WhatsApp New Scam: ಪ್ರಸ್ತುತ ಜಗತ್ತಿನ ಅತ್ಯಂತ ಜನಪ್ರಿಯ ಮೆಸೇಜಿಂಗ್ ಪ್ಲಾಟ್ಫಾಮ್ ಆಗಿರುವ ವಾಟ್ಸಾಪ್ ಕೋಟ್ಯಾಂತರ ಬಳಕೆದಾರರನ್ನು ಹೊಂದಿದೆ. ಇಂತಹ ಪ್ರಸಿದ್ದ  ಮೆಸೇಜಿಂಗ್ ಪ್ಲಾಟ್ಫಾಮ್ ಇದೀಗ ಹಗರಣದ ತಾಣವಾಗಿ ಮಾರ್ಪಟ್ಟಿದ್ದು ಇತ್ತೀಚೆಗೆ ಹೊಸ ಹಗರಣವೊಂದು ಮುನ್ನಲೆಗೆ ಬಂದಿದೆ.  ಉದ್ಯೋಗಿಗಳನ್ನೇ ಹೆಚ್ಚಾಗಿ ಟಾರ್ಗೆಟ್ ಮಾಡುತ್ತಿರುವ ವಂಚಕರು ಒಂದು ಸಣ್ಣ ಕರೆ ಮೂಲಕ ಜನರಿಂದ ಲಕ್ಷಾಂತರ ರೂ. ದೋಚುತ್ತಿದ್ದಾರೆ ಎಂದು ವರದಿ ಆಗಿದೆ. 


COMMERCIAL BREAK
SCROLL TO CONTINUE READING

ವಾಟ್ಸಾಪ್ ನಲ್ಲಿ ಈ ಮೊಬೈಲ್ ನಂಬರ್‌ಗಳಿಂದ ಕರೆ ಬಂದರೆ ಹುಷಾರ್!
ವಾಸ್ತವವಾಗಿ, ವಾಟ್ಸಾಪ್ ಕರೆ ಮೂಲಕ ಗ್ರಾಹಕರನ್ನು ಬಲಿಪಶು ಮಾಡುತ್ತಿರುವ ವಂಚಕರು ಅಂತರಾಷ್ಟ್ರೀಯ ಕೋಡ್‌ನೊಂದಿಗೆ ಕರೆ ಮಾಡುವ ಮುಖಾಂತರ ಜನರನ್ನು ವಂಚಿಸುತ್ತಿದ್ದಾರೆ. ಇಥಿಯೋಪಿಯಾ (+ 251), ಮಲೇಷ್ಯಾ (+ 60), ಇಂಡೋನೇಷ್ಯಾ (+ 62), ಕೀನ್ಯಾ (+ 254), ವಿಯೆಟ್ನಾಂ (+ 84) ಮತ್ತು ಇತರ ಕೋಡ್‌ನೊಂದಿಗೆ ಪ್ರಾರಂಭವಾಗುವ  ನಂಬರ್‌ಗಳಿಂದ ನಿಮಗೂ ವಾಟ್ಸಾಪ್ ಕರೆ ಬರುತ್ತಿದ್ದರೆ ಹುಷಾರಾಗಿರಿ. 


