ಬೆಂಗಳೂರು : ಉತ್ತಮ ಗುಣಮಟ್ಟದ ಫೋಟೋಗಳು ಮತ್ತು ವೀಡಿಯೊಗಳನ್ನು  ನಿರಂತರವಾಗಿ ಸ್ಮಾರ್ಟ್‌ಫೋನ್‌ನಲ್ಲಿ ರಿಸೀವ್ ಮಾಡುವ ಕಾರಣ ಫೋನ್ ಸ್ಲೋ ಆಗಲು ಆರಂಭವಾಗುತ್ತದೆ. ಒಂದು ಸಲ ಫೋನ್ ನಿಧಾನವಾಗಲು ಆರಂಭವಾದರೆ ಮತ್ತೆ ಯಾವ ಕೆಲಸವನ್ನು ಕೂಡಾ ಮಾಡುವುದು ಸಾಧ್ಯವಾಗುವುದಿಲ್ಲ. ಪದೇ ಪದೇ ಫೋನ್ ಹ್ಯಾಂಗ್ ಆಗುತ್ತದೆ. ಮಲ್ಟಿ ಟಾಸ್ಕಿಂಗ್ ಸಮಯದಲ್ಲಿಯೂ ಹಲವು ಬಾರಿ ಸ್ಮಾರ್ಟ್‌ಫೋನ್ ಹ್ಯಾಂಗ್ ಆಗಲು ಪ್ರಾರಂಭವಾಗುತ್ತದೆ. ಹೀಗಾದಾಗ ಯಾವ ಕೆಲಸವೂ ಸರಿಯಾಗಿ ಆಗುವುದಿಲ್ಲ. ಈ ಸಂದರ್ಭದಲ್ಲಿ ಸ್ಟೋರೇಜ್ ಖಾಲಿ ಮಾಡಬೇಕಾಗುತ್ತದೆ. ಸ್ಟೋರೇಜ್ ಖಾಲಿಯಾಗಬೇಕಾದರೆ ಫೋನ್ ನಲ್ಲಿರುವ ಡಾಟಾ ಡಿಲೀಟ್ ಮಾಡಬೇಕು. ಇಂಥಹ ಪರಿಸ್ಥಿತಿಯಲ್ಲಿ ಅಗತ್ಯ ಡಾಟಾವನ್ನು ಡಿಲೀಟ್ ಮಾಡದೇ, ಸ್ಮಾರ್ಟ್‌ಫೋನ್‌ನ ಸ್ಟೋರೇಜ್ ಖಾಲಿ ಮಾಡುವ ಸುಲಭ ವಿಧಾನ ಇಲ್ಲಿದೆ. 


COMMERCIAL BREAK
SCROLL TO CONTINUE READING

ಕ್ಯಾಶೆ, ವೀಡಿಯೊಗಳು ಮತ್ತು ಫೋಟೋಗಳಿಂದ ಉಂಟಾಗುವುದು ಸಮಸ್ಯೆ :  
ಪ್ರತಿದಿನ ಸ್ಮಾರ್ಟ್‌ಫೋನ್‌ನಲ್ಲಿ ಬಹಳಷ್ಟು ಕ್ಯಾಶೆ ಸಂಗ್ರಹವಾಗುತ್ತಲೇ ಇರುತ್ತದೆ. ಇದರೊಂದಿಗೆ, ವೀಡಿಯೊಗಳು ಮತ್ತು ಫೋಟೋಗಳು ಕೂಡಾ ಸ್ಟೋರೇಜ್ ಖಾಲಿ ಮಾಡುತ್ತದೆ.  ಹೀಗೆ ಸ್ಟೋರೇಜ್ ಫುಲ್ ಆಗುತ್ತಿದ್ದಂತೆಯೇ ಫೋನ್ ಹ್ಯಾಂಗ್ ಆಗುವ ಸಮಸ್ಯೆಯನ್ನು ಎದುರಿಸುತ್ತದೆ. ವೀಡಿಯೊ ಪ್ಲೇ ಮಾಡುವಾಗಲೂ ಸಮಸ್ಯೆ ಎದುರಾಗುತ್ತದೆ. ಹೀಗಾದಾಗ ಫೋನ್ ನಲ್ಲಿರುವ ಫೋಟೋ ಮತ್ತು ವಿಡಿಯೋಗಳನ್ನು ಡಿಲೀಟ್ ಮಾಡಬೇಕಾಗುತ್ತದೆ.  


