ನಿಮಗೆ ಗೊತ್ತಿಲ್ಲದಂತೆ ಯಾರಾದರು ನಿಮ್ಮ whatsapp DP ನೋಡುತ್ತಿದ್ದಾರಾ ಹೀಗೆ ತಿಳಿಯಿರಿ

ನಿಮ್ಮ ವಾಟ್ಸಾಪ್ ಪ್ರೊಫೈಲ್ ಫೋಟೋವನ್ನು ಯಾರು ನೋಡುತ್ತಿದ್ದಾರೆ? ಎನ್ನುವುದನ್ನು ತಿಳಿಯಲು, ನೀವು ಥರ್ಡ್ ಪಾರ್ಟಿ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬೇಕು.

Written by - Ranjitha R K | Last Updated : Mar 22, 2021, 09:18 AM IST
  • ವಾಟ್ಸ್ ಆಪ್ ನಲ್ಲಿ ಕದ್ದು ಯಾರು ನಿಮ್ಮ ಪ್ರೊಫೈಲ್ ಫೋಟೋವನ್ನು ನೋಡುತ್ತಿದ್ದಾರೆ ತಿಳಿದುಕೊಳ್ಳಬಹುದು
  • ಇದಕ್ಕಾಗಿ ಥರ್ಡ್ ಪಾರ್ಟಿ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬೇಕು.
  • ಈ ಆಪ್ ಮೂಲಕ ಯಾರು ನಿಮ್ಮ ಪ್ರೊಫೈಲ್ ಫೋಟೋ ವೀಕ್ಷಿಸಿದ್ದಾರೆ ಎನ್ನುವ ಲಿಸ್ಟ್ ಸಿಗುತ್ತದೆ
ನಿಮಗೆ ಗೊತ್ತಿಲ್ಲದಂತೆ ಯಾರಾದರು ನಿಮ್ಮ whatsapp DP ನೋಡುತ್ತಿದ್ದಾರಾ ಹೀಗೆ ತಿಳಿಯಿರಿ  title=
ಆಪ್ ಮೂಲಕ ಯಾರು ನಿಮ್ಮ ಪ್ರೊಫೈಲ್ ಫೋಟೋ ವೀಕ್ಷಿಸಿದ್ದಾರೆ ತಿಳಿದುಕೊಳ್ಳಬಹುದು (file photo)

ನವದೆಹಲಿ : ಈಗ ಪ್ರತಿಯೊಬ್ಬರು ವಾಟ್ಸಾಪ್ (WhatssApp) ಬಳಸುತ್ತಾರೆ. ವಾಟ್ಸಾಪ್ ನಲ್ಲಿ ಅನೇಕ ಫೀಚರ್ ಗಳು ಬಂದಿವೆ.  ನಿಮ್ಮ ಡಿಪಿಯಲ್ಲಿರುವ (DP) ಫೋಟೋವನ್ನು ಯಾರು ನೋಡುತ್ತಾರೆ ಅನ್ನೋದು ಗೊತ್ತಾಗುತ್ತದೆ. ಆದರೆ ಕದ್ದು ಮುಚ್ಚಿ ಯಾರು ನಮ್ಮ ಡಿಪಿ ಫೋಟೋ ನೋಡುತ್ತಾರೆ ಅನೋದು  ಗೊತ್ತಾಗುವುದಿಲ್ಲ. ಆದರೆ ಈಗ ಅದನ್ನು ಕೂಡಾ ತಿಳಿದುಕೊಳ್ಳಬಹುದು. ಅದಕ್ಕಾಗಿ ಸುಲಭವಾದ ಟ್ರಿಕ್ ಒಂದಿದೆ.  ಈ ವಿಧಾನದಿಂದ ನಿಮಗೆ ಗೊತ್ತಿಲ್ಲದಂತೆ ನಿಮ್ಮ ಡಿಪಿ ನೋಡುವವರ ಹೆಸರು ಮತ್ತು ನಂಬರ್ ತಿಳಿದುಕೊಳ್ಳಬಹುದು. 

ಎಷ್ಟೋ ಸಲ ನಿಮ್ಮ ಕಾಂಟಾಕ್ಟ್  ಲಿಸ್ಟ್ (Contact list) ನಲ್ಲಿರುವವರು ಬಿಟ್ಟು, ಬೇರೆ ಯಾರಾದರು ನಿಮ್ಮ ಡಿಪಿ (DP) ನೋಡುತ್ತಿರಬಹುದಾ ಅನ್ನೋ ಅನುಮಾನ ಬಂದಿರಬಹುದು. ಒಂದು ವೇಳೆ ಹಾಗೆ ಆದರೆ ಏನು ಮಾಡೋದಕ್ಕೆ ಆಗುತ್ತೆ ಸುಮ್ಮನೆ ಇದ್ದಿರಲೂಬಹುದು. ಆದರೆ ಇನ್ನು ಹಾಗೆ ಸುಮ್ಮನೆ ಕೂರುವ ಅಗತ್ಯವಿಲ್ಲ. ನಿಮಗೆ ಗೊತ್ತಿಲ್ಲದಂತೆ ಯಾರು ನಿಮ್ಮ ಡಿಪಿ ನೋಡುತ್ತಿದ್ದಾರೆ ಎನ್ನುವುದನ್ನು ಸುಲಭವಾಗಿ ತಿಳಿದುಕೊಳ್ಳಬಹುದು. 

