World's Smallest Smartphone: ಚೀನಾ ಮೂಲದ OEM, Mony (Chinese OME Money) ಇತ್ತೀಚೆಗಷ್ಟೇ ತನ್ನ Mony Mint ಹೆಸರಿನ ಸ್ಮಾರ್ಫೋನ್ ಅನ್ನು ಬಿಡುಗಡೆ ಮಾಡಿದ್ದು, ಇದು ವಿಶ್ವದ ಅತ್ಯಂತ ಚಿಕ್ಕ 4ಜಿ ಸ್ಮಾರ್ಟ್ ಫೋನ್ ಆಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಈ ಸ್ಮಾರ್ಟ್ ಫೋನ್ 3 ಇಂಚಿನ ಡಿಸ್ಪ್ಲೇ ಹೊಂದಿದೆ ಹಾಗೂ ಇದು ಪಾಮ್ ಫೋನ್ ಗಿಂತ ಗಾತ್ರದಲ್ಲಿ ಸ್ವಲ್ಪ ಚಿಕ್ಕದಾಗಿದೆ. ಪಾಮ್ ಫೋನ್ 3.3 ಇಂಚಿನ ಡಿಸ್ಪ್ಲೇ ಹೊಂದಿದೆ. ಮನಿ ಮಿಂಟ್ 89.5*45.5*11.5mm ಡೈಮೆನ್ಶನ್ ನೊಂದಿಗೆ ಬರುತ್ತದೆ. Mony Mint) ಬೆಲೆಯನ್ನು  $ 150 (ಅಂದಾಜು ರೂ 11,131)ಗೆ ನಿಗದಿಪಡಿಸಲಾಗಿದೆ. ಆದರೆ, ಅರ್ಲಿ ಬರ್ಡ್ ಕೊಡುಗೆಯ ಅಡಿ ಈ ಸಾಧನವನ್ನು ಕ್ರೌಡ್‌ಫಂಡಿಂಗ್ ವೆಬ್‌ಸೈಟ್‌ ಇಂಡಿಗೋಗೊದಲ್ಲಿ $ 100 (ಅಂದಾಜು ರೂ 7,421) ಗೆ ನೀಡಲಾಗುತ್ತಿದೆ. $ 100 ಅರ್ಲಿ ಬರ್ಡ್ ಸ್ಲಾಟ್‌ ಹೊರತುಪಡಿಸಿಯೂ ಕೂಡ ನೀವು $ 115 ಮತ್ತು $ 130 ಅರ್ಲಿ ಬರ್ಡ್, ಮತ್ತು ಇಂಡಿಗೊಗೊ ವಿಶೇಷ ಸ್ಲಾಟ್‌ಗಳಲ್ಲಿಈ ಮೊಬೈಲ್ ಅನ್ನು ಖರೀದಿಸಬಹುದು.  ನವೆಂಬರ್ ತಿಂಗಳಿನಲ್ಲಿ ಈ ಸ್ಮಾರ್ಟ್ ಫೋನ್ ವಿತರಣೆ ಆರಂಭಗೊಳ್ಳಲಿದೆ.


COMMERCIAL BREAK
SCROLL TO CONTINUE READING

Mony Mint ವೈಶಿಷ್ಟ್ಯತೆಗಳೇನು?
ಮೋನಿ ಮಿಂಟ್ ವಿಶ್ವದ ಅತ್ಯಂತ ಚಿಕ್ಕ 4ಜಿ ಸ್ಮಾರ್ಟ್ ಫೋನ್ (Smallest 4G Smartphone) ಎನ್ನಲಾಗುತ್ತಿದೆ. ಇದು ಎರಡು ಸಿಮ್ ಗಳ ಸಪೋರ್ಟ್ ಹೊಂದಿದೆ. 854×450 ಪಿಕ್ಸಲ್ ರೆಸೊಲ್ಯೂಶನ್ ನೊಂದಿಗೆ 3 ಇಂಚಿನ ಡಿಸ್ಪ್ಲೇ ಪರದೆ ಇದು ಹೊಂದಿದೆ. 1.5GHz ಸಾಮರ್ಥ್ಯದ ಕ್ವಾರ್ಡ್ ಕೋರ್ ಪ್ರೋಸೆಸರ್ ಜೊತೆಗೆ 3ಜಿಬಿ RAM ಹಾಗೂ 64GB ಆಂತರಿಕ ಶೇಖರಣಾ ಸಾಮರ್ಥ್ಯ ಇದು ಹೊಂದಿದೆ. ಇದರ ಶೇಖರಣಾ ಸಾಮರ್ಥ್ಯವನ್ನು SD ಕಾರ್ಡ್ ಸಹಾಯದಿಂದ ನೀವು 128 GBವರೆಗೆ ಹೆಚ್ಚಿಸಬಹುದು.


ಇದನ್ನೂ ಓದಿ-WhatsApp Tips: ಟೈಪ್ ಮಾಡದೇ ನೀವು ಸಂದೇಶಗಳನ್ನು ಕಳುಹಿಸಬಹುದೇ..?


ಗೂಗಲ್ ಅಂಡ್ರಾಯಿಡ್ 9 ಆಪರೇಟಿಂಗ್ ಸಿಸ್ಟಂ ಚಾಲಿತ ಈ ಫೋನ್ ಕಸ್ಟಮ್ ಸ್ಕಿನ್ ಟಾಪ್ ಹೊಂದಿದೆ. ಇದು 1250 mAh ಬ್ಯಾಟರಿ ಸಾಮರ್ಥ್ಯ ಹೊಂದಿದೆ. ಈ ಸ್ಮಾರ್ಟ್ ಫೋನ್ 5 MP ರೇರ್ ಕ್ಯಾಮೆರಾ ಹಾಗೂ 2MP  ಸೆಲ್ಫಿ ಕ್ಯಾಮೆರಾ ಹೊಂದಿದೆ. ಹೆಚ್ಚುವರಿಯಾಗಿ ಈ ಡಿವೈಸ್ ಅಮೇರಿಕ ಹಾಗೂ ಯುರೋಪಿಯನ್ ಬ್ರಾಂಡ್ ಗಳಿಗೆ ಸಪೋರ್ಟ್ ಮಾಡಲಿದೆ.


ಇದನ್ನೂ ಓದಿ-WhatsApp ನಲ್ಲಿ ಡೌನ್‌ಲೋಡ್ ಮಾಡಬಹುದು ಕೋವಿಡ್ -19 ಲಸಿಕೆ ಪ್ರಮಾಣಪತ್ರ : ಹೇಗೆ ಇಲ್ಲಿದೆ ನೋಡಿ 


ಒಂದು ವೇಳೆ ನೀವೂ ಕೂಡ ಈ ಸ್ಮಾರ್ಟ್ ಫೋನ್ ಅನ್ನು ಖರೀದಿಸಬೇಕು ಎಂದಾದಲ್ಲಿ  Indiegogo micro-site ಗೆ ಭೇಟಿ ನೀಡಿ, ಫೋನ್ ಅನ್ನು ಮುಂಗಡವಾಗಿ ಕಾಯ್ದಿರಿಸಬಹುದು. ಆದರೆ ಈ ಡಿವೈಸ್ ನಿಮಗೆ ನವೆಂಬರ್ ನಲ್ಲಿ ಕೈಸೇರಲಿದೆ.


ಇದನ್ನೂ ಓದಿ-BSNL ಗ್ರಾಹಕರಿಗೆ ಸಿಹಿ ಸುದ್ದಿ : 3 ಹೊಸ ಅದ್ಭುತ ಯೋಜನೆಗಳು ಜಾರಿಗೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