ನವದೆಹಲಿ : Xiaomi ಈ ವರ್ಷ ಹಲವಾರು ಹೊಸ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಇದರ ಗಮನವು ಕೈಗೆಟುಕುವ ಫೋನ್ ಗಳ ಮೇಲೆ ಮಾತ್ರವಲ್ಲದೆ ಮೌಲ್ಯದ ಫ್ಲ್ಯಾಗ್‌ಶಿಪ್‌ಗಳ ಮೇಲೆಯೂ ಇತ್ತು. Xiaomi 11 Lite 5G NE ನಂತರ, ಕಂಪನಿಯ  ಹೊಸ ಫೋನ್ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ. ಹ್ಯಾಂಡ್ಸೆಟ್ಟಿನ ಮಾದರಿಯು ರಹಸ್ಯವಾಗಿಯೇ  ಉಳಿದಿದೆ. ಆದರೆ ಮಾಹಿತಿ ಪ್ರಕಾರ, ಸ್ನಾಪ್ಡ್ರಾಗನ್ 870 SoC ಚಾಲಿತ ಫೋನ್ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಲಾಗಿದೆ. 


COMMERCIAL BREAK
SCROLL TO CONTINUE READING

ಚೀನೀ ಟಿಪ್ಸ್ಟರ್ ನಿಂದ ಬಹಿರಂಗ : 
ಮುಂಬರುವ Xiaomi ಪ್ರೀಮಿಯಂ ಮಿಡ್-ರೇಂಜ್ ಫೋನ್‌ನ ವಿಶೇಷಣಗಳನ್ನು ಬಾಲ್ಡ್ ಪಾಂಡಾ ಎಂಬ ವೀಬೋ ಬಳಕೆದಾರರು  ಬಹಿರಂಗಪಡಿಸಿದ್ದಾರೆ.  Xiaomiಯ ಈ  ಹ್ಯಾಂಡ್‌ಸೆಟ್ ನಲ್ಲಿ  ಸ್ನಾಪ್‌ಡ್ರಾಗನ್ 870 ಪ್ರೊಸೆಸರ್‌ ಅನ್ನು ಬಳಸಲಾಗಿದೆ. ಈ ವರ್ಷದ ಆರಂಭದಲ್ಲಿ ಬಿಡುಗಡೆಯಾದ Mi 11x ಕೂಡ ಅದೇ SoC ನಿಂದ ಚಾಲಿತವಾಗಿದೆ.


ಇದನ್ನೂ ಓದಿ : BSNL ಅದ್ಭುತ ಪ್ಲಾನ್: ನಿತ್ಯ 5 ಜಿಬಿ ಇಂಟರ್ನೆಟ್ ಜೊತೆಗೆ ಸಿಗಲಿದೆ ಈ ಸೌಲಭ್ಯ


ಕರ್ವೆಡ್ ಡಿಸ್ಪ್ಲೇ : 
Xiaomi ಹ್ಯಾಂಡ್‌ಸೆಟ್‌ನ ಡಿಸ್ಪ್ಲೇ,  ಕ್ಯಾಮೆರಾ ಮತ್ತು ಬ್ಯಾಟರಿಯನ್ನು ಟಿಪ್‌ಸ್ಟರ್ ಬಹಿರಂಗಪಡಿಸಿದ್ದಾರೆ. ಈ ಫೋನ್ ಕರ್ವೆಡ್ ಡಿಸ್ಪ್ಲೇಯನ್ನು ಹೊಂದಿದೆ. ಆದರೆ 2K ಪ್ಯಾನೆಲ್ ಬದಲಿಗೆ FHD+ ಡಿಸ್ಪ್ಲೇ ಹೊಂದಿದೆ. ಇದು 120Hz ರಿಫ್ರೆಶ್ ರೇಟ್ ಅನ್ನು ಬೆಂಬಲಿಸುತ್ತದೆ ಮತ್ತು ಸೆಲ್ಫಿ ಸ್ನ್ಯಾಪರ್‌ಗೆ ಪಂಚ್-ಹೋಲ್ ಅನ್ನು ಹೊಂದಿರುತ್ತದೆ. 


108 ಎಂಪಿ ಕ್ಯಾಮೆರಾ  : 
ಮುಂಬರುವ Xiaomi ಫೋನ್ ಹಿಂಭಾಗದಲ್ಲಿ 108MP ಪ್ರಾಥಮಿಕ ಕ್ಯಾಮೆರಾವನ್ನು ಹೊಂದಿರುತ್ತದೆ ಎಂದು ಟಿಪ್ಸ್ಟರ್ ಮೂಲಕ ತಿಳಿಯುತ್ತದೆ. ನಿಖರವಾದ ಸಂಖ್ಯೆಯ ಸೆನ್ಸರ್‌ಗಳನ್ನು ಇನ್ನೂ ದೃಢಪಡಿಸಿಲ್ಲ. ಈ ಡಿವೈಸ್ನಲ್ಲಿ 3x ಆಪ್ಟಿಕಲ್ ಜೂಮ್‌ನೊಂದಿಗೆ ಹೆಚ್ಚುವರಿ ಟೆಲಿಫೋಟೋ ಸೆನ್ಸರ್ ಅನ್ನು ಅಳವಡಿಸಲಾಗಿದೆ ಎನ್ನಲಾಗಿದೆ. 


ಇದನ್ನೂ ಓದಿ : Mobile Virus : ನಿಮ್ಮ ಮೊಬೈಲ್ ಗೆ ಈ ಮೆಸೇಜ್ ಬಂದಿದೆಯಾ? ಹಾಗಿದ್ರೆ ಎಚ್ಚರ - ಇದು ವೈರಸ್ ಆಗಿರಬಹುದು!


5000mAH ಬ್ಯಾಟರಿ :
ಹೊಸ Xiaomi ಫೋನ್ ಸೆಲ್ಫಿಗಳಿಗಾಗಿ 20MP ಕ್ಯಾಮೆರಾ ಮತ್ತು 5,000 mAh ಬ್ಯಾಟರಿಯನ್ನು ಹೊಂದಿರುತ್ತದೆ. ಇದು 67W ವೇಗದ ಚಾರ್ಜಿಂಗ್ (Charging) ಅನ್ನು ಬೆಂಬಲಿಸುತ್ತದೆ ಎಂದು ಹೇಳಲಾಗಿದೆ. ಫೋನ್ ಅನ್ನು ವರ್ಷದ ಅಂತ್ಯದ ವೇಳೆಗೆ ಅಥವಾ 2022 ರ ಆರಂಭದಲ್ಲಿ ಬಿಡುಗಡೆ ಮಾಡಬಹುದು. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.