ಇನ್ನು ತಪ್ಪಿಯೂ ನಿಮ್ಮ WhatsApp ಮೇಲೆ ಯಾರೂ ಕಣ್ಣಿಡುವುದು ಸಾಧ್ಯವಾಗುವುದಿಲ್ಲ! ಬಂದಿದೆ ಮೂರು ಹೊಸ ವೈಶಿಷ್ಟ್ಯ
WhatsApp Latest Features : WhatsApp ಮೂರು ಹೊಸ ವೈಶಿಷ್ಟ್ಯಗಳನ್ನು ಹೊರತರುತ್ತಿದೆ. ಈ ಮೂರೂ ವೈಶಿಷ್ಟ್ಯಗಳ ಟೆಸ್ಟಿಂಗ್ ನಡೆಯುತ್ತಿದೆ.
ಬೆಂಗಳೂರು : ಚಾಟಿಂಗ್ ಪ್ಲಾಟ್ಫಾರ್ಮ್ WhatsApp ವಿಶ್ವದ ಅತ್ಯಂತ ಜನಪ್ರಿಯ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳಲ್ಲಿ ಒಂದಾಗಿದೆ. WhatsApp ತನ್ನ ಬಳಕೆದಾರರಿಗೆ ಆಕರ್ಷಕ ಮತ್ತು ಹೊಸ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುತ್ತಲೇ ಬಂದಿದೆ. ಮೂರು ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸಲು ಕಂಪನಿ ಮುಂದಾಗಿದೆ.
ಬೀಟಾ ರಿಲೀಸ್ ಚಾನಲ್ನಲ್ಲಿ ಟೆಸ್ಟರ್ಸ್ ಗಾಗಿ WhatsApp ಮೂರು ಹೊಸ ವೈಶಿಷ್ಟ್ಯಗಳನ್ನು ಹೊರತರುತ್ತಿದೆ. ಮೊದಲ ವೈಶಿಷ್ಟ್ಯವು iOSನಲ್ಲಿ ನಿರ್ದಿಷ್ಟ ಚಾಟ್ಗಳನ್ನು ಲಾಕ್ ಮಾಡಲು ಅನುಮತಿಸುತ್ತದೆ. ಅಪ್ಲಿಕೇಶನ್ ತನ್ನ ಆಂಡ್ರಾಯ್ಡ್ ಬಳಕೆದಾರರಿಗೆ WhatsApp ಸ್ಟೇಟಸ್ ಅನ್ನು ಫೇಸ್ಬುಕ್ ಸ್ನೇಹಿತರೊಂದಿಗೆ ಹಂಚಿಕೊಳ್ಳುವ ಸಾಮರ್ಥ್ಯವನ್ನು ಕೂಡಾ ಪರೀಕ್ಷೆ ನಡೆಸುತ್ತಿದೆ. ಬೀಟಾ ಟೆಸ್ಟರ್ಸ್ ಅಗತ್ಯವಿರುವಂತೆ iOS ಅಪ್ಲಿಕೇಶನ್ನ ಇತ್ತೀಚಿನ ಬೀಟಾ ಆವೃತ್ತಿಯಲ್ಲಿ ಇತ್ತೀಚೆಗೆ ಕಳುಹಿಸಿದ ವಾಯ್ಸ್ ನೋಟ್ ಗಳ ಟ್ರಾನ್ಸ್ ಕ್ರಿಪ್ಶನ್ ವೈಶಿಷ್ಟ್ಯದ ಮೇಲೆ ಕೂಡಾ ಟೆಸ್ಟಿಂಗ್ ನಡೆಯುತ್ತಿದೆ. ಹೊಸ ವರದಿಯ ಪ್ರಕಾರ, ವಾಯ್ಸ್ ನೋಟ್ ಗಳ ಟ್ರಾನ್ಸ್ ಕ್ರಿಪ್ಶನ್ ವೈಶಿಷ್ಟ್ಯಕ್ಕಾಗಿ iOS 16 ಅವಶ್ಯಕವಾಗಿದೆ.
ಇದನ್ನೂ ಓದಿ : ಸೂಪರ್ ಬೈಕ್ ಲಾಂಚ್ ಮಾಡಿದ Ducati India! ಎಂಜಿನ್, ಬೆಲೆ, ವೈಶಿಷ್ಟ್ಯ ಎಲ್ಲವೂ ಅದ್ಭುತ !
