ವಾಟ್ಸಾಪ್‌ನಲ್ಲಿ ಟ್ರೈನ್ ರಿಯಲ್ ಟೈಮ್ ಅಪ್‌ಡೇಟ್ :  ಬಹುತೇಕ ಪ್ರತಿಯೊಬ್ಬ ಸ್ಮಾರ್ಟ್‌ಫೋನ್ ಬಳಕೆದಾರರು ಸಹ ಸಾಮಾಜಿಕ ಮಾಧ್ಯಮಗಳನ್ನು ಬಳಸುತ್ತಾರೆ. ಅದರಲ್ಲೂ ಜನಪ್ರಿಯ ಮೆಸೇಜಿಂಗ್ ಆ್ಯಪ್‌ ವಾಟ್ಸಾಪ್ ಎಲ್ಲರ ನೆಚ್ಚಿನ ಅಪ್ಲಿಕೇಶನ್ ಎಂದರೂ ತಪ್ಪಾಗಲಾರದು. ಈ ಇನ್‌ಸ್ಟಂಟ್ ಮೆಸೇಜಿಂಗ್ ಆಪ್ ಅನ್ನು ವೈಯಕ್ತಿಯ ಚಾಟಿಂಗ್ ಗಾಗಿ ಮಾತ್ರವಲ್ಲದೆ ಕಛೇರಿ ಮತ್ತು ವ್ಯವಹಾರದ ಕೆಲಸಗಳಿಗೆ ಸಹ ಬಹಳಷ್ಟು ಬಳಸಲಾಗುತ್ತದೆ. ಈ ಸಾಮಾಜಿಕ ಮಾಧ್ಯಮ ವೇದಿಕೆ ಇಷ್ಟೊಂದು ಜನಪ್ರಿಯವಾಗಲು ಇದೂ ಕೂಡ ಕಾರಣವಾಗಿದೆ. ಈಗ ಯುಪಿಐ  ಪಾವತಿಯ ಆಯ್ಕೆಯೂ ಇದರಲ್ಲಿ ಲಭ್ಯವಿದೆ, ಆದರೆ ನೀವು ಚಾಟಿಂಗ್ ಮತ್ತು ಪಾವತಿಯ ಹೊರತಾಗಿ ಇದನ್ನು ಇತರ ವಿಶೇಷ ಕೆಲಸಗಳಿಗೂ ಬಳಸಬಹುದು ಎಂಬುದು ನಿಮಗೆ ತಿಳಿದಿದೆಯೇ?


COMMERCIAL BREAK
SCROLL TO CONTINUE READING

ವಾಸ್ತವವಾಗಿ, ನೀವು ವಾಟ್ಸಾಪ್‌ನಲ್ಲಿ ರೈಲು ನವೀಕರಣಗಳನ್ನು ಸಹ ಪಡೆಯುತ್ತೀರಿ. ವಾಟ್ಸಾಪ್‌ನಲ್ಲಿ ನೀವು ರೈಲು ಸಂಬಂಧಿತ ಮಾಹಿತಿಯನ್ನು ಪಡೆಯುವ ವಿಧಾನವನ್ನು ಈ ಲೇಖನದಲ್ಲಿ ತಿಳಿಸಲಿದ್ದೇವೆ.


ಇದನ್ನೂ ಓದಿ- ಸ್ಮಾರ್ಟ್‌ಫೋನ್ ಕಳೆದು ಹೋದರೆ ಕೂಡಲೇ ಈ ಕೆಲಸ ಮಾಡಿ, ಇಲ್ಲವೇ ನಿಮ್ಮ ಖಾತೆ ಖಾಲಿಯಾಗಬಹುದು!


ವಾಟ್ಸಾಪ್‌ನಲ್ಲಿ ಟ್ರೈನ್ ರಿಯಲ್ ಟೈಮ್ ಅಪ್‌ಡೇಟ್ ಪಡೆಯಲು ಈ ವಿಧಾನವನ್ನು ಅನುಸರಿಸಿ:
ನೀವು ವಾಟ್ಸಾಪ್‌ನಲ್ಲಿ ಟ್ರೈನ್ ರಿಯಲ್ ಟೈಮ್ ಅಪ್‌ಡೇಟ್ ತಿಳಿದುಕೊಳ್ಳಲು ಬಯಸಿದರೆ, ಅದರ ಮಾರ್ಗವು ತುಂಬಾ ಸುಲಭವಾಗಿದೆ. ಕೆಲವು ಹಂತಗಳನ್ನು ಅನುಸರಿಸುವ ಮೂಲಕ ನೀವು ಪ್ರತಿ ರೈಲಿಗೆ ಸಂಬಂಧಿಸಿದ ಮಾಹಿತಿಯನ್ನು ಸುಲಭವಾಗಿ ಪಡೆಯಬಹುದು. ಈ ಸೌಲಭ್ಯವು ಸ್ಟಾರ್ಟ್ಅಪ್ ಕಂಪನಿ ರೈಲೋಫಿ ಸಹಾಯದಿಂದ ವಾಟ್ಸಾಪ್‌ನಲ್ಲಿ ಲಭ್ಯವಿದೆ.


