ಅಂತಾರಾಷ್ಟ್ರೀಯ ಯುಪಿಐ ಪಾವತಿ: PhonePe, GPayಗೆ ಟಕ್ಕರ್ ನೀಡಿದ ವಾಟ್ಸಾಪ್
International UPI Payments On WhatsApp: ಇತ್ತೀಚಿನ ದಿನಗಳಲ್ಲಿ ಯುಪಿಐ ಪಾವತಿ ತುಂಬಾ ಜನಪ್ರಿಯವಾಗುತ್ತಿದೆ. ಫೋನ್ ಪೇ, ಗೂಗಲ್ ಪೇ ಗೆ ಟಕ್ಕರ್ ನೀಡಲು ಮುಂದಾಗಿರುವ ವಾಟ್ಸಾಪ್ ಶೀಘ್ರದಲ್ಲೇ ತನ್ನ ಬಳಕೆದಾರರಿಗೆ ಅಂತರರಾಷ್ಟ್ರೀಯ ಯುಪಿಐ ಪಾವತಿ ಸೌಲಭ್ಯವನ್ನು ನೀಡಲಿದೆ ಎಂದು ತಿಳಿದುಬಂದಿದೆ.
UPI Payments On WhatsApp: ಜನಪ್ರಿಯ ಇನ್‌ಸ್ಟಂಟ್ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸಾಪ್ ತನ್ನ ಬಳಕೆದಾರರಿಗಾಗಿ ಆಗಾಗ್ಗೆ ಹೊಸ ಹೊಸ ವೈಶಿಷ್ಟ್ಯವನ್ನು ಪರಿಚಯಿಸುತ್ತಲೇ ಇರುತ್ತದೆ. 2020 ರಲ್ಲಿ ಯುಪಿಐ ಪಾವತಿ ವೈಶಿಷ್ಟ್ಯವನ್ನು ಪರಿಚಯಿಸಿದ್ದ ವಾಟ್ಸಾಪ್ ಇದೀಗ ತನ್ನ ಬಳಕೆದಾರರಿಗಾಗಿ ಈ ವೈಶಿಷ್ಟ್ಯವನ್ನು ವಿಸ್ತರಿಸಲು ಸಜ್ಜಾಗಿದೆ. ಸೋರಿಕೆಯಾಗಿರುವ ಮಾಹಿತಿಗಳ ಪ್ರಕಾರ, ಶೀಘ್ರದಲ್ಲೇ ವಾಟ್ಸಾಪ್‌ನಲ್ಲಿಯೂ ಅಂತರರಾಷ್ಟ್ರೀಯ ಯುಪಿಐ ಪಾವತಿ ಸೇವೆ ಲಭ್ಯವಾಗಲಿದೆ ಎಂದು ತಿಳಿದುಬಂದಿದೆ.
ಫೋನ್ ಪೇ, ಗೂಗಲ್ ಪೇ ಗೆ ಟಕ್ಕರ್:
ಹೌದು, ವಾಟ್ಸಾಪ್ ಅಂತರರಾಷ್ಟ್ರೀಯ ಯುಪಿಐ ಪಾವತಿ (Whatsapp Internation UPI Payments) ವೈಶಿಷ್ಟ್ಯಕ್ಕೆ ಸಂಬಂಧಿಸಿದ ಮಾಹಿತಿ ಸೋರಿಕೆಯಾಗಿದ್ದು ಇದರಲ್ಲಿ ಶೀಘ್ರದಲ್ಲೇ ವಾಟ್ಸಾಪ್‌ನಲ್ಲಿಯೂ ಅಂತರಾಷ್ಟೀಯ ಯುಪಿಐ ಪೇಮೆಂಟ್ ಸಾಧ್ಯವಾಗಲಿದೆ. ಈ ಮೂಲಕ ವಾಟ್ಸಾಪ್ ಯುಪಿಐ ಪಾವತಿಯಲ್ಲಿ PhonePe ಮತ್ತು GPay ನಂತಹ UPI ಪಾವತಿ ಅಪ್ಲಿಕೇಶನ್‌ಗಳಿಗೆ ಟಕ್ಕರ್ ನೀಡಲಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ- WhatsAppನಲ್ಲಿ ನಂಬರ್ ಸೇವ್ ಇಲ್ಲದಿದ್ದರೂ chat ಮಾಡಬಹುದು! ಇಲ್ಲಿದೆ ಸುಲಭ ಟ್ರಿಕ್