ಇದನ್ನೂ ಓದಿ : Samsung Galaxy M12: ಮಾರಾಟದ ಎಲ್ಲ ದಾಖಲೆಗಳನ್ನು ಮುರಿದು Amazon ನಲ್ಲಿ No.1 ಪಟ್ಟ ಅಲಂಕರಿಸಿದ ಸ್ಮಾರ್ಟ್ ಫೋನ್

ನಿಮ್ಮ ವಾಟ್ಸಾಪ್ (WhatsApp) ಪ್ರೊಫೈಲ್ ಫೋಟೋವನ್ನು ಯಾರು ನೋಡುತ್ತಿದ್ದಾರೆ? ಎನ್ನುವುದನ್ನು ತಿಳಿಯಲು, ನೀವು ಥರ್ಡ್ ಪಾರ್ಟಿ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ (Download)  ಮಾಡಬೇಕು. ನೀವು ಪ್ಲೇ-ಸ್ಟೋರ್‌ನಿಂದ WhatsApp- Who Viewed Me ಅಥವಾ Whats Tracker ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಳ್ಳಬೇಕು. ಇದರ ಜೊತೆಯ ಲ್ಲಿ,  1mobile market ಅನ್ನು 1 ಸಹ ಡೌನ್‌ಲೋಡ್ ಮಾಡಬೇಕಾಗುತ್ತದೆ.  1mobile market  ಆಪ್ ಇಲ್ಲದೆ  WhatsApp- Who Viewed Me ಡೌನ್‌ಲೋಡ್ ಆಗುವುದಿಲ್ಲ.

WhatsApp- Who Viewed Me ಆಪ್ ಡೌನ್ಲೋಡ್ ಮಾಡಿದ ನಂತರ, ನಿಮಗೆ ಗೊತ್ತಿಲ್ಲದಂತೆ ಯಾರೆಲ್ಲಾ ನಿಮ್ಮ ವಾಟ್ಸಾಪ್ ಪ್ರೊಫೈಲ್ ಫೋಟೋವನ್ನು (Profile photo) ನೋಡುತ್ತಿದ್ದಾರೆ ಎನ್ನುವ ಮಾಹಿತಿಯನ್ನು ನಿಮಗೆ ನೀಡುತ್ತದೆ. ಅಪ್ಲಿಕೇಶನ್ ಮೂಲಕ ಕಳೆದ 24 ಗಂಟೆಗಳಲ್ಲಿ ನಿಮ್ಮ ಪ್ರೊಫೈಲ್ ಫೋಟೋವನ್ನು ಯಾರು ನೋಡುತ್ತಿದ್ದಾರೆ ಎನ್ನುವ ಲಿಸ್ಟ್ ನಿಮಗೆ ಸಿಗುತ್ತದೆ. ಈ ಲಿಸ್ಟ್ ಮೂಲಕ ನಿಮಗೆ ಗೊತ್ತಿಲ್ಲದಂತೆ ಅಂದರೆ ಕದ್ದು ಯಾರು ನಿಮ್ಮ  ಪ್ರೊಫೈಲ್ ಫೋಟೋ ನೋಡುತ್ತಿದ್ದಾರೆ ಎನ್ನುವ ಮಾಹಿತಿ ನಿಮಗೆ ಸಿಗುತ್ತದೆ. 

ಇದನ್ನೂ ಓದಿ : ಒಮ್ಮೆಗೆ ಡೌನ್ ಆದ Facebook, WhatsApp, Instagram- ಟ್ವಿಟರ್‌ನಲ್ಲಿ ಮೈಮ್‌ಗಳ ಪ್ರವಾಹ

ಈ ಅಪ್ಲಿಕೇಶನ್ ನಿಮ್ಮ ಫೋನ್‌ಗೆ (Phone) ಎಷ್ಟು ಸುರಕ್ಷಿತ ಎನ್ನುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಸದ್ಯಕ್ಕೆ ಇಲ್ಲ.  ನಿಮ್ಮ ಸ್ವಂತ ರಿಸ್ಕ್ ಮೇಲೆ   ಈ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡುವ ಮೂಲಕ ಈ ಟ್ರಿಕ್ ಅನ್ನು ಪ್ರಯತ್ನಿಸಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News