AI ನಿಂದ ಕೋಟ್ಯಂತರ ಉದ್ಯೋಗಿಗಳ ನೌಕರಿಗೆ ಬರಲಿದೆ ಕುತ್ತು! ಸಂಚಲನ ಮೂಡಿಸಿದೆ ಇತ್ತೀಚಿನ ವರದಿ

ವರದಿಯ ಪ್ರಕಾರ, ಈ ಬೆಳವಣಿಗೆ 14 ಮಿಲಿಯನ್ ಉದ್ಯೋಗಿಗಳ ಉದ್ಯೋಗಕ್ಕೆ ಕನ್ನ ಹಾಕಲಿದೆ.  800 ಕ್ಕೂ ಹೆಚ್ಚು ಕಂಪನಿಗಳ ಸಮೀಕ್ಷೆಗಳನ್ನು ಆಧರಿಸಿ ಈ ವರದಿಯನ್ನು ಪ್ರಕಟಿಸಲಾಗಿದೆ ಎಂದು ಸುದ್ದಿ ಮಾಧ್ಯಮವೊಂದು ವರದಿ ಮಾಡಿದೆ. 

Written by - Ranjitha R K | Last Updated : May 1, 2023, 04:11 PM IST
  • ಮುಂದಿನ ಐದು ವರ್ಷಗಳಲ್ಲಿ ಜಾಗತಿಕ ಉದ್ಯೋಗ ಮಾರುಕಟ್ಟೆ ಹಿನ್ನಡೆ
  • ವರ್ಲ್ಡ್ ಇಕಾನಾಮಿಕ್ ಫಾರಂನಿಂದ ವರದಿ ಬಹಿರಂಗ
  • ಕೆಲಸ ಕಳೆದುಕೊಳ್ಳಲಿದ್ದಾರೆ 14 ಮಿಲಿಯನ್ ಉದ್ಯೋಗಿಗಳು
AI ನಿಂದ ಕೋಟ್ಯಂತರ ಉದ್ಯೋಗಿಗಳ ನೌಕರಿಗೆ ಬರಲಿದೆ ಕುತ್ತು!  ಸಂಚಲನ ಮೂಡಿಸಿದೆ ಇತ್ತೀಚಿನ ವರದಿ  title=

ನವದೆಹಲಿ : ಆರ್ಥಿಕತೆಯ ದುರ್ಬಲತೆ ಮತ್ತು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ನಂತಹ ತಂತ್ರಜ್ಞಾನಗಳ ಅಳವಡಿಕೆಯನ್ನು ಉತ್ತೇಜಿಸುವ ಕಂಪನಿಗಳಿಂದಾಗಿ ಮುಂದಿನ ಐದು ವರ್ಷಗಳಲ್ಲಿ ಜಾಗತಿಕ ಉದ್ಯೋಗ ಮಾರುಕಟ್ಟೆ ಹಿನ್ನಡೆ ಅನುಭವಿಸುವ ಸಾಧ್ಯತೆ ಇದೆ. ಇತ್ತೀಚೆಗೆ ಬಿಡುಗಡೆಯಾದ ನೂತನ ವರದಿಯಲ್ಲಿ ಈ ಮಾಹಿತಿಯನ್ನು  ಹೊರ ಹಾಕಲಾಗಿದೆ. ವರ್ಲ್ಡ್ ಇಕಾನಾಮಿಕ್ ಫಾರಂ ಈ ವರದಿಯನ್ನು ಬಹಿರಂಗ ಪಡಿಸಿದೆ. 800 ಕ್ಕೂ ಹೆಚ್ಚು ಕಂಪನಿಗಳ ಸಮೀಕ್ಷೆಗಳನ್ನು ಆಧರಿಸಿ ಈ ವರದಿಯನ್ನು ಪ್ರಕಟಿಸಲಾಗಿದೆ ಎಂದು ಸುದ್ದಿ ಮಾಧ್ಯಮವೊಂದು ವರದಿ ಮಾಡಿದೆ. 

