WhatsApp ಬಳಕೆದಾರರಿಗೊಂದು ಮಹತ್ವದ ಮಾಹಿತಿ, ಈ ಫೋನ್ ಗಳಲ್ಲಿ ವಾಟ್ಸ್ ಆಪ್ ತನ್ನ ಕೆಲಸ ನಿಲ್ಲಿಸಲಿದೆ
WhatsApp Update: WABetainfo ನಲ್ಲಿ ಪ್ರಕಟಗೊಂಡ ವರದಿಯೊಂದರ ಪ್ರಕಾರ, ಅಕ್ಟೋಬರ್ 24, 2022ರ ಬಳಿಕ ವಾಟ್ಸ್ ಆಪ್ ಕೆಲ ಐಫೋನ್ ಗಳಲ್ಲಿ ಕಾರ್ಯನಿರ್ವಹಿಸುವುದನ್ನು ಸ್ಥಗಿತಗೊಳಿಸಲಿದೆ. ಆದರೆ, ಕೇವಲ ಹಳೆ ಮಾಡೆಲ್ ನ ಫೋನ್ ಗಳ ಮೇಲೆ ಮಾತ್ರ ಇದರ ವಾಟ್ಸ್ ಆಪ್ ಬಳಕೆಯನ್ನು ನಿಷೇಧಿಸಲಾಗುತ್ತಿದೆ.
WhatsApp Update: ಭಾರತದಲ್ಲಿ ಸುಮಾರು 487 ಮಿಲಿಯನ್‌ಗಿಂತಲೂ ಹೆಚ್ಚು ಜನರು ವಾಟ್ಸಾಪ್ ಬಳಸುತ್ತಾರೆ. ನೀವು ಕೂಡ ವಾಟ್ಸಾಪ್ ಬಳಸುತ್ತಿದ್ದರೆ, ಈ ಸುದ್ದಿ ನಿಮಗಾಗಿ. ಆದರೆ, ಒಂದು ವೇಳೆ ನೀವು ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಬಳಕೆದಾರರಾಗಿದ್ದರೆ, ನೀವು ಭಯಪಡುವ ಅವಶ್ಯಕತೆ ಇಲ್ಲ. ಅಕ್ಟೋಬರ್ 24 ರಿಂದ ಐಒಎಸ್ ಬಳಕೆದಾರರ ಸ್ಮಾರ್ಟ್‌ಫೋನ್‌ಗಳಲ್ಲಿ ವಾಟ್ಸಾಪ್ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಲಿದೆ. ಇಂತಹ ಪರಿಸ್ಥಿತಿಯಲ್ಲಿ ಹಳೆಯ ಸ್ಮಾರ್ಟ್‌ಫೋನ್‌ಗಳನ್ನು ಬಳಸುವ ಬಳಕೆದಾರರಿಗೆ ಈ ಸುದ್ದಿ ಕೊಂಚ ಶಾಕ್ ನೀಡಲಿದೆ. ಇತ್ತೀಚಿನ ಮಾಡೆಲ್ ಗಳಿರುವ ಸ್ಮಾರ್ಟ್‌ಫೋನ್ ಬಳಕೆದಾರರ ಮೇಲೆ ಇದು ಯಾವುದೇ ರೀತಿಯ ಪ್ರಭಾವ ಬೀರುವುದಿಲ್ಲ. ಅಕ್ಟೋಬರ್ 24ರ ನಂತರ WhatsApp ಅನ್ನು ಬಳಸಲು ಸಾಧ್ಯವಾಗದ ಬಳಕೆದಾರರು ಯಾರು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,
ಯಾವ ದಿನದಿಂದ ವಾಟ್ಸ್ ಆಪ್ ನ ಹಳೆಯ ಆವೃತಿಗಳಲ್ಲಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಲಿದೆ?
ಹೊಸ ಅಂದರೆ ಇತ್ತೀಚಿನ ಸ್ಮಾರ್ಟ್‌ಫೋನ್ ಮಾಡೆಲ್ ಗಳನ್ನು ಬಳಸುತ್ತಿರುವ ಬಳಕೆದಾರರ ಸ್ಮಾರ್ಟ್ ಫೋನ್ ನಲ್ಲಿ ವಾಟ್ಸ್ಆಪ್ ಎಂದಿನಂತೆ ಕಾರ್ಯನಿರ್ವಹಿಸಲಿದೆ. ಏಕೆಂದರೆ ಹಳೆಯ ಫೋನ್‌ಗಳಲ್ಲಿ ಮಾತ್ರ ವಾಟ್ಸಾಪ್ ಬಳಕೆಯನ್ನು ನಿಷೇಧಿಸಲಾಗುತ್ತಿದೆ. WABetainfo ವರದಿಯ ಪ್ರಕಾರ, ಅಕ್ಟೋಬರ್ 24 ರಿಂದ WhatsApp, ಕೆಲ ಐಫೋನ್‌ಗಳಲ್ಲಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಲಿದೆ.
