WhatsApp New Feature: WhatsApp ತನ್ನ ಬಳಕೆದಾರರಿಗೆ ಅನುಕೂಲವಾಗುವಂತೆ ಹೊಸ ಹೊಸ ವೈಶಿಷ್ಟ್ಯಗಳನ್ನು ಹೊರ ತರುತ್ತಲೇ ಇದೆ. ಈ ವರ್ಷ ಕೂಡಾ ವಾಟ್ಸ್ ಆಪ್ ಹಲವು ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುತ್ತಿದೆ.  ಈ ಸಾಲಿನಲ್ಲಿ WhatsApp Android ಟ್ಯಾಬ್ಲೆಟ್‌ಗಳಲ್ಲಿ ಹೊಸ  ಸೈಡ್ ಬೈ ಸೈಡ್ ವೈಶಿಷ್ಟ್ಯವನ್ನು ಹೊರತರುತ್ತಿದೆ.   Wabetainfo ಮಾಹಿತಿ ಪ್ರಕಾರ, ಬಳಕೆದಾರರು ತಮ್ಮ ಚಾಟ್ ಗಳ ಟ್ರ್ಯಾಕ್ ಅನ್ನು ಕಳೆದುಕೊಳ್ಳದೆ ಚಾಟಿಂಗ್ ಮಧ್ಯೆ ಸ್ವಿಚ್ ಆಗುವ ಅವಕಾಶವನ್ನು ಈ ವೈಶಿಷ್ಟ್ಯ ನೀಡುತ್ತದೆ. ಇದು Android ಟ್ಯಾಬ್ಲೆಟ್‌ಗಳಲ್ಲಿ WhatsApp ಇಂಟರ್ ಫೇಸ್ ನಲ್ಲಿ ಹೆಚ್ಚಿನ ನಿಯಂತ್ರಣವನ್ನು ನೀಡುತ್ತದೆ.


COMMERCIAL BREAK
SCROLL TO CONTINUE READING

ಈ ಹೊಸ ವೈಶಿಷ್ಟ್ಯ ಏನು ? : 
ಬಳಕೆದಾರರು WhatsApp ಸೆಟ್ಟಿಂಗ್‌ಗಳಿಗೆ ಹೋಗಿ ಮತ್ತು ಚಾಟ್‌ಗಳಲ್ಲಿ ಲಭ್ಯವಿರುವ ಆಯ್ಕೆಯನ್ನು ಟಾಗಲ್ ಮಾಡುವ ಮೂಲಕ ಸೈಡ್ ಬೈ ಸೈಡ್  ವ್ಯೂ ಸ್ಕ್ರೀನ್ ಅನ್ನು ನಿಷ್ಕ್ರಿಯಗೊಳಿಸಬಹುದು. ಸೈಡ್ ಬೈ ಸೈಡ್ ವ್ಯೂ ಸ್ಕ್ರೀನ್ ಅನ್ನು ಸ್ಪಿಲ್ಟ್ ಮಾಡುತ್ತದೆ. ಇದರಿಂದಾಗಿ ಪ್ರತಿ ಚಾಟ್‌ಗೆ ಒಂದು ಸಣ್ಣ  ಏರಿಯಾ ಸಿಗುತ್ತದೆ. ಸಣ್ಣ ಸ್ಕ್ರೀನ್ ಹೊಂದಿರುವ ಫೋನ್ ಗಳಲ್ಲಿ ಈ ವೈಶಿಷ್ಟ್ಯ ವಿಶೇಷವಾಗಿರಲಿದೆ ಮತ್ತು ಅನುಕೂಲಕರವಾಗಿರಲಿದೆ. 


ಇದನ್ನೂ ಓದಿ : Inverter Bulb: ಕರೆಂಟ್ ಇಲ್ಲದೆಯೇ 6 ಗಂಟೆ ಉರಿಯುತ್ತೇ ಈ ಬಲ್ಬ್, ಭಾರಿ ಬೆಳಕು ಕೂಡ ನೀಡುತ್ತದೆ!


ಸೈಡ್ ಬೈ ಸೈಡ್  ವ್ಯೂ : 
ಚಾಟ್ ಮಾಡಲು ದೊಡ್ಡ ಇಂಟರ್ಫೇಸ್ ಹೊಂದಲು, ಬಳಕೆದಾರರು ಅಪ್ಲಿಕೇಶನ್‌ನಲ್ಲಿ ಸೈಡ್ ಬೈ ಸೈಡ್  ವ್ಯೂ ಸ್ಕ್ರೀನ್ ಅನ್ನು ನಿಷ್ಕ್ರಿಯಗೊಳಿಸಬಹುದು. ಪ್ಲಾಟ್‌ಫಾರ್ಮ್‌ನಲ್ಲಿ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಚಾಟ್ ಮಾಡುವಾಗ ಬಳಕೆದಾರರು ಯಾವುದೇ ರೀತಿಯಾದೆ ತಡೆಗಳಿಲ್ಲದೆ, ಸರಾಗವಾಗಿ ಚಾಟ್ ಮಾಡುತ್ತಾ ಹೋಗಲು ಇದು ಅವಕಾಶ ಕಲ್ಪಿಸುತ್ತದೆ. ಇದಲ್ಲದೇ ಮುಂದಿನ ದಿನಗಳಲ್ಲಿ ಇನ್ನಷ್ಟು ಮಂದಿಗೆ ಈ ಫೀಚರ್ ಆರಂಭಿಸಲಾಗುವುದು ಎಂದು ವರದಿಯಲ್ಲಿ ಹೇಳಲಾಗಿದೆ.


