iPhone 13ಗಿಂತಲೂ iPhone 14 Pro ಅಗ್ಗವಾಗಿದೆ! ಇಂದೇ ಖರೀದಿಸಿ

iPhone 14 Pro: Amazonನಲ್ಲಿ iPhone 14 Pro ಬೆಲೆ ಗಣನೀಯವಾಗಿ ಕಡಿಮೆಯಾಗಿದೆ. ಇದು iPhone 13ಕ್ಕಿಂತ ಕಡಿಮೆ ಬೆಲೆಯಲ್ಲಿ ನಿಮಗೆ ಸಿಗಲಿದೆ. 55,999 ರೂಪಾಯಿಗೆ ನೀವು ಈ ಫೋನ್ ಖರೀದಿಸಬಹುದು. ಹೇಗೆ ಎಂದು ತಿಳಿಯಿರಿ.

Written by - Puttaraj K Alur | Last Updated : Aug 31, 2023, 10:18 AM IST
  • ಐಫೋನ್ 15 ಸರಣಿ ಬಿಡುಗಡೆಗೂ ಮುನ್ನವೇ iPhone 14 Pro ಬೆಲೆಯಲ್ಲಿ ಕುಸಿತ
  • ಇದೀಗ iPhone 13 ಬೆಲೆಗೆ iPhone 14 Pro ಖರೀದಿಸಲು ಸುವರ್ಣಾವಕಾಶ
  • ರಿಯಾಯಿತಿ, ಬ್ಯಾಂಕ್ ಮತ್ತು ಎಕ್ಸ್‌ಚೇಂಜ್ ಆಫರ್ ಮೂಲಕ ಕಡಿಮೆ ಬೆಲೆಗೆ ಖರೀದಿಸಿ
iPhone 13ಗಿಂತಲೂ iPhone 14 Pro ಅಗ್ಗವಾಗಿದೆ! ಇಂದೇ ಖರೀದಿಸಿ  title=
ಅಗ್ಗದ ಬೆಲೆಗೆ iPhone 14 Pro ಖರೀದಿಸಿ

ನವದೆಹಲಿ: ಐಫೋನ್ 15 ಸರಣಿಯ ಬಿಡುಗಡೆಗೆ 2 ವಾರ ಬಾಕಿಯಿದೆ.  ಸೋರಿಕೆಯಾಗಿರುವ ಮಾಹಿತಿ ಪ್ರಕಾರ ಐಫೋನ್ 15 ಸರಣಿಯ ಫೋನ್‌ಗಳಲ್ಲಿಯೂ ಅನೇಕ ಅಪ್‍ಡೇಟ್‍ಗಳನ್ನು ನೀವು ಕಾಣಬಹುದು. ಯುಎಸ್‌ಬಿ ಟೈಪ್-ಸಿ ಪೋರ್ಟ್ ಮತ್ತು ಆಕ್ಷನ್ ಬಟನ್ ಇದರಲ್ಲಿ ಕಾಣಬಹುದು ಎಂದು ಹೇಳಲಾಗಿದೆ. ಐಫೋನ್ 15 ಬಿಡುಗಡೆಗೆ ಮುಂಚೆಯೇ ಐಫೋನ್ 14 ಪ್ರೊ ಬೆಲೆ ಇದ್ದಕ್ಕಿದ್ದಂತೆ ಕಡಿಮೆಯಾಗಿದೆ. ಇದು 6.1-ಇಂಚಿನ ಸೂಪರ್ XDR OLED ಡಿಸ್ಪ್ಲೇ ಹೊಂದಿರುವ Appleನ ಟಾಪ್ ಎಂಡ್ ಮಾಡೆಲ್ ಆಗಿದೆ. ಇದು 120Hz ರಿಫ್ರೆಶ್ ರೇಟ್ ಹೊಂದಿದ್ದು, ಅಮೆಜಾನ್‌ನಲ್ಲಿ ಐಫೋನ್ 14 ಪ್ರೊ ಬೆಲೆ ಗಮನಾರ್ಹ ಕಡಿಮೆಯಾಗಿದೆ. ಇದು ಐಫೋನ್ 13ಗಿಂತಲೂ ಅಗ್ಗವಾಗಿದೆ.

