ಪೆಟ್ರೋಲ್, ಗ್ಯಾಸ್ ಆಯಿತು.! ಈಗ Internet .! ದುಬಾರಿಯಾಗಲಿದೆ ಡೇಟಾ ಪ್ಲಾನ್..!

ಪೆಟ್ರೋಲ್ ಸೆಂಚುರಿ ಸಿಡಿಸಿ ಆಯಿತು . ಗ್ಯಾಸ್ ಸಿಲಿಂಡರ್ ಮೇಲೆ 50 ರೂಪಾಯಿ ಹೆಚ್ಚಾಯಿತು. ಈರುಳ್ಳಿ ರೇಟ್ ಏರುತ್ತಿದೆ.  ಇದರ ನಡುವೆ ಮತ್ತೊಂದು ಸುದ್ದಿ ಬಂದಿದೆ.

Written by - Ranjitha R K | Last Updated : Feb 18, 2021, 11:52 AM IST
  • ಡೇಟಾ ಪ್ಲಾನ್ ಗಳ ದರ ಏರಿಕೆಯಾಗಲಿದೆ
  • ಏಪ್ರಿಲ್ 1 ರಿಂದ ಹೊಸ ದರಗಳು ಜಾರಿಯಾಗಲಿವೆ.
  • ಎಷ್ಟರ ಪ್ರಮಾಣದಲ್ಲಿ ಏರಿಕೆಯಾಗಲಿವೆ ಅನ್ನೋದು ಅಸ್ಪಷ್ಟ
ಪೆಟ್ರೋಲ್, ಗ್ಯಾಸ್ ಆಯಿತು.! ಈಗ Internet .! ದುಬಾರಿಯಾಗಲಿದೆ ಡೇಟಾ ಪ್ಲಾನ್..! title=
ಡೇಟಾ ಪ್ಲಾನ್ ಗಳ ದರ ಏರಿಕೆಯಾಗಲಿದೆ (file photo)

ನವದೆಹಲಿ : ಪೆಟ್ರೋಲ್ ಸೆಂಚುರಿ ಸಿಡಿಸಿ ಆಯಿತು (Petrol Price Hike). ಗ್ಯಾಸ್ ಸಿಲಿಂಡರ್ ಮೇಲೆ 50 ರೂಪಾಯಿ ಹೆಚ್ಚಾಯಿತು. ಈರುಳ್ಳಿ ರೇಟ್ ಏರುತ್ತಿದೆ.  ಇದರ ನಡುವೆ ಮತ್ತೊಂದು ಸುದ್ದಿ ಬಂದಿದೆ. ನೀವು ಇಂಟರ್ ನೆಟ್  ಜಾಸ್ತಿ ಬಳಕೆ ಮಾಡುತ್ತಿರಾ..? ಹಾಗಾದರೆ, ನಿಮ್ಮ ಜೇಬು ಖಾಲಿಯಾಗಲಿದೆ. ಪೆಟ್ರೋಲ್, ಡೀಸೆಲ್, ಗ್ಯಾಸ್, ದಿನಸಿ ವಸ್ತುವಿನ ಜೊತೆ ಇಂಟರ್ ನೆಟ್  ಕೂಡಾ ಬೆಲೆ ಏರಿಕೆ ಸ್ಪರ್ಧೆಗೆ ಇಳಿಯಲಿದೆ. 

