನಕಲಿ CoWin Appಗಳ ಬಗ್ಗೆ ಎಚ್ಚರ ಎಂದ ಸರ್ಕಾರ, ಈ 5 ಫೈಲ್ಸ್ ಡೌನ್ ಲೋಡ್ ಮಾಡಬೇಡಿ

ಹೀಗಿರುವಾಗ ವಾಟ್ಸ್ ಆಪ್ ನೀತಿ ಒಪ್ಪಿಕೊಳ್ಳದ ಬಳಕೆದಾರರಿಗೆ ಕೇವಲ ಎರಡು ಆಯ್ಕೆಗಳು ಮಾತ್ರ ಬಾಕಿ ಉಳಿಯಲಿವೆ. ಒಂದು ವಾಟ್ಸ್ ಆಪ್ ನ ನೂತನ ಗೌಪ್ಯತಾ ನೀತಿ ಒಪ್ಪಿಕೊಳ್ಳಬೇಕು  ಇಲ್ಲದೆ ಹೋದರೆ ವಾಟ್ಸ್ ಆಪ್ ನಂತಹ ಸೇವೆ ನೀಡುವ ಇತರೆ ಆಪ್ ಗಳಾಗಿರುವ Signal ಅಥವಾ Telegram ಗಳತ್ತ ಮುಖಮಾಡಬೇಕು.

ಇದನ್ನೂ ಓದಿ-Covid-19: WhatsApp, Telegram ಬಳಸಿ ಕರೋನಾ ಲಸಿಕೆ ಪಡೆಯಿರಿ, ಹೇಗೆಂದು ತಿಳಿಯಿರಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News