ನವದೆಹಲಿ: Xiaomiನ Redmi ಸರಣಿಯು ಬಹಳ ಜನಪ್ರಿಯವಾಗಿದೆ ಮತ್ತು ಈ ಸರಣಿಯ ಫೋನ್ ಗಳಿಗೆ   ಮಾರುಕಟ್ಟೆಯಲ್ಲಿ ಬಹಳಷ್ಟು ಬೇಡಿಕೆ ಇದೆ. ಇತರ ಗ್ರಾಹಕರಂತೆ ನೀವು ಕೂಡ ಈ ಸರಣಿಯ ಮುಂದಿನ ಸ್ಮಾರ್ಟ್‌ಫೋನ್‌ಗಾಗಿ ಕಾಯುತ್ತಿದ್ದರೆ, ನಿಮ್ಮ ನಿರೀಕ್ಷೆ ಕೊನೆಯಾಗಲಿದೆ.  Redmi 9 ಬಿಡುಗಡೆಯಾದ ಒಂದು ವರ್ಷದ ನಂತರ, Xiaomi ತನ್ನ ಹೊಸ ಮಾಡೆಲ್ ಅಂದರೆ Redmi 10 ಅನ್ನು ಬಿಡುಗಡೆ ಮಾಡಲಿ. ಶಿಯೋಮಿ ತನ್ನ ಟ್ವಿಟರ್ ಖಾತೆಯ ಮೂಲಕ ಈ ಮಾಹಿತಿಯನ್ನು ನೀಡಿದೆ. 


COMMERCIAL BREAK
SCROLL TO CONTINUE READING

 ಹೇಗಿರುತ್ತದೆ Redmi 10?:
ಈ  ಫೋನ್ ಅನ್ನು ಪ್ರಚಾರ ಮಾಡುವ ಉದ್ದೇಶದಿಂದ ಕಂಪನಿಯು ತನ್ನ ಟ್ವಿಟರ್ (twitter)ಖಾತೆಯಲ್ಲಿ ಟೀಸರ್ ಮತ್ತು ಪೋಸ್ಟರ್ ಗಳನ್ನು ಬಿಡುಗಡೆ ಮಾಡುತ್ತಿದೆ.  ಇವುಗಳ ಮೂಲಕ, ರೆಡ್ಮಿ 10 ರ ವೈಶಿಷ್ಟ್ಯಗಳ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಪೋಸ್ಟರ್ ಒಂದರಲ್ಲಿ, ರೆಡ್ಮಿ 10 ರ ಮಧ್ಯದಲ್ಲಿ, ಹಿಂಭಾಗದಲ್ಲಿ ಒಂದು ಪಂಚ್ ಹೋಲ್ ಕಾಣಿಸುತ್ತದೆ. ಇದು Redmi 9 ರಲ್ಲಿ ಇರಲಿಲ್ಲ. Redmi 10 ರ ವಿನ್ಯಾಸದಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಲಾಗಿದೆ.  ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಹಿಂಭಾಗದ ಬದಲಾಗಿ, ಫೋನಿನ್ ಸೈಡ್ ನಲ್ಲಿ ಹಾಕಲಾಗಿದೆ. ಇದು ಪವರ್ ಬಟನ್ ಆಗಿಯೂ ಕಾರ್ಯನಿರ್ವಹಿಸುತ್ತದೆ. ಈ ಫೋನಿನಲ್ಲಿರುವ ಆಡಿಯೋ ಜಾಕ್ ಅನ್ನು ಕೂಡ ಮೇಲ್ಭಾಗದಲ್ಲಿದೆ. ಈ ಫೋನ್ ಕಾರ್ಬನ್ ಗ್ರೇ, ಪೆಬ್ಬಲ್ ವೈಟ್ ಮತ್ತು ಸೀ ಬ್ಲೂ ಎಂಬ ಮೂರು ಬಣ್ಣಗಳಲ್ಲಿ ಲಭ್ಯವಿರುತ್ತದೆ ಎಂದು ಟೀಸರ್‌ಗಳು ಮತ್ತು ಪೋಸ್ಟರ್‌ಗಳ ಮೂಲಕ ಬಹಿರಂಗಪಡಿಸಲಾಗಿದೆ.


ಇದನ್ನೂ ಓದಿ : WhatsApp Scam Alert! WhatsApp ಬಳಕೆದಾರರೇ ಈಗಲೇ ಎಚ್ಚೆತ್ತುಕೊಂಡು ಈ ಸುದ್ದಿಯನ್ನೊಮ್ಮೆ ಓದಿ


ಈ ಫೋನಿನ ಫೀಚರ್ : 
Redmi 10 ನ ರಿಫ್ರೆಶ್ ರೇಟ್ಅನ್ನು  60Hz ನಿಂದ 90Hz ಗೆ ಹೆಚ್ಚಿಸಲಾಗಿದೆ ಎಂಬುದನ್ನು, ಕಂಪನಿ ಬಹಿರಂಗಪಡಿಸಿದೆ. ಅಲ್ಲದೆ, ಇದು FHD+ ಸ್ಕ್ರೀನ್ ನೊಂದಿಗೆ ಕ್ವಾಡ್-ಕ್ಯಾಮೆರಾ ಸೆಟಪ್ ಅನ್ನು ಹೊಂದಿರುತ್ತದೆ. ಇದರ ಮೈನ್ ಸೆನ್ಸಾರ್ 50MP ಆಗಿರುತ್ತದೆ. ಈ ಫೋನಿನಲ್ಲಿ ಸ್ಟೀರಿಯೋ ಸ್ಪೀಕರ್‌ಗಳು ಕೂಡ ಇರಲಿವೆ.


Redmi 10ನ  ಇತರ ವೈಶಿಷ್ಟ್ಯಗಳು :
ಕಂಪನಿಯ ಅಧಿಕೃತ ಮಾಹಿತಿಯ ಹೊರತಾಗಿ, Redmi 10 ನ ಕೆಲವು ವೈಶಿಷ್ಟ್ಯಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ವೈಶಿಷ್ಟ್ಯಗಳು ಸೋರಿಕೆಯ ಮೂಲಕ ಮುಂಚೂಣಿಗೆ ಬಂದಿವೆ.  Redmi 10  ಸ್ಕ್ರೀನ್ 6.5-ಇಂಚುಗಳಷ್ಟಿರುತ್ತದೆ ಮತ್ತು ಅದರ ರಿಫ್ರೆಶ್ ರೇಟ್ ಸ್ಕ್ರೀನ್ ಕಂಟೆಂಟ್ ಗೆ ತಕ್ಕಂತೆ ಬದಲಾಗುತ್ತದೆ. ವರದಿಗಳನ್ನು ನಂಬುವುದಾದರೆ, Redmi 10 ಅನ್ನು Helio G88 ಪ್ರೊಸೆಸರ್ ಮೂಲಕ ನಡೆಸಬಹುದು ಮತ್ತು ಗ್ರಾಹಕರು 5,000WAh ಬ್ಯಾಟರಿಯೊಂದಿಗೆ 18W ವೇಗದ ಚಾರ್ಜಿಂಗ್ ಅನ್ನು ಸಹ ಪಡೆಯುತ್ತಾರೆ.


ಇದನ್ನೂ ಓದಿ : Viral Video: ಭೂಮಿಗಪ್ಪಳಿಸಿದ Asteroid, ಬಾಹ್ಯಾಕಾಶ ತಲುಪಿದ ಡೈನೋಸಾರ್ಗಳು


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