ನವದೆಹಲಿ:  WhatsApp Privacy Policy latest Update - CCI(Competition Commission Of India) ಬುಧವಾರ ಫೇಸ್ ಬುಕ್ (Facebook)) ಮಾಲೀಕತ್ವದ ಮೆಸೇಜಿಂಗ್ ಪ್ಲಾಟ್ ಫಾರ್ಮ್ ಆಗಿರುವ WhathApp ನ ನವೀಕ್ಕ್ರುತ ಗೌಪ್ಯತಾ ನೀತಿ ಮತ್ತು ಷರತ್ತುಗಳ ಬಗ್ಗೆ ವಿಸ್ತೃತ ತನಿಖೆಗೆ ಆದೇಶ ನೀಡಿದೆ. ಈ ಕುರಿತು ಹೇಳಿಕೆ ನೀಡಿರುವ ಆಯೋಗ ವಾಟ್ಸ್ ಆಪ್ ತನ್ನ ಶೋಷಣೆ ಮತ್ತು ಬಹಿಷ್ಕಾರದ ನಡುವಳಿಕೆಯ ಮೂಲಕ ಈ ಕುರಿತಾದ ಕಾಯ್ದೆಯ ಶೆಕ್ಶನ್ 4ರ ನಿಬಂಧನೆಗಳನ್ನು ಉಲ್ಲಂಘಿಸಿದೆ. ಹೀಗಾಗಿ ಅದರ ಕೂಲಂಕುಷ ತನಿಖೆ ನಡೆಯಬೇಕು ಮತ್ತು ಸಿಸಿಐ ಮಹಾನಿರ್ದೇಶಕರು ಈ ಬಗ್ಗೆ ತನಿಖೆ ನಡೆಸಿ 60ದಿನಗಳ ಒಳಗೆ ವರದಿ ಸಲ್ಲಿಸಲಿದ್ದಾರೆ ಎಂದು ಆಯೋಗ ಹೇಳಿದೆ.


COMMERCIAL BREAK
SCROLL TO CONTINUE READING

CCI ಹೇಳಿದ್ದೇನು?
ಭಾರತದಲ್ಲಿ ತನಗೆ ಪ್ರಬಲ ಪೈಪೋಟಿ ಇಲ್ಲದ ಕಾರಣ ವಾಟ್ಸ್ ಆಪ್ (WhatsApp) ನೂತನ ನೀತಿಯ ವಿಚಾರದಲ್ಲಿ ಬಳಕೆದಾರರಿಗೆ ಅನೂಕೂಲಕರ ಆಯ್ಕೆ ನೀಡಲು ಬಯುಸುತ್ತಿಲ್ಲ ಎಂದು ಈ ಕುರಿತಾದ ವಿಚಾರಣೆಯ ಸಂದರ್ಭದಲ್ಲಿ ಸಿಸಿಐ ಹೇಳಿದೆ. ಏಕೆಂದರೆ ಬಳಕೆದಾರರ ಸಂಖ್ಯೆಯ ಕುಸಿತದ ಭಯ ವಾಟ್ಸ್ ಅಪ್ ಗೆ ಇಲ್ಲ. ಬಳಕೆದಾರರ ಅನೈಚ್ಚಿಕ ಒಪ್ಪಿಗೆಯ ಮೂಲಕ ದತಾಂಶ ಹಂಚಿಕೆಯ ಪೂರ್ಣವ್ಯಾಪ್ತಿ ಮತ್ತು ಪ್ರಭಾವವನ್ನು ಕಂಡುಹಿಡಿಯಲು ಸಂಪೂರ್ಣ ಮತ್ತು ವಿಸ್ತೃತ ತನಿಖೆಯ ಅಗತ್ಯವಿದೆ ಎಂದು ಸಿಸಿಐ ತನ್ನ ಆದೇಶದಲ್ಲಿ ತಿಳಿಸಿದೆ. ವಾಟ್ಸ್ ಆಪ್ ನ ನೀತಿ ಮತ್ತು ಷರತ್ತುಗಳು ಸ್ವೀಕರಿಸಬೇಕು ಅಥವಾ ಇಲ್ಲದೆ ಹೋದಲ್ಲಿ ಪ್ಲಾಟ್ ಫಾರ್ಮ್ ತೊರೆಯಬೇಕು ಎಂಬಂತಿವೆ ಎಂದು ಸಿಸಿಐ ತನ್ನ ಆದೇಶದಲ್ಲಿ ಹೇಳಿದೆ. ಇನ್ನೊಂದೆಡೆ ಈ ಕುರಿತು CCI ಜೊತೆಗೆ ಮಾತುಕತೆ ನಡೆಸಲಾಗುವುದು ಎಂದು ವಾಟ್ಸ್ ಆಪ್ ಹೇಳಿದೆ ಮತ್ತು ಕಂಪನಿ ವ್ಯಕ್ತಿಗಳ ವೈಯಕ್ತಿಕ ಸಂವಾದದ ಎಂಡ್ ಟು ಎಂಡ್ ಎನ್ಕ್ರಿಪ್ಶೇನ್ ಹಾಗೂ ಪಾರದರ್ಶಕತೆಗೆ ಬದ್ಧವಾಗಿದೆ ಎಂದು ಹೇಳಿದೆ.