ಇದನ್ನೂ ಓದಿ-Portable Air Cooler: ಫ್ಯಾನ್‌ಗಿಂತಲೂ ಅಗ್ಗದ ದರದಲ್ಲಿ ಲಭ್ಯವಿದೆ ಈ ಕೂಲರ್- ವಿದ್ಯುತ್ ಬಿಲ್ ಕೂಡ ಕಡಿಮೆ ಬರುತ್ತೆ
ಯಾವ ಫೋನ್‌ಗಳು ಕಾರ್ಯನಿರ್ವಹಿಸುವುದಿಲ್ಲ
ವರದಿಯ ಪ್ರಕಾರ, ಅಕ್ಟೋಬರ್ 24 ರಿಂದ WhatsApp, iOS 10, iOS 11, iPhone 5, ಹಾಗೂ iPhone 5C ಗಳಲ್ಲಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಲಿದೆ ಎಂದು Apple ಕೆಲವು ಐಫೋನ್ ಗ್ರಾಹಕರಿಗೆ ಮಾಹಿತಿ ನೀಡಿದೆ. ಅಂದರೆ ಈ ನಾಲ್ಕು ಆಪರೇಟಿಂಗ್ ಸಿಸ್ಟಂ ಹೊಂದಿರುವ ಸಾಧನಗಳಿಗೆ WhatsApp ಕಾರ್ಯನಿರ್ವಹಣೆ ನಿಂತುಹೊಗಲಿದೆ. ನೀವೂ ಕೂಡ ಒಂದು ವೇಳೆ ಹಳೆಯ ಐಫೋನ್ ಅನ್ನು ಹೊಂದಿದ್ದರೆ, ಅದನ್ನು ಇಂದೇ ಅಪ್‌ಗ್ರೇಡ್ ಮಾಡಿ ಅಥವಾ ಬದಲಾಯಿಸಿ. ಏಕೆಂದರೆ ಅದರಲ್ಲಿ WhatsApp ಅನ್ನು ಬಳಸಲು ನಿಮಗೆ ಸಾಧ್ಯವಾಗುವುದಿಲ್ಲ.
ಇದನ್ನೂ ಓದಿ-WhatsApp Tips And Tricks: ನಿಮ್ಮ Whatsapp chat ಅನ್ನು ಬೇರೆಯವರು ಕದ್ದು ಓದುತ್ತಿದ್ದಾರೆಯೇ ಹೀಗೆ ಪತ್ತೆ ಹಚ್ಚಿ
ಆಪರೇಟಿಂಗ್ ಸಿಸ್ಟಂ ನವೀಕರಿಸುವುದು ಹೇಗೆ?
ಮೊದಲನೆಯದಾಗಿ, ನಿಮ್ಮ ಐಫೋನ್ ಹಳೆಯ ಆಪರೇಟಿಂಗ್ ಸಿಸ್ಟಮ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆಯಾ ಎಂಬುದನ್ನು ಪರಿಶೀಲಿಸಿ. ಹಾಗಿದ್ದಲ್ಲಿ, ತಕ್ಷಣ ಅದನ್ನು ನವೀಕರಿಸಿ. ಐಫೋನ್‌ನ ಇತ್ತೀಚಿನ ಸಾಫ್ಟ್‌ವೇರ್ ಅನ್ನು ಪರಿಶೀಲಿಸಲು, ಮೊದಲು ನೀವು ಅದರ ಸೆಟ್ಟಿಂಗ್ ವಿಭಾಗಕ್ಕೆ ಭೇಟಿ ನೀಡಬೇಕು. ಸೆಟ್ಟಿಂಗ್‌ಗಳ ಮುಖ್ಯ ಮೆನುಗೆ ಹೋಗಿ, ನಂತರ ಸಾಫ್ಟ್‌ವೇರ್ ಅಪ್‌ಡೇಟ್ ಆಯ್ಕೆಯನ್ನು ಕ್ಲಿಕ್ ಮಾಡಬೇಕು.
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.