ಇದನ್ನೂ ಓದಿ- VODAFONE IDEA : 45ರೂ.ಗಳ ಅದ್ಭುತ ಯೋಜನೆ ಪರಿಚಯಿಸಿದ Vi


ವಿದೇಶಿ ಸಂಖ್ಯೆಗಳೊಂದಿಗೆ ಆರಂಭವಾಗುವ ಈ ಕರೆಗಳನ್ನು ಅಂತಾರಾಷ್ಟ್ರೀಯ ಕರೆಗಳು ಎಂದು ಭಾವಿಸಬೇಡಿ. ವಾಟ್ಸಾಪ್ ಕರೆಗಳು ಇಂಟರ್ನೆಟ್ ಮೂಲಕ ರವಾನೆಯಾಗುವ ಕರೆಗಳಾಗಿವೆ. ಕೆಲವು ಮಾಧ್ಯಮ ವರದಿಗಳ ಪ್ರಕಾರ, ನೀವಿರುವ ನಗರದಲ್ಲಿಯೇ ಕುಳಿತು  ಕೆಲ ಕಿಡಿಗೇಡಿಗಳು ವಾಟ್ಸಾಪ್ ಕರೆಗಳಿಗಾಗಿ ಅಂತರರಾಷ್ಟ್ರೀಯ ಸಂಖ್ಯೆಗಳನ್ನು ಮಾರಾಟ ಮಾಡುವ ಏಜೆನ್ಸಿಗಳನ್ನು ನಡೆಸುತ್ತಿದ್ದಾರೆ. ಸೆಲ್ಯುಲಾರ್ ಕರೆಗಳಿಗೆ ಅನ್ವಯವಾಗುವಂತೆ ಯಾವುದೇ ಅಂತರರಾಷ್ಟ್ರೀಯ ಕರೆ ಶುಲ್ಕಗಳ ಬಗ್ಗೆ ಚಿಂತಿಸದೆ ಅಂತಹ ಸಂಖ್ಯೆಯಿಂದ ಕರೆ ಮಾಡಬಹುದು ಎನ್ನಲಾಗಿದೆ. ಇಂತಹ ಕರೆಗಳು ಗ್ರಾಹಕರನ್ನು ವಂಚನೆಯ ಜಾಲದಲ್ಲಿ ಸಿಲುಕಿಸಿ ಅವರ ಖಾತೆಯನ್ನು ಖಾಲಿ ಮಾಡುವ ಕೆಲಸ ಮಾಡುತ್ತಿವೆ. 


ಈ ಕುರಿತಂತೆ ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಬಳಕೆದಾರರು ಟ್ವೀಟ್ ಮಾಡುವ ಅಂತರಾಷ್ಟ್ರೀಯ ಸಂಖ್ಯೆಗಳಿಂದ ಕರೆಗಳನ್ನು ಸ್ವೀಕರಿಸಿರುವ ಬಗ್ಗೆ ವರದಿ ಮಾಡಿದ್ದಾರೆ. 


 ವಾಟ್ಸಾಪ್ನಲ್ಲಿ  ಈ ನಂಬರ್‌ಗಳಿಂದ ಬಂದ ಕರೆಗಳನ್ನು ಮಿಸ್ ಆಗಿಯೂ ಲಿಫ್ಟ್ ಮಾಡಬೇಡಿ!


[[{"fid":"305209","view_mode":"default","fields":{"format":"default","field_file_image_alt_text[und][0][value]":false,"field_file_image_title_text[und][0][value]":"ವಿದೇಶಿ ಸಂಖ್ಯೆಗಳೊಂದಿಗೆ ಆರಂಭವಾಗುವ ಈ ಕರೆಗಳನ್ನು ಅಂತಾರಾಷ್ಟ್ರೀಯ ಕರೆಗಳು ಎಂದು ಭಾವಿಸಬೇಡಿ. "},"type":"media","field_deltas":{"1":{"format":"default","field_file_image_alt_text[und][0][value]":false,"field_file_image_title_text[und][0][value]":"ವಿದೇಶಿ ಸಂಖ್ಯೆಗಳೊಂದಿಗೆ ಆರಂಭವಾಗುವ ಈ ಕರೆಗಳನ್ನು ಅಂತಾರಾಷ್ಟ್ರೀಯ ಕರೆಗಳು ಎಂದು ಭಾವಿಸಬೇಡಿ. "}},"link_text":false,"attributes":{"title":"ವಿದೇಶಿ ಸಂಖ್ಯೆಗಳೊಂದಿಗೆ ಆರಂಭವಾಗುವ ಈ ಕರೆಗಳನ್ನು ಅಂತಾರಾಷ್ಟ್ರೀಯ ಕರೆಗಳು ಎಂದು ಭಾವಿಸಬೇಡಿ. ","class":"media-element file-default","data-delta":"1"}}]][[{"fid":"305210","view_mode":"default","fields":{"format":"default","field_file_image_alt_text[und][0][value]":false,"field_file_image_title_text[und][0][value]":"ವಿದೇಶಿ ಸಂಖ್ಯೆಗಳೊಂದಿಗೆ ಆರಂಭವಾಗುವ ಈ ಕರೆಗಳನ್ನು ಅಂತಾರಾಷ್ಟ್ರೀಯ ಕರೆಗಳು ಎಂದು ಭಾವಿಸಬೇಡಿ. "},"type":"media","field_deltas":{"2":{"format":"default","field_file_image_alt_text[und][0][value]":false,"field_file_image_title_text[und][0][value]":"ವಿದೇಶಿ ಸಂಖ್ಯೆಗಳೊಂದಿಗೆ ಆರಂಭವಾಗುವ ಈ ಕರೆಗಳನ್ನು ಅಂತಾರಾಷ್ಟ್ರೀಯ ಕರೆಗಳು ಎಂದು ಭಾವಿಸಬೇಡಿ. "}},"link_text":false,"attributes":{"title":"ವಿದೇಶಿ ಸಂಖ್ಯೆಗಳೊಂದಿಗೆ ಆರಂಭವಾಗುವ ಈ ಕರೆಗಳನ್ನು ಅಂತಾರಾಷ್ಟ್ರೀಯ ಕರೆಗಳು ಎಂದು ಭಾವಿಸಬೇಡಿ. ","class":"media-element file-default","data-delta":"2"}}]]


