ನವದೆಹಲಿ : ಭಾರತೀಯ ಸಂಚಾರ್ ನಿಗಮ್ ಲಿಮಿಟೆಡ್ ಅಂದರೆ BSNL ತನ್ನ ಗ್ರಾಹಕರಿಗೆ ಕೆಲವು ಹೊಸ ಯೋಜನೆಗಳನ್ನು ಜಾರಿಗೆ ತಂದಿದೆ. BSNL ತನ್ನ ಪ್ರಿಪೇಯ್ಡ್ ಬಳಕೆದಾರರಿಗೆ ತನ್ನ ಪ್ರತಿಸ್ಪರ್ಧಿಗಳಾದ ವೊಡಾಫೋನ್ ಐಡಿಯಾ, ಏರ್ಟೆಲ್, ಜಿಯೋ ವಿರುದ್ಧ ನಿಲ್ಲಲು ಮೂರು ಹೊಸ ಯೋಜನೆಗಳನ್ನು ಆರಂಭಿಸಿದೆ. ಈ ಯೋಜನೆ BSNL ರಾಜಸ್ಥಾನದ ಗ್ರಾಹಕರಿಗೆ.
ಪ್ರಸ್ತುತ BSNL ನ ಸೇವೆಗಳನ್ನು ಪಡೆಯದ ಗ್ರಾಹಕರೊಂದಿಗೆ ಸಂಪರ್ಕ ಸಾಧಿಸಲು BSNL ಪ್ರಯತ್ನಿಸುತ್ತಿದೆ. ಅಂತಹ ಗ್ರಾಹಕರು(BSNL Customer) ಈ ಆಕರ್ಷಕ ಯೋಜನೆಗಳೊಂದಿಗೆ ತಮ್ಮ ನಂಬರ್ ಅನ್ನು ಪುನಃ ಸಕ್ರಿಯಗೊಳಿಸಬಹುದು. ಕೆಲವು ದಿನಗಳ ಹಿಂದೆ, ಕಂಪನಿಯು ಪಂಜಾಬ್‌ನ ಗ್ರಾಹಕರಿಗೆ ಹೊಸ ಪ್ರಿಪೇಯ್ಡ್ ಯೋಜನೆಗಳನ್ನು ಪರಿಚಯಿಸಿತ್ತು. BSNL ನ ಈ ಮೂರು ಅದ್ಭುತ ಪ್ರಿಪೇಯ್ಡ್ ಯೋಜನೆಗಳು ಯಾವುವು ಎಂದು ನೋಡೋಣ ...
ಇದನ್ನೂ ಓದಿ : India's First e-Super Car: ಶೀಘ್ರವೇ ಮಾರುಕಟ್ಟೆಗೆ ಬರಲಿದೆ ಭಾರತದ ಮೊಟ್ಟಮೊದಲ e-Super Car, ಫುಲ್ ಚಾರ್ಜ್ ನಲ್ಲಿ 700 ಕಿ.ಮೀ ಮೈಲೇಜ್
187 ರೂ. ಎಸ್‌ಟಿವಿ ಯೋಜನೆ ಈಗ 139 ರೂ.ಗೆ
48 ರೂ.ಗಳ ರಿಯಾಯಿತಿಯಲ್ಲಿ ಲಭ್ಯವಿರುವ ಈ ಯೋಜನೆ(Recharge Plans)ಯಲ್ಲಿ, ಗ್ರಾಹಕರು ದಿನಕ್ಕೆ 2GB ಡೇಟಾ, ಅನಿಯಮಿತ ಕರೆ ಮತ್ತು ದಿನಕ್ಕೆ 100 SMS ಸಿಗಲಿದೆ. ಈ ಪ್ಲಾನ್ 28 ದಿನಗಳವರೆಗೆ ಮಾನ್ಯವಾಗಿರುತ್ತದೆ.
201 ರೂ. ಪ್ರಿಪೇಯ್ಡ್ ಯೋಜನೆ
BSNL ನ ಈ ಯೋಜನೆ GP I ಮತ್ತು GP II ವರ್ಗದಲ್ಲಿ ಬರುವ ರಾಜಸ್ಥಾನದ BSNL ಗ್ರಾಹಕರಿಗೆ. 90 ದಿನಗಳ ವ್ಯಾಲಿಡಿಟಿ(BSNL Validity) ಹೊಂದಿರುವ ಈ ಯೋಜನೆಯಲ್ಲಿ, ಗ್ರಾಹಕರು 300 ನಿಮಿಷಗಳ ಸ್ಥಳೀಯ ಮತ್ತು ಎಸ್‌ಟಿಡಿ ಕರೆಗಳ ಜೊತೆಗೆ 6 ಜಿಬಿ ಡೇಟಾ ಪ್ರಯೋಜನ ಸಿಗಲಿದೆ.
ಇದನ್ನೂ ಓದಿ : Xiaomiಯ ಈ Smartphone ಟಿವಿ ರಿಮೋಟ್ ಆಗಿಯೂ ಕೆಲಸ ಮಾಡಲಿದೆ..!
BSNL 1,400 ರೂ. ಯೋಜನೆ
ಮೂರನೇ ಎಸ್‌ಟಿವಿ ಯೋಜನೆ(BSNL STV Plan) 1,400 ರೂ. ಇದ್ದು ಈಗ 1,199 ರೂ.ಗಳ ರಿಯಾಯಿತಿಯಲ್ಲಿ ಲಭ್ಯವಿದೆ. ಈ ಯೋಜನೆಯ ಲಾಭವನ್ನು ಪಡೆಯುವ ಗ್ರಾಹಕರು, ಪೂರ್ಣ ವರ್ಷಕ್ಕೆ ಮಾನ್ಯವಾಗಿ ಅಂದರೆ 365 ದಿನಗಳು, ಸಂಪೂರ್ಣ ಮಾನ್ಯತೆಯ ಅವಧಿಗೆ 24GB ಡೇಟಾವನ್ನು ಪಡೆಯುತ್ತಾರೆ. ಈ ಯೋಜನೆಯಲ್ಲಿ ಗ್ರಾಹಕರಿಗೆ ದಿನಕ್ಕೆ 100 ಎಸ್‌ಎಂಎಸ್‌ಗಳನ್ನು ನೀಡಲಾಗುವುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