ನಾಲ್ಕು ಡಿವೈಸ್ ಗಳಲ್ಲಿ ಲಿಂಕ್ ಮಾಡಬಹುದು : 
ಏತನ್ಮಧ್ಯೆ, ಬಳಕೆದಾರರು ಈಗ ತನ್ನ ಬಹು-ಸಾಧನ ಲಾಗಿನ್ ವೈಶಿಷ್ಟ್ಯದ ಮೂಲಕ ಒಂದಕ್ಕಿಂತ ಹೆಚ್ಚು ಫೋನ್‌ಗಳಲ್ಲಿ ಒಂದೇ WhatsApp ಖಾತೆಯನ್ನು ಬಳಸಲು ಸಾಧ್ಯವಾಗುತ್ತದೆ ಎಂದು WhatsApp ಘೋಷಿಸಿದೆ. ಬಳಕೆದಾರರು ಈಗ ತಮ್ಮ ಫೋನ್ ಅನ್ನು 4 ಹೆಚ್ಚುವರಿ ಸಾಧನಗಳಲ್ಲಿ ಲಿಂಕ್ ಮಾಡಬಹುದು. ಈ  ವೈಶಿಷ್ಟ್ಯವನ್ನು ಜಗತ್ತಿನಾದ್ಯಂತ ಬಳಕೆದಾರರು ಬಳಸಬಹುದಾಗಿದೆ. ಮುಂಬರುವ ವಾರಗಳಲ್ಲಿ ಎಲ್ಲರಿಗೂ ಈ ವೈಶಿಷ್ಟ್ಯ ಲಭ್ಯವಾಗಲಿದೆ ಎಂದು ಕಂಪನಿ ತಿಳಿಸಿದೆ. 


ಇದನ್ನೂ ಓದಿ : Neeta Ambani ಬಳಿ ಇದೆ ವಿಶ್ವದ ಅತ್ಯಂತ ದುಬಾರಿ ಸ್ಮಾರ್ಟ್ ಫೋನ್! ಬೆಲೆ ಕೇಳಿದ್ರೆ ದಂಗಾಗುವಿರಿ


ಮೆಸೇಜ್ ಎಡಿಟ್ ಆಯ್ಕೆ : 
ಇನ್ನು WhatsAppನಲ್ಲಿ ಕಳುಹಿಸಿದ ಸಂದೇಶಗಳನ್ನು ಎಡಿಟ್‌ ಮಾಡುವ ಆಯ್ಕೆಯನ್ನು ನೀಡುವ ವೈಶಿಷ್ಟ್ಯದ ಮೇಲೇ ಕೂಡಾ ಕಂಪನಿ ಕಾರ್ಯನಿರ್ವಹಿಸುತ್ತಿದೆ.  ಕಳುಹಿಸಿರುವ ಸಂದೇಶಗಳನ್ನು ಎಡಿಟ್‌ ಮಾಡುವ ಸಾಮರ್ಥ್ಯವನ್ನು ತರುವಲ್ಲಿ ಕಂಪನಿ ಕಾರ್ಯನಿರ್ವಹಿಸುತ್ತಿದೆ. ಈ ವೈಶಿಷ್ಟ್ಯದ ಮೂಲಕ ಮೆಸೇಜ್ ಕಳುಹಿಸಿದ 15 ನಿಮಿಷಗಳಲ್ಲಿ ಅದನ್ನು ಎಡಿಟ್‌ ಮಾಡಲು ಸಾಧ್ಯವಾಗುತ್ತದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. 


ಈ ವೈಶಿಷ್ಟ್ಯವು ಇತ್ತೀಚಿನ ಆವೃತ್ತಿಯ ಫೋನ್ ಗಳಲ್ಲಿ ಮಾತ್ರ ರನ್ ಆಗುತ್ತದೆ. ಇತ್ತೀಚಿನ ಆವೃತ್ತಿಯ ಫೋನ್ ಗಳು ಮಾತ್ರ ಎಡಿಟ್‌ ಮೆಸೇಜ್ ಆಯ್ಕೆಯನ್ನು ಪಡೆಯುತ್ತದೆ. ಐಒಎಸ್ ಬಳಕೆದಾರರು ಈ ಸೌಲಭ್ಯವನ್ನು ಮೊದಲು ಪಡೆಯಬಹುದು ಎನ್ನಲಾಗಿದೆ. ನಂತರ ಆಂಡ್ರಾಯ್ಡ್ ಬಳಕೆದಾರರಿಗೆ ಈ ವೈಶಿಷ್ಟ್ಯ ಲಭ್ಯವಾಗಿರಲಿದೆ.


ಇದನ್ನೂ ಓದಿ : Cheapest AC: ಗ್ರಾಹಕರು ಮುಗಿಬಿದ್ದು ಖರೀದಿಸುತ್ತಿರುವ ಈ AC ಬೆಲೆ ಭಾರೀ ಕಡಿಮೆ: ಪದಗಳಿಗೆ ನಿಲುಕದ ವೈಶಿಷ್ಟ್ಯ! ಇಂದೇ ಖರೀದಿಸಿ


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