ಇ-ಕಾಮರ್ಸ್ ವೆಬ್‌ಸೈಟ್‌ನಲ್ಲಿ ಐಫೋನ್, ಏರ್‌ಪಾಡ್‌ ಆರ್ಡರ್ ಮಾಡಿದ್ದ ವ್ಯಕ್ತಿಗೆ ಡೆಲಿವರಿ ಆಗಿದ್ದೇನು ಗೊತ್ತಾ?

ಆನ್ಲೈನ್ನಲ್ಲಿ ಏನನ್ನೋ ಆರ್ಡರ್ ಮಾಡಿದರೆ, ಮತ್ತಾವುದೋ ವಸ್ತುಗಳನ್ನು ಡೆಲಿವರಿ ಮಾಡುವ ಹಲವು ಪ್ರಕರಣಗಳ ಬಗ್ಗೆ ನೀವು ಓದಿರಬಹುದು. ಇದೀಗ ಮತ್ತೊಮ್ಮೆ ಅಂತಹದ್ದೇ ಶಾಕಿಂಗ್ ಪ್ರಕರಣವೊಂದು ಮುನ್ನಲೆಗೆ ಬಂದಿದೆ. ಇಲ್ಲಿ  ಐಫೋನ್‌ಗಳು ಮತ್ತು ಏರ್‌ಪಾಡ್‌ಗಳನ್ನು ಆರ್ಡರ್ ಮಾಡಿದ್ದ ವ್ಯಕ್ತಿಗೆ ಡೆಲಿವರಿ ಏಜೆಂಟ್ ಶಾಕಿಂಗ್ ವಸ್ತುಗಳನ್ನು ಡೆಲಿವರಿ ಮಾಡಿದ್ದಾನೆ. ಏನೀ ಪ್ರಕರಣ, ಇಲ್ಲಿದೆ ಸಂಪೂರ್ಣ ಮಾಹಿತಿ. 

Written by - Yashaswini V | Last Updated : Apr 28, 2023, 02:58 PM IST
  • ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಂತಹ ಪ್ರಸಿದ್ಧ ಇ-ಕಾಮರ್ಸ್ ವೆಬ್‌ಸೈಟ್‌ಗಳಲ್ಲಿ ಐಫೋನ್ ಆರ್ಡರ್ ಮಾಡಿದರೆ ಸಾಬೂನನ್ನು ಡೆಲಿವರಿ ಮಾಡಿರುವಂತಹ ಪ್ರಕರಣಗಳನ್ನು ನೀವು ನೋಡಿದ್ದೀರಿ.
  • ಇದೀಗ ಅಂತಹದ್ದೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.
  • ಈ ಹೊಸ ಪ್ರಕರಣದಲ್ಲಿ ಐಫೋನ್‌, ಏರ್‌ಪಾಡ್‌ ಆರ್ಡರ್ ಮಾಡಿದ್ದ ಗ್ರಾಹಕರಿಗೆ ಅಮೆಜಾನ್ ಡೆಲಿವರಿ ಏಜೆಂಟ್ ನೀಡಿದ್ದೇನು ಎಂದು ತಿಳಿದರೆ ನೀವು ನಿಜಕ್ಕೂ ಶಾಕ್ ಆಗುತ್ತೀರಿ.
ಇ-ಕಾಮರ್ಸ್ ವೆಬ್‌ಸೈಟ್‌ನಲ್ಲಿ ಐಫೋನ್,  ಏರ್‌ಪಾಡ್‌ ಆರ್ಡರ್ ಮಾಡಿದ್ದ ವ್ಯಕ್ತಿಗೆ ಡೆಲಿವರಿ ಆಗಿದ್ದೇನು ಗೊತ್ತಾ?  title=