ಕೆಲಸ ಕಳೆದುಕೊಳ್ಳಲಿದ್ದಾರೆ 14 ಮಿಲಿಯನ್ ಉದ್ಯೋಗಿಗಳು : 
WEF - ಇದು ಸ್ವಿಟ್ಜರ್ಲೆಂಡ್‌ನ ದಾವೋಸ್‌ನಲ್ಲಿ ಪ್ರತಿ ವರ್ಷ ಜಾಗತಿಕ ನಾಯಕರ  ಸಮಾವೇಶವನ್ನು ಆಯೋಜಿಸುತ್ತದೆ. ಇದರ ಪ್ರಕಾರ ಉದ್ಯೋಗದಾತರು 69 ಮಿಲಿಯನ್ ಹೊಸ ಉದ್ಯೋಗಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ. ಆದರೆ, 2027ರ ವೇಳೆಗೆ 83 ಮಿಲಿಯನ್   ಹುದ್ದೆಗಳನ್ನೇ ತಮ್ಮ ಲಿಸ್ಟ್ ನಿಂದ ತೆಗೆದು ಹಾಕಲಿದ್ದಾರೆ. ವರದಿಯ ಪ್ರಕಾರ, ಈ ಬೆಳವಣಿಗೆ 14 ಮಿಲಿಯನ್ ಉದ್ಯೋಗಿಗಳ ಉದ್ಯೋಗಕ್ಕೆ ಕನ್ನ ಹಾಕಲಿದೆ. 

ಇದನ್ನೂ ಓದಿ : ನೀವೂ ಹೆಚ್ಚಾಗಿ ಆನ್‌ಲೈನ್ ಫುಡ್ ಆರ್ಡರ್ ಮಾಡ್ತೀರಾ? ಈ ಸುದ್ದಿಯನ್ನು ತಪ್ಪದೇ ಓದಿ

ಧನಾತ್ಮಕ ಪರಿಣಾಮಗಳ ಜೊತೆಗೆ ಋಣಾತ್ಮಕ ಪ್ರಭಾವದ ಅಪಾಯವೂ ಇದೆ : 
ಆ ಅವಧಿಯಲ್ಲಿ ಅನೇಕ ಅಂಶಗಳು ಕಾರ್ಮಿಕ ಮಾರುಕಟ್ಟೆಯಲ್ಲಿ ಏರುಪೇರುಗಳನ್ನು ಸೃಷ್ಟಿಸುತ್ತವೆ. ರಿನ್ಯುಯೇಬಲ್ ಎನರ್ಜಿ ಸಿಸ್ಟಮ್ ನಲ್ಲಿ ಬದಲಾವಣೆಯು ಉದ್ಯೋಗ ಸೃಷ್ಟಿಗೆ ಶಕ್ತಿಯುತ ಎಂಜಿನ್ ಇರಲಿದೆ. ಆದರೆ, ನಿಧಾನ ಆರ್ಥಿಕ ಬೆಳವಣಿಗೆ ಮತ್ತು ಹೆಚ್ಚಿನ ಹಣದುಬ್ಬರದ ಕಾರಣದಿಂದ ಅಧಿಕ ಪ್ರಮಾಣದಲ್ಲಿ  ಹಾನಿಯಾಗುತ್ತದೆ. ಏತನ್ಮಧ್ಯೆ, ಕೃತಕ ಬುದ್ಧಿಮತ್ತೆಯನ್ನು ನಿಯೋಜಿಸಲು ಉದ್ಯೋಗಿಗಳನ್ನು ಕಂಪನಿಗಳಿಂದ ಹೊರದಬ್ಬುವುದು ಋಣಾತ್ಮಕ  ಪರಿಣಾಮ ಬೀರಲಿದೆ. 