ಏಪ್ರಿಲ್ 1 ರಿಂದ ಡೇಟಾ ಪ್ಲಾನ್ ದುಬಾರಿ.!
ಬುಸಿನೆಸ್ ಸ್ಟಾಂಡರ್ಡ್ (Business Standard) ವರದಿಯನ್ನು ನಂಬುವುದಾದರೆ, ಏಪ್ರಿಲ್ 1 ರಿಂದ ಇಂಟರ್ ನೆಟ್  ತುಟ್ಟಿಯಾಗಲಿದೆ.  Airtel, Jio, BSNL ಮತ್ತು ವಿಐ (Vi) ತಮ್ಮ ಪ್ರಸ್ತುತ ಪ್ಲಾನ್ ದರದಲ್ಲಿ ಏರಿಕೆ ಮಾಡಲು ತಯಾರಿ ನಡೆಸಿವೆ. ಮುಂದಿನ ದಿನಗಳಲ್ಲಿ ತನ್ನ ಪ್ಲಾನ್ ದರ ಏರಿಕೆಯಾಗಲಿದೆ ಎಂಬ ಮುನ್ಸೂಚನೆಯನ್ನು Vi ನೀಡಿದೆ. ಉಳಿದ ಕಂಪನಿಗಳು ಪ್ಲಾನ್ ಬೆಲೆ ಪರಿಷ್ಕರಿಸುವ ತಯಾರಿಯಲ್ಲಿವೆ.

ಇದನ್ನೂ ಓದಿ :  ಶೀಘ್ರದಲ್ಲೇ ಬದಲಾಗಲಿದೆ Google ಸರ್ಚ್ ಮಾಡುವ ವಿಧಾನ

ಪ್ಲಾನ್ ದರ ಎಷ್ಟು ಏರಿಕೆಯಾಗಬಹುದು.?
ಎಲ್ಲವೂ ಏರುತ್ತಿರುವಾಗ ನಾವೇಕೆ ಸುಮ್ಮನಿರಬೇಕು ಎಂದುಕೊಂಡಿರುವ ಟೆಲಿಕಾಂ (Telecom) ಕಂಪನಿಗಳು ಟಾರಿಫ್ (Tariff) ಬದಲಾವಣೆಗೆ ಸಜ್ಜಾಗಿವೆ. ಟಾರಿಫ್ನಲ್ಲಿ ಎಷ್ಟರಮಟ್ಟಿಗೆ ಏರಿಕೆಯಾಗಲಿದೆ ಎನ್ನುವುದು ಇದುವರೆಗೆ ಗೊತ್ತಾಗಿಲ್ಲ. ಕಂಪನಿಗಳು ತಮ್ಮ ದರ ಏರಿಕೆ ಸ್ಪಷ್ಟ ಚಿತ್ರಣ ಇನ್ನೂ  ನೀಡಿಲ್ಲ. ಆದರೂ,  ಗರಿಷ್ಠ 220 ರೂಪಾಯಿ ತನಕ ಏರಿಕೆ ಮಾಡುವ ಸಾಧ್ಯತೆಗಳಿವೆ. 

1.6 ಲಕ್ಷ ಕೋಟಿ ಎಜಿಆರ್ AGR ಪಾವತಿಸಬೇಕು
ಟೆಲಿಕಾಂ ಕಂಪನಿಗಳು 1.6 ಲಕ್ಷ ಕೋಟಿ ರೂಪಾಯಿ ಎಜಿಆರ್ (Adjusted Gross Revenue)  ದುಡ್ಡು ಬಾಕಿ ಇಟ್ಟಿವೆ. ಅದರಲ್ಲಿ ಶೇ. 10 ರಷ್ಟು ಮೊತ್ತವನ್ನು ಮಾತ್ರ ಪಾವತಿಸಿವೆ. ಇನ್ನು ಉಳಿದ ಮೊತ್ತವನ್ನು ಮುಂಬರುವ ದಿನಗಳಲ್ಲಿ ಪಾವತಿಸಬೇಕಿದೆ.  ಅದಕ್ಕಾಗಿ ಸಾಧ್ಯವಾದಷ್ಟು ಮಟ್ಟಿಗೆ ರೆವೆನ್ಯೂ ಹೆಚ್ಚಿಸಲು ಕಂಪನಿನಗಳು ಪ್ಲಾನ್ ನಡೆಸಿವೆ.

ಇದನ್ನೂ ಓದಿ : ಹೀಗೆ ಮಾಡಿದರೆ WhatsApp ನಲ್ಲಿ ಡಿಲೀಟ್ ಆದ ಮೆಸೇಜನ್ನು ಮತ್ತೆ ಓದಬಹುದು..!

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News