ನಿಮ್ಮ ಮನೆಗೆ ಯಾವ ಬಲ್ಬ್ ಬೆಸ್ಟ್ ? ಎಲ್ಇಡಿ ಅಥವಾ ಸ್ಮಾರ್ಟ್ ಎಲ್ಇಡಿ?
LED Vs Smart LED: ಇಂದು ನಾವು ನಿಮಗೆ ಸ್ಮಾರ್ಟ್ LED ಬಲ್ಕ್‌ನ ವೈಶಿಷ್ಟ್ಯಗಳ ಬಗ್ಗೆ ಹೇಳಲಿದ್ದೇವೆ. ಮೊದಲಿಗೆ, ಸಾಮಾನ್ಯ ಎಲ್ಇಡಿ ಬಲ್ಬ್ ಬಗ್ಗೆ ತಿಳಿಯೋಣ.
LED Vs Smart LED : ಹೆಚ್ಚು ವಿದ್ಯುತ್ ಬಳಸುವ ಬಲ್ಬ್ ಗಳು ಮಾರುಕಟ್ಟೆಯಲ್ಲಿ ಸಿಗುತ್ತಿದ್ದ ಕಾಲವೊಂದಿತ್ತು. ಆದರೆ ಎಲ್ಇಡಿ ಬಲ್ಬ್ ಗಳ ಪರಿಚಯದೊಂದಿಗೆ, ಅತಿಯಾದ ವಿದ್ಯುತ್ ಬಳಕೆಯ ಬಲ್ಬ್ ಗಳ ಬಳಕೆಯೂ ಕಡಿಮೆಯಾಯಿತು. ಈಗ ಸ್ಮಾರ್ಟ್ ಎಲ್ ಇಡಿ ಬಲ್ಬ್ ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಆನ್‌ಲೈನ್ ಮತ್ತು ಆಫ್‌ಲೈನ್ ಮಾರುಕಟ್ಟೆಯಲ್ಲಿ ಈ ಬಲ್ಬ್ ಗಳು ಮಾರಾಟಕ್ಕೆ ಲಭ್ಯವಿದೆ. ಆದರೆ, ಎಲ್‌ಇಡಿ ಮತ್ತು ಸ್ಮಾರ್ಟ್ ಎಲ್‌ಇಡಿ ನಡುವಿನ ವ್ಯತ್ಯಾಸ ಅನೇಕರಿಗೆ ತಿಳಿದಿಲ್ಲ. ಈ ಕಾರಣದಿಂದ ಜನರು ಸ್ಮಾರ್ಟ್ ಎಲ್ಇಡಿಗಳನ್ನು ಖರೀದಿಸುವುದರಿಂದ ದೂರ ಸರಿಯುತ್ತಾರೆ. ಇಂದು ನಾವು ನಿಮಗೆ ಸ್ಮಾರ್ಟ್ LED ಬಲ್ಕ್‌ನ ವೈಶಿಷ್ಟ್ಯಗಳ ಬಗ್ಗೆ ಹೇಳಲಿದ್ದೇವೆ. ಮೊದಲಿಗೆ, ಸಾಮಾನ್ಯ ಎಲ್ಇಡಿ ಬಲ್ಬ್ ಬಗ್ಗೆ ತಿಳಿಯೋಣ.
ಎಲ್ ಇಡಿ ಬಲ್ಬ್ :
ಸಾಮಾನ್ಯ ಎಲ್ಇಡಿ ಬಲ್ಬ್ ಬಿಳಿ ಬಣ್ಣದ ಬೆಳಕನ್ನು ನೀಡುತ್ತದೆ. ಈ ಬಲ್ಬ್ ವಿದ್ಯುತ್ ಬಳಕೆಯನ್ನು ಕಡಿಮೆ ಮಾಡಲು ಸಹಾಯಕವಾಗಿದೆ. ಇದು ನಿಮ್ಮ ಅಧ್ಯಯನದಲ್ಲಿ ಅಥವಾ ಯಾವುದೇ ರೀತಿಯ ಪ್ರಮುಖ ಕೆಲಸಗಳನ್ನು ಅಡೆ ತಡೆ ಇಲ್ಲದೆ ಪೂರೈಸುವಂತೆ ಸಹಾಯ ಮಾಡುತ್ತದೆ.
ಇದನ್ನೂ ಓದಿ : iPhone 13ಗಿಂತಲೂ iPhone 14 Pro ಅಗ್ಗವಾಗಿದೆ! ಇಂದೇ ಖರೀದಿಸಿ
ಇದರ ಬೆಲೆ 50 ರೂ.ನಿಂದ ಆರಂಭವಾಗಿ 200 ರೂ.ವರೆಗೆ ಇರುತ್ತದೆ. ಆದರೆ ಬೆಲೆಯನ್ನು ವ್ಯಾಟ್ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. ಹೆಚ್ಚು ವ್ಯಾಟ್ ಬಲ್ಬ್ ಖರೀದಿಸಿದರೆ, ಹೆಚ್ಚು ಹಣವನ್ನು ಪಾವತಿಸಬೇಕಾಗುತ್ತದೆ. ಅವುಗಳ ಗಾತ್ರವೂ ತುಂಬಾ ಚಿಕ್ಕದಾಗಿರುತ್ತದೆ. ಆದರೆ, ಹೆಚ್ಚು ಬೆಳಕನ್ನು ನೀಡುತ್ತವೆ. ಮನೆಗೆ ಇದು ಅತ್ಯುತ್ತಮ ಆಯ್ಕೆಯಾಗಿದೆ.
ಸ್ಮಾರ್ಟ್ ಎಲ್ ಇಡಿ :
ಸ್ಮಾರ್ಟ್ LED ಗಾತ್ರವು ಸಾಮಾನ್ಯಕ್ಕಿಂತ ಸ್ವಲ್ಪ ದೊಡ್ಡದಾಗಿರುತ್ತದೆ. ಇದರ ಬೆಲೆಯೂ ಸ್ವಲ್ಪ ಹೆಚ್ಚು. ಹಲವಾರು ಗಾತ್ರಗಳಲ್ಲಿ ಇದು ಲಭ್ಯವಿದೆ. ನಿಮ್ಮ ಆಯ್ಕೆಯ ಪ್ರಕಾರ ಇದನ್ನು ಆಯ್ಕೆ ಮಾಡಬಹುದು. ಇದರ ವಿಶೇಷತೆ ಏನೆಂದರೆ ಇದನ್ನು ಯಾವುದೇ ಬಣ್ಣದಲ್ಲಿ ಬದಲಾಯಿಸಬಹುದು. ಇದರ ಬೆಲೆ 300 ರೂಪಾಯಿಗಳಿಂದ ಪ್ರಾರಂಭವಾಗಿ 1000 ರೂಪಾಯಿಗಳಿಗೆ ಏರುತ್ತದೆ. ಪಾರ್ಟಿ ಅಥವಾ ಅಮ್ಬಿಯೇನ್ಸ್ ಲೈಟನಿಂಗ್ ಗೆ ಇದನ್ನು ಬಳಸಲಾಗುತ್ತದೆ.
ಇದನ್ನೂ ಓದಿ : ಈ ದಿಕ್ಕಿನಲ್ಲಿ ವೈಫೈ ರೌಟರ್ ಅಳವಡಿಸಿ ಬಂಬಾಟ್ ಇಂಟರ್ನೆಟ್ ಸ್ಪೀಡ್ ಪಡೆಯಿರಿ!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.