ನಡುರಸ್ತೆಯಲ್ಲಿ ಮೊಮ್ಮಗಳ ವಯಸ್ಸಿನ ಹುಡುಗಿ ಜೊತೆ ರೊಮ್ಯಾನ್ಸ್..ವಿಡಿಯೋ ವೈರಲ್
Viral Video :ಪ್ರೀತಿಗೆ ಕಣ್ಣಿಲ್ಲ, ಕಣ್ಣು ಬೇಕಾಗಿಯೂ ಇಲ್ಲ ಎಂದು ಹೇಳುವವರಿದ್ದಾರೆ. ಆದರೆ ಈ ವಿಡಿಯೋ ನೋಡಿದರೆ ಪ್ರೀತಿ ಇಷ್ಟು ಕುರುಡಾಗಿಯೂ ಇರಬಾರದು ಅನ್ನಿಸುತ್ತದೆ.
Viral Video : ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ವಿವಿಧ ವಿಚಿತ್ರ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಇತ್ತೀಚಿನ ದಿನಗಳಲ್ಲಿ, ಮದುವೆಯ ವೀಡಿಯೊಗಳು, ಪ್ರೇಮಿಗಳ ವೀಡಿಯೊಗಳು, ಪ್ರಾಣಿಗಳ ವೀಡಿಯೊಗಳು ಇಂಟರ್ನೆಟ್ ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಪ್ ಲೋಡ್ ಆಗುತ್ತಿವೆ. ಇಲ್ಲೊಂದು ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ಅಪ್ ಲೋಡ್ ಮಾಡುತ್ತಿದ್ದಂತೆ ಲಕ್ಷಕ್ಕೂ ಹೆಚ್ಚು ವ್ಯೂವ್ಸ್ ಪಡೆದುಕೊಂಡಿದೆ.
ಪತಿ - ಪತ್ನಿ ಮಧ್ಯೆ ಅಪ್ಪ ಮಗಳ ಹಾಗೆ ವಯಸ್ಸಿನ ಅಂತರ ಇರುವುದು, ಆದರೂ ಅವರು ಅನ್ಯೋನ್ಯವಾಗಿ ಜೀವನ ನಡೆಸುವುದು. ಆ ಜೋಡಿಗೆ ಜೀವನದಲ್ಲಿ ಪ್ರೀತಿಯೇ ಮುಖ್ಯ ಅದನ್ನು ಬಿಟ್ಟು ಬೇರೇನನ್ನೂ ಅವರು ಬಯಸುವುದಿಲ್ಲ. ಇಂಥ ಕತೆಯನ್ನ ಆಧರಿಸಿದ ಅದೆಷ್ಟೋ ಸಿನಿಮಾ, ಧಾರಾವಾಹಿಗಳನ್ನು ನೀವು ನೋಡಿರಬಹುದು. ಪ್ರೀತಿಗೆ ಕಣ್ಣಿಲ್ಲ, ಕಣ್ಣು ಬೇಕಾಗಿಯೂ ಇಲ್ಲ ಎಂದು ಹೇಳುವವರಿದ್ದಾರೆ. ಆದರೆ ಈ ವಿಡಿಯೋ ನೋಡಿದರೆ ಪ್ರೀತಿ ಇಷ್ಟು ಕುರುಡಾಗಿಯೂ ಇರಬಾರದು ಅನ್ನಿಸುತ್ತದೆ.
ಇದನ್ನೂ ಓದಿ : Women Viral Video: ಚಪಾತಿಯಲ್ಲಿ 500 ರೂ.ಹಾಕಿ ಬೇಯಿಸಿದ್ರೆ ಹೊರಬರುತ್ತೆ 2000 ರೂ! ಮ್ಯಾಜಿಕ್ ವಿಡಿಯೋ ನೋಡಿ
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋ ದಲ್ಲಿ ಸರಿ ಸುಮಾರು 55 ವರ್ಷದ ವ್ಯಕ್ತಿ ತನ್ನ ಮಗಳ ವಯಸ್ಸಿನ ಹೆಣ್ಣುಮಗಳ ಜೊತೆ ರೋಮ್ಯಾನ್ಸ್ ಮಾಡುವುದನ್ನು ಕಾಣಬಹುದು. ಒಬ್ಬ ಹುಡುಗಿ ದ್ವಿಚಕ್ರ ವಾಹನದಲ್ಲಿ ಕುಳಿತು ಯಾರದ್ದೋ ನಿರೀಕ್ಷೆಯಲ್ಲಿರುವುದನ್ನು ಕಾಣಬಹುದು. ಆಗ ಅಲ್ಲಿಗೆ ಈ ವ್ಯಕ್ತಿಯ ಎಂಟ್ರಿ ಆಗುತ್ತದೆ. ನಂತರ ಅಲ್ಲಿ ಇಬ್ಬರ ರೋಮ್ಯಾನ್ಸ್ ಶುರುವಾಗುತ್ತದೆ.
ಈ ಇಷ್ಟೂ ಘಟನೆ ನಡೆಯುತ್ತಿರುವಂತೆಯೇ ಅಲ್ಲಿರುವ ಯಾರೋ ಮೇಲಿನಿಂದ ನೀರು ಸುರಿಯುತ್ತಾರೆ. ಈ ಜೋಡಿಯ ನಡವಳಿಕೆಯಿಂದ ಬೇಸತ್ತ ಯಾರೋ ಅವರನ್ನು ಓಡಿಸುವ ಸಲುವಾಗಿಯೇ ನೀರು ಸುರಿದಿರುವುದು ಗೊತ್ತಾಗುತ್ತದೆ. ಅಷ್ಟೊತ್ತಿಗೆ ಇಬ್ಬರೂ ಅಲ್ಲಿಂದ ಜಾಗ ಖಾಲಿ ಮಾಡುತ್ತಾರೆ.
ಇದನ್ನೂ ಓದಿ : Viral Video: ಷರ್ಟ್-ಪ್ಯಾಂಟ್ ಬಿಚ್ಚಿ ಮೆಟ್ರೊ ರೈಲಿನಲ್ಲಿ ಆ ಕೆಲ್ಸಾನೂ ಮಾಡೇಬಿಟ್ಟ ಈ ಭೂಪ!
ಕೆಲವೇ ಸೆಕೆಂಡುಗಳ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮತ್ತು ಈ ವೀಡಿಯೊವನ್ನು ಫ್ಲೋಫನ್ ಎಂಬ Instagram ಪೇಜ್ ನಲ್ಲಿ ಶೇರ್ ಮಾಡಲಾಗಿದೆ. ಈ ವಿಡಿಯೋ ಹೆಚ್ಚಿನ ಸಂಖ್ಯೆಯ ವ್ಯುವ್ಸ್ ಪಡೆಯುತ್ತಿದೆಯಾದರೂ ನೆಟ್ಟಿಗರು ಇದಕ್ಕೆ ನೆಗೆಟಿವ್ ಕಾಮೆಂಟ್ ಗಳನ್ನೂ ಮಾಡುತ್ತಿದ್ದಾರೆ.
(ಈ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ವೀಡಿಯೊ ಮತ್ತು ನೀಡಿರುವ ಮಾಹಿತಿಯನ್ನು ಸಾಮಾಜಿಕ ಮಾಧ್ಯಮದಿಂದ ತೆಗೆದುಕೊಳ್ಳಲಾಗಿದೆ. ಜೀ ಕನ್ನಡ ನ್ಯೂಸ್ ಇವುಗಳನ್ನು ಯಾವುದೇ ರೀತಿಯಲ್ಲಿ ಅನುಮೋದಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.