Pragyana Rover on Moon : ಚಂದ್ರನ ದಕ್ಷಿಣ ಧ್ರುವದಲ್ಲಿ ವಿಕ್ರಮ್ ಲ್ಯಾಂಡರ್ ಗಟ್ಟಿಯಾಗಿ ನೆಲೆ ನಿಂತಿದೆ. ಪ್ರಗ್ಯಾನ್ ರೋವರ್ ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಾ ಒಂದೊಂದೇ ಮಾಹಿತಿಯನ್ನು ರವಾನಿಸುತ್ತಿದೆ. ಪ್ರಗ್ಯಾನ್ ಚಂದ್ರನ ಮೇಲ್ಮೈಯಿಂದ ಕಳುಹಿಸಿರುವ ಮಾಹಿತಿಯು ಬಹಳ ಉಪಯುಕ್ತವಾಗಿದೆ.
ವಿಕ್ರಮ್ ಮತ್ತು ಪ್ರಗ್ಯಾನ್ ಇರುವ ಚಂದ್ರನ ಭಾಗವು ದೊಡ್ಡ ಕುಳಿಗಳನ್ನು ಹೊಂದಿರುವ ಪ್ರದೇಶವಾಗಿದೆ. ಆದರೆ, ಆ ಪ್ರದೇಶ ನಿಧಿಯಿಂದ ತುಂಬಿವೆ ಎನ್ನುವುದು ಪ್ರಗ್ಯಾನ್ ನೀಡಿರುವ ಮಾಹಿತಿ. ಏಳು ದಿನಗಳ ಪ್ರಯಾಣದಲ್ಲಿ ಪ್ರಗ್ಯಾನ್ ರೋವರ್ ನೀಡಿದ ಮಾಹಿತಿಯ ಪ್ರಕಾರ ಆಮ್ಲಜನಕ, ಗಂಧಕ, ಕಬ್ಬಿಣ ಮತ್ತು ನಿಕಲ್ ಚಂದ್ರನ ಮೇಲೆ ಇದೆ ಎನ್ನುವುದು ಖಚಿತವಾಗಿದೆ. ಈ ಮಾಹಿತಿಯ ಆಧಾರದ ಮೇಲೆ ಹೇಳುವುದಾದರೆ ಮುಂಬರುವ ದಶಕಗಳಲ್ಲಿ ಚಂದ್ರನು ಮಾನವ ವಾಸಕ್ಕೆ ಒಂದು ಆಯ್ಕೆಯಾಗಬಹುದು ಎಂದು ಕೂಡಾ ಹೇಳಲಾಗುತ್ತಿದೆ.
ಇದನ್ನೂ ಓದಿ : Reliance Jio ಗ್ರಾಹಕರಿಗೊಂದು ಬಂಬಾಟ್ ಸುದ್ದಿ, ಈ ತಿಂಗಳವರೆಗೆ ದೇಶಾದ್ಯಂತ ಲಭ್ಯವಾಗಲಿದೆ 5G ಸೇವೆ!
ಚಂದ್ರನ ಮೇಲ್ಮೈಯಲ್ಲಿ ಏನೆಲ್ಲಾ ಇದೆ :
-ಆಕ್ಸಿಜನ್
-ಸಲ್ಫರ್
-ಕಬ್ಬಿಣ
-ನಿಕಲ್
-ಕ್ರೋಮಿಯಂ
-ಟೈಟಾನಿಯಮ್
-ಮ್ಯಾಂಗನೀಸ್
-ಸಿಲಿಕಾನ್
ನಮ್ಮ ಮುಂದಿದೆ ಮತ್ತೊಂದು ಆಯ್ಕೆ :
ಚಂದ್ರನ ಮೇಲೈಯಲ್ಲಿ ಆಮ್ಲಜನಕ ಇರುವ ಕಾರಣ, ನೀರಿನ ಸಾಧ್ಯತೆಯನ್ನು ಕೂಡಾ ತಳ್ಳಿ ಹಾಕುವಂತಿಲ್ಲ ಎನ್ನುತ್ತಾರೆ ತಜ್ಞರು. ಇನ್ನು ಇಲ್ಲಿ ಕಬ್ಬಿಣ ಪತ್ತೆಯಾಗಿದೆ. ಈ ಸಂಪನ್ಮೂಲವು ಭೂಮಿಯ ಮೇಲೆ ಸಂಪೂರ್ಣವಾಗಿ ಖಾಲಿಯಾದಾಗ, ಚಂದ್ರನು ಭವಿಷ್ಯದಲ್ಲಿ ಮಾನವ ಅಗತ್ಯಗಳನ್ನು ಪೂರೈಸಬಲ್ಲನು ಎನ್ನುವ ಅಂಶವನ್ನು ಕೂಡಾ ಇದು ಸೂಚಿಸುತ್ತದೆ. ಇದರೊಂದಿಗೆ ಸಿಲಿಕಾನ್, ಟೈಟಾನಿಯಂ ಪತ್ತೆ ಕೂಡಾ ಒಳ್ಳೆಯ ಸುದ್ದಿ. ಉದಾಹರಣೆಗೆ, ಭೂಮಿಯ ಮೇಲೆ ಈ ಸಂಪನ್ಮೂಲಗಳ ಕೊರತೆಯಾದಾಗ ನಮ್ಮ ಮುಂದೆ ಇನ್ನೊಂದು ಆಯ್ಕೆ ಇದೆ ಎನ್ನಬಹುದು.
ಇದನ್ನೂ ಓದಿ : iDay 2023: ಕೃತಕ ಬುದ್ಧಿಮತ್ತೆ ಆಧಾರಿತವಾಗಿರಲಿದೆ ಈ ಬಾರಿಯ 12ನೇ TiE Delhi-NCR iDay ಥೀಮ್, ಇಲ್ಲಿದೆ ಡೀಟೈಲ್ಸ್
ಆಗಸ್ಟ್ 23 ರಂದು ಯಶಸ್ವಿ ಲ್ಯಾಂಡಿಂಗ್ :
ಆಗಸ್ಟ್ 23 ರಂದು ಸಂಜೆ 6:00 ಗಂಟೆಗೆ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲ್ಮೈಯಲ್ಲಿ ಇಳಿದ ನಂತರ ಭಾರತ ಹೊಸ ಇತಿಹಾಸ ಬರೆಯಿತು. ಒಂದು ಕಡೆ ಈ ಯಶಸ್ಸನ್ನು ಸಾಧಿಸಿದ ನಾಲ್ಕು ದೇಶಗಳ ಸಾಲಿಗೆ ಭಾರತ ಸೇರಿದರೆ, ಮತ್ತೊಂದೆಡೆ, ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಲ್ಯಾಂಡಿಂಗ್ ಆದ ಮೊದಲ ದೇಶ ಭಾರತ ಎನ್ನುವುದು ಬಹು ದೊಡ್ಡ ಸಾಧನೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.