WhatsApp ನಲ್ಲಿ ಡೌನ್‌ಲೋಡ್ ಮಾಡಬಹುದು ಕೋವಿಡ್ -19 ಲಸಿಕೆ ಪ್ರಮಾಣಪತ್ರ : ಹೇಗೆ ಇಲ್ಲಿದೆ ನೋಡಿ 

ವ್ಯಾಕ್ಸಿನೇಷನ್ ಪ್ರಮಾಣಪತ್ರವನ್ನು ಡೌನ್‌ಲೋಡ್ ಮಾಡಬಹುದಾದ ಹಲವು ಸ್ಥಳಗಳಿದ್ದರೂ, ಇಂದು, ವಾಟ್ಸಾಪ್ ಬಳಸಿ ಕೋವಿಡ್ -19 ಪ್ರಮಾಣಪತ್ರವನ್ನು ಡೌನ್‌ಲೋಡ್ ಮಾಡುವ ಹಂತ ಹಂತದ ಪ್ರಕ್ರಿಯೆಯನ್ನು ನಾವು ನಿಮಗೆ ತಿಳಿಸಿಕೊಡಲಿದ್ದೇವೆ.

Written by - Channabasava A Kashinakunti | Last Updated : Aug 6, 2021, 09:23 PM IST
  • ಮಾರ್ಚ್ 2020 ರಿಂದ ದೇಶದಲ್ಲಿ ಕೋವಿಡ್ -19 ತಾಂಡವಾಡುತ್ತಿದೆ
  • ನಿಮ್ಮ ವ್ಯಾಕ್ಸಿನೇಷನ್ ಪ್ರಮಾಣಪತ್ರವು ನಿಮ್ಮ ಆಧಾರ್ ಕಾರ್ಡ್‌ನಷ್ಟೇ ಮಹತ್ವ
  • ವಾಟ್ಸಾಪ್ ಬಳಸಿ ಕೋವಿಡ್ -19 ಪ್ರಮಾಣಪತ್ರವನ್ನು ಡೌನ್‌ಲೋಡ್
WhatsApp ನಲ್ಲಿ ಡೌನ್‌ಲೋಡ್ ಮಾಡಬಹುದು ಕೋವಿಡ್ -19 ಲಸಿಕೆ ಪ್ರಮಾಣಪತ್ರ : ಹೇಗೆ ಇಲ್ಲಿದೆ ನೋಡಿ  title=

ನವದೆಹಲಿ : ಮಾರ್ಚ್ 2020 ರಿಂದ ದೇಶದಲ್ಲಿ ಕೋವಿಡ್ -19 ತಾಂಡವಾಡುತ್ತಿದೆ. ಇದರಿಂದ ತಪ್ಪಿಸಿಕೊಳ್ಳಲು ಪ್ರತಿಯೊಬ್ಬರು ಲಸಿಕೆ ಹಾಕಿಸಿಕೊಳ್ಳಲು ಮುಂದಾಗುತ್ತಿದ್ದಾರೆ.

ಸಾಮಾನ್ಯ ಜೀವನಕ್ಕೆ ಹಿಂತಿರುಗಲು ಮತ್ತು ಪುನರಾರಂಭಿಸಲು, ಲಸಿಕೆ(Vaccin) ಮಾತ್ರ ಸಾಕಾಗುವುದಿಲ್ಲ, ಒಬ್ಬರು ಅದರ ಪುರಾವೆ ಅಥವಾ ಲಸಿಕೆ ಪ್ರಮಾಣಪತ್ರವನ್ನು ಸಹ ಹೊಂದಿರಬೇಕು. ಮುಂದಿನ ದಿನಗಳಲ್ಲಿ, ನಿಮ್ಮ ವ್ಯಾಕ್ಸಿನೇಷನ್ ಪ್ರಮಾಣಪತ್ರವು ನಿಮ್ಮ ಆಧಾರ್ ಕಾರ್ಡ್‌ನಷ್ಟೇ ಮಹತ್ವದ್ದಾಗಿರುತ್ತದೆ, ಆದ್ದರಿಂದ ಪ್ರಮಾಣಪತ್ರವನ್ನು ಡೌನ್‌ಲೋಡ್ ಮಾಡುವುದು ಮತ್ತು ಅದನ್ನು ಸುಲಭವಾಗಿ ಇಟ್ಟುಕೊಳ್ಳುವುದು ತುಂಬಾ ಮುಖ್ಯವಾಗಿದೆ.

ಇದನ್ನೂ ಓದಿ : Laptopನಿಂದಲೂ ಮಾಡಬಹುದು Whatsapp Video Call, ಈ ಸರಳ ವಿಧಾನವನ್ನು ತಿಳಿಯಿರಿ

ವ್ಯಾಕ್ಸಿನೇಷನ್ ಪ್ರಮಾಣಪತ್ರ(vaccination certificate)ವು ಸಾಮಾನ್ಯ ಜೀವನದ ಪುನರಾರಂಭಕ್ಕೆ ಸಹಾಯ ಮಾಡುವುದಲ್ಲದೆ ನಾಗರಿಕರಿಗೆ ನೆಗೆಟಿವ್ RT-PCR ಪ್ರಮಾಣಪತ್ರವಿಲ್ಲದೆ ರಾಜ್ಯದ ಗಡಿಯುದ್ದಕ್ಕೂ ಪ್ರಯಾಣಿಸಲು ಅನುವು ಮಾಡಿಕೊಡುತ್ತದೆ.