ಇದನ್ನೂ ಓದಿ-WhatsAppನಲ್ಲಿ ಬರುವ ಈ ಲಿಂಕ್ ಅನ್ನು ಅಪ್ಪಿತಪ್ಪಿಯೂ ತೆರೆಯದಿರಿ, ಖಾಲಿಯಾಗುತ್ತೆ ಅಕೌಂಟ್


WhatsApp New Terms And Conditions
ತನ್ನ ಗೌಪ್ಯತಾ ನೀತಿಗೆ ಸಂಬಂಧಿಸಿದಂತೆ ವಾಟ್ಸ್ ಆಪ್ ಬಳಕೆದಾರರಿಗೆ ಧಮ್ಕಿ ಹಾಕಲಾರಂಭಿಸಿತ್ತು. ತನ್ನ ಗೌಪ್ಯತಾ ನೀತಿಯನ್ನು ಸ್ವೀಕರಿಸದವರ ಖಾತೆಯನ್ನು ಫೆಬ್ರುವರಿ 8 ರ ಬಳಿಕ ಬಂದ್ ಮಾಡಲಾಗುವುದು ಎಂದು ಹೇಳಿತ್ತು. ಇದಕ್ಕೆ ರಾಷ್ಟ್ರಮಟ್ಟದಲ್ಲಿ ವಿರೋಧ ವ್ಯಕ್ತವಾದ ಹಿನ್ನೆಲೆ ವಾಟ್ಸ್ ಆಪ್ ತನ್ನ ಡೆಡ್ ಲೈನ್ ನ್ನು ಮೇ 15ರವರಿಗೆ ವಿಸ್ತರಿಸಿದೆ. ಯಾವ ಪರಿಸ್ಥಿತಿಗಳಲ್ಲಿ ಬಳಕೆದಾರರ ಮಾಹಿತಿಯನ್ನು ಅದು ಫೇಸ್ ಬುಕ್ ಹಾಗೂ ತನ್ನ ಇತರೆ ವೇದಿಕೆಗಳಿಗೆ ಉಪಯೋಗಿಸಲಿದೆ ಎಂಬುದನ್ನು ವ್ಯಾಟ್ ಆಪ್ ಈಗಾಗಲೇ ತನ್ನ ನೀತಿಯಲ್ಲಿ ಸ್ಪಷ್ಟಪಡಿಸಿದೆ. 


ಇದನ್ನೂ ಓದಿ-WhatsApp ​ನಲ್ಲಿ ಹರಿದಾಡುತ್ತಿದೆ ಈ ಫೇಕ್ ಮೆಸೇಜ್; ಅಪ್ಪಿತಪ್ಪಿಯೂ ಓಪನ್ ಮಾಡದಿರಿ!


ನೂತನ ನೀತಿ ಜಾರಿಯಿಂದ ತಡೆಯಲಾಗುವುದು! (WhatsApp New Privacy Policy)
ಇದಕ್ಕೂ ಮೊದಲು ವಾಟ್ಸ್ ಆಪ್ ನ ನೂತನ ಗೌಪ್ಯತಾ ನೀತಿಯ ವಿರುದ್ಧ ದಾಖಲಾದ ಅರ್ಜಿಯ ಕುರಿತು ಶುಕ್ರವಾರ ದೆಹಲಿ ಹೈ ಕೋರ್ಟ್ ನಲ್ಲಿ ಕೇಂದ್ರ ಸರ್ಕಾರ ತನ್ನ ಉತ್ತರವನ್ನು ದಾಖಲಿಸಿದೆ. ವಾಟ್ಸ್ ಆಪ್ ನ ಈ ನೂತನ ನೀತಿ ಜಾರಿಗೆ ತರುವುದನ್ನು ವಾಟ್ಸಾಪ್ ನಿಲ್ಲಿಸಬೇಕು ಎಂದು ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ ಮುಖ್ಯ ನ್ಯಾಯಮೂರ್ತಿ ಡಿ.ಎನ್. ಪಟೇಲ್ ಮತ್ತು ನ್ಯಾಯಮೂರ್ತಿ ಜಸ್ಮೀತ್ ಸಿಂಗ್ ಅವರ ನ್ಯಾಯಪೀಠಕ್ಕೆ ತಿಳಿಸಿದೆ. ಕೇಂದ್ರದ ಉತ್ತರದ ನಂತರ, ಪ್ರಕರಣದ ಮುಂದಿನ ವಿಚಾರಣೆಯನ್ನು ಹೈಕೋರ್ಟ್ ಏಪ್ರಿಲ್ 20 ಕ್ಕೆ ನಿಗದಿಪಡಿಸಿದೆ.


ಇದನ್ನೂ ಓದಿ-WhatsApp ಮೇಲೆ Spam ಹಾಗೂ Fake ಸಂದೇಶ ತಡೆಗಟ್ಟಲು ಕೇಂದ್ರ ಸರ್ಕಾರದ ಹೊಸ ಯೋಜನೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.