ಇದನ್ನೂ ಓದಿ- Google Update: ಇನ್ಮುಂದೆ ಗೂಗಲ್ ನಲ್ಲಿ ನಿಮಗೆ ಪಾಸ್ವರ್ಡ್ ನೆನಪಿನಲ್ಲಿಟ್ಟುಕೊಳ್ಳುವ ಗೊಡವೆ ಇಲ್ಲ! ಕಾರಣ ಇಲ್ಲಿದೆ


ನಿಮಗೂ  ವಾಟ್ಸಾಪ್ನಲ್ಲಿ  ಈ  ರೀತಿ ಅಂತಾರಾಷ್ಟ್ರೀಯ ಸಂಖ್ಯೆಗಳಿಂದ ಕರೆ ಬರುತ್ತಿದ್ದರೆ  ಇಂತಹ ನಂಬರ್‌ಗಳಿಂದ ಬಂದ ಕರೆಗಳನ್ನು ಮಿಸ್ ಆಗಿಯೂ ಲಿಫ್ಟ್ ಮಾಡಬೇಡಿ. ಜೊತೆಗೆ ಕೆಲವು ಸರಲ ಹಂತಗಳನ್ನು ಅನುಸರಿವ ಮೂಲಕ ಇಂತಹ ಕರೆಗಳನ್ನು ತಪ್ಪಿಸಬಹುದು. 


ಇಂತಹ ಅಂತರಾಷ್ಟ್ರೀಯ ಕರೆಗಳನ್ನು ತಪ್ಪಿಸಲು ಏನು ಮಾಡಬೇಕು?
* ಮೊದಲೇ ತಿಳಿಸಿದಂತೆ  ವಾಟ್ಸಾಪ್ನಲ್ಲಿ  ಇಂತಹ ನಂಬರ್‌ಗಳಿಂದ ಬರುವ ಕರೆಗಳನ್ನು ಸ್ವೀಕರಿಸಬೇಡಿ. 
* ಹಠಾತ್ ಅಂತರಾಷ್ಟ್ರೀಯ ಸಂಖ್ಯೆಯಿಂದ ಕರೆಯನ್ನು ಪಡೆದರೆ, ಅದನ್ನು ನಿರ್ಲಕ್ಷಿಸುವುದು ಉತ್ತಮ. 
* ಮಾತ್ರವಲ್ಲ, ಈ ರೀತಿ ಬರುವ ಅಂತಾರಾಷ್ಟ್ರೀಯ ಕರೆಗಳನ್ನು ನಿರ್ಬಂಧಿಸಿ. ಇದು ನಿಮ್ಮ ಫೋನ್ ಅನ್ನು ಹೆಚ್ಚು ಸುರಕ್ಷಿತವಾಗಿರಿಸುತ್ತವೆ. 
* ಯಾವುದೇ ಸಮಯದಲ್ಲಿ, ಯಾವುದೇ ಮಾಧ್ಯಮದಲ್ಲಿ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳುವ ತಪ್ಪನ್ನು ಎಂದಿಗೂ ಮಾಡಬೇಡಿ. 


ಇದನ್ನೂ ಓದಿ- WhatsApp ಬಳಕೆದಾರರಿಗೊಂದು ಬಂಬಾಟ್ ಸುದ್ದಿ, ಎರಡು ಹೊಸ ವೈಶಿಷ್ಟ್ಯಗಳನ್ನು ಹಂಚಿಕೊಂಡ ಮೇಟಾ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.