ಇದನ್ನೂ ಓದಿ- Cheapest Bikes: ಅಗ್ಗದ ಬಜೆಟ್‌ನಲ್ಲಿ ಖರೀದಿಸಬಹುದಾದ ಮೋಟಾರ್‌ಸೈಕಲ್‌ಗಳಿವು


ವಾಟ್ಸಾಪ್‌ನಲ್ಲಿ ಟ್ರೈನ್ ರಿಯಲ್ ಟೈಮ್ ಅಪ್‌ಡೇಟ್ ಪಡೆಯಲು ಈ ಹಂತಗಳನ್ನು ಅನುಸರಿಸಿ:
>> ನೀವು ರಿಯಲ್ ಟೈಮ್ ಟ್ರೈನ್ ಅಪ್‌ಡೇಟ್ ಪಡೆಯಲು ಬಯಸಿದರೆ, ಮೊದಲು ನಿಮ್ಮ ಮೊಬೈಲ್‌ನಲ್ಲಿ 9881193322 ಸಂಖ್ಯೆಯನ್ನು ಸೇವ್ ಮಾಡಿ.
>> ನೀವು ನಂಬರ್ ಸೇವ್ ಮಾಡಿಯಾ ನಂತರ, ನಿಮ್ಮ ಫೋನ್‌ನಲ್ಲಿ ವಾಟ್ಸಾಪ್ ತೆರೆಯಿರಿ. ವಾಟ್ಸಾಪ್‌ ಅನ್ನು ತೆರೆದ ನಂತರ, ಪಿಎನ್ಆರ್ ಅನ್ನು ಟೈಪ್ ಮಾಡಿ ಮತ್ತು ಮೇಲೆ ತಿಳಿಸಲಾದ ಸಂಖ್ಯೆಗೆ ಕಳುಹಿಸಿ.
>> ನೀವು ಪಿಎನ್ಆರ್ ಸಂಖ್ಯೆಯನ್ನು ಕಳುಹಿಸಿದ ತಕ್ಷಣ, ನೀವು ವಾಟ್ಸಾಪ್‌ನಲ್ಲಿ ರೈಲಿನ ವಿವರಗಳನ್ನು ಪಡೆಯುತ್ತೀರಿ.
>> ನಿಮಗೆ ವರ್ಗವಾರು ಆಯ್ಕೆಯನ್ನು ನೀಡಲಾಗುವುದು. ನೀವು ತಿಳಿದುಕೊಳ್ಳಲು ಬಯಸುವ ಮಾಹಿತಿಯ ಆಯ್ಕೆಯನ್ನು ಆರಿಸಿ.
>> ನೀವು ಬಯಸಿದರೆ, ವಾಟ್ಸಾಪ್ ಹೊರತುಪಡಿಸಿ, ರೈಲಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಈ ಅಪ್ಲಿಕೇಶನ್‌ನಿಂದ ನೇರವಾಗಿ ಪಡೆಯಬಹುದು.
ಇದಕ್ಕಾಗಿ ನೀವು ಮೊದಲು ಪ್ಲೇ ಸ್ಟೋರ್‌ಗೆ ಹೋಗಬೇಕು.
>> ಪ್ಲೇ ಸ್ಟೋರ್‌ಗೆ ಭೇಟಿ ನೀಡುವ ಮೂಲಕ ನೀವು ರೈಲೋಫಿ  ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬಹುದು.
>>  ಅದರ ನಂತರ ನೀವು ನಿಮ್ಮ ಖಾತೆಯನ್ನು ರಚಿಸಬೇಕು. 
>> ಖಾತೆಯನ್ನು ರಚಿಸಿದ ನಂತರ, ನೀವು ರೈಲಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಅಪ್ಲಿಕೇಶನ್‌ನಲ್ಲಿ ಪಡೆಯಬಹುದು.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.