Portable Air Cooler: ಫ್ಯಾನ್‌ಗಿಂತಲೂ ಅಗ್ಗದ ದರದಲ್ಲಿ ಲಭ್ಯವಿದೆ ಈ ಕೂಲರ್- ವಿದ್ಯುತ್ ಬಿಲ್ ಕೂಡ ಕಡಿಮೆ ಬರುತ್ತೆ

Portable Air Cooler: ಕೈಗೆಟುಕುವ ಬೆಲೆಯಲ್ಲಿ ಲಭ್ಯವಿರುವ ಈ ಕೂಲರ್ ಒಂದು ಲೀಟರ್ ನೀರಿನಲ್ಲಿ ಕೋಣೆಯನ್ನು ಶಿಮ್ಲಾದಂತೆ ತಂಪಾಗಿಸುತ್ತದೆ ಎಂದು ಹೇಳಲಾಗುತ್ತಿದೆ. ಇದರ ವೈಶಿಷ್ಟ್ಯಗಳ ಬಗ್ಗೆ ತಿಲಿಯೋಣ...

Written by - Yashaswini V | Last Updated : May 24, 2022, 01:12 PM IST
  • ಈ ಪೋರ್ಟಬಲ್ ಕೂಲರ್‌ನ ವಿಶೇಷತೆಯೆಂದರೆ ಇದು ತುಂಬಾ ಹಗುರವಾದ ಮತ್ತು ಸೊಗಸಾದ ವಿನ್ಯಾಸದಲ್ಲಿ ಬರುತ್ತದೆ.
  • ಇದನ್ನು ಅಡುಗೆಮನೆ, ಕಛೇರಿ ಮೇಜಿನ ಮೇಲೆ ಅಥವಾ ಮಲಗುವ ಕೋಣೆಯಲ್ಲಿ ಮಲಗುವಾಗ ಮೇಜಿನ ಮೇಲೆ ಇರಿಸಬಹುದು.
  • ಇದು ಕಡಿಮೆ ಶಕ್ತಿಯಲ್ಲಿ ಬಲವಾದ ಗಾಳಿಯನ್ನು ನೀಡುತ್ತದೆ.
Portable Air Cooler: ಫ್ಯಾನ್‌ಗಿಂತಲೂ ಅಗ್ಗದ ದರದಲ್ಲಿ ಲಭ್ಯವಿದೆ ಈ ಕೂಲರ್- ವಿದ್ಯುತ್ ಬಿಲ್ ಕೂಡ ಕಡಿಮೆ ಬರುತ್ತೆ  title=
Portable Air Cooler

ಪೋರ್ಟಬಲ್ ಏರ್ ಕೂಲರ್:  ಬಿಸಿಲಿನ ತಾಪ ಹೆಚ್ಚಾದಂತೆ ಎಸಿ, ಕೂಲರ್‌ಗಳ ಬೇಡಿಕೆ ಹಾಗೂ ಬೆಲೆ ಕೂಡ ಹೆಚ್ಚಾಗುತ್ತಿದೆ. ಅಂತಹ ಪರಿಸ್ಥಿತಿಯಲ್ಲಿ, ಆನ್‌ಲೈನ್ ಮಾರಾಟ ಯಾವಾಗ ಪ್ರಾರಂಭವಾಗುತ್ತದೆ ಮತ್ತು ದುಬಾರಿ ಕೂಲರ್‌ಗಳು ಯಾವಾಗ ಅಗ್ಗವಾಗುತ್ತವೆ ಎಂದು ನಾವು ಕಾಯುತ್ತೇವೆ. ನೀವೂ ಸಹ ಅಗ್ಗದ ಬೆಲೆಯಲ್ಲಿ ಕೂಲರ್ ಖರೀದಿಸಲು ಯೋಚಿಸುತ್ತಿದ್ದರೆ ನಿಮಗಾಗಿ ಇಲ್ಲಿದೆ ಒಂದು ಸುವರ್ಣಾವಕಾಶ. ಇಲ್ಲಿ ನೀವು ಯಾವುದೇ ವಿಶೇಷ ಸೇಲ್ ಇಲ್ಲದೆಯೂ ಕೂಲರ್ ಅನ್ನು ಅಗ್ಗದ ದರದಲ್ಲಿ ಖರೀದಿಸಬಹುದು. 

ಹೌದು, ಫ್ಲಿಪ್ಕಾರ್ಟ್ನಲ್ಲಿ ಕೈಗೆಟುಕುವ ಬೆಲೆಯಲ್ಲಿ  ಲಭ್ಯವಿರುವ ಈ ಪೋರ್ಟಬಲ್ ಏರ್ ಕೂಲರ್ ಒಂದು ಲೀಟರ್ ನೀರಿನಲ್ಲಿ ಕೋಣೆಯನ್ನು ಶಿಮ್ಲಾದಂತೆ ತಂಪಾಗಿಸುತ್ತದೆ ಎಂದು ಹೇಳಲಾಗುತ್ತಿದೆ. ಅಷ್ಟು ಮಾತ್ರವಲ್ಲ, ಇದರ ಬಳಕೆಯಿಂದ  ವಿದ್ಯುತ್ ಬಿಲ್ ಕೂಡ ಕಡಿಮೆ ಬರಲಿದೆ ಎಂದು ಹೇಳಲಾಗುತ್ತಿದೆ. ಆ ಕೂಲರ್ ಯಾವುದು? ಅದರ ವೈಶಿಷ್ಟ್ಯತೆ ಏನು ಎಂದು ತಿಳಿಯೋಣ...

