Yamaha Aerox S Launched: ಭಾರತದಲ್ಲಿ ಯಮಹಾ ಮೋಟಾರ್ ಇಂಡಿಯಾ (Yamaha Motor India) ಕಂಪನಿ ಏರೋಕ್ಸ್ ಸ್ಕೂಟರ್‌ನ ಹೊಸ ರೂಪಾಂತರವನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಲಭ್ಯವಾಗಲಿರುವ  ಯಮಹಾ ಏರಾಕ್ಸ್  ಎಸ್. ಆವೃತ್ತಿಯು ಕೀ ಲೆಸ್ ಇಗ್ನಿಷನ್ ಮತ್ತು ಇತರ ಕೆಲವು ವೈಶಿಷ್ಟ್ಯಗಳನ್ನು ಒಳಗೊಂಡಿರುವುದು ತುಂಬಾ ವಿಶೇಷವಾಗಿದೆ. ಈ ಸ್ಕೂಟರ್‌ನ ಬೆಲೆ, ಇದರ ವೈಶಿಷ್ಟ್ಯಗಳ ಬಗ್ಗೆ ತಿಳಿಯೋಣ... 


COMMERCIAL BREAK
SCROLL TO CONTINUE READING

ಯಮಹಾ ಏರಾಕ್ಸ್  ಎಸ್. ಕೀ ಲೆಸ್ ಇಗ್ನಿಷನ್ ಜೊತೆಗೆ ಲಭ್ಯವಿರುವ ಸ್ಕೂಟರ್: 
ಮೊದಲೇ ತಿಳಿಸಿದಂತೆ ಯಮಹಾ ಏರೋಕ್ಸ್  ಎಸ್. ಸ್ಕೂಟರ್‌ನ ಹೊಸ ರೂಪಾಂತರ (Yamaha Aerox S A new variant of the scooter) ಪ್ರಮುಖ ವೈಶಿಷ್ಟ್ಯವೆಂದರೆ ಇದು ಕೀ ಲೆಸ್  ಇಗ್ನಿಷನ್ ಅನ್ನು ಒಳಗೊಂಡಿದೆ. ಸ್ಕೂಟರ್ ಅನ್ನು ಚಲಾಯಿಸಲು ಇದಕ್ಕೆ ಸ್ಮಾರ್ಟ್ ಕೀಯನ್ನು ನೀಡಲಾಗಿದೆ. 


ಸ್ಮಾರ್ಟ್ ಕೀಯಲ್ಲಿರುವ ಬಟನ್ ಅನ್ನು ಒತ್ತುವ ಮೂಲಕ ಗ್ರಾಹಕರು ಸ್ಕೂಟರ್ ಅನ್ನು ಸುಲಭವಾಗಿ ಪತ್ತೆ ಮಾಡಬಹುದು. ಅಷ್ಟೇ ಅಲ್ಲ, ಈ ಸ್ಮಾರ್ಟ್ ಕೀ ಬಟನ್ ಒತ್ತಿದರೆ, ಸ್ಕೂಟರ್‌ನ ಸೂಚಕಗಳು ಬ್ಲಿಂಕ್ ಆಗುತ್ತವೆ. ಅಷ್ಟೇ ಅಲ್ಲದೆ, ಇದರಲ್ಲಿ ವಿಶೇಷ ಧ್ವನಿ ಆಯ್ಕೆಯನ್ನು ಕೂಡ ಅಳವಡಿಸಲಾಗಿದೆ. ಈ ಸ್ಕೂಟರ್‌ನ ಪ್ರಮುಖ ಸ್ಥಳಗಳಲ್ಲಿ ನಾಬ್ ಒದಗಿಸಲಾಗಿದ್ದು, ಇದನ್ನು ತಿರುಗಿಸುವ ಮೂಲಕ ಸ್ಕೂಟರ್ ಅನ್ನು ಪಾರ್ಕ್ ಮಾಡುವುದು, ಇದರ ಇಂಧನ ಟ್ಯಾಂಕ್ ತೆರೆಯುವುದು ತುಂಬಾ ಸುಲಭವಾಗಲಿದೆ. 


ಇದನ್ನೂ ಓದಿ- Pleasure Plus Xtec Sports ಸ್ಕೂಟರ್ ಬಿಡುಗಡೆ ಮಾಡಿದ Hero! ಅದು ಕೂಡಾ ಕಡಿಮೆ ಬೆಲೆಯಲ್ಲಿ !


