WhatsApp: ಇನ್ಮುಂದೆ ಇಂಟರ್ನೆಟ್ ಇಲ್ಲದೆಯೂ ವಾಟ್ಸಾಪ್ ಬಳಸಬಹುದು… ಹೇಗೆ ಗೊತ್ತಾ?

WhatsApp Proxy Support: ಪ್ರಾಕ್ಸಿ ಸರ್ವರ್ ಅನ್ನು ಆಯ್ಕೆ ಮಾಡುವುದರಿಂದ ಸಂಘಸಂಸ್ಥೆಗಳು ಸ್ಥಾಪಿಸಿದ ಸರ್ವರ್‌ಗಳ ಮೂಲಕ WhatsApp ಗೆ ಉಚಿತ ಮತ್ತು ಸುರಕ್ಷಿತ ಎಂಟ್ರಿಯಾಗಬಹುದು. ಇದು ಸ್ಥಳೀಯ ಸರ್ಕಾರಗಳು, ವಾಟ್ಸಾಪ್‌ಗೆ ನೇರ ಪ್ರವೇಶ ಮಾಡುವ ಜನರನ್ನು ಸೆನ್ಸಾರ್ ಮಾಡಲು ಅಥವಾ ನಿರ್ಬಂಧಿಸಲು ಮುಂದಾದ ದೇಶಗಳಿಗೆ ಸಹಾಯ ಮಾಡುತ್ತದೆ.

Written by - Bhavishya Shetty | Last Updated : Jan 9, 2023, 11:32 AM IST
    • ಪ್ರಾಕ್ಸಿ ಸರ್ವರ್ ಅನ್ನು ಆಯ್ಕೆ ಮಾಡುವುದರಿಂದ WhatsApp ಗೆ ಉಚಿತ ಮತ್ತು ಸುರಕ್ಷಿತ ಎಂಟ್ರಿಯಾಗಬಹುದು
    • ಸೆನ್ಸಾರ್ ಮಾಡಲು ಅಥವಾ ನಿರ್ಬಂಧಿಸಲು ಮುಂದಾದ ದೇಶಗಳಿಗೆ ಸಹಾಯ ಮಾಡುತ್ತದೆ
    • ಪ್ರಾಕ್ಸಿ ಮೂಲಕ WhatsAppಗೆ ಎಂಟ್ರಿಯಾಗಲು ನೀಡಿರುವ ಈ ಮಾರ್ಗ ಗೌಪ್ಯತೆ ಮತ್ತು ಭದ್ರತೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ
WhatsApp: ಇನ್ಮುಂದೆ ಇಂಟರ್ನೆಟ್ ಇಲ್ಲದೆಯೂ ವಾಟ್ಸಾಪ್ ಬಳಸಬಹುದು… ಹೇಗೆ ಗೊತ್ತಾ? title=
WhatsApp

WhatsApp Proxy Support: ಪ್ರತೀದಿನ ಅಂತರ್ಜಾಲದ ಬಳಕೆ ಹೆಚ್ಚಾಗುತ್ತಿದೆ. ಇದಕ್ಕೆ ತಕ್ಕಂತೆ ಸೋಶಿಯಲ್ ಮೀಡಿಯಾ, ತಂತ್ರಜ್ಞಾನವೂ ಸಹ ಅಭಿವೃದ್ಧಿ ಸಾಧಿಸುತ್ತಿದೆ. ಇದೀಗ WhatsApp ತನ್ನ ಬಳಕೆದಾರರಿಗೆ ಇಂಟರ್ನೆಟ್ ಸೆನ್ಸಾರ್‌ಶಿಪ್ ಅನ್ನು ಬೈಪಾಸ್ ಮಾಡಲು ಮತ್ತು ಅವರ ಸಂಪರ್ಕವನ್ನು ನಿರ್ಬಂಧಿಸಿದರೂ ಅಥವಾ ಅಡ್ಡಿಪಡಿಸಿದರೂ ಸಹ ಪ್ಲಾಟ್‌ಫಾರ್ಮ್‌ಗೆ ಪ್ರವೇಶವನ್ನು ನಿರ್ವಹಿಸಲು ಹೊಸ ಮಾರ್ಗವನ್ನು ಕಲ್ಪಿಸುತ್ತಿದೆ.