ನವದೆಹಲಿ: ಈಗಂತೂ ತಂತ್ರಜ್ಞಾನದ ಪ್ರಗತಿಯೊಂದಿಗೆ ನಮ್ಮ ಬಹುತೇಕ ಕೆಲಸಗಳು ಸುಲಭಗೊಂಡಿವೆ. ಮೊದಲೆಲ್ಲಾ ಯಾವುದೇ ವಸ್ತುವನ್ನು ಕೊಳ್ಳಬೇಕಾದರೂ ನಾವೇ ಸ್ವತಃ ಮಾರುಕಟ್ಟೆಗೆ ಹೋಗಿ ತರಬೇಕಿತ್ತು. ಆದರೆ, ಈ ತಂತ್ರಜ್ಞಾನ ಯುಗದಲ್ಲಿ ಯಾವುದೇ ಕೆಲಸಗಳನ್ನು ಕೂಡ ಕುಳಿತಲ್ಲಿಯೇ ಮಾಡಬಹುದು. ಇ-ಕಾಮರ್ಸ್ ವೆಬ್‌ಸೈಟ್‌ಗಳ ಮೂಲಕ ಯಾವುದೇ ವಸ್ತುವನ್ನು ಕೂಡ ಮನೆ ಬಾಗಿಲಿಗೆ ತರಿಸಿಕೊಳ್ಳಬಹುದು. 

ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಂತಹ  ಪ್ರಸಿದ್ಧ ಇ-ಕಾಮರ್ಸ್ ವೆಬ್‌ಸೈಟ್‌ಗಳಲ್ಲಿ ಐಫೋನ್ ಆರ್ಡರ್ ಮಾಡಿದರೆ ಸಾಬೂನನ್ನು ಡೆಲಿವರಿ ಮಾಡಿರುವಂತಹ ಪ್ರಕರಣಗಳನ್ನು ನೀವು ನೋಡಿದ್ದೀರಿ. ಇದೀಗ ಅಂತಹದ್ದೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಈ ಹೊಸ ಪ್ರಕರಣದಲ್ಲಿ ಐಫೋನ್‌, ಏರ್‌ಪಾಡ್‌ ಆರ್ಡರ್ ಮಾಡಿದ್ದ ಗ್ರಾಹಕರಿಗೆ ಅಮೆಜಾನ್ ಡೆಲಿವರಿ ಏಜೆಂಟ್ ನೀಡಿದ್ದೇನು ಎಂದು ತಿಳಿದರೆ ನೀವು ನಿಜಕ್ಕೂ ಶಾಕ್ ಆಗುತ್ತೀರಿ.
 
ಗುರುಗ್ರಾಮ್‌ನಿಂದ ಹೊಸ ಪ್ರಕರಣವೊಂದು ಮುನ್ನಲೆಗೆ ಬಂದಿದ್ದು ಇಲ್ಲಿ ಐಫೋನ್‌ ಮತ್ತು ಏರ್‌ಪಾಡ್‌ಗಳನ್ನು ಆರ್ಡರ್ ಮಾಡಿದ್ದ ವ್ಯಕ್ತಿಗೆ  ಅಮೆಜಾನ್ ಡೆಲಿವರಿ ಏಜೆಂಟ್ ಡಮ್ಮಿ ಐಫೋನ್‌ ಮತ್ತು ಏರ್‌ಪಾಡ್‌ಗಳನ್ನು ಡೆಲಿವರಿ ಮಾಡಿದ್ದಾನೆ. ಈ ಕುರಿತಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. 

ಇದನ್ನೂ ಓದಿ- Part Time Job Scam: ಯೂಟ್ಯೂಬ್ ವೀಡಿಯೊ ಲೈಕ್ ಮಾಡಿ, ಹಣ ಗಳಿಸಿ ಎಂಬ ಮೋಸದ ಜಾಲ!

ವಾಸ್ತವವಾಗಿ, ಇಲ್ಲಿ ಗ್ರಾಹಕನೋರ್ವ ಐಫೋನ್‌ ಮತ್ತು ಏರ್‌ಪಾಡ್‌ಗಳನ್ನು ಜನಪ್ರಿಯ ಇ-ಕಾಮರ್ಸ್ ವೆಬ್‌ಸೈಟ್ ಅಮೆಜಾನ್‌ನಿಂದ ಆರ್ಡರ್ ಮಾಡಿದ್ದಾರೆ. ಅಮೆಜಾನ್ ಡೆಲಿವರಿ ಏಜೆಂಟ್ ಗ್ರಾಹಕರಿಗೆ ನೀಡಬೇಕಿದ್ದ ಐಫೋನ್‌ಗಳು ಮತ್ತು ಏರ್‌ಪಾಡ್‌ಗಳ ಬದಲಿಗೆ ತನ್ನ ಡಮ್ಮಿ ಫೋನ್‌ನೊಂದಿಗೆ ಬದಲಾಯಿಸಿದ್ದಾನೆ. 