ವ್ಯಾಕ್ಸಿನೇಷನ್ ಪ್ರಮಾಣಪತ್ರವನ್ನು ಡೌನ್‌ಲೋಡ್ ಮಾಡಬಹುದಾದ ಹಲವು ಸ್ಥಳಗಳಿದ್ದರೂ, ಇಂದು, ವಾಟ್ಸಾಪ್ ಬಳಸಿ ಕೋವಿಡ್ -19 ಪ್ರಮಾಣಪತ್ರ(Covid-19 Certificate)ವನ್ನು ಡೌನ್‌ಲೋಡ್ ಮಾಡುವ ಹಂತ ಹಂತದ ಪ್ರಕ್ರಿಯೆಯನ್ನು ನಾವು ನಿಮಗೆ ತಿಳಿಸಿಕೊಡಲಿದ್ದೇವೆ.

ಇದನ್ನೂ ಓದಿ : BSNL ಗ್ರಾಹಕರಿಗೆ ಸಿಹಿ ಸುದ್ದಿ : 3 ಹೊಸ ಅದ್ಭುತ ಯೋಜನೆಗಳು ಜಾರಿಗೆ

1. MyGov ಕೊರೋನಾ ಸಹಾಯವಾಣಿ WhatsApp ನಂಬರ್ +91 9013151515 ಅನ್ನು ನಿಮ್ಮ ಮೊಬೈಲ್ ಫೋನ್‌ನಲ್ಲಿ ಸೇವ್ ಮಾಡಿಕೊಳ್ಳಿ.
2. ನೀವು ಸೇವ್ ಮಾಡಿದ ಮೇಲೆ ತಿಳಿಸಿದ ನಂಬರ್ ಚಾಟ್‌ಬಾಕ್ಸ್ ತೆರೆಯಿರಿ.
3. ಚಾಟ್ ವಿಂಡೋ ತೆರೆಯಿರಿ
4. ಮೆಸೇಜ್ ಬಾಕ್ಸ್ ನಲ್ಲಿ, ಡೌನ್‌ಲೋಡ್ ಪ್ರಮಾಣಪತ್ರ ಎಂದು ಟೈಪ್ ಮಾಡಿ
5. WhatsApp ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಬರುತ್ತದೆ.
6. MyGov ನೊಂದಿಗೆ WhatsApp ಚಾಟ್‌ಬಾಕ್ಸ್‌ನಲ್ಲಿ OTP ಯನ್ನು ಭರ್ತಿ ಮಾಡಿ
7. ಒಂದಕ್ಕಿಂತ ಹೆಚ್ಚು ವ್ಯಕ್ತಿಗಳು ನೋಂದಣಿಯಾಗಿದ್ದರೆ, ನೀವು ಯಾವ ಪ್ರಮಾಣಪತ್ರಗಳನ್ನು ಅಥವಾ ಯಾರಿಗಾಗಿ ಡೌನ್‌ಲೋಡ್ ಮಾಡಲು ಬಯಸುತ್ತೀರಿ ಎಂಬುದನ್ನು ಆಯ್ಕೆ ಮಾಡುವ ಆಯ್ಕೆಯನ್ನು ನಿಮಗೆ ನೀಡಲಾಗುತ್ತದೆ
8. ನಿಮಗೆ ಬೇಕಾದ ಪ್ರಮಾಣಪತ್ರವನ್ನು ಟೈಪ್ ಮಾಡಿ
9. ಚಾಟ್‌ಬಾಕ್ಸ್ ನಿಮಗೆ ನಿಮ್ಮ ಕೋವಿಡ್ -19 ವ್ಯಾಕ್ಸಿನೇಷನ್ ಪ್ರಮಾಣಪತ್ರವನ್ನು ಕಳುಹಿಸುತ್ತದೆ.
10. ವ್ಯಾಕ್ಸಿನೇಷನ್ ಪ್ರಮಾಣಪತ್ರವನ್ನು ಡೌನ್ಲೋಡ್ ಮಾಡಿ ಮತ್ತು ಭವಿಷ್ಯದ ಬಳಕೆಗಾಗಿ ಪ್ರಿಂಟ್ ಔಟ್ ತೆಗೆದುಕೊಳ್ಳಿ.

ಇದನ್ನೂ ಓದಿ : India's First e-Super Car: ಶೀಘ್ರವೇ ಮಾರುಕಟ್ಟೆಗೆ ಬರಲಿದೆ ಭಾರತದ ಮೊಟ್ಟಮೊದಲ e-Super Car, ಫುಲ್ ಚಾರ್ಜ್ ನಲ್ಲಿ 700 ಕಿ.ಮೀ ಮೈಲೇಜ್

ಪ್ರಮಾಣಪತ್ರಗಳನ್ನು CoWin ಅಪ್ಲಿಕೇಶನ್(CoWin App) ಅಥವಾ ಆರೋಗ್ಯ ಸೇತು ಆಪ್‌ನಿಂದ ಡೌನ್‌ಲೋಡ್ ಮಾಡಬಹುದು. ನಿಮ್ಮ ಕೋವಿಡ್ -19 ಪ್ರಮಾಣಪತ್ರವನ್ನು ನೀವು ಅಪರಿಚಿತರೊಂದಿಗೆ ಹಂಚಿಕೊಳ್ಳದಂತೆ ನೋಡಿಕೊಳ್ಳಿ ಏಕೆಂದರೆ ಅದು ನಿಮ್ಮ ಬಗ್ಗೆ ಸೂಕ್ಷ್ಮ ಮಾಹಿತಿಯನ್ನು ಹೊಂದಿರುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News