iPhone 14 Pro ರಿಯಾಯಿತಿ

iPhone 14 Proನ 128GB ರೂಪಾಂತರದ ಬೆಲೆ 1,29,900 ರೂ. ಇದೆ. Amazonನ ಕೊಡುಗೆಯೊಂದಿಗೆ ಇದು ಅತ್ಯಂತ ಕಡಿಮೆ ಬೆಲೆಗೆ ನಿಮ್ಮದಾಗಬಹುದು. ಈ ಫೋನ್‌ ಮೇಲೆ ಶೇ.8ರಷ್ಟು ರಿಯಾಯಿತಿ ನೀಡಲಾಗುತ್ತಿದ್ದು, ಆಗ ಇದರ ಬೆಲೆ 1,19,999 ರೂ. ಆಗಲಿದೆ. ಬ್ಯಾಂಕ್ ಮತ್ತು ವಿನಿಮಯ ಕೊಡುಗೆಗಳು ಸಹ ಇದ್ದು, ಇವುಗಳ ಮೂಲಕ ಫೋನ್‌ನ ಬೆಲೆ ಗಮನಾರ್ಹ ಕಡಿಮೆಯಾಗುತ್ತದೆ.

ಇದನ್ನೂ ಓದಿ: ಈ ಚಿನ್ನದಂತಹ ಬೇಸಾಯ ಆರಂಭಿಸಿ ನೀವೂ ಕೂಡ ಕೋಟ್ಯಾಧಿಪತಿಯಾಗಬಹುದು!

iPhone 14 Pro ಬ್ಯಾಂಕ್ ಕೊಡುಗೆ

ನೀವು iPhone 14 Pro ಖರೀದಿಸಲು HDFC ಬ್ಯಾಂಕ್‌ನ ಕ್ರೆಡಿಟ್ ಕಾರ್ಡ್ ಬಳಸಿದರೆ 3 ಸಾವಿರ ರೂ.ಯಿಗಳ ರಿಯಾಯಿತಿ ಪಡೆಯುತ್ತೀರಿ. ಇದರ ನಂತರ ಎಕ್ಸ್‌ಚೇಂಜ್ ಆಫರ್ ಕೂಡ ಇದೆ.

iPhone 14 Pro ಇತರ ಕೊಡುಗೆಗಳು

iPhone 14 Proನಲ್ಲಿ 61 ಸಾವಿರ ರೂ.ವರೆಗೆ ವಿನಿಮಯ ಕೊಡುಗೆ ಇದೆ. ನಿಮ್ಮ ಹಳೆಯ ಫೋನ್ ವಿನಿಮಯ ಮಾಡಿಕೊಂಡರೆ ನೀವು ಇಷ್ಟು ರಿಯಾಯಿತಿ ಪಡೆಯಬಹುದು. ಆದರೆ ನಿಮ್ಮ ಹಳೆಯ ಫೋನ್‌ನ ಸ್ಥಿತಿ ಉತ್ತಮವಾಗಿರಬೇಕು ಮತ್ತು ಮಾಡೆಲ್ ಲೇಟೆಸ್ಟ್ ಆಗಿದ್ದರೆ ಮಾತ್ರ 61 ಸಾವಿರ ರೂ.ನ ಪೂರ್ಣ ಆಫರ್ ಲಭ್ಯವಾಗುತ್ತದೆ. ನೀವು ಸಂಪೂರ್ಣ ಆಫರ್ ಪಡೆದುಕೊಂಡರೆ ಫೋನ್‌ನ ಬೆಲೆ 55,999 ರೂ. ಆಗುತ್ತದೆ. ಅಂದರೆ iPhone 14 Proಅನ್ನು ನೀವು iPhone 13ಗಿಂತಲೂ ಕಡಿಮೆ ಬೆಲೆಗೆ ಖರೀದಿಸಬಹುದು.

ಇದನ್ನೂ ಓದಿ: ಭಾರತೀಯ ರೈಲ್ವೆಯ ಪ್ರಮುಖ ಅಪ್‌ಡೇಟ್ : ರೈಲು ಟಿಕೆಟ್‌ಗಳನ್ನು ಕಾಯ್ದಿರಿಸುವಾಗ ಈ ಅಂಶಗಳು ನೆನಪಿರಲೇಬೇಕು !

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News