ಈ ಕುರಿತಂತೆ ಇತ್ತೀಚೆಗೆ @AssembleDebug ಹೆಸರಿನ X (ಟ್ವಿಟರ್) ಬಳಕೆದಾರರು ಪೋಸ್ಟ್ ಮಾಡಿದ್ದು ವಾಟ್ಸಾಪ್ ಇಂಟರ್ನ್ಯಾಷನಲ್ ಯುಪಿಐ ಪಾವತಿ ವೈಶಿಷ್ಟ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ. ಇವರ ಪ್ರಕಾರ, ವಾಟ್ಸಾಪ್ ಶೀಘ್ರದಲ್ಲಿಯೇ ಭಾರತೀಯ ಬಳಕೆದಾರರಿಗೆ ಅಂತರರಾಷ್ಟ್ರೀಯ ಯುಪಿಐ ಪಾವತಿ ವೈಶಿಷ್ಟ್ಯವನ್ನು ಪರಿಚಯಿಸಬಹುದು.
ಈ ಸಂಬಂಧ ತಮ್ಮ ಎಕ್ಸ್ (ಟ್ವಿಟ್ಟರ್) ಪೋಸ್ಟ್‌ನಲ್ಲಿ ಕೆಲವು ಸ್ಕ್ರೀನ್‌ಶಾಟ್‌ಗಳನ್ನು ಕೂಡ ಹಂಚಿಕೊಂಡಿದ್ದಾರೆ. ಇದರಲ್ಲಿ ವಾಟ್ಸಾಪ್ ಬಳಕೆದಾರರಿಗೆ ಹೆಚ್ಚುವರಿ ಯುಪಿಐ ಸೆಟ್ಟಿಂಗ್‌ಗಳ ವಿಭಾಗ ಲಭ್ಯವಾಗಬಹುದು. ಇದರಲ್ಲಿ ಅಂತರರಾಷ್ಟ್ರೀಯ ಯುಪಿಐ ಪಾವತಿ ಆಯ್ಕೆಯನ್ನೂ ಕೂಡ ಗಮನಿಸಬಹುದು.
WhatsApp Update: ಶೀಘ್ರದಲ್ಲೇ WhatsApp ಬಳಕೆದಾರರಿಗೂ ಸಿಗಲಿದೆ UPI QR Code ಸ್ಕ್ಯಾನ್ ಸೌಲಭ್ಯ!
ಗಮನಾರ್ಹವಾಗಿ, ಇನ್‌ಸ್ಟಂಟ್ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸಾಪ್ ಇತ್ತೀಚೆಗೆ ಇಂಟರ್ನ್ಯಾಷನಲ್ ಯುಪಿಐ ಪಾವತಿ ವೈಶಿಷ್ಟ್ಯದಲ್ಲಿ ಕಾರ್ಯನಿರ್ವಹಿಸುತ್ತಿದೆ. ಆದರೆ, ಫೋನ್ ಪೇ ಮತ್ತು ಗೂಗಲ್ ಪೇಗಳಲ್ಲಿ ಈಗಾಗಲೇ ಈ ವೈಶಿಷ್ಟ್ಯ ಲಭ್ಯವಿರುವುದರಿಂದ ವಾಟ್ಸಾಪ್ ಈ ಎರಡೂ ಅಪ್ಲಿಕೇಶನ್‌ಗಳಿಗೆ ಕಠಿಣ ಸ್ಪರ್ಧೆ ನೀಡುವ ಸಾಧ್ಯತೆ ಇದೆ ಎಂದು ನಿರೀಕ್ಸಿಸಲಾಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.