AI ಪರಿಕರಗಳನ್ನು ಕಾರ್ಯಗತಗೊಳಿಸಲು ಮತ್ತು ನಿರ್ವಹಿಸಲು ಕಂಪನಿಗಳಿಗೆ ಹೊಸ ಉದ್ಯೋಗಿಗಳ ಅಗತ್ಯವಿದೆ. WF ಪ್ರಕಾರ, ಡೇಟಾ ವಿಶ್ಲೇಷಕರು ಮತ್ತು ವಿಜ್ಞಾನಿಗಳು, ಮೆಷಿನ್ ಲರ್ನಿಂಗ್ ಎಕ್ಸ್ ಪರ್ಟ್ಸ್  ಮತ್ತು ಸೈಬರ್ ಭದ್ರತಾ ತಜ್ಞರ ಉದ್ಯೋಗವು 2027 ರ ವೇಳೆಗೆ ಸರಾಸರಿ 30 ಪ್ರತಿಶತದಷ್ಟು ಬೆಳೆಯುವ ನಿರೀಕ್ಷೆಯಿದೆ. ಅದೇ ಸಮಯದಲ್ಲಿ, ಕೃತಕ ಬುದ್ಧಿಮತ್ತೆ ವಿಸ್ತಾರಗೊಂಡಂತೆ ಅನೇಕರ ಉದ್ಯೋಗ ಅಪಾಯಕ್ಕೆ ಸಿಲುಕುತ್ತದೆ. ಏಕೆಂದರೆ ಕೆಲವು ಸಂದರ್ಭಗಳಲ್ಲಿ ರೋಬೋಟ್‌ಗಳು ಮನುಷ್ಯರ ಜಾಗವನ್ನು ಪಡೆದುಕೊಳ್ಳುತ್ತವೆ.  

ಇದನ್ನೂ ಓದಿ : ಮೆಸೇಜ್ ಮರೆಯಾಗುವ ಭಯ ಇನ್ನಿಲ್ಲ WhatsApp ಪರಿಚಯಿಸಿದೆ ಹೊಸ ವೈಶಿಷ್ಟ್ಯ !

2027 ರ ವೇಳೆಗೆ 26 ಮಿಲಿಯನ್  ನಷ್ಟು ರೆಕಾರ್ಡ್ ಕೀಪಿಂಗ್ ಮತ್ತು ಆಡಳಿತಾತ್ಮಕ ಉದ್ಯೋಗಗಳು ಕಡಿಮೆಯಾಗಲಿದೆ  ಎಂದು  WEF ಅಂದಾಜಿಸಿದೆ. ಡೇಟಾ ಎಂಟ್ರಿ ಕ್ಲರ್ಕ್‌ಗಳು ಮತ್ತು ಕಾರ್ಯನಿರ್ವಾಹಕ ಕಾರ್ಯದರ್ಶಿಗಳ ಮೇಲೆ ಇದು ಹೆಚ್ಚಿನ ಪ್ರಭಾವ ಬೀರಲಿದೆ.  ChatGPTಯಂತಹ ಪರಿಕರಗಳ ಸುತ್ತ ಇತ್ತೀಚಿನ buzz ಹೊರತಾಗಿಯೂ, ಈ ದಶಕದ ಆರಂಭದಲ್ಲಿ ಅಟೋಮೆಶನ್   ನಿಧಾನವಾಗಿ ಬೆಳೆದಿದೆ.

WEF ಸಮೀಕ್ಷೆ ನಡೆಸಿದ ಸಂಸ್ಥೆಗಳು ಎಲ್ಲಾ ವ್ಯವಹಾರ ಕಾರ್ಯಗಳಲ್ಲಿ 34 ಪ್ರತಿಶತವನ್ನು ಪ್ರಸ್ತುತ ಯಂತ್ರಗಳಿಂದ ನಿರ್ವಹಿಸುತ್ತವೆ ಎಂದು ಅಂದಾಜಿಸಿದೆ.  ಅಂದರೆ ಇದರಲ್ಲಿ 2020 ರ ಅಂಕಿ ಅಂಶಕ್ಕಿಂತ ಸ್ವಲ್ಪ ಮಾತ್ರವೇ ಏರಿಕೆ ಕಂಡು ಬಂದಿದೆ.  

ಇದನ್ನೂ ಓದಿ : Neeta Ambani ಬಳಿ ಇದೆ ವಿಶ್ವದ ಅತ್ಯಂತ ದುಬಾರಿ ಸ್ಮಾರ್ಟ್ ಫೋನ್! ಬೆಲೆ ಕೇಳಿದ್ರೆ ದಂಗಾಗುವಿರಿ

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News