ಪ್ರಾಕ್ಸಿ ಸರ್ವರ್ ಅನ್ನು ಆಯ್ಕೆ ಮಾಡುವುದರಿಂದ ಸಂಘಸಂಸ್ಥೆಗಳು ಸ್ಥಾಪಿಸಿದ ಸರ್ವರ್‌ಗಳ ಮೂಲಕ WhatsApp ಗೆ ಉಚಿತ ಮತ್ತು ಸುರಕ್ಷಿತ ಎಂಟ್ರಿಯಾಗಬಹುದು. ಇದು ಸ್ಥಳೀಯ ಸರ್ಕಾರಗಳು, ವಾಟ್ಸಾಪ್‌ಗೆ ನೇರ ಪ್ರವೇಶ ಮಾಡುವ ಜನರನ್ನು ಸೆನ್ಸಾರ್ ಮಾಡಲು ಅಥವಾ ನಿರ್ಬಂಧಿಸಲು ಮುಂದಾದ ದೇಶಗಳಿಗೆ ಸಹಾಯ ಮಾಡುತ್ತದೆ.

ಇದನ್ನೂ ಓದಿ:  ದೇವೇಗೌಡರ ಬೆನ್ನಿಗೆ ಚೂರಿ ಹಾಕಿದ ‘ಮಾನಸಪುತ್ರ’ YSV ದತ್ತಾ: ಜೆಡಿಎಸ್ ಆಕ್ರೋಶ

ಪ್ರಾಕ್ಸಿ ಮೂಲಕ WhatsAppಗೆ ಎಂಟ್ರಿಯಾಗಲು ನೀಡಿರುವ ಈ ಮಾರ್ಗ, ಉನ್ನತ ಮಟ್ಟದ ಗೌಪ್ಯತೆ ಮತ್ತು ಭದ್ರತೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಬಳಕೆದಾರರ ಸಂದೇಶಗಳನ್ನು ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಮೂಲಕ ರಕ್ಷಿಸಲಾಗುತ್ತದೆ.

ಜನರ ಧ್ವನಿಯನ್ನು ಹತ್ತಿಕ್ಕಲು ಇತ್ತೀಚೆಗೆ ಅನೇಕ ರಾಷ್ಟ್ರಗಳು ಇಂಟರ್ನೆಟ್ ಸ್ಥಗಿತಗೊಳಿಸಿತ್ತು. ಇದಕ್ಕೆ ಪ್ರಮುಖ ಉದಾಹರಣೆ ಎಂದರೆ ಇರಾನ್‌ನಲ್ಲಿ ಮಹಿಳೆಯರು ಹಿಜಾಬ್ ನಿಯಮಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಇಂಟರ್ನೆಟ್ ಸ್ಥಗಿತ ಮಾಡಲಾಗಿತ್ತು. ಆದರೆ ಸಂವಹನ ನಡೆಸಲು ಸಹಾಯವಾಗುವಂತೆ WhatsApp ಪ್ರಪಂಚದಾದ್ಯಂತ ಪ್ರಾಕ್ಸಿ ಸಪೋರ್ಟ್ ನ್ನು ಹೊರತಂದಿತ್ತು.

WhatsApp ಪ್ರಾಕ್ಸಿ ಬೆಂಬಲ ಎಂದರೇನು ಮತ್ತು ಅದು ಹೇಗೆ ಕಾರ್ಯನಿರ್ವಹಿಸುತ್ತದೆ?