ಇದನ್ನೂ ಓದಿ- Dangerous Apps: ಸ್ಮಾರ್ಟ್‌ಫೋನ್‌ನಲ್ಲಿರುವ ಈ 7 ಆ್ಯಪ್‌ಗಳು ನಿಮ್ಮ ಅಕೌಂಟ್ ಖಾಲಿ ಮಾಡಬಹುದು, ಎಚ್ಚರ!

ಡ್ರೆಸ್ಝೋನ್ 3.99 ಲೀ ಕೊಠಡಿ/ವೈಯಕ್ತಿಕ ಏರ್ ಕೂಲರ್:
ಪೋರ್ಟಬಲ್ ಕೂಲರ್‌ನ ವಿಶೇಷತೆಯೆಂದರೆ ಇದು ತುಂಬಾ ಹಗುರವಾದ ಮತ್ತು ಸೊಗಸಾದ ವಿನ್ಯಾಸದಲ್ಲಿ ಬರುತ್ತದೆ. ಇದನ್ನು ಅಡುಗೆಮನೆ, ಕಛೇರಿ ಮೇಜಿನ ಮೇಲೆ ಅಥವಾ ಮಲಗುವ ಕೋಣೆಯಲ್ಲಿ ಮಲಗುವಾಗ ಮೇಜಿನ ಮೇಲೆ ಇರಿಸಬಹುದು. ಇದು ಕಡಿಮೆ ಶಕ್ತಿಯಲ್ಲಿ ಬಲವಾದ ಗಾಳಿಯನ್ನು ನೀಡುತ್ತದೆ. ಇದು ಚಿಕ್ಕ ಪೆಟ್ಟಿಗೆಯಂತೆ ಕಾಣುತ್ತದೆ, ಆದರೆ ಗಾಳಿಯ ವಿತರಣೆಯ ವಿಷಯದಲ್ಲಿ ಇದು ದೊಡ್ಡ ಕೂಲರ್‌ಗಳನ್ನು ಸೋಲಿಸುತ್ತದೆ ಎಂದು ಹೇಳಲಾಗುತ್ತಿದೆ. 

ಡ್ರೆಸ್ಝೋನ್ 3.99 ಲೀ ಕೊಠಡಿ/ವೈಯಕ್ತಿಕ ಏರ್ ಕೂಲರ್ ವೈಶಿಷ್ಟ್ಯಗಳು:
ಡ್ರೆಸ್ಝೋನ್ 3.99 ಲೀ ರೂಮ್/ಪರ್ಸನಲ್ ಏರ್ ಕೂಲರ್ ಕಡಿಮೆ ಶಕ್ತಿಯೊಂದಿಗೆ ಉತ್ತಮ ಗಾಳಿಯನ್ನು ನೀಡುತ್ತದೆ. ಯುಎಸ್‌ಬಿ ಸಹಾಯದಿಂದಲೂ ಇದನ್ನು ಚಲಾಯಿಸಬಹುದು. ಇದು ಮೂರು ಮೋಡ್‌ಗಳನ್ನು ಪಡೆಯುತ್ತದೆ, ಒಂದು ಕಡಿಮೆ, ಎರಡನೇ ಮಧ್ಯಮ ಮತ್ತು ಮೂರನೇ ಹೆಚ್ಚಿನ ಮೋಡ್‌ನಲ್ಲಿ ಕಾರ್ಯನಿರ್ವಹಿಸುತ್ತದೆ ಎನ್ನಲಾಗಿದೆ.

ಇದನ್ನೂ ಓದಿ- Whatsapp DigiLocker Service: ಈಗ ನಿಮ್ಮೊಂದಿಗೆ RC-DL ಒಯ್ಯುವ ಅಗತ್ಯವಿಲ್ಲ- ಎಲ್ಲವನ್ನು ವಾಟ್ಸಾಪ್‌ನಲ್ಲೇ ಡೌನ್‌ಲೋಡ್ ಮಾಡಿ

ಡ್ರೆಸ್ಝೋನ್ 3.99 ಲೀ ರೂಂ/ವೈಯಕ್ತಿಕ ಏರ್ ಕೂಲರ್ ಬೆಲೆ:
ಡ್ರೆಸ್‌ಝೋನ್ 3.99 ಲೀ ರೂಂ/ಪರ್ಸನಲ್ ಏರ್ ಕೂಲರ್‌ನ ಪ್ರಾರಂಭಿಕ ಬೆಲೆ ರೂ. 2,300 ಆಗಿದೆ, ಆದರೆ ಇದನ್ನು ಫ್ಲಿಪ್‌ಕಾರ್ಟ್ ಮಾರಾಟದಲ್ಲಿ ರೂ. 1,549 ಕ್ಕೆ ಖರೀದಿಸಬಹುದು. ಇದು ಸುಮಾರು 4 ಲೀಟರ್ ಸಂಗ್ರಹವನ್ನು ಹೊಂದಿದೆ. ಈ ಕೂಲರ್‌ನ ಎತ್ತರವು 16 ಸೆಂಟಿಮೀಟರ್‌ಗಳು ಮತ್ತು ತೂಕವು ತುಂಬಾ ಕಡಿಮೆಯಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News