ವಿಶಿಷ್ಟ ಲಾಕ್-ಅನ್ಲಾಕ್ ವೈಶಿಷ್ಟ್ಯ: 
ಯಮಹಾದ ಹೊಸ ಏರೋಕ್ಸ್ ಎಸ್ ರೂಪಾಂತರದಲ್ಲಿ  ಸ್ಮಾರ್ಟ್ ಕೀಲಿಯೊಂದಿಗೆ (Smart Key) ಇಮೊಬಿಲೈಜರ್ ವೈಶಿಷ್ಟ್ಯವನ್ನು ನೀಡಲಾಗಿದೆ. ಈ ಸ್ಮಾರ್ಟ್ ಕೀ ಸ್ಕೂಟರ್‌ನ ವ್ಯಾಪ್ತಿಯಿಂದ ಹೊರಗೆ ಹೋದಾಗ, ಈ ವೈಶಿಷ್ಟ್ಯವು ಸ್ವಯಂಚಾಲಿತವಾಗಿ ಸ್ಕೂಟರ್ ಅನ್ನು ಲಾಕ್ ಮಾಡುತ್ತದೆ. ಈ ವೈಶಿಷ್ಟ್ಯಗಳನ್ನು ಹೊರತುಪಡಿಸಿ, ಯಾವುದೇ ಗಮನಾರ್ಹ ಬದಲಾವಣೆಗಳನ್ನು ಮಾಡಲಾಗಿಲ್ಲ. ಅರ್ಥಾತ್, ಮೊದಲಿನಂತೆ, ಸ್ಕೂಟರ್ ಎಲ್ಇಡಿ ಲೈಟಿಂಗ್, ಚಾರ್ಜಿಂಗ್ ಸಾಕೆಟ್, ಸ್ಟಾರ್ಟ್-ಸ್ಟಾಪ್ ತಂತ್ರಜ್ಞಾನ, ಬ್ಲೂಟೂತ್ ಕನೆಕ್ಟಿವಿಟಿ ಮತ್ತು ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಹೊಂದಿದೆ. 


ಟೈರ್ ಮತ್ತು ಸ್ಟೋರೇಜ್:  
ಯಮಹಾದ ಹೊಸ ಏರೋಕ್ಸ್ ಎಸ್ (Yamaha's new Aerox S) ರೂಪಾಂತರವು 14-ಇಂಚಿನ ಮುಂಭಾಗ ಮತ್ತು ಹಿಂಭಾಗದ ಚಕ್ರಗಳನ್ನು ಹೊಂದಿದೆ. ಅದರ ಹಿಂದಿನ ಟೈರ್ 140-ಸೆಕ್ಷನ್ ದಾಗಿದೆ.  ಇದಲ್ಲದೆ,  Aerox S 25 ಲೀಟರ್ ಅಂಡರ್ ಸೀಟ್ ಸ್ಟೋರೇಜ್ ಸೌಲಭ್ಯವನ್ನು ಕೂಡ ಒಳಗೊಂಡಿದೆ.  ಅದರ ತೂಕ 126 ಕೆಜಿ. 


ಇದನ್ನೂ ಓದಿ- Internet Speed ಕಡಿಮೆಯಾಗಿದೆಯಾ? ಈ ನಾಲ್ಕು ಟಿಪ್ಸ್ ಅನುಸರಿಸಿ, ಸೂಪರ್ ಫಾಸ್ಟ್ ವೇಗದಲ್ಲಿ ಡೌನ್ಲೋಡ್ ಮಾಡಿ!
 
ಎಂಜಿನ್ ಮತ್ತು ಗೇರ್ ಬಾಕ್ಸ್: 

ಸಾಮಾನ್ಯ ರೂಪಾಂತರದಂತೆ, ಹೊಸ ಯಮಹಾ ಏರಾಕ್ಸ್ ಎಸ್ ಸಹ 155cc, ಸಿಂಗಲ್-ಸಿಲಿಂಡರ್ VVA ಎಂಜಿನ್‌ನಿಂದ ಚಾಲಿತವಾಗುತ್ತದೆ. ಇದು 8,000rpm ನಲ್ಲಿ 15bhp ಪವರ್ ಮತ್ತು 6500rpm ನಲ್ಲಿ 13.9Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು ಸಿವಿಟಿ ಗೇರ್ ಬಾಕ್ಸ್ ಹೊಂದಿದೆ ಎಂದು ಕಂಪನಿ ಹೇಳಿಕೊಂಡಿದೆ. 


ಹೊಸ ಯಮಹಾ ಏರಾಕ್ಸ್ ಎಸ್ ಬೆಲೆ: 
ಹೊಸ ಯಮಹಾ ಏರಾಕ್ಸ್ ಎಸ್ ಆವೃತ್ತಿಯ ಎಕ್ಸ್ ಶೋ ರೂಂ ಬೆಲೆ 1,50,000 ರೂ. ಗಳು, ಇದರ ಸ್ಟ್ಯಾಂಡರ್ಡ್ ಮಾದರಿಗೆ 3300 ರೂ. ಹೆಚ್ಚುವರಿಯಾಗಿ ಪಾವತಿಸಬೇಕಾಗುತ್ತದೆ. ಇದು ಸಿಲ್ವರ್ ಮತ್ತು ರೇಸಿಂಗ್ ಬ್ಲೂ ಎರಡು ಬಣ್ಣ ಆಯ್ಕೆಗಳಲ್ಲಿ ಲಭ್ಯವಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.