ಹೆಸರೇ ಸೂಚಿಸುವಂತೆ, ಪ್ರಾಕ್ಸಿ ಬೆಂಬಲವು ಪ್ರಪಂಚದಾದ್ಯಂತ ಸ್ವಯಂಸೇವಕರು ಮತ್ತು ಸಂಸ್ಥೆಗಳು ಸ್ಥಾಪಿಸಿದ ಸರ್ವರ್‌ಗಳ ಮೂಲಕ WhatsApp ಗೆ ಸಂಪರ್ಕಿಸಲು ಬಳಕೆದಾರರನ್ನು ಅನುಮತಿಸುತ್ತದೆ. ನೀವು ಇಂಟರ್ನೆಟ್ ಲಾಗಿನ್ ಹೊಂದಿದ್ದರೆ, ಪ್ರಾಕ್ಸಿಯನ್ನು ರಚಿಸಿದ ವಿಶ್ವಾಸಾರ್ಹ ಮೂಲಗಳಿಗಾಗಿ ನೀವು ಸಾಮಾಜಿಕ ಮಾಧ್ಯಮ ಅಥವಾ ಸರ್ಚ್ ಇಂಜಿನ್‌ಗಳ ಮೂಲಕ ಹುಡುಕಬಹುದು. WhatsApp ಗಾಗಿ ಪ್ರಾಕ್ಸಿ ಸರ್ವರ್ ಅನ್ನು ಹೇಗೆ ಸಂಪರ್ಕಿಸುವುದು ಎಂದು ತಿಳಿಯಲು, ನೀವು ಈ ಹಂತಗಳನ್ನು ಅನುಸರಿಸಬಹುದು:

Android ಫೋನ್‌ನಲ್ಲಿ ಪ್ರಾಕ್ಸಿಗೆ ಸಂಪರ್ಕ: 

  • ಚಾಟ್ಸ್ ಟ್ಯಾಬ್‌ನಲ್ಲಿ ಮೋರ್ ಆಪ್ಶನ್ > ಸೆಟ್ಟಿಂಗ್‌ ಮೇಲೆ ಕ್ಲಿಕ್ ಮಾಡಿ
  • ಸ್ಟೋರೇಜ್ ಮತ್ತು ಡೇಟಾ > ಪ್ರಾಕ್ಸಿ ಮೇಲೆ ಕ್ಲಿಕ್ ಮಾಡಿ
  • ಯೂಸ್ ಪ್ರಾಕ್ಸಿ ಕ್ಲಿಕ್ ಮಾಡಿ
  • ಸೆಟ್ ಪ್ರಾಕ್ಸಿ ಕ್ಲಿಕ್ ಮಾಡಿ ಮತ್ತು ಪ್ರಾಕ್ಸಿ ಅಡ್ರೆಸ್ ನ್ನು ನಮೂದಿಸಿ
  • ಸೇವ್ ಮಾಡಿ
  • ಸಂಪರ್ಕವು ಯಶಸ್ವಿಯಾದರೆ ಚೆಕ್ ಗುರುತು ತೋರಿಸುತ್ತದೆ
  • ಪ್ರಾಕ್ಸಿಯನ್ನು ಬಳಸಿಕೊಂಡು WhatsApp ಸಂದೇಶಗಳನ್ನು ಕಳುಹಿಸಲು ಅಥವಾ ಸ್ವೀಕರಿಸಲು ನಿಮಗೆ ಇನ್ನೂ ಸಾಧ್ಯವಾಗದಿದ್ದರೆ, ಆ ಪ್ರಾಕ್ಸಿಯನ್ನು ನಿರ್ಬಂಧಿಸಿರಬಹುದು. ನಿರ್ಬಂಧಿಸಲಾದ ಪ್ರಾಕ್ಸಿ ವಿಳಾಸವನ್ನು ಅಳಿಸಲು ನೀವು ಅದನ್ನು ಲಾಂಗ್ ಪ್ರೆಸ್ ಮಾಡಬೇಕು. ಬಳಿಕ ಮತ್ತೆ ಪ್ರಯತ್ನಿಸಲು ಹೊಸ ಪ್ರಾಕ್ಸಿ ವಿಳಾಸವನ್ನು ನಮೂದಿಸಿ.