ರವಿ ಅವರು ಅಮೆಜಾನ್‌ನಿಂದ  ಐಫೋನ್‌ಗಳು ಮತ್ತು ಏರ್‌ಪಾಡ್‌ಗಳ ಪಾರ್ಸೆಲ್‌ಗೆ ಆರ್ಡರ್ ಮಾಡಿದ್ದು, ಅದನ್ನು ಡೆಲಿವರಿ ಏಜೆಂಟ್ ಲಲಿತ್ ಎಂಬವರಿಗೆ ತಲುಪಿಸಲು ಕಳುಹಿಸಲಾಗಿತ್ತು. ಮಾರ್ಚ್ 27 ರಂದು ಲಲಿತ್ ರವಿ ಅವರ ಗ್ರಾಹಕರಿಗೆ ಹತ್ತು ಐಫೋನ್‌ಗಳು ಮತ್ತು ಏರ್‌ಪಾಡ್‌ಗಳನ್ನು ತಲುಪಿಸಿದ್ದರು. ಆದರೆ ನಂತರ ರವಿ ಅವರು ಗ್ರಾಹಕರನ್ನು ಸಂಪರ್ಕಿಸಲು ಸಾಧ್ಯವಿಲ್ಲ ಎಂದು ಹೇಳಿ ಆದೇಶವನ್ನು ರದ್ದುಗೊಳಿಸಿದ್ದರು. 

ಇದನ್ನೂ ಓದಿ- ChatGPT ಸಹಾಯದಿಂದ CV ತಯಾರಿಸಿದ ವ್ಯಕ್ತಿಗೆ ಆಫರ್ ಗಳ ಸುರಿಮಳೆಯಂತೆ !

ಈ ಮಧ್ಯೆ ಆರೋಪಿ ಲಲಿತ್ ಪಾರ್ಸಲ್ ನಲ್ಲಿ ಐಫೋನ್‌ಗಳ ಜಾಗದಲ್ಲಿ ತನ್ನ ಡಮ್ಮಿ ಫೋನ್‌ಗಳನ್ನು ಬದಲಿಸಿ ರವಾನಿಸಿದ್ದಾನೆ. ಪಾರ್ಸೆಲ್ ಕಂಪನಿಯವರು ಲಲಿತ್ ಡೆಲಿವರಿ ಮಾಡಿದ ಪಾರ್ಸೆಲ್ ಪರಿಶೀಲಿಸಿದಾಗ ಅದರಲ್ಲಿ ಟ್ಯಾಂಪರ್ ಮಾಡಿರುವುದು ಪತ್ತೆಯಾಗಿದೆ. ಪಾರ್ಸೆಲ್ ಅನ್ನು ತೆರೆದಾಗ, ನಿಜವಾದ ಐಫೋನ್‌ಗಳ ಬದಲಿಗೆ, ಅವರ ಡಮ್ಮಿ ಫೋನ್‌ಗಳನ್ನು ಅದರಲ್ಲಿ ಇರಿಸಲಾಗಿತ್ತು ಎಂಬುದು ಕಂಡುಬಂದಿದೆ. 

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುಗ್ರಾಮ್ ಪೊಲೀಸರು ಡೆಲಿವರಿ ಏಜೆಂಟ್ ಲಲಿತ್ ವಿರುದ್ಧ ವಂಚನೆಗಾಗಿ ಐಪಿಸಿ ಸೆಕ್ಷನ್ 420 ಮತ್ತು ಸೆಕ್ಷನ್ 408 ರ ಅಡಿಯಲ್ಲಿ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಿದ್ದಾರೆ. ಸದ್ಯ ಲಲಿತ್ ತಲೆಮರೆಸಿಕೊಂಡಿದ್ದು ಪೊಲೀಸರು ಈತನಿಗಾಗಿ ಶೋಧಕಾರ್ಯ ಮುಂದುವರೆಸಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News