ನವದೆಹಲಿ: ಇಂದಿನ ದಿನಗಳಲ್ಲಿ ಎಲ್ಲಿ ನೋಡಿದರೂ ಸ್ಮಾರ್ಟ್ ಫೋನ್ (Smartphone) ಕ್ರೇಜ್ ಹೆಚ್ಚುತ್ತಿದೆ. ಹೀಗಿರುವಾಗ 12,990 ರೂಗಳ ಬೆಲೆಯ ಸ್ಮಾರ್ಟ್‌ಫೋನ್ ಕೇವಲ 790 ರೂಪಾಗಳಿಗೆ ಸಿಗುತ್ತದೆ ಎಂದಾದರೆ? ಒಮ್ಮೆಲೆ ಇದನ್ನು ನಂಬುವುದು ಕಷ್ಟ . ಆದರೆ ಇದು ಸತ್ಯ.  ಇ-ಕಾಮರ್ಸ್ ಸೈಟ್ ಅಮೆಜಾನ್ ನಲ್ಲಿ (Amazon) ಈ ಸ್ಮಾರ್ಟ್ ಫೋನ್  ಅನ್ನು ಬಹಳ ಕಡಿಮೆ ಬೆಲೆಗೆ ಖರೀದಿಸಬಹುದು.  


COMMERCIAL BREAK
SCROLL TO CONTINUE READING

ಅಮೆಜಾನ್‌ನಲ್ಲಿ ನಡೆಯುತ್ತಿದೆ ವಿಶೇಷ ಮಾರಾಟ : 
ಅಮೆಜಾನ್ ನಲ್ಲಿ Oppo Fantasti Days Sale ನಡೆಯುತ್ತಿದೆ. ಈ ವಿಶೇಷ ಆಫರ್ ನಲ್ಲಿ OPPO ಕಂಪನಿಯ ಆಯ್ದ ಸ್ಮಾರ್ಟ್ ಫೋನುಗಳಲ್ಲಿ (Samart phone)ಭಾರೀ ರಿಯಾಯಿತಿ ಸಿಗುತ್ತಿದೆ. ಇದರೊಂದಿಗೆ ಎಸ್‌ಬಿಐ (SBI)ಡೆಬಿಟ್ ಕಾರ್ಡ್‌ಗಳು, ಐಸಿಐಸಿಐ (ICICI)ಮತ್ತು ಎಚ್‌ಡಿಎಫ್‌ಸಿ (HDFC) ಕಾರ್ಡ್‌ಗಳಲ್ಲೂ ತ್ವರಿತ ರಿಯಾಯಿತಿಗಳು ಲಭ್ಯವಿದೆ.


ಇದನ್ನೂ ಓದಿ : Entertainer of the Year: ಉತ್ತಮ ಬ್ಯಾಟರಿ, ಡಿಸ್ ಪ್ಲೇ ಅನುಭವಕ್ಕಾಗಿ ಖರೀದಿಸಿ Galaxy M02


23,590 ರೂ ಗಳಲ್ಲಿ ಲಭ್ಯವಿದೆ OPPO Reno5 Pro 5G  :
ಅಂದಹಾಗೆ, OPPO Reno5 Pro 5G ಬೆಲೆ 38,990 ರೂ. ಆದರೆ ಅಮೆಜಾನ್‌ನಲ್ಲಿ (Amazon) ಈ ಫೋನ್ 35,990 ರೂ.ಗೆ ಲಭ್ಯವಿದೆ. ಈ ಪೋನ್ ಮೇಲೆ 3 ಸಾವಿರ ರೂಗಳ ರಿಯಾಯಿತಿ ಇದೆ. ಅದಲ್ಲದೆ, ಎಕ್ಸ್ಚೇಂಜ್ ಆಫರ್ ನಲ್ಲಿ  (Exchange offer) 12,400 ರೂಗಳ ಡಿಸ್ಕೌಂಟ್ ಸಿಗಲಿದೆ. ಹಾಗಾಗಿ,  ಅಮೆಜಾನ್‌ನಲ್ಲಿ ಕೇವಲ 23,590 ರೂಗಳಿಗೆ ಈ ಫೋನನ್ನು ಖರೀದಿಸಬಹುದು. 


4,500 ರೂಗಳಿಗೆ  ಸಿಗಲಿದೆ Oppo F17 :
Oppo F17  ಫೋನಿನ ಮಾರ್ಕೆಟ್ ರೇಟ್  20,990 ರೂ. ಅಮೆಜಾನಿನಲ್ಲಿ ಈ ಪೋನ್ ಮೇಲೆ 4,000ಗಳ ರಿಯಾಯಿತಿ ಸಿಗಲಿದೆ. ಇನ್ನು ಎಕ್ಸ್ ಚೇಂಜ್ ಆಫರ್ ಜೊತೆ ಹೋಗುವುದಾದರೆ 12,400 ರೂಗಳ ರಿಯಾಯಿತಿಯೊಂದಿಗೆ ಕೇವಲ 4,500 ರೂಪಾಯಿಗಳಲ್ಲೆ ಈ ಫೋನನ್ನು ನಿಮ್ಮದಾಗಿಸಿಕೊಳ್ಳಬಹುದು. 


ಇದನ್ನೂ ಓದಿ : ಪೆಟ್ರೋಲ್, ಗ್ಯಾಸ್ ಆಯಿತು.! ಈಗ Internet .! ದುಬಾರಿಯಾಗಲಿದೆ ಡೇಟಾ ಪ್ಲಾನ್..!


790 ರೂಗಳಿಗೆ OPPO A31 ಖರೀದಿ ಸಾಧ್ಯ : 
ಮಾಹಿತಿಯ ಪ್ರಕಾರ, ಮಾರುಕಟ್ಟೆಯಲ್ಲಿ 12,990 ರೂ.ಗೆ ಮಾರಾಟವಾಗುತ್ತಿರುವ OPPO A31 ಫೋನ್ ಅಮೆಜಾನ್‌ನ ಸೈಟ್‌ನಲ್ಲಿ 10,990 ರೂಗಳಿಗೆ ಲಭ್ಯವಿದೆ. ಈ ಫೋನ್ (Phone)ಮೇಲೆ 10,200 ರೂಗಳ ಎಕ್ಸ್ಚೇಂಜ್ ಆಫರ್ (Offer) ಹೊಂದಿದೆ. ಹಾಗಾಗಿ ಈ ಆಫರ್ ಅಡಿಯಲ್ಲಿ ನೀವು ಫೋನ್ ಕೊಳ್ಳಬಯಸುವುದಾದರೆ ಈ ಫೋನಿಗೆ ನೀವು ಪಾವತಿಸಬೇಕಾಗಿರುವುದು ಕೇವಲ 790 ರೂ ಮಾತ್ರ ..


ಅಂದ ಹಾಗೆ ಈ ಎಲ್ಲಾ ಆಫರ್ ಗಳು ಇಂದು ರಾತ್ರಿವರೆಗೆ ಮಾತ್ರ ಲಭ್ಯವಿರುತ್ತದೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.