Apple iPhone ನಲ್ಲಿ ಪ್ರಾಕ್ಸಿಗೆ ಸಂಪರ್ಕಿಸುವುದು ಹೇಗೆ?

  • WhatsApp ಸೆಟ್ಟಿಂಗ್‌ಗಳಿಗೆ ಹೋಗಿ
  • ಸ್ಟೋರೇಜ್ ಮತ್ತು ಡೇಟಾ > ಪ್ರಾಕ್ಸಿ ಟ್ಯಾಪ್ ಮಾಡಿ
  • ಯೂಸ್ ಪ್ರಾಕ್ಸಿ ಮೇಲೆ ಕ್ಲಿಕ್ ಮಾಡಿ.
  • ಪ್ರಾಕ್ಸಿ ವಿಳಾಸವನ್ನು ನಮೂದಿಸಿ ಮತ್ತು ಸಂಪರ್ಕಿಸಲು ಸೇವ್ ಮೇಲೆ ಕ್ಲಿಕ್ ಮಾಡಿ.
  • ಸಂಪರ್ಕವು ಯಶಸ್ವಿಯಾದರೆ ಚೆಕ್ ಗುರುತು ತೋರಿಸುತ್ತದೆ.
  • ಪ್ರಾಕ್ಸಿಯನ್ನು ಬಳಸಿಕೊಂಡು WhatsApp ಸಂದೇಶಗಳನ್ನು ಕಳುಹಿಸಲು ಅಥವಾ ಸ್ವೀಕರಿಸಲು ನಿಮಗೆ ಇನ್ನೂ ಸಾಧ್ಯವಾಗದಿದ್ದರೆ, ಆ ಪ್ರಾಕ್ಸಿಯನ್ನು ನಿರ್ಬಂಧಿಸಿರಬಹುದು. ಬೇರೆ ಪ್ರಾಕ್ಸಿ ವಿಳಾಸವನ್ನು ಬಳಸಿಕೊಂಡು ಮತ್ತೆ ಪ್ರಯತ್ನಿಸಿ.

ಇದನ್ನೂ ಓದಿ: ಚುನಾವಣಾ ಅಖಾಡಕ್ಕೆ ಇನ್ಸ್‌ಪೆಕ್ಟರ್ ಎಂಟ್ರಿ; ಕ್ಲಿಯರ್ ಆಯ್ತಂತೆ ಜೆಡಿಎಸ್ ಪಟ್ಟಿ..!

WhatsApp ನ ಬ್ಲಾಗ್ ಪ್ರಕಾರ, “ಪ್ರಾಕ್ಸಿ ಮೂಲಕ ಸಂಪರ್ಕಿಸುವುದು WhatsApp ಒದಗಿಸುವ ಉನ್ನತ ಮಟ್ಟದ ಗೌಪ್ಯತೆ ಮತ್ತು ಭದ್ರತೆಯನ್ನು ನಿರ್ವಹಿಸುತ್ತದೆ. ನಿಮ್ಮ ವೈಯಕ್ತಿಕ ಸಂದೇಶಗಳನ್ನು ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್‌ನಿಂದ ರಕ್ಷಿಸಲಾಗುತ್ತದೆ.  ಅವುಗಳು ನಿಮ್ಮ ಮತ್ತು ನೀವು ಸಂವಹನ ನಡೆಸುತ್ತಿರುವ ವ್ಯಕ್ತಿಯ ನಡುವೆ ಗೌಪ್ಯತೆಯನ್ನು ಸಾಧಿಸುತ್ತದೆ. ಪ್ರಾಕ್ಸಿ ಸರ್ವರ್‌ಗಳು, WhatsApp, ಅಥವಾ ಮೆಟಾ ಅಲ್ಲದ ನಡುವೆ ಯಾರಿಗೂ ಗೋಚರಿಸುವುದಿಲ್ಲ ಎಂದು ಖಚಿತಪಡಿಸುತ್ತದೆ” ಎಂದು ಹೇಳಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News