ಲಾಕ್ಡ್ ಚ್ಯಾಟ್ ಫೀಚರ್ :
ನಿರ್ದಿಷ್ಟ ಕಾಂಟಾಕ್ಟ್ ನಲ್ಲಿರುವ ವ್ಯಕ್ತಿಯೊಂದಿಗೆ ನೀವು ಮಾಡುತ್ತಿದೀರಿ ಎನ್ನುವುದನ್ನು ಬೇರೆಯವರಿಂದ ಮರೆಮಾಡಲು ಮತ್ತು ಹೆಚ್ಚಿನ ಭದ್ರತೆಯನ್ನು ನೀಡುವ ಸಲುವಾಗಿ ಲಾಕ್ಡ್ ಚ್ಯಾಟ್ ಫೀಚರ್ ವೈಶಿಷ್ಟ್ಯವನ್ನು ಬಳಸಬಹುದು. ಈ ಮೂಲಕ ಬಳಕೆದಾರರು ಸಂಪೂರ್ಣ ಅಪ್ಲಿಕೇಶನ್ ಅನ್ನು ಲಾಕ್ ಮಾಡಬಹುದು. ಆದರೆ ಈ ಹೊಸ ವೈಶಿಷ್ಟ್ಯದ ಮೂಲಕ ನಿರ್ದಿಷ್ಟ ಚಾಟ್ಗಳನ್ನು ಮಾತ್ರ ಲಾಕ್ ಮಾಡುವುದು ಸಾಧ್ಯವಾಗುತ್ತದೆ. ಕಾಂಟಾಕ್ಟ್ ನಲ್ಲಿರುವ ಯಾವುದಾದರೂ ಒಂದು ಹೆಸರಿನ ಮೇಲೆ ಟ್ಯಾಪ್ ಮಾಡಿದ ನಂತರ ಚಾಟ್ ಮಾಹಿತಿ ವಿಂಡೋದಲ್ಲಿ ಕಾಣಿಸುವ ಆಯ್ಕೆಗಳೊಂದಿಗೆ ಬಳಕೆದಾರರು ಚಾಟ್ಗಳನ್ನು ಲಾಕ್ ಮಾಡಬಹುದು.
ಸ್ಟೇಟಸ್ ಶೇರಿಂಗ್ ಟು ಫೇಸ್ ಬುಕ್ :
Instagram ಸ್ಟೋರೀಸ್ ನಂತೆಯೇ 24 ಗಂಟೆಗಳ ಸಮಯಕ್ಕೆ ಬಳಕೆದಾರರು ವಾಟ್ಸ್ ಆಪ್ ಸ್ಟೇಟಸ್ ಸ್ಟೋರಿ ಶೇರ್ ಮಾಡಬಹುದು. ಇಲ್ಲಿ ಬಳಕೆದಾರರು ಫೋಟೋ, ವೀಡಿಯೊ, ವಾಯ್ಸ್ ನೋಟ್ ಅಥವಾ ಆಡಿಯೊವನ್ನು ಹಂಚಿಕೊಳ್ಳಬಹುದು. ಇನ್ನು ಇಲ್ಲಿ ಶೇರ್ ಮಾಡಿದ ಸ್ಟೇಟಸ್ ಸ್ಟೋರಿಯನ್ನು ಫೇಸ್ಬುಕ್ ಸ್ಟೋರೀಸ್ ವಿಭಾಗದಲ್ಲಿಯೂ ಹಂಚಿಕೊಳ್ಳಬಹುದು. ವಾಟ್ಸ್ ಆಪ್ ನಲ್ಲಿ ಸ್ಟೇಟಸ್ ಹಂಚಿಕೊಂಡ ನಂತರ, ಸ್ಕ್ರೀನ್ ಮೇಲೆ ಫೇಸ್ಬುಕ್ ಐಕಾನ್ ಕಾಣಿಸುತ್ತದೆ. ಆ ಐಕಾನ್ ಮೇಲೆ ಕ್ಲಿಕ್ ಮಾಡಿದ ನಂತರ ಫೇಸ್ಬುಕ್ ಸ್ಟೋರಿ ಗಳಲ್ಲಿಯೂ ಸ್ಟೇಟಸ್ ಹಂಚಿಕೊಳ್ಳಬಹುದು.
ಇದನ್ನೂ ಓದಿ : ನಿಮ್ಮ ಮೊಬೈಲ್ ಕಳೆದು ಹೋದ್ರೆ ಹೆದರಬೇಡಿ, ಜಸ್ಟ್ ಈ ಕೆಲಸ ಮಾಡಿದ್ರೆ ಅಷ್ಟೇ ಸಾಕು!
ವಾಯ್ಸ್ ಟ್ರಾನ್ಸ್ಕ್ರಿಪ್ಶನ್ :
ವಾಟ್ಸ್ಆ್ಯಪ್ನಲ್ಲಿ ಬರುವ ವಾಯ್ಸ್ ಮೆಸೇಜ್ಗಳನ್ನು ಎಷ್ಟೋ ಬಾರಿ ಎಲ್ಲೆರೆದುರು ಕೇಳುವುದು ಸಾಧ್ಯವಾಗುವುದಿಲ್ಲ. ಯಾಕೆಂದರೆ ಆ ವಾಯ್ಸ್ ನೋಟ್ ನಲ್ಲಿ ಏನಿದೆ ಎನ್ನುವುದು ನಮಗೆ ತಿಳಿದಿರುವುದಿಲ್ಲ.
ಇಂಥಹ ಸ್ಥಿತಿಯಲ್ಲಿ ವಾಯ್ಸ್ ನೋಟನ್ನು ಟ್ರಾನ್ಸ್ಕ್ರಿಪ್ಟ್ ಮಾಡುವ ಹೊಸ ವೈಶಿಷ್ಟ್ಯ ಸಹಾಯಕ್ಕೆ ಬರುತ್ತದೆ. ಈ ವೈಶಿಷ್ಟ್ಯದ ಮೂಲಕ ಯಾವುದೇ ವಾಯ್ಸ್ ನೋಟಿನಲ್ಲಿ ಏನಿದೆ ಎನ್ನುವುದನ್ನು ಸುಲಭವಾಗಿ ತಿಳಿದುಕೊಳ್ಳಬಹುದು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.