WhatsApp New Policyಯಿಂದ ಬಳಕೆದಾರರ ಕಿರಿಕಿರಿ, ವಾಟ್ಸ್ ಆಪ್ ನೀಡಿದೆ ಉತ್ತರ
WhatsApp New Policy:ವಿಶ್ವದ ಖ್ಯಾತ ಮೆಸೆಂಜರ್ ಆಪ್ WhatsApp ತನ್ನ ಸೇವೆಗಾಗಿ ನೂತನ ಷರತ್ತುಗಳನ್ನು ಹಾಗೂ ಪ್ರೈವೇಟ್ ಪಾಲಸಿಯನ್ನು ಅಪ್ಡೇಟ್ ಗೊಳಿಸಿದೆ. ಇದಾದ ಬಳಿಕ ಪ್ರೈವೆಸಿ ಕುರಿತು ಬಳಕೆದಾರರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಬಳಕೆದಾರರ ಸಂದೇಹಗಳನ್ನು ದೂರಗೊಳಿಸಲು Zee News ವಾಟ್ಸ್ ಆಪ್ ಅನ್ನು ಸಂಪರ್ಕಿಸಿದೆ ಹಾಗೂ ಕಂಪನಿ ಪ್ರವೆಸಿಗೆ ಸಂಬಂಧಿಸಿದಂತೆ ಈ ಮಾಹಿತಿ ನೀಡಿದೆ.
ನವದೆಹಲಿ: WhatsApp New Policy - ವಿಶ್ವದ ಖ್ಯಾತ ಮೆಸೇಜಿಂಗ್ ಆಪ್ ವಾಟ್ಸ್ ಆಪ್ ತನ್ನ ಸೇವೆಯ ಷರತ್ತುಗಳನ್ನು ಹಾಗೂ ನೀತಿಯನ್ನು ಅಪ್ಡೇಟ್ ಮಾಡುತ್ತಿದ್ದು, ನೂತನ ನೀತಿಯ ಕುರಿತು ಸಂಸ್ಥೆ ಈಗಾಗಲೇ ತನ್ನ ಬಳಕೆದಾರರಿಗೆ ನೋಟಿಫಿಕೇಶನ್ ಕೂಡ ಜಾರಿಗೊಳಿಸುತ್ತಿದೆ. ಇದಾದ ಬಳಿಕ ಬಳಕೆದಾರರ ಮನದಲ್ಲಿ ಭಾರಿ ಸಂದೇಹಗಳು ಮನೆಮಾಡಿವೆ. WhatsApp ಬಳಕೆದಾರರ ಮಾಹಿತಿ ಸೋರಿಕೆಯಾಗುವ ಸಾಧ್ಯತೆಯನ್ನು ಬಳಕೆದಾರರು ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ Zee News ಈ ಕುರಿತು ವಾಟ್ಸ್ ಆಪ್ ಅನ್ನು ಸಂಪರ್ಕಿಸಿದ್ದು, ಸಂಸ್ಥೆ ತನ್ನ ಹೊಸ ಪಾಲಸಿಯ ಕುರಿತು ಮಾಹಿತಿ ನೀಡಿದೆ.
WhatsApp ಪಾಲಸಿ ಬದಲಾಯಿಸಿದ್ದಾದರು ಏಕೆ?
ಈ ಕುರಿತು ಹೇಳಿಕೆ ನೀಡಿರುವ ವಾಟ್ಸ್ ಆಪ್. ವಾಟ್ಸ್ ಆಪ್ ನ ಬಿಸಿನೆಸ್ ವಿಜನ್ ಭಾಗವಾಗಿ ಸಣ್ಣ ಉದ್ಯಮಗಳನ್ನು ಉತ್ತಮವಾಗಿ ಸಕ್ರಿಯಗೊಳಿಸಲು ನಾವು ನಮ್ಮ ಸೇವಾ ನಿಯಮಗಳು ಮತ್ತು ಗೌಪ್ಯತೆ ನೀತಿಯನ್ನು ನವೀಕರಿಸುತ್ತಿದ್ದೇವೆ ಎಂದು ನಾವು ಅಕ್ಟೋಬರ್ 2020 ರಲ್ಲಿ ಹೇಳಿದ್ದೇವೆ. ಸಣ್ಣ ಉದ್ಯಮಗಳಿಗೆ ಸಹಾಯ ಮಾಡಲು ನಾವು ಹೊಸ ಭದ್ರತಾ ನಿಯಮಗಳನ್ನು ರಚಿಸಿದ್ದೇವೆ. ಆದರೆ, ಈ ರೀತಿ ಮಾಡುವುದು ಟೆಕ್ ಉದ್ಯಮದಲ್ಲಿ ಸಾಮಾನ್ಯವಾಗಿದೆ" ಎಂದು ಹೇಳಿದೆ.
