WhatsApp Feature: ನವದೆಹಲಿ: ಭಾರತದಲ್ಲಿ ಕೋಟ್ಯಂತರ ಜನರು ವಾಟ್ಸಾಪ್ ಬಳಸುತ್ತಾರೆ. ಈ ಅಪ್ಲಿಕೇಶನ್ ಕಾಲಕಾಲಕ್ಕೆ ತನ್ನ ಬಳಕೆದಾರರಿಗಾಗಿ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುತ್ತಲೇ ಇದೆ. ಇದರಿಂದ ಅವರ ಅನುಭವಕ್ಕೂ ಕೂಡ ಹೊಸ ಮೆರಗು ನೀಡುತ್ತಿದೆ. ವಾಟ್ಸಾಪ್ ಸುರಕ್ಷತೆಯ ಬಗ್ಗೆ ಅನೇಕ ಜನರು ಸದ್ಯ ಚಿಂತಿತರಾಗಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಕಂಪನಿಯು ಅಪ್ಲಿಕೇಶನ್‌ಗೆ ಫಿಂಗರ್‌ಪ್ರಿಂಟ್ ಲಾಕ್ ವೈಶಿಷ್ಟ್ಯವನ್ನು ಸೇರಿಸಿದೆ. ವಾಟ್ಸಾಪ್ನ ಈ ವೈಶಿಷ್ಟ್ಯದ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿಲ್ಲ. ವಾಟ್ಸಾಪ್ನ ಫಿಂಗರ್ಪ್ರಿಂಟ್ ಲಾಕ್ ಅನ್ನು ನೀವು ಹೇಗೆ ಸುಲಭವಾಗಿ ಸಕ್ರಿಯಗೊಳಿಸಬಹುದು ಎಂದು ಇಂದು ನಾವು ನಿಮಗೆ ತಿಳಿಸುತ್ತಿದ್ದೇವೆ.


COMMERCIAL BREAK
SCROLL TO CONTINUE READING

ಫಿಂಗರ್ ಪ್ರಿಂಟ್ ಲಾಕ್ ಅನ್ನು ಈ ರೀತಿ ಸಕ್ರೀಯಗೊಳಿಸಿ
ಮೊದಲನೆಯದಾಗಿ, ನೀವು ನಿಮ್ಮ ವಾಟ್ಸಾಪ್ ಖಾತೆಯನ್ನು ತೆರೆಯಿರಿ. ಬಲಿಕ್ಲ  ಮೇಲಿನ ಬಲಭಾಗದಲ್ಲಿ ನೀಡಲಾಗಿರುವ ಮೂರು ಚುಕ್ಕೆಗಳ ಮೇಲೆ ಕ್ಲಿಕ್ಕಿಸಿ.  ಈಗ ನೀವು ಸೆಟ್ಟಿಂಗ್ಸ್ ವಿಭಾಗಕ್ಕೆ ಭೇಟಿ ನೀಡಬೇಕು. ಈಗ ಖಾತೆಯಲ್ಲಿ ಗೌಪ್ಯತೆಯ ಆಯ್ಕೆಯನ್ನು ನೀವು ನೋಡುತ್ತೀರಿ. ಗೌಪ್ಯತೆಯನ್ನು ಟ್ಯಾಪ್ ಮಾಡಿದ ನಂತರ ನೀವು ಅನೇಕ ಆಯ್ಕೆಗಳನ್ನು ನೋಡುತ್ತೀರಿ. ಎಲ್ಲಕ್ಕಿಂತ ಕೆಳಭಾಗದಲ್ಲಿ, ನೀವು ಫಿಂಗರ್ಪ್ರಿಂಟ್ ಲಾಕ್ ಆಯ್ಕೆಯನ್ನು ನೋಡುವಿರಿ. ನೀವು ಅದನ್ನು ತೆರೆದಾಗ, ಫಿಂಗರ್‌ಪ್ರಿಂಟ್‌ನೊಂದಿಗೆ ಅನ್ಲಾಕ್ ಆನ್ ಮಾಡುವ ಆಯ್ಕೆ ಇರುತ್ತದೆ. ನೀವು ಅದನ್ನು ಟ್ಯಾಪ್ ಮಾಡುವ ಮೂಲಕ ಅದನ್ನು ಸಕ್ರಿಯಗೊಳಿಸಬಹುದು. ಆದರೆ, ಇದಕ್ಕಾಗಿ ನೀವು ನಿಮ್ಮ ಫೋನ್ ಲಾಕ್ ಗೆ ಫಿಂಗರ್ ಪ್ರಿಂಟ್ ಲಾಕ್ ಅಳವಡಿಸಿರಬೇಕು ಎಂಬುದನ್ನು ಮಾತ್ರ ನೆನಪಿಡಿ.


ಇದನ್ನು ಓದಿ- WhatsApp Call ರೆಕಾರ್ಡ್ ಮಾಡಲು ಇಲ್ಲಿದೆ ಸುಲಭ ಟ್ರಿಕ್


ಫಿಂಗರ್ ಪ್ರಿಂಟ್ ಲಾಕ್ ಬಳಿಕ ನಿಮಗೆ ಮೂರು ಆಯ್ಕೆಗಳು ಕಾಣಿಸಿಕೊಳ್ಳಲಿವೆ.  immediately, After 1 Minute, After 30 minutes ಇವು ಆ ಮೂರು ಆಯ್ಕೆಗಳಾಗಿವೆ. ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ಯಾವುದಾದರೊಂದು ಆಯ್ಕೆಯನ್ನು ಆಯ್ದುಕೊಳ್ಳಬಹುದು.


ಇದನ್ನು ಓದಿ-ಹೊಸ Featuresನೊಂದಿಗೆ ಬರುತ್ತಿದೆ WhatsApp..! ವೈಶಿಷ್ಟ್ಯತೆಗಳೇನು ಗೊತ್ತಾ?


WhatsApp ನ ಫಿಂಗರ್ ಪ್ರಿಂಟ್ ಆಯ್ಕೆಯನ್ನು ಒಮ್ಮೆ ಸಕ್ರೀಯಗೊಳಿಸಿದ ಬಳಿಕ ನೀವು ವಾಟ್ಸ್ ಆಪ್ ಅನ್ನು ಕೇವಲ ಫಿಂಗರ್ ಪ್ರಿಂಟ್ ಮೂಲಕ ಮಾತ್ರ ತೆರೆಯಬಹುದು. ಇದಲ್ಲದೆ ನೀವು ಪಿನ್ ಅಥವಾ ಪಾಸ್ವರ್ಡ್ ಅಥವಾ ಇತರ ಯಾವುದೇ ವಿಕಲ್ಪ ಬಳಲಿ ಕೂಡ ಲಾಕ್ ಮಾಡಬಹುದು. 


ಇದನ್ನು ಓದಿ-WhatsApp New Privacy Policy ಹಿಂಪಡೆಯಲು ಕೇಂದ್ರದಿಂದ ಪತ್ರ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy


ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.