ಇದನ್ನೂ ಓದಿ : ಸೆಲ್ಫ್ ಬ್ಯಾಲೆನ್ಸಿಂಗ್ ತಂತ್ರಜ್ಞಾನದೊಂದಿಗೆ ಬಂದಿದೆ ಹೊಸ ಎಲೆಕ್ಟ್ರಿಕ್ ಸ್ಕೂಟರ್ .! ಏನೇ ಆದರೂ ಬೀಳುವ ಭಯವಿಲ್ಲ


ಈ ಅಪ್ಲಿಕೇಶನ್‌ ಮೂಲಕ  ಸ್ಟೋರೇಜ್ ಖಾಲಿ ಮಾಡಬಹುದಾಗಿದೆ: 
ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಅತಿಯಾದ ಕ್ಯಾಶೆ ಸಂಗ್ರಹವಾಗಿದ್ದರೆ, ಜಂಕ್ ಫೈಲ್‌ಗಳು ಸಂಗ್ರಹವಾಗುತ್ತಿದ್ದರೆ, ಫೋಟೋಗಳು ಮತ್ತು ವೀಡಿಯೊಗಳು ಅತಿಯಾಗಿದ್ದರೆ, ಚಿಂತಿಸಬೇಕಾಗಿಲ್ಲ. ಒಮ್ಮೊಮ್ಮೆ ಜನರು ಸಾಮಾನ್ಯವಾಗಿ ಅಗತ್ಯವಿರುವ ಫೈಲ್‌ಗಳನ್ನು ಡಿಲೀಟ್ ಮಾಡುತ್ತಾರೆ. ಆದರೆ, ಈ ಪ್ರಕ್ರಿಯೆಯನ್ನು ಎಚ್ಚರಿಕೆಯಿಂದ ಪೂರ್ಣಗೊಳಿಸಬೇಕಾಗುತ್ತದೆ. ಸ್ಮಾರ್ಟ್‌ಫೋನ್‌ನಲ್ಲಿ ಸಣ್ಣ ಅಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡುವ ಮೂಲಕ ಈ ಕೆಲಸವನ್ನು ಮಾಡಬಹುದು. Google Play Storeನಿಂದ Storage Analyzer & Disk Usage ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬೇಕು. 


ಈ ಅಪ್ಲಿಕೇಶನ್‌ ಮೂಲಕ  ಸ್ಮಾರ್ಟ್‌ಫೋನ್‌ನಿಂದ ಯಾವ ಫೈಲ್ ಗಳನ್ನು ಡಿಲೀಟ್ ಮಾಡಬೇಕು, ಯಾವ ಫೈಲ್ ಗಳನ್ನು ಹಾಗೆಯೇ ಉಳಿಸಬೇಕು ಎನ್ನುವುದನ್ನು ಸುಲಭವಾಗಿ ತಿಳಿದುಕೊಳ್ಳಬಹುದು. ಈ ಪ್ರಕ್ರಿಯೆಯು ತುಂಬಾ ಸುಲಭ ಮತ್ತು ನೀವು Google Play Store ಗೆ ಭೇಟಿ ನೀಡುವ ಮೂಲಕ ಸಂಪೂರ್ಣ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು.  


ಇದನ್ನೂ ಓದಿ : Computer Mouse ಅನ್ನು ಮೌಸ್ ಅಂತ ಏಕೆ ಕರೆಯುತ್ತಾರೆ? ಅದರ ಈ ಮೊದಲ ಹೆಸರುಗಳೇನು ನಿಮಗೆ ಗೊತ್ತಾ?


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.