ಇದನ್ನು ಓದಿ- Physical Safety Keyಯಿಂದ ನಿಮ್ಮ Facebook ಮಾಹಿತಿ ಇನ್ನಷ್ಟು ಸುರಕ್ಷಿತವಾಗಲಿದೆ
ಬಳಕೆದಾರರ ಖಾಸಗಿತನತ್ವದ ಕುರಿತು ವಾಟ್ಸ್ ಆಪ್ ಹೇಳಿದ್ದೇನು?
ಬಳಕೆದಾರರ ಖಾಸಗಿತನದ ಕುರಿತು ಹೇಳಿಕೆ ನೀಡಿರುವ ವಾಟ್ಸ್ ಆಪ್, ಬಳಕೆದಾರರ ಖಾಸಗಿತನತ್ವವನ್ನು ಗೌರವಿಸುವುದು ಹಾಗೂ ರಕ್ಷಣೆ ಮಾಡುವುದು ನಮ್ಮ DNAನಲ್ಲಿದೆ. ವಾಟ್ಸ್ ಆಪ್ ಆರಂಭಗೊಂಡಾಗಿನಿಂದಲೂ ಇದುವರೆಗೆ ನಾವು ನಮ್ಮ ಸೇವೆಗಳನ್ನು ಬಲವಾದ ಗೌಪ್ಯತೆಯ ಸಿದ್ಧಾಂತಗಳೊಂದಿಗೆ ರೂಪಿಸಿದ್ದೇವೆ ಎಂದಿದೆ.
ಬಳಕೆದಾರರ ಮಾಹಿತಿ ಸುರಕ್ಷತೆಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗಿದೆ
"ನಮ್ಮ ಷರತ್ತುಗಳು ಹಾಗೂ ಪ್ರೈವಸಿ ಪಾಲಸಿಗಳಲ್ಲಿ ಈ ಕುರಿತು ಅಧಿಕ ಮಾಹಿತಿ ನೀಡಲಾಗಿದೆ. ನಾವು ಬಳಕೆದಾರರ ದತ್ತಾಂಶ ಹಾಗೂ ಪ್ರೈವೆಸಿಗಾಗಿ ನಮ್ಮ ಬದ್ಧತೆಯನ್ನು ಇದರಲ್ಲಿ ಹೇಳಿಕೊಂಡಿದ್ದೇವೆ. ಹೊಸ ಪಾಲಸಿಯಲ್ಲಿ ಬಳಕೆದಾರರ ವೈಯಕ್ತಿಕ ಮಾಹಿತಿಯ ಸುರಕ್ಷತೆಯ ಬಗ್ಗೆ ಸಂಪೂರ್ಣ ವಿವರ ನೀಡಲಾಗಿದೆ.
ಇದನ್ನು ಓದಿ-Facebook Bug: ಹಲವು Instagram ಬಳಕೆದಾರರ ವೈಯಕ್ತಿಕ ಮಾಹಿತಿ ಸೋರಿಕೆ
ಬಿಸಿನೆಸ್ ಜೊತೆಗೆ ಉತ್ತಮ ಸಂವಹನ
"ಹಲವು ಉದ್ಯಮಗಳು ತಮ್ಮ ಗ್ರಾಹಕರ ಜೊತೆಗೆ ಸಂವಹನ ನಡೆಸಲು ವಾಟ್ಸ್ ಆಪ್ ಮೇಲೆ ಭರವಸೆ ಇಡುತ್ತಾರೆ. ವಾಟ್ಸ್ ಆಪ್ ಮೂಲಕ ತಮ್ಮ ಸಂವಹನವನ್ನು ಉತ್ತಮಗೊಳಿಸಲು ಫೇಸ್ಬುಕ್ (Facebook) ಅಥವಾ ಯಾವುದೇ ಥರ್ಡ್ ಪಾರ್ಟಿಗಳನ್ನೂ ಬಳಸುವವರ ಉದ್ಯಮಗಳ ಜೊತೆಗೆ ನಾವು ಕಾರ್ಯನಿರ್ವಹಿಸುತ್ತೇವೆ. ಫೇಸ್‌ಬುಕ್ ಕಂಪನಿಯ ಭಾಗವಾಗಿ, ವಾಟ್ಸಾಪ್ ಫೇಸ್‌ಬುಕ್‌ನ ಅಪ್ಲಿಕೇಶನ್‌ಗಳು ಮತ್ತು ಉತ್ಪನ್ನಗಳ ಅನುಭವಗಳು ಮತ್ತು ಏಕೀಕರಣವನ್ನು ನೀಡುತ್ತದೆ. " ಎಂದು ವಾಟ್ಸ್ ಆಪ್ ಹೇಳಿದೆ .
ಫೇಸ್ ಬುಕ್ ಗೆ ಯಾಕೆ ದತ್ತಾಂಶ ಒದಗಿಸಲಾಗುತ್ತಿದೆ?
ಗೌಪ್ಯತೆಯ ನೀತಿ ಮತ್ತು ಷರತ್ತುಗಳು ಜಾರಿಗೆ ಬರಲು ಇನ್ನೂ ಒಂದು ತಿಂಗಳು ಕಾಲಾವಕಾಶ ಇದೆ. ಇದಲ್ಲದೆ, ವ್ಯಾಪಾರ ಸೇವಾ ಪೂರೈಕೆದಾರರಾಗಿ ಫೇಸ್‌ಬುಕ್‌ನ ಆಯ್ಕೆಯನ್ನು ಒದಗಿಸುವ ಸಂಬಂಧದಲ್ಲಿ, ಇದು ಈಗ ಬಳಕೆದಾರರಿಗೆ / ವ್ಯವಹಾರಗಳಿಗೆ ಹೆಚ್ಚಿನ ಆಯ್ಕೆಗಳನ್ನು ನೀಡುತ್ತದೆ. ವಾಟ್ಸಾಪ್ ಡೇಟಾವನ್ನು ಸುರಕ್ಷಿತವಾಗಿಡಲು ಫೇಸ್‌ಬುಕ್ ನೀಡಲಾಗುತ್ತಿದೆ. ಬಳಕೆದಾರರು ಬಯಸಿದಾಗಲೆಲ್ಲಾ ವ್ಯವಹಾರವನ್ನು ನಿಲ್ಲಿಸಬಹುದು" ಎಂದು ವಾಟ್ಸ್ ಆಪ್ ಹೇಳಿಕೊಂಡಿದೆ.
ಇದನ್ನು ಓದಿ-ನಕಲಿ ಖಾತೆಗಳ ಮೇಲೆ ಭಾರಿ ಕ್ರಮ ಕೈಗೊಂಡ Facebook, ಎಷ್ಟು ಪೇಜ್ ತೆಗೆದುಹಾಕಿದೆ ಇಲ್ಲಿ ತಿಳಿದುಕೊಳ್ಳಿ
ನಿಮ್ಮ ಯಾವ ಯಾವ ಮಾಹಿತಿಗಳನ್ನು ವಾಟ್ಸ್ ಆಪ್ ಪಡೆಯಲಿದೆ?
ವಾಟ್ಸ್ ಆಪ್ ನ ನೂತನ ಗೌಪ್ಯತಾ ನೀತಿ ಹಾಗೂ ಷರತ್ತುಗಳ ಪ್ರಕಾರ ಕಂಪನಿ ನಿಮ್ಮ ಡಿವೈಸ್ ಐಡಿ, ಯುಸರ್ ಐಡಿ, ಫೋನ್ ನಂಬರ್, ಇ-ಮೇಲ್ ಐಡಿ, ಎಲ್ಲಾ ಕಾಂಟಾಕ್ಟ್ ಗಳ ಮಾಹಿತಿ, ಮೊಬೈಲ್ ನಿಂದ ನಡೆಸಲಾಗುವ ವಹಿವಾಟಿನ ಮಾಹಿತಿ, ಲೋಕೇಶನ್ ನಂತನ ಪ್ರಮುಖ ಮಾಹಿತಿ ಪಡೆದುಕೊಳ್ಳುತ್ತಿದೆ. ಈ ಮಾಹಿತಿಗಳನ್ನು ಫೇಸ್ಬುಕ್ ಹಾಗೂ ಇನ್ಸ್ಟಾಗ್ರಾಮ್ ಜೊತೆಗೆ ಹಂಚಿಕೊಳ್ಳಲಾಗುವುದು ಎಂದೂ ಕೂಡ ನೂತನ ನೀತಿಯಲ್ಲಿ ಸ್ಪಷ್ಟಪಡಿಸಲಾಗಿದೆ.
ಫೆಬ್ರುವರಿ 8 ರವರೆಗೆ ಕಾಲಾವಕಾಶ ನೀಡಲಾಗಿದೆ
ಒಂದು ವೇಳೆ ನಿಮಗೂ ಕೂಡ ವಾಟ್ಸ್ ಆಪ್ ಹೊಸ ನೀತಿಯ ಕುರಿತು ನೋಟಿಫಿಕೆಶನ್ ಬಂದಿದ್ದರೆ ನೀವು ಅದನ್ನು ಒಪ್ಪಿಕೊಳ್ಳಲೇಬೇಕು. ಪ್ರಸ್ತುತ ಬಳಕೆದಾರರಿಗೆ Accept Later ಆಯ್ಕೆ ಕೂಡ ನೀಡಲಾಗಿದೆ. ಆದರೆ ವಾಟ್ಸ್ ಆಪ್ ತನ್ನ ಹೊಸ ನೀತಿಯನ್ನು ಒಪ್ಪಿಕೊಳ್ಳಲು ಬಳಕೆದಾರರಿಗೆ ಫೆಬ್ರುವರಿ 8ರವರೆಗೆ ಕಾಲಾವಕಾಶ ನೀಡಿದೆ. ಫೆಬ್ರುವರಿ 8ರ ಬಳಿಕ ನೂತನ ನೀತಿಯನ್ನು ಒಪ್ಪಿಕೊಳ್ಳದ ಬಳಕೆದಾರರು ವಾಟ್ಸ್ ಆಪ್ ಬಳಸುವ